ಐ‍‍ಪಿ‍ಎಸ್ ಅಧಿಕಾರಿಯೆಂದು ಜನರಿಗೆ ಟೋಪಿ ಹಾಕಿದವ ಈಗ ಅಂದರ್..!

ಬಹುತೇಕ ಭಾರತೀಯ ಬ್ಯಾಂಕುಗಳು ಸಾಲವನ್ನು ನೀಡಿ, ಸಾಲಗಾರರು ಸಾಲವನ್ನು ಮರುಪಾವತಿ ಮಾಡದ ಕಾರಣ, ಭಾರತೀಯ ಬ್ಯಾಂಕಿಂಗ್ ಕ್ಷೇತ್ರವು ಸಾಕಷ್ಟು ಒತ್ತಡವನ್ನು ಎದುರಿಸುತ್ತಿದೆ. ಕೇರಳದ ಗುರುವಾಯೂರ್‌ನಲ್ಲಿ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಐ‍‍ಪಿ‍ಎಸ್ ಅಧಿಕಾರಿಯೆಂದು ಜನರಿಗೆ ಟೋಪಿ ಹಾಕಿದವ ಈಗ ಅಂದರ್..!

ಈ ಪ್ರಕರಣದಲ್ಲಿ ತಾಯಿ ಮಗ ಇಬ್ಬರು ಸೇರಿ ಕಾರು ಸಾಲ ಪಡೆದು, ನಂತರ ಆ ಕಾರುಗಳನ್ನು ಮಾರಾಟ ಮಾಡಿ ಬ್ಯಾಂಕುಗಳಿಗೆ ವಂಚಿಸಿರುವ ಹಗರಣ ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಭೇದಿಸಿರುವ ಕೇರಳ ಪೊಲೀಸರು ತಾಯಿಯನ್ನು ಬಂಧಿಸಿದ್ದಾರೆ. ಮಗ ತಪ್ಪಿಸಿಕೊಂಡಿದ್ದಾನೆ.

ಐ‍‍ಪಿ‍ಎಸ್ ಅಧಿಕಾರಿಯೆಂದು ಜನರಿಗೆ ಟೋಪಿ ಹಾಕಿದವ ಈಗ ಅಂದರ್..!

58 ವರ್ಷ ವಯಸ್ಸಿನ ಶ್ಯಾಮಲಾ ವೇಣುಗೋಪಾಲ್ ಹಾಗೂ ಆಕೆಯ ಪುತ್ರ 29 ವರ್ಷ ವಯಸ್ಸಿನ ವಿಪಿನ್ ಕಾರ್ತಿಕ್ ಅವರು ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ್ದಾರೆ. ವಿಪಿನ್ ಕಾರ್ತಿಕ್ ತನ್ನನ್ನು ಕಾಶ್ಮೀರ ಮೂಲದ ಐಪಿಎಸ್ ಅಧಿಕಾರಿಯೆಂದು ನಕಲಿ ದಾಖಲೆಗಳನ್ನು ಸಲ್ಲಿಸಿ, ಸಾಲ ಪಡೆದಿದ್ದಾನೆ.

ಐ‍‍ಪಿ‍ಎಸ್ ಅಧಿಕಾರಿಯೆಂದು ಜನರಿಗೆ ಟೋಪಿ ಹಾಕಿದವ ಈಗ ಅಂದರ್..!

ಆತನ ತಾಯಿ ಶ್ಯಾಮಲಾ ತನ್ನ ಮಗನ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯಂತೆ ನಟಿಸಿದ್ದಾರೆ. ತಾಯಿ ಮಗ ಇಬ್ಬರೂ ಸೇರಿ ನಕಲಿ ದಾಖಲೆಗಳನ್ನು ಸಲ್ಲಿಸಿ, ವಿವಿಧ ಬ್ಯಾಂಕುಗಳಿಂದ ಸಾಲ ಪಡೆದು 28 ಕಾರುಗಳನ್ನು ಖರೀದಿಸಿದ್ದಾರೆ.

ಐ‍‍ಪಿ‍ಎಸ್ ಅಧಿಕಾರಿಯೆಂದು ಜನರಿಗೆ ಟೋಪಿ ಹಾಕಿದವ ಈಗ ಅಂದರ್..!

ನಂತರ ಆ ಕಾರುಗಳನ್ನು ಉಪಯೋಗಿಸಿದ ಕಾರು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಆದರೆ ಬ್ಯಾಂಕುಗಳಿಗೆ ವಂಚಿಸಿ, ಸಾಲಗಳ ಮೂಲಕ ಖರೀದಿಸಿದ ಆ ಕಾರುಗಳು ಈಗ ಎಲ್ಲಿವೆ ಎಂಬ ಬಗ್ಗೆ ತಾಯಿ ಮಗ ಇಬ್ಬರಿಗೂ ತಿಳಿದಿಲ್ಲ.

ಐ‍‍ಪಿ‍ಎಸ್ ಅಧಿಕಾರಿಯೆಂದು ಜನರಿಗೆ ಟೋಪಿ ಹಾಕಿದವ ಈಗ ಅಂದರ್..!

ಕೇರಳ ಪೊಲೀಸರ ಪ್ರಕಾರ ಈ ಇಬ್ಬರೂ ಗುರುವಾಯೂರ್‍‍ನಲ್ಲಿರುವ ಬ್ಯಾಂಕುಗಳಿಂದ ಸಾಲ ಪಡೆದು ಒಟ್ಟು 12 ಕಾರುಗಳನ್ನು ಖರೀದಿಸಿದ್ದರೆ, ನಾದಪುರಂ, ತಲಷೇರಿ, ಕೊಟ್ಟಾಯಂ, ತಿರುವನಂತಪುರಂ, ಕಲಮಶೇರಿ, ಎರ್ನಾಕುಲಂ, ಕೊಯಿಲಾಂಡಿ ಹಾಗೂ ವಡಕರಾಗಳಲ್ಲಿರುವ ಬ್ಯಾಂಕುಗಳಿಂದ ಸಾಲ ಪಡೆದು 16 ಕಾರುಗಳನ್ನು ಖರೀದಿಸಿದ್ದಾರೆ.

ಐ‍‍ಪಿ‍ಎಸ್ ಅಧಿಕಾರಿಯೆಂದು ಜನರಿಗೆ ಟೋಪಿ ಹಾಕಿದವ ಈಗ ಅಂದರ್..!

ಒಂದು ಕಾರ್ ಅನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಕಾರುಗಳನ್ನು ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಈ ಎಲ್ಲಾ ಮಾಹಿತಿಯು ವಿಪಿನ್ ಬರೆದಿರುವ ಡೈರಿಯಲ್ಲಿ ಕಂಡು ಬಂದಿದೆ. ಒಂದು ರಾಯಲ್ ಎನ್‍‍ಫೀಲ್ಡ್ ಬುಲೆಟ್ ಬೈಕ್ ಹಾಗೂ ಹ್ಯುಂಡೈ ಕ್ರೆಟಾ ಕಾರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಐ‍‍ಪಿ‍ಎಸ್ ಅಧಿಕಾರಿಯೆಂದು ಜನರಿಗೆ ಟೋಪಿ ಹಾಕಿದವ ಈಗ ಅಂದರ್..!

ಪೊಲೀಸರು ಈ ಇಬ್ಬರೂ ವಾಸವಿದ್ದ ಕೊಯಿಕೊಡ್‍‍ನ ಬಿಲಾತಿಕುಲಂ ಬಾಡಿಗೆ ಅಪಾರ್ಟ್‍‍ಮೆಂಟ್ ಅನ್ನು ಸುತ್ತುವರೆದಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುತ್ತಲೇ ವಿಪಿನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಶ್ಯಾಮಲಾರವರನ್ನು ಬಂಧಿಸಲಾಗಿದೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಐ‍‍ಪಿ‍ಎಸ್ ಅಧಿಕಾರಿಯೆಂದು ಜನರಿಗೆ ಟೋಪಿ ಹಾಕಿದವ ಈಗ ಅಂದರ್..!

ವಿಪಿನ್ ತಾಯಿ ಶ್ಯಾಮಲಾ ಮೂಲತಃ ಮನಲುಟ್ಟಂನ ಕುನಿಯಿಲ್‍‍ಗೆ ಸೇರಿದವರು. ಪೊಲೀಸರು ಪರಾರಿಯಾಗಿರುವ ವಿಪಿನ್‍‍ಗಾಗಿ ಶೋಧ ನಡೆಸುತ್ತಿದ್ದಾರೆ. ಮೊದಲಿಗೆ ಬಿಲಾತಿಕುಲಂ ಅಪಾರ್ಟ್‍‍ಮೆಂಟ್‍‍ನ ವಿಳಾಸ ಹೊಂದಿದ್ದ ಆಧಾರ್ ಕಾರ್ಡ್ ನೀಡಿ ಬ್ಯಾಂಕಿನಲ್ಲಿ ಖಾತೆ ತೆರೆದಿದ್ದಾರೆ.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಐ‍‍ಪಿ‍ಎಸ್ ಅಧಿಕಾರಿಯೆಂದು ಜನರಿಗೆ ಟೋಪಿ ಹಾಕಿದವ ಈಗ ಅಂದರ್..!

ಇದಾದ ನಂತರ ನಕಲಿ ಸ್ಯಾಲರಿ ಸರ್ಟಿಫಿಕೇಟ್ ಹಾಗೂ ವಿಪಿನ್ ಐ‍‍ಪಿ‍ಎಸ್ ಅಧಿಕಾರಿಯ ಯೂನಿಫಾರಂ ತೊಟ್ಟಿದ್ದ ಫೋಟೊ ನೀಡಿದ್ದಾರೆ. ಸಾಲ ಪಡೆಯಲು ಬ್ಯಾಂಕುಗಳಲ್ಲಿ ಭಾರೀ ಮೊತ್ತದ ಹಣವಿರುವ ನಕಲಿ ಬ್ಯಾಂಕ್ ಸ್ಟೇಟ್‍‍ಮೆಂಟ್‍‍ಗಳನ್ನು ನೀಡಿದ್ದಾರೆ.

ಐ‍‍ಪಿ‍ಎಸ್ ಅಧಿಕಾರಿಯೆಂದು ಜನರಿಗೆ ಟೋಪಿ ಹಾಕಿದವ ಈಗ ಅಂದರ್..!

ಗಮನಿಸಬೇಕಾದ ಸಂಗತಿಯೆಂದರೆ, ಬ್ಯಾಂಕುಗಳೂ ಸಹ ಈ ಇಬ್ಬರ ವಂಚನೆಯ ಬಗ್ಗೆ ಯಾವುದೇ ವಿಚಾರಣೆ ನಡೆಸಿಲ್ಲ. ಹಿಂದೆ ಮುಂದೆ ನೀಡದೇ ಸಾಲ ಮಂಜೂರು ಮಾಡಿದ್ದಾರೆ. ವಿಪಿನ್ ನಕಲಿ ಯೂನಿಫಾರಂನಲ್ಲಿ ಗುರುವಾಯೂರಿನ ಶ್ರೀ ಕೃಷ್ಣ ದೇವಸ್ಥಾನ ಹಾಗೂ ಬೇರೆ ಪೊಲೀಸ್ ಠಾಣೆಗಳಲ್ಲಿರುವ ಫೋಟೊಗಳನ್ನು ಬ್ಯಾಂಕುಗಳಿಗೆ ನೀಡಿದ್ದಾನೆ.

ಐ‍‍ಪಿ‍ಎಸ್ ಅಧಿಕಾರಿಯೆಂದು ಜನರಿಗೆ ಟೋಪಿ ಹಾಕಿದವ ಈಗ ಅಂದರ್..!

ಇದರ ಜೊತೆಗೆ ಬೇರೆ ಪೊಲೀಸರ ಹೆಸರುಗಳನ್ನು ಹೇಳಿದ್ದಾನೆ. ಇಷ್ಟೇ ಅಲ್ಲದೇ ತಾಯಿ ಮಗ ಇಬ್ಬರೂ ಸೇರಿ ಗುರುವಾಯೂರಿನಲ್ಲಿರುವ ಇಂಡಿಯನ್ ಓವರ್‍‍ಸೀಸ್ ಬ್ಯಾಂಕಿಗೆ ರೂ.25 ಲಕ್ಷ ಹಾಗೂ 95 ಸವರನ್ ಚಿನ್ನವನ್ನು ವಂಚಿಸಿರುವ ಬಗ್ಗೆ ಆ ಬ್ಯಾಂಕಿನ ಮ್ಯಾನೇಜರ್ ದೂರು ನೀಡಿದ್ದಾರೆ.

ಐ‍‍ಪಿ‍ಎಸ್ ಅಧಿಕಾರಿಯೆಂದು ಜನರಿಗೆ ಟೋಪಿ ಹಾಕಿದವ ಈಗ ಅಂದರ್..!

ಶ್ಯಾಮಲಾರವರು ತಮ್ಮ ವಿಪಿನ್ ಕ್ಯಾನ್ಸರ್ ಪೇಷಂಟ್ ಎಂದು ಬ್ಯಾಂಕಿಗೆ ನಂಬಿಸಿ, ಚಿನ್ನ ಹಾಗೂ ಹಣ ಪಡೆದಿದ್ದಾರೆ. ಈ ಇಬ್ಬರ ಮೇಲೆ ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿಲ್ಲ.

Source: Manorama News

Most Read Articles

Kannada
English summary
Man poses as ips officer cheats banks - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X