ಇದು ಮೇಕ್ ಇನ್ ಇಂಡಿಯಾ ಮೈಲಿಗಲ್ಲು- ಪ್ಯಾರಿಸ್ ತಲುಪಿದ ಭಾರತದ ಪುಟ್ಟ ಕನಸು..!!

Written By:

ಭಾರತದ ಕನಸಿನ ಕೂಸು ಮೇಕ್ ಇನ್ ಇಂಡಿಯಾ ಅಭಿಯಾನ ದೇಶದಲ್ಲಿ ಹೊಸದೊಂದು ಮೈಲಿಗಲ್ಲು ಸೃಷ್ಟಿಸುತ್ತಿದೆ. ಅದು ಕೇವಲ ದೇಶದಲ್ಲಿ ಅಷ್ಟೇ ಅಲ್ಲ ಹೊರಜಗತ್ತಿಗೂ ತನ್ನ ಶಕ್ತಿ ಪ್ರದರ್ಶನಕ್ಕೆ ಅವಕಾಶ ಒದಗಿಸುವ ಮೂಲಕ ಹೊಸ ಹೊಸ ಆವಿಷ್ಕಾರಗಳಿಗೆ ಕಾರಣವಾಗುತ್ತಿದೆ.

To Follow DriveSpark On Facebook, Click The Like Button
ಇದು ಮೇಕ್ ಇನ್ ಇಂಡಿಯಾ ಮೈಲಿಗಲ್ಲು- ಪ್ಯಾರಿಸ್ ತಲುಪಿದ ಭಾರತದ ಪುಟ್ಟ ಕನಸು..!!

ದೇಶದಲ್ಲಿ ಮೇಕ್ ಇನ್ ಇಂಡಿಯಾ ಅಭಿಯಾನ ಯಶಸ್ವಿಯ ಹೆಜ್ಜೆಗಳನ್ನು ಇಡುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ 19 ಸಾವಿರ ಕಿಲೋ ಮೀಟರ್ ರೆನಾಲ್ಟ್ ಕ್ವಿಡ್ ಟೀಂ ಮಾಡಿದ ದೆಹಲಿ ಟು ಪ್ಯಾರಿಸ್ ಪ್ರಯಾಣ.

ಇದು ಮೇಕ್ ಇನ್ ಇಂಡಿಯಾ ಮೈಲಿಗಲ್ಲು- ಪ್ಯಾರಿಸ್ ತಲುಪಿದ ಭಾರತದ ಪುಟ್ಟ ಕನಸು..!!

ಸುಮಾರು 13 ದೇಶಗಳನ್ನು ಸುತ್ತುವರಿದುಕೊಂಡು ದೆಹಲಿ ಟು ಪ್ಯಾರಿಸ್ ಪ್ರಯಾಣ ಮಾಡಿರುವ ಸಾಹಸಿ ಯುವಕರ ತಂಡವೊಂದು, ಸದ್ಯ ಫ್ರಾನ್ಸ್ ರಾಜಧಾನಿಯಲ್ಲಿ ಮೇಕ್ ಇನ್ ಇಂಡಿಯಾ ಅಭಿಯಾನದ ಯಶಸ್ವಿಯನ್ನು ಸಾರಿಹೇಳುತ್ತಿದೆ.

ಇದು ಮೇಕ್ ಇನ್ ಇಂಡಿಯಾ ಮೈಲಿಗಲ್ಲು- ಪ್ಯಾರಿಸ್ ತಲುಪಿದ ಭಾರತದ ಪುಟ್ಟ ಕನಸು..!!

ಅಷ್ಟಕ್ಕೂ ಇವರೆಲ್ಲಾ ಏಕೆ ದೆಹಲಿಯಿಂದ ಪ್ಯಾರಿಸ್ ಪ್ರಯಾಣ ಮಾಡಿದ್ರು ಎಂಬ ಯೋಚನೆ ನಿಮಗೆ ಮೂಡದೇ ಇರಲಾರದು. ಯಾಕೇಂದ್ರೆ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಸಿದ್ಧಗೊಂಡಿದ್ದ ಈ ರೆನಾಲ್ಟ್ ಸಣ್ಣಕಾರು ಕ್ವಿಡ್, ಜಗತ್ತಿನ ಮುಂದೆ ತನ್ನ ಶಕ್ತಿ ಪ್ರದರ್ಶನ ಮಾಡಿದೆ.

ಇದು ಮೇಕ್ ಇನ್ ಇಂಡಿಯಾ ಮೈಲಿಗಲ್ಲು- ಪ್ಯಾರಿಸ್ ತಲುಪಿದ ಭಾರತದ ಪುಟ್ಟ ಕನಸು..!!

ಪ್ರತಿಷ್ಠಿತ ಕಾರು ಉತ್ಪಾದಕ ಸಂಸ್ಥೆ ರೆನಾಲ್ಟ್, ತನ್ನ ಸಣ್ಣಕಾರು ಕ್ವಿಡ್ ಪ್ರಚಾರಕ್ಕಾಗಿ ಇಂತಹದ್ದೊಂದು ಸಾಹಸ ಯಾತ್ರೆಯನ್ನು ಕೈಗೊಂಡಿತ್ತು. ಆದ್ರೆ ಅದು ಕೇವಲ ಪ್ರಚಾರವಲ್ಲ. ಸಾಹಿಸಿ ಯುವಕ ಪ್ಯಾರಿಸ್ ತಲುಪಿದ ಗಳಿಗೆ ಭಾರತದ ಮಟ್ಟಿಗೆ ಯಶಸ್ಸಿಯ ಕ್ಷಣವಾಗಿತ್ತು.

ಇದು ಮೇಕ್ ಇನ್ ಇಂಡಿಯಾ ಮೈಲಿಗಲ್ಲು- ಪ್ಯಾರಿಸ್ ತಲುಪಿದ ಭಾರತದ ಪುಟ್ಟ ಕನಸು..!!

45 ದಿನಗಳ ಕಾಲ ರಸ್ತೆ ಮಾರ್ಗದ ಪ್ರವಾಸ ಕೈಗೊಂಡಿದ್ದ ಆ ಯುವಕರ ತಂಡ, 13 ದೇಶಗಳ ಪ್ರಮುಖ ಗಡಿ ಪ್ರದೇಶಗಳನ್ನು ಸಾಗಿದ್ದು ಸಾಹಸವೇ ಸರಿ. ಅತಿಯಾದ ಬಿಸಿಲು ಮತ್ತು ಚಳಿ ಎರಡನ್ನು ಅನುಭವಿಸಿದ ಆ ತಂಡ, ಯಶಸ್ಪಿಯ ಹಾದಿಯನ್ನು ತಲುಪಿದೆ. ಈ ಮೂಲಕ ಭಾರತದಲ್ಲೂ ವಿಶ್ವದರ್ಜೆಯ ಆಟೋ ಉತ್ಪಾದನೆ ಜೋರಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ.

ಇದು ಮೇಕ್ ಇನ್ ಇಂಡಿಯಾ ಮೈಲಿಗಲ್ಲು- ಪ್ಯಾರಿಸ್ ತಲುಪಿದ ಭಾರತದ ಪುಟ್ಟ ಕನಸು..!!

ಇದೊಂದೆ ಅಲ್ಲ ಈ ಹಿಂದೆ ರಾಜಧಾನಿ ದೆಹಲಿಯಿಂದ ಲಂಡನ್‌ ತನಕ ಕಾರಿನಲ್ಲೇ ಪ್ರಯಾಣಿಸಿ ಹೊಸದೊಂದು ದಾಖಲೆ ಮಾಡಿದ್ದ ಬೆಂಗಳೂರಿನ ನಿಧಿ ತಿವಾರಿ ಮತ್ತು ತಂಡದ ಸದಸ್ಯರು, 21 ಸಾವಿರ ಕಿಲೋ ಮೀಟರ್ ಕ್ರಮಿಸಿ ಭಾರತದ ಕೀರ್ತಿ ಹೆಚ್ಚಿಸಿದ್ದರು. ಜೊತೆಗೆ ಭಾರತದಲ್ಲೂ ಆಪ್-ರೋಡಿಂಗ್ ಕೌಶಲ್ಯತೆ ಹೆಚ್ಚುತ್ತಿದೆ ಎಂಬುದನ್ನು ಜಗತ್ತಿಗೆ ಸಾರಿ ಹೇಳಿದ್ದರು.

ಇದು ಮೇಕ್ ಇನ್ ಇಂಡಿಯಾ ಮೈಲಿಗಲ್ಲು- ಪ್ಯಾರಿಸ್ ತಲುಪಿದ ಭಾರತದ ಪುಟ್ಟ ಕನಸು..!!

ಇನ್ನು ಪ್ರಯಾಣದ ಅನುಭವ ಹಂಚಿಕೊಂಡಿರುವ ಸಾಹಿಸಿ ಯುವಕರ ತಂಡ, ಮೇಕ್ ಇನ್ ಇಂಡಿಯಾ ಅಭಿಯಾನದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಹೀಗಾಗಿ ಪ್ಯಾರಿಸ್ ತಲುಪಿದ ಆ ಕಷ್ಟದ ದಿನಗಳನ್ನು ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

ಇದು ಮೇಕ್ ಇನ್ ಇಂಡಿಯಾ ಮೈಲಿಗಲ್ಲು- ಪ್ಯಾರಿಸ್ ತಲುಪಿದ ಭಾರತದ ಪುಟ್ಟ ಕನಸು..!!

ಒಟ್ಟಿನಲ್ಲಿ ಭಾರತದಲ್ಲೂ ವಿಶ್ವದರ್ಜೇಯ ಆಟೋಮೊಬೈಲ್ ಉತ್ಪಾದನೆ ಜೋರಾಗಿಯೇ ಸಾಗುತ್ತಿದೆ. ಇದಕ್ಕೆಲ್ಲಾ ಕಾರಣ ಯಶಸ್ವಿಯಾಗಿ ಕೈಗೊಂಡ ಮೇಕ್ ಇನ್ ಇಂಡಿಯಾ ಅಭಿಯಾನ ಪ್ರಚಾರವೆಂದರೆ ತಪ್ಪಾಗಲಾರದು.

ನೂತನವಾಗಿ ಬಿಡುಗಡೆಗೊಂಡಿರುವ 2017 ಹೋಂಡಾ ಸಿಟಿ ಕಾರಿನ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಪ್ರಯಾಣ
English summary
This Make In India Small Car Was Driven 19,000 Kms From Delhi To Paris Non-Stop.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark