ಹವಾಮಾನ ಬದಲಾವಣೆ ಕುರಿತು ಲಾಗ್ 9 ನಿಂದ One Less Ride Campaign

ಬ್ಯಾಟರಿ-ಟೆಕ್ ಮತ್ತು ಅಡ್ವಾನ್ಸ್ಡ್ ಮೆಟೀರಿಯಲ್ಸ್ ಸ್ಟಾರ್ಟ್ಅಪ್ ಕಂಪನಿಯಾದ, ಲಾಗ್ 9 ಮೆಟೀರಿಯಲ್ಸ್ ವಿಶ್ವ ಭೂಮಿ ದಿನದ (World Earth Day) ಅಂಗವಾಗಿ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಎಲ್ಲರನ್ನು ಉತ್ತೇಜಿಸುವ ಸಲುವಾಗಿ 'ಒಂದು ಕಡಿಮೆ ಸವಾರಿ ಪ್ರಚಾರ' (One Less Ride Campaign) ಅನ್ನು ಪ್ರಾರಂಭಿಸಿದೆ.

ಹವಾಮಾನ ಬದಲಾವಣೆ ಕುರಿತು ಲಾಗ್ 9 ನಿಂದ One Less Ride Campaign

'ಒನ್ ಲೆಸ್ ರೈಡ್' ಪ್ರಚಾರವು ಪ್ರಪಂಚದ ಪ್ರತಿಯೊಬ್ಬ ನಾಗರಿಕರನ್ನು ವಿಶ್ವ ಭೂಮಿ ದಿನದಂದು ಅವರ ವಾಹನಗಳನ್ನು ಆನ್ ಮಾಡುವ ಮುಂಚೆ ಪ್ರಯಾಣಿಸಲು ಬೇರೊಂದು ಮಾರ್ಗವಿದ್ದಲ್ಲಿ ಯೋಚಿಸುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಅಂದರೆ ವಾಹನ ಚಾಲನೆ ಮಾಡಿ ಮಾಲಿನ್ಯಗೊಳಿಸುವುದಕ್ಕಿಂತ ಪರ್ಯಾಯ ವ್ಯವಸ್ಥೆ ನೋಡುಕೊಳ್ಳುವುದು ಎಂದರ್ಥ.

ಹವಾಮಾನ ಬದಲಾವಣೆ ಕುರಿತು ಲಾಗ್ 9 ನಿಂದ One Less Ride Campaign

'ಒನ್ ಲೆಸ್ ರೈಡ್' ಪ್ರಚಾರದ ಬಗ್ಗೆ ಹೇಳುವುದಾದರೆ, ಇದು ಸಾಂಪ್ರದಾಯಿಕ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ಮತ್ತು ಪ್ರಯಾಣದ ಹೆಚ್ಚಿನ ಸಮರ್ಥನೀಯ ಮತ್ತು ಪರಿಸರ-ಸ್ನೇಹಿ ವಿಧಾನಗಳ ಬಳಕೆಯನ್ನು ಉತ್ತೇಜಿಸಲು ಲಾಗ್ 9 ಮೆಟೀರಿಯಲ್ಸ್‌ ಆನ್ಲೈನ್‌ ಮೂಲಕ ಮೊದಲ ಅಭಿಯಾನ ಮಾಡುತ್ತಿದೆ.

ಹವಾಮಾನ ಬದಲಾವಣೆ ಕುರಿತು ಲಾಗ್ 9 ನಿಂದ One Less Ride Campaign

ಈ ಕ್ಯಾಂಪೇನ್ ಕುರಿತು ಮಾತನಾಡಿದ ಡಾ. ಅಕ್ಷಯ್ ಸಿಂಘಾಲ್, ವಾತಾವರಣದ ಬದಲಾವಣೆಯು ನಿಧಾನವಾಗಿ ಒಂದು ವಿದ್ಯಮಾನವಾಗಿ ಬದಲಾಗುತ್ತಿದೆ. ಇದು ಭೂಮಿಯ ಮೇಲಿನ ಪ್ರತಿ ಜೀವಿಯ ಜೀವಿತಾವಧಿಯಲ್ಲಿ ಗಂಭೀರ ಪರಿಣಾಮಗಳನ್ನು ಬೀರಲಿದೆ. ಆದ್ದರಿಂದ ಒಂದು ವರ್ಷದಲ್ಲಿ ಒಂದು ದಿನ ಈ ಬಗ್ಗೆ ಮಾತನಾಡುವುದು ಅಥವಾ ಇಂತಹ ಪ್ರಚಾರಗಳಿಂದ ಆಗಬಹುದಾದ ಪರಿಸರ ಹಾನಿಗಳನ್ನು ತಡಿಯಲಾಗುವುದಿಲ್ಲ. ಆದರೆ ಜನರಲ್ಲಿ ಅರಿವು ಮೂಡಿಸಬಹುದು. ಹಾಗಾಗಿ ಲಾಗ್ 9 ಮೂಲಕ ಒಂದು ಕಡಿಮೆ ಸವಾರಿ ಚಳುವಳಿಯನ್ನು ಮಾಡಲು ಮುಂದಾಗಿದ್ದೇವೆ.

ಹವಾಮಾನ ಬದಲಾವಣೆ ಕುರಿತು ಲಾಗ್ 9 ನಿಂದ One Less Ride Campaign

ಹವಾಮಾನ ಬದಲಾವಣೆಯ ವಿರುದ್ಧ ನಮ್ಮ ಹೋರಾಟದ ವಿಷಯಕ್ಕೆ ಬಂದರೆ, ನಮ್ಮೆಲ್ಲರ ಪ್ರತಿಯೊಂದು ಕ್ರಿಯೆಯು ಇಲ್ಲಿ ಅಮೂಲ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಒಂದು ದಿನಕ್ಕೆ ವಿಶ್ರಾಂತಿ ನೀಡಿ, ನಿಮ್ಮ ಸ್ನೇಹಿತರು, ಕುಟುಂಬ, ಮತ್ತು ಸಾಮಾಜಿಕ ಜಾಲತಾಣಗಳಲ್ಲಿ # ಡೋನ್ಟ್‌ ಟರ್ನ್ ಆನ್ ಎಂಬ ಹುರಿದುಂಬಿಸುವ ಹ್ಯಾಶ್ಟ್ಯಾಗ್ ಜೊತೆಗೆ ಮತ್ತಷ್ಟು ಪ್ರೇರೇಪಿಸುವ ಪ್ರತಿಜ್ಞೆಯಿಂದ ಬದಲಾವಣೆ ಮತ್ತು ಜವಾಬ್ದಾರಿಯುತ ಕ್ರಮವನ್ನು ವೇಗಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಹವಾಮಾನ ಬದಲಾವಣೆ ಕುರಿತು ಲಾಗ್ 9 ನಿಂದ One Less Ride Campaign

ಇತ್ತೀಚೆಗೆ ಲಾಗ್ 9 ಮೆಟೀರಿಯಲ್ಸ್ ಭಾರತದಲ್ಲಿ ಕೊನೆಯ-ಮೈಲಿ ವಿತರಣಾ ಕಾರ್ಯಾಚರಣೆಗಳನ್ನು ಹೆಚ್ಚಿಸಲು ಪೈ ಭೀಮ್ದೊಂದಿಗೆ ಸಹಭಾಗಿತ್ವ ಹೊಂದಿದ್ದು, ಇದಕ್ಕಾಗಿ RAPIDX ಬ್ಯಾಟರಿ ಪ್ಯಾಕ್‌ಗಳೊಂದಿಗೆ ಅಳವಡಿಸಲಾದ ರೇಜ್ + ರಾಪಿಡೆವ್ ಎಲೆಕ್ಟ್ರಿಕ್ 3-ಚಕ್ರ ವಾಹನಗಳನ್ನು ಸರಬರಾಜು ಮಾಡುವುದರ ಮೂಲಕ ಅಲಭ್ಯತೆಯನ್ನು ಕಡಿಮೆ ಮಾಡಲು Instacharge ಬ್ಯಾಟರಿ ಪ್ಯಾಕ್‌ಗಳನ್ನು ಬಳಸಿ ಲಾಗ್ 9 ಮೆಟೀರಿಯಲ್ಸ್‌ ಅಧಿಕಾರ ನೀಡಿದೆ.

ಹವಾಮಾನ ಬದಲಾವಣೆ ಕುರಿತು ಲಾಗ್ 9 ನಿಂದ One Less Ride Campaign

Instacharge ತಂತ್ರಜ್ಞಾನದೊಂದಿಗೆ ಈ ಬ್ಯಾಟರಿ ಪ್ಯಾಕ್‌ಗಳ ರೇಜ್ + ರಾಪಿಡೆವ್ ಕೇವಲ 35 ನಿಮಿಷಗಳಲ್ಲಿ ಶೇ 100 ರಷ್ಟು ಚಾರ್ಜ್ ಮಾಡಬಹುದು, ಈ ಮೂಲಕ ಒಟ್ಟಾರೆ ಅಪ್‌ಟೈಮ್ ಅನ್ನು ಗಮನಾರ್ಹವಾಗಿ ಹೆಚ್ಚಿಸಬಹುದಾಗಿದೆ.

ಹವಾಮಾನ ಬದಲಾವಣೆ ಕುರಿತು ಲಾಗ್ 9 ನಿಂದ One Less Ride Campaign

ಈ ಪಾಲುದಾರಿಕೆ ಅಡಿಯಲ್ಲಿ ಲಾಗ್ 9 ಮೆಟೀರಿಯಲ್ಸ್‌ EKA ಜೊತೆಗೂ ಸಹಿ ಹಾಕಿದ್ದು, ಇದರಲ್ಲಿ ಲಾಗ್ 9 ಮೆಟೀರಿಯಲ್ಸ್ EACA EA9 ಎಲೆಕ್ಟ್ರಿಕ್ ಬಸ್‌ಗಳು ಮತ್ತು ಇವಿ ತಯಾರಕರಿಂದ ಮುಂಬರುವ ವಾಣಿಜ್ಯ ವಾಹನಗಳಿಗೆ ರಾಪಿಡ್ಎಕ್ಸ್ ಬ್ಯಾಟರಿ ಪ್ಯಾಕ್‌ಗಳನ್ನು ಪೂರೈಸುತ್ತದೆ.

ಹವಾಮಾನ ಬದಲಾವಣೆ ಕುರಿತು ಲಾಗ್ 9 ನಿಂದ One Less Ride Campaign

ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ EKA ಮತ್ತು Log9 ಕನಿಷ್ಠ 10,000 LCV ಗಳನ್ನು ನಿಯೋಜಿಸಲು ಗುರಿ ಹೊಂದಿದ್ದು, Rapidx ಬ್ಯಾಟರಿ ಪ್ಯಾಕ್‌ಗಳೊಂದಿಗೆ 200 ಕ್ಕಿಂತಲೂ ಹೆಚ್ಚಿನ ಎಲೆಕ್ಟ್ರಿಕ್ ಬಸ್‌ಗಳನ್ನು ತಯಾರಿ ಮಾಡಲು ಉದ್ದೇಶಿಸಲಾಗಿದೆ.

ಹವಾಮಾನ ಬದಲಾವಣೆ ಕುರಿತು ಲಾಗ್ 9 ನಿಂದ One Less Ride Campaign

ರಾಪಿಡ್ ಎಕ್ಸ್ ಬ್ಯಾಟರಿ ಪ್ಯಾಕ್‌ಗಳ ವೇಗದ ಚಾರ್ಜಿಂಗ್ ಸಾಮರ್ಥ್ಯಗಳ ಜೊತೆಗೆ, ಈ ಸ್ಟೇಟ್-ಆಫ್-ಆರ್ಟ್ ಬ್ಯಾಟರಿ ಪ್ಯಾಕ್‌ಗಳು 15 ವರ್ಷಗಳ ಗ್ಯಾರೆಂಟಿಯೊಂದಿಗೆ ಬರುತ್ತವೆ. ಅಲ್ಲದೇ 15,000 ಕ್ಕೂ ಹೆಚ್ಚು ಬಾರಿ ಚಾರ್ಜ್-ಡಿಸ್ಚಾರ್ಜ್ ಪ್ರಕ್ರಿಯೆಯನ್ನು ಮಾಡಬಹುದು. ಈ ಬ್ಯಾಟರಿಗಳು 9x ವೇಗ, 9x ಬ್ಯಾಟರಿ ಲೈಫ್‌ ಚಾರ್ಜ್ ಜೊತೆಗೆ 9x ಪರ್ಫಾಮೆನ್ಸ್‌ ಅನ್ನು ಸಹ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಹವಾಮಾನ ಬದಲಾವಣೆ ಕುರಿತು ಲಾಗ್ 9 ನಿಂದ One Less Ride Campaign

ಇದಲ್ಲದೆ, ಈ ಬ್ಯಾಟರಿ ಪ್ಯಾಕ್‌ಗಳು -30 ° C ನಿಂದ 60 ° C ವರೆಗಿನ ಉಷ್ಣಾಂಶಗಳ ನಡುವೆ ಕಾರ್ಯನಿರ್ವಹಿಸಬಲ್ಲ ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಅತ್ಯಂತ ಬಾಳಿಕೆ ಬರುತ್ತವೆ ಎಂದು ಕಂಪನಿ ಹೇಳಿಕೊಂಡಿದೆ. ಈ ಹಿಂದೆ ಸುಧಾರಿತ ಬ್ಯಾಟರಿ ಮತ್ತು ಎನರ್ಜಿ ಶೇಖರಣಾ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಪ್ರದೇಶಗಳಲ್ಲಿ ಅತೀಂದ್ರಿಯ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಲಾಗ್ 9 ಮೆಟೀರಿಯಲ್ಸ್ ಐಐಟಿ-ದೆಹಲಿಯೊಂದಿಗೆ ಸಹಭಾಗಿತ್ವ ಹೊಂದಿತ್ತು.

ಹವಾಮಾನ ಬದಲಾವಣೆ ಕುರಿತು ಲಾಗ್ 9 ನಿಂದ One Less Ride Campaign

ಲಾಗ್ 9 ಮೆಟೀರಿಯಲ್ಸ್‌ ಪ್ರಕಾರ, Rapidx ಬ್ಯಾಟರಿ ಪ್ಯಾಕ್‌ಗಳು ಮುಂದಿನ 3 ರಿಂದ 6 ತಿಂಗಳೊಳಗೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸಮಯವನ್ನು ಕಡಿಮೆ ಮಾಡಲು Rapidx ಬ್ಯಾಟರಿ ಪ್ಯಾಕ್‌ಗಳನ್ನು ಬಳಸುವ ಪ್ರಯೋಜನಗಳಲ್ಲಿ ಒಂದಾಗಿದೆ.

ಹವಾಮಾನ ಬದಲಾವಣೆ ಕುರಿತು ಲಾಗ್ 9 ನಿಂದ One Less Ride Campaign

ಲಾಗ್ 9 ಮೆಟೀರಿಯಲ್ಸ್‌ ಪರಿಸರದಲ್ಲಿನ ಕಾರ್ಬನ್ ಅನ್ನು ಕಡಿಮೆ ಮಾಡಲು ಎಲ್ಲಾ ವಿಧಗಳಲ್ಲಿ ಪ್ರಯತ್ನಿಸುತ್ತಿದೆ. ಅಲ್ಲದೆ, ಕಂಪೆನಿಯು ಇವಿ ವಲಯದಲ್ಲಿ ಪರಿಣಾಮ ಬೀರಲು ಮತ್ತು ದೊಡ್ಡ ಬದಲಾವಣೆ ತರಲು ಸಜ್ಜಾಗಿದೆ. ಇದರ ಭಾಗವಾಗಿಯೇ ಇತ್ತೀಚಿನ ಪ್ರಚಾರವು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು #dontturnon ಅನ್ನು ಈ ಕಾರ್ಯಾಚರಣೆಯ ಭಾಗವಾಗಿ ಬಳಸಲು ಒತ್ತಾಯಿಸುತ್ತಿದೆ.

Most Read Articles

Kannada
English summary
Log9 launches one less ride campaign aims to promote individual level action against climate change
Story first published: Thursday, April 21, 2022, 16:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X