ಬಾಲಿವುಡ್ ನಟ ಹೃತಿಕ್ ರೋಷನ್ ಬಳಿಯಿರುವ ಐಷಾರಾಮಿ ಕಾರುಗಳು: ಅಬ್ಬಾ ಎಷ್ಟು ದುಬಾರಿ!

ಬಾಲಿವುಡ್ ನಟ ಹೃತಿಕ್ ರೋಷನ್ ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಬಹುತೇಕ ಎಲ್ಲರಿಗೂ ಅವರೆಂದರೇ ತುಂಬಾ ಇಷ್ಟ. ಹೃತಿಕ್ ರೋಷನ್ ಅವರಂತಹ ಬಿಗ್ ಸೆಲೆಬ್ರಿಟಿಗಳು ಯಾವ ಐಷಾರಾಮಿ ಕಾರುಗಳನ್ನು ಬಳಸುತ್ತಾರೆ ಎಂಬುದು ಹಲವರಿಗೆ ತಿಳಿದಿದೆ. ಕೆಲವರಿಗೆ ಆ ಕುರಿತು ಕೊಂಚವು ಗೊತ್ತಿಲ್ಲ. ಇಲ್ಲಿ ಹೃತಿಕ್ ಕಾರುಗಳ ಬಗ್ಗೆ ತಿಳಿಸಿಕೊಡಲಾಗಿದೆ.

ರೋಲ್ಸ್ ರಾಯ್ಸ್ ಘೋಸ್ಟ್ ಸೀರಿಯಸ್ II:
ವಿಶ್ವದ ಅತ್ಯಂತ ಐಷಾರಾಮಿ ಹಾಗೂ ದುಬಾರಿ ಕಾರು ತಯಾರಕ ಕಂಪನಿ 'ರೋಲ್ಸ್ ರಾಯ್ಸ್' ರೆಡಿ ಮಾಡಿರುವ 'ಘೋಸ್ಟ್ ಸೀರಿಯಸ್ II' ಕಾರು ಹೃತಿಕ್ ರೋಷನ್ ಅವರ ಗ್ಯಾರೇಜ್‌ನಲ್ಲಿದ್ದು, ತಮ್ಮ 42ನೇ ಜನ್ಮದಿನದಂದು ಈ ಕಾರನ್ನು ಖರೀದಿಸಿದ್ದಾರೆ. ಇದು 6.2-ಲೀಟರ್ ಟ್ವಿನ್-ಟರ್ಬೊ V12 ಎಂಜಿನ್ ಹೊಂದಿದ್ದು, 563 bhp ಪವರ್ ಮತ್ತು 780 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಈ ರೋಲ್ಸ್ ರಾಯ್ಸ್ ಘೋಸ್ಟ್ ಸೀರಿಯಸ್ II ಗಂಟೆಗೆ 250 ಕಿಮೀ ಟಾಪ್ ಸ್ವೀಡ್ ಹೊಂದಿದ್ದು, 4.9 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ ವೇಗವನ್ನು ಪಡೆಯಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿರುವ ರೋಲ್ಸ್ ರಾಯ್ಸ್ ಘೋಸ್ಟ್ ಸೀರಿಯಸ್ II ಬೆಲೆ ಬರೋಬ್ಬರಿ ರೂ.7 ಕೋಟಿ. ಹೃತಿಕ್ ರೋಷನ್ ಮಾತ್ರವಲ್ಲದೆ, ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಸಹ ದೇಶದಲ್ಲಿ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿದ್ದಾರೆ.

ಮರ್ಸಿಡಿಸ್ ಮೇಬ್ಯಾಕ್ S600:
ಅತ್ಯಂತ ಜನಪ್ರಿಯ ಕಾರು ತಯಾರಕ ಮರ್ಸಿಡಿಸ್ ಬೆಂಜ್ ರೆಡಿ ಮಾಡಿರುವ 'ಮೇಬ್ಯಾಕ್ ಎಸ್600' ಐಷಾರಾಮಿ ಕಾರು ಸಹ ನಟ ಹೃತಿಕ್ ರೋಷನ್ ಬಳಿಯಿದೆ. ಅವರು, 2016ರಲ್ಲಿ ಈ ಕಾರನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಕಾರು, ಟ್ವಿನ್-ಟರ್ಬೋಚಾರ್ಜ್ಡ್ ವಿ12 ಎಂಜಿನ್‌ನಿಂದ ಚಾಲಿತವಾಗಲಿದ್ದು, 5300rpm ನಲ್ಲಿ 530 bhp ಪವರ್ ಮತ್ತು 4000rpm ನಲ್ಲಿ 830 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು ಅತ್ಯಾಧುನಿಕ ವಿನ್ಯಾಸ ಮತ್ತು ನವೀಕರಿಸಿದ ಒಳಾಂಗಣವನ್ನು ಹೊಂದಿದೆ. ಅಲ್ಲದೆ, ಫೋಟೋ ಕ್ರೊಮ್ಯಾಟಿಕ್ ಮಿರರ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಮರ್ಸಿಡಿಸ್ ಬೆಂಜ್ S-ಕ್ಲಾಸ್:
ಹೃತಿಕ್ ರೋಷನ್ ಬೇರೆ ಕಂಪನಿ ಕಾರುಗಳಿಗಿಂತ ಮರ್ಸಿಡಿಸ್ ಬೆಂಜ್ ಕಾರುಗಳನ್ನು ಹೆಚ್ಚಾಗಿ ಖರೀದಿಸಲು ಇಷ್ಟಪಡುತ್ತಾರೆ. ಅವರ ಬಳಿ ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್ ಕೂಡ ಇದೆ. ಹೃತಿಕ್ ಹಾಗೂ ಅವರ ತಂದೆ ರಾಕೇಶ್ ರೋಷನ್ ಈ ಕಾರಿನಲ್ಲಿ ಪ್ರಯಾಣಿಸುವಾಗ ಅಪಘಾತವಾಗಿತ್ತು ಎಂದು ಈ ಹಿಂದೆ ವರದಿಯಾಗಿತ್ತು. ಆದರೆ, ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳ ಕಾರಣ, ಅವರ ಜೀವಕ್ಕೆ ಯಾವುದೇ ಅಪಾಯವಾಗಲಿಲ್ಲ. ಅನೇಕ ಸೆಲೆಬ್ರಿಟಿಗಳು ಈ ಕಾರುಗಳನ್ನು ಬಳಸಲು ಇಷ್ಟಪಡುತ್ತಾರೆ.

ಪೋರ್ಷೆ ಕೇಯೆನ್ನೆ ಟರ್ಬೊ:
2002ರಲ್ಲಿ ಬಿಡುಗಡೆಯಾದ ಪೋರ್ಷೆಯ 'ಕಯೆನ್ನೆ ಟರ್ಬೊ' ದೊಡ್ಡ- ಗಾತ್ರದ ಎಸ್‌ಯುವಿ ಆಗಿದೆ. 2006ರಲ್ಲಿ ಹೃತಿಕ್ ರೋಷನ್ ಈ ಕಾರನ್ನು ಖರೀದಿಸಿದ್ದರು. ಈ ಕಾರು ವಿ8 ಎಂಜಿನ್ ಹೊಂದಿದ್ದು, ಇದು ಗರಿಷ್ಠ 450 bhp ಪವರ್ ಮತ್ತು 623 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಈ ಕಾರು ಸದ್ಯ ಹೃತಿಕ್ ರೋಷನ್ ಅವರ ಗ್ಯಾರೇಜ್ ನಲ್ಲಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ.

ಮಿನಿ ಕೂಪರ್ ಕನ್ವರ್ಟಿಬಲ್:
ಹೃತಿಕ್ ರೋಷನ್ ಅವರು ದೈನಂದಿನ ಉಪಯೋಗಕ್ಕಾಗಿ ಮಿನಿ ಕೂಪರ್ ಕನ್ವರ್ಟಿಬಲ್ ಕಾರನ್ನು ಬಳಸುತ್ತಾರೆ. ಅವರು, ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಾಣಿಸಿಕೊಂಡಿದ್ದರು. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಉತ್ತಮ ಕಾರ್ಯಕ್ಷಮತೆಯನ್ನು ನೀಡುವ ಕಾರು ಇದಾಗಿದೆ ಎಂದು ಹೇಳಬಹುದು. ಈ ಮಿನಿ ಕೂಪರ್ ಕನ್ವರ್ಟಿಬಲ್ 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಲಿದ್ದು, 192 bhp ಗರಿಷ್ಠ ಪವರ್ ಮತ್ತು 280 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಲ್ಯಾಂಡ್ ರೋವರ್ ರೇಂಜ್ ರೋವರ್:
ಹೃತಿಕ್ ರೋಷನ್ ದಿನನಿತ್ಯದ ಪ್ರಯಾಣಕ್ಕಾಗಿ ಸಣ್ಣ ಕಾರು ಮಿನಿ ಕೂಪರ್ ಅನ್ನು ಮಾತ್ರವಲ್ಲದೆ, ಲ್ಯಾಂಡ್ ರೋವರ್ ರೇಂಜ್ ರೋವರ್‌ನಂತಹ ದೊಡ್ಡ ಕಾರುಗಳನ್ನು ಬಳಕೆ ಮಾಡುತ್ತಾರೆ. ಅನೇಕ ಸೆಲೆಬ್ರಿಟಿಗಳು ಈ ಕಾರನ್ನು ಹೊಂದಿದ್ದಾರೆ. ಇದು ಅತ್ಯಂತ ದುಬಾರಿ ಐಷಾರಾಮಿ ಕಾರಾಗಿದೆ ಎಂದು ಹೇಳಬಹುದು. ಅದರ ಅತ್ಯುತ್ತಮ ವಿನ್ಯಾಸ ಮತ್ತು ಆಧುನಿಕ ವೈಶಿಷ್ಟ್ಯಗಳು ಈ ಕಾರಿನ ಖರೀದಿದಾರರಿಗೆ ತುಂಬಾ ಇಷ್ಟವಾಗುತ್ತದೆ.

ಇಷ್ಟೇ ಅಲ್ಲದೆ, ಹೃತಿಕ್ ರೋಷನ್ ರೂ.82 ಲಕ್ಷ ಬೆಲೆಯ ಫೆರಾರಿ 360 ಮೊಡೆನಾ, ಆಸ್ಟನ್ ಮಾರ್ಟಿನ್ ರಾಪಿಡ್ ಎಸ್ ಹಾಗೂ ಬರೋಬ್ಬರಿ ರೂ. 2 ಕೋಟಿ ಬೆಲೆಯ ಫೋರ್ಡ್ ಮಸ್ಟಾಂಗ್ ಕಾರಿನ ಮಾಲೀಕರಾಗಿದ್ದಾರೆ. ಸಾಮಾನ್ಯವಾಗಿ ಸಿನಿಮಾ ಸೆಲೆಬ್ರಿಟಿಗಳು, ಕ್ರಿಕೆಟಿಗರು ಹಾಗೂ ಉದ್ಯಮಿಗಳು ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿರುತ್ತಾರೆ. ಇದೀಗ ರಾಜಕೀಯ ನಾಯಕರು ಸಹ ಹೆಚ್ಚಾಗಿ ಇಂತಹ ಕಾರುಗಳನ್ನು ಖರೀದಿಸುತ್ತಿದ್ದಾರೆ ಎಂದು ಹೇಳಬಹುದು.

Most Read Articles

Kannada
English summary
Luxury cars owned by bollywood actor hrithik roshan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X