ಬಹುಕೋಟಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರು ಖರೀದಿಸಿದ ಲುಲು ಗ್ರೂಪ್ ಮಾಲೀಕ

ಲುಲು ಗ್ರೂಪ್ ಇಂಟರ್‌ನ್ಯಾಶನಲ್‌ನ ಮಾಲೀಕರಾಗಿರುವ ಭಾರತೀಯ ಉದ್ಯಮಿ ಮತ್ತು ಬಿಲಿಯನೇರ್ ಎಂ ಎ ಯೂಸುಫ್ ಅಲಿ ಅವರು ಇತ್ತೀಚೆಗೆ 100 ಕೋಟಿ ರೂ. ಬೆಲೆಬಾಳುವ ‍ಐಷಾರಾಮಿ ಹೆಲಿಕಾಪ್ಟರ್ 'ಏರ್‌ಬಸ್ ಹೆಚ್145' ಅನ್ನು ಖರೀದಿಸಿ ಸುದ್ದಿಯಾಗಿದ್ದರು.

ಬಹುಕೋಟಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರು ಖರೀದಿಸಿದ ಲುಲು ಗ್ರೂಪ್ ಮಾಲೀಕ

ಯೂಸುಫ್ ಅಲಿ ಅವರು ದುಬಾರಿ ಹೆಲಿಕಾಪ್ಟರ್‌ ಖರೀದಿಸಿದ ಭಾರತೀಯ ಉದ್ಯಮಿಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಅವರು ಹೊಚ್ಚ ಹೊಸ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್600 ಐಷಾರಾಮಿ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಅವರು ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಸಾವಿರಾರು ಕೋಟಿ ರೂ. ಉದ್ಯಮ ಹೊಂದಿರುವ ಯೂಸುಫ್‌ ಅಲಿ ಅರಬ್‌ ದೇಶಗಳು, ಈಜಿಪ್ಟ್, ಭಾರತ ಸೇರಿದಂತೆ ಹಲವೆಡೆ ಲುಲು ಹೈಪರ್‌ಮಾರ್ಕೆಟ್ ಮತ್ತು ಶಾಪಿಂಗ್ ಮಾಲ್‌ಗಳನ್ನು ನಡೆಸುತ್ತಿದ್ದಾರೆ.

ಬಹುಕೋಟಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರು ಖರೀದಿಸಿದ ಲುಲು ಗ್ರೂಪ್ ಮಾಲೀಕ

ಭಾರತದಲ್ಲೂ ಮಾಲ್‌ಗಳನ್ನು ತೆರೆದಿದೆ. ಕೇರಳದ ಕೊಚ್ಚಿಯಲ್ಲಿ ಲುಲು ಸಮೂಹದ ಮೊದಲ ಮಾಲ್ ತೆರೆಯಲಾಯಿತು. ಅದರ ನಂತರ, ಇದು ತಿರುವನಂತಪುರದಲ್ಲಿ ಒಂದನ್ನು ಮತ್ತು ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ಮೂರನೆಯದನ್ನು ತೆರೆಯಿತು. ಬೆಂಗಳೂರಿನಲ್ಲಿ ಕೂಡ ಲುಲು ಹೈಪರ್‌ಮಾರ್ಕೆಟ್ ಇದೆ.

ಬಹುಕೋಟಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರು ಖರೀದಿಸಿದ ಲುಲು ಗ್ರೂಪ್ ಮಾಲೀಕ

ಯೂಸುಫ್ ಅಲಿಯವರ ಹೊಸ Mercedes-Maybach GLS600 ನ ಚಿತ್ರವು ಈಗಾಗಲೇ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಎಸ್‌ಯುವಿಯನ್ನು ಕೇರಳದ ಮರ್ಸಿಡಿಸ್-ಬೆನ್ಜ್‌ನ ಬ್ರಿಡ್ಜ್‌ವೇ ಮೋಟಾರ್ಸ್ ಡೀಲರ್‌ಶಿಪ್‌ನಿಂದ ಖರೀದಿಸಲಾಗಿದೆ. ಯೂಸುಫ್ ಅಲಿಗೆ ಸೇರಿರುವ ಹೊಸ Mercedes-Maybach GLS600 ಚಿತ್ರವನ್ನು ಬ್ರಿಡ್ಜ್‌ವೇ ಮೋಟಾರ್ಸ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ.

ಬಹುಕೋಟಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರು ಖರೀದಿಸಿದ ಲುಲು ಗ್ರೂಪ್ ಮಾಲೀಕ

ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್600 ಎಸ್‍ಯುವಿಯ ಕೀಯನ್ನು ರೆಜಿತ್ ರಾಧಾಕೃಷ್ಣನ್ ಅವರು ಯೂಸುಫ್ ಅಲಿ ಅವರ ಪರವಾಗಿ ಸ್ವೀಕರಿಸಿದರು. ಈ ಹೊಸ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್600 ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇದು ಶ್ರೀಮಂತ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳಲ್ಲಿ ಶೀಘ್ರವಾಗಿ ಜನಪ್ರಿಯವಾಯಿತು.

ಬಹುಕೋಟಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರು ಖರೀದಿಸಿದ ಲುಲು ಗ್ರೂಪ್ ಮಾಲೀಕ

ಈ ಎಸ್‍ಯುವಿ ಎಷ್ಟು ಜನಪ್ರಿಯವಾಗಿತ್ತು ಎಂದರೆ ಬಹಳಷ್ಟು ಎಸ್‍ಯುವಿ ಬಿಡುಗಡೆಗೂ ಮುನ್ನವೇ ಮಾರಾಟವಾದವು. ಸದ್ಯ ಈ ಎಸ್‍ಯುವಿಯ ಬೆಲೆಯು ಕ್ಸ್ ಶೋರೂಂ ಪ್ರಕಾರ ರೂ,2.80 ಕೋಟಿಯಾಗಿದೆ. ಸಾಮಾನ್ಯ ಮರ್ಸಿಡಿಸ್ GLS ನೊಂದಿಗೆ ಹೋಲಿಸಿದಾಗ, ಮೇಬ್ಯಾಕ್ ಆವೃತ್ತಿಯು ಕೆಲವು ಬದಲಾವಣೆಗಳನ್ನು ಹೊಂದಿದೆ.

ಬಹುಕೋಟಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರು ಖರೀದಿಸಿದ ಲುಲು ಗ್ರೂಪ್ ಮಾಲೀಕ

ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್600 ಎಸ್‍ಯುವಿಯಲ್ಲಿ ದೊಡ್ಡ ವ್ಹೀಲ್ ಗಳು, ವಿಭಿನ್ನ ಮುಂಭಾಗದ ಗ್ರಿಲ್ ಅನ್ನು ಪಡೆಯುತ್ತದೆ ಮತ್ತು ಒಳಾಂಗಣಕ್ಕೆ ಬಂದಾಗ ಐಷಾರಾಮಿಯಾಗಿದೆ, . ಇದು ಸರಿಯಾದ 4 ಸೀಟುಗಳ ಎಸ್‍ಯುವಿ, ನಪ್ಪಾ ಲೆದರ್, ಮಸಾಜರ್ ಫಂಕ್ಷನ್, ಹಿಂಬದಿ ಸೀಟ್ ಮನರಂಜನಾ ಡಿಸ್ ಪಪ್ಲೇ, ಕ್ಲೈಮೆಂಟ್ ಕಂಟ್ರೋಲ್, ಪನರೋಮಿಕ್ ಸನ್‌ರೂಫ್, 360 ಡಿಗ್ರಿ ಕ್ಯಾಮೆರಾ, ಪ್ರೀಮಿಯಂ ಸ್ಪೀಕರ್ ಸಿಸ್ಟಮ್, ಆಕ್ಟಿವ್ ಸ್ಟೀರಿಂಗ್ ಅಸಿಸ್ಟ್ ಮತ್ತು 360 ಡಿಗ್ರಿಗಳೊಂದಿಗೆ ಬರುತ್ತದೆ.

ಬಹುಕೋಟಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರು ಖರೀದಿಸಿದ ಲುಲು ಗ್ರೂಪ್ ಮಾಲೀಕ

ಇದರೊಂದಿಗೆ ಕ್ಯಾಮೆರಾ, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿವೆ. ಇದು ಸಾಮಾನ್ಯ ಮರ್ಸಿಡಿಸ್ ಜಿಎಕಲ್ಎಸ್ ಎಸ್‍ಯುವಿಗಿಂತ ಹೆಚ್ಚು ಐಷಾರಾಮಿಯಾಗಿದೆ

ಬಹುಕೋಟಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರು ಖರೀದಿಸಿದ ಲುಲು ಗ್ರೂಪ್ ಮಾಲೀಕ

ಈ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್600 ಎಸ್‍ಯುವಿಯಲ್ಲಿ 4.0 ಲೀಟರ್ ಟ್ವಿನ್ ಟರ್ಬೊ V8 ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ, ಇದು 550 ಬಿಹೆಚ್‍ಪಿ ಮತ್ತು 730 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. GLS600 ಜೊತೆಗೆ 48V EQ ಬೂಸ್ಟ್ ಸಿಸ್ಟಮ್ ಅನ್ನು ನೀಡಲಾಗಿದೆ.

ಬಹುಕೋಟಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರು ಖರೀದಿಸಿದ ಲುಲು ಗ್ರೂಪ್ ಮಾಲೀಕ

ಇದರೊಂದಿಗೆ 48V ಮೈಲ್ಡ್-ಹೈಬ್ರಿಡ್ ವ್ಯವಸ್ಥೆಯು ಎಲೆಕ್ಟ್ರಿಕ್ ಮೋಟರ್‌ಗೆ ಪವರ್ ನೀಡುತ್ತದೆ ಮತ್ತು ಅದು ಕೇವಲ 22 ಬಿಹೆಚ್‍ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲ್ಪಟ್ಟಿದೆ ಮತ್ತು ಎಲ್ಲಾ ಚಕ್ರಗಳಿಗೆ ಶಕ್ತಿಯನ್ನು ಕಳುಹಿಸಲಾಗುತ್ತದೆ.ಇದು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲ್ಪಟ್ಟಿದೆ ಮತ್ತು ಎಲ್ಲಾ ಚಕ್ರಗಳಿಗೆ ಪವರ್ ಕಳುಹಿಸಲಾಗುತ್ತದೆ.

ಬಹುಕೋಟಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರು ಖರೀದಿಸಿದ ಲುಲು ಗ್ರೂಪ್ ಮಾಲೀಕ

ಯೂಸುಫ್ ಅಲಿ ಅವರು ಭಾರತ ಮತ್ತು ವಿದೇಶಗಳಲ್ಲಿ ಕಾರುಗಳನ್ನು ಹೊಂದಿದ್ದಾರೆ. ಮಿನಿ ಕೂಪರ್ ಕಂಟ್ರಿಮ್ಯಾನ್, ರೋಲ್ಸ್ ರಾಯ್ಸ್ ಘೋಸ್ಟ್, ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್, ಬೆಂಟ್ಲಿ ಬೆಂಟೈಗಾ, ರೋಲ್ಸ್ ರಾಯ್ಸ್ ಕಲಿನನ್, ಮರ್ಸಿಡಿಸ್-ಬೆನ್ಜ್ ಜಿಎಲ್‌ಎಸ್, ಲೆಕ್ಸಸ್ ಎಲ್‌ಎಕ್ಸ್ 750, ಬಿಎಂಡಬ್ಲ್ಯು 750 ಲೀ ಎಂ ಸ್ಪೋರ್ಟ್ ಮತ್ತು ಮುಂತಾದ ಕಾರುಗಳಲ್ಲಿ ಅವರು ಗುರುತಿಸಿಕೊಂಡಿದ್ದಾರೆ.

ಬಹುಕೋಟಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರು ಖರೀದಿಸಿದ ಲುಲು ಗ್ರೂಪ್ ಮಾಲೀಕ

ಜಿಎಲ್ಎಸ್600 ಯುಸುಫ್ ಅಲಿಯ ಗ್ಯಾರೇಜ್‌ನಲ್ಲಿ ಮೊದಲ ಮೇಬ್ಯಾಕ್ ಅಲ್ಲ. ಅವರು ಈಗಾಗಲೇ ತಮ್ಮ ಗ್ಯಾರೇಜ್‌ನಲ್ಲಿ ಮೇಬ್ಯಾಕ್ ಎಸ್600 ಅನ್ನು ಹೊಂದಿದ್ದಾರೆ. ಅವರು ಮರ್ಸಿಡಿಸ್-ಬೆಂಝ್ 180ಟಿ ವಿಂಟೇಜ್ ಐಷಾರಾಮಿ ಕಾರನ್ನು ಹೊಂದಿದ್ದಾರೆ, ಇದನ್ನು ಹಿಂದಿನ ತಿರುವಾಂಕೂರ್ ಸಾಮ್ರಾಜ್ಯದ ಮಾಜಿ ಮಹಾರಾಜರಿಗೆ ಉಡುಗೊರೆಯಾಗಿ ನೀಡಲಾಯಿತು.

Most Read Articles

Kannada
English summary
Ma yusuf ali boughts new mercedes maybach gls 600 suv details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X