ಚೆನ್ನೈ ಪ್ರವಾಹಕ್ಕೆ ಕೊಚ್ಚಿ ಹೋದ ಬೈಕ್ ಸವಾರನ ರಕ್ಷಣೆ

Written By:

ಚೆನ್ನೈ ಅಸುಪಾಸಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಪ್ರವಾಹದ ಸ್ಥಿತಿಯುಂಟಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಬೆಚ್ಚಿ ಬೀಳಿಸುವ ವಿಡಿಯೋ ಚಿತ್ರಣವೊಂದು ಬಿಡುಗಡೆಯಾಗಿದ್ದು, ಪ್ರವಾಹಕ್ಕೆ ಕೊಚ್ಚಿ ಹೋಗುತ್ತಿರುವ ಬೈಕ್ ಸವಾರನನ್ನು ಪವಾಡ ಸದೃಶ ರೀತಿಯಲ್ಲಿ ಪಾರು ಮಾಡಲಾಗಿದೆ.

Also Read: ಚೆನ್ನೈ ಪ್ರವಾಹ; ಆಟೋ ಕ್ಷೇತ್ರಕ್ಕೆ ಆಗಿರುವ ನಷ್ಟ ಅಷ್ಟಿಷ್ಟಲ್ಲ!

ಮಳೆಯ ಪ್ರಭಾವಕ್ಕೆ ಸಾರ್ವಜನಿಕ ಸಂಚಾರ ವ್ಯವಸ್ಥೆಯು ಸಂಪೂರ್ಣವಾಗಿ ಹದೆಗೆಟ್ಟಿದ್ದು, ಹಲೆವೆಡೆ ರಸ್ತೆಯಲ್ಲೇ ರಭಸದಲ್ಲಿ ನೀರಿನ ಪ್ರವಾಹವಾಗುತ್ತಿದೆ. ಈ ನಡುವೆ ಬೈಕ್ ಸವಾರನೋರ್ವ ಅಪಾಯಕ್ಕೆ ಸಿಲುಕಿದ್ದರು.

To Follow DriveSpark On Facebook, Click The Like Button
ಚೆನ್ನೈ ಪ್ರವಾಹಕ್ಕೆ ಕೊಚ್ಚಿ ಹೋದ ಬೈಕ್ ಸವಾರನ ರಕ್ಷಣೆ

ಪ್ರವಾಹದ ರಭಸಕ್ಕೆ ನಿಯಂತ್ರಣ ತಪ್ಪಿದ ಸವಾರ ಕೊಚ್ಚಿ ಹೋಗುವ ದೃಶ್ಯವನ್ನು ನೀವಿಲ್ಲಿ ನೋಡಬಹುದಾಗಿದೆ.

ಚೆನ್ನೈ ಪ್ರವಾಹಕ್ಕೆ ಕೊಚ್ಚಿ ಹೋದ ಬೈಕ್ ಸವಾರನ ರಕ್ಷಣೆ

ಅದೃಷ್ಟವಶಾತ್ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇತರೆ ಪ್ರಯಾಣಿಕರು ನೆರವಿಗೆ ಧಾವಿಸಿದ್ದಾರೆ.

ಚೆನ್ನೈ ಪ್ರವಾಹಕ್ಕೆ ಕೊಚ್ಚಿ ಹೋದ ಬೈಕ್ ಸವಾರನ ರಕ್ಷಣೆ

ಮಾನವ ಸಂಕೋಲೆ ನಿರ್ಮಿಸಿದ ಇತರೆ ಸವಾರರು ಅಪಾಯಕ್ಕೆ ಸಿಲುಕಿದ ಬೈಕ್ ಸವಾರನಿಗೆ ನೆರವಾಗುತ್ತಾರೆ.

ಚೆನ್ನೈ ಪ್ರವಾಹಕ್ಕೆ ಕೊಚ್ಚಿ ಹೋದ ಬೈಕ್ ಸವಾರನ ರಕ್ಷಣೆ

ಕೊನೆಗೂ ಪ್ರವಾಹಕ್ಕೆ ಸಿಲುಕಿದ ಬೈಕ್ ಸವಾರನನ್ನು ರಕ್ಷಿಸುವಲ್ಲಿ ಸಾರ್ವಜನಿಕರು ಯಶ ಕಾಣುತ್ತಾರೆ.

ಚೆನ್ನೈ ಪ್ರವಾಹಕ್ಕೆ ಕೊಚ್ಚಿ ಹೋದ ಬೈಕ್ ಸವಾರನ ರಕ್ಷಣೆ

ಚಿತ್ರಪುಟದ ಕೆಳಗಡೆ ಕೊಟ್ಟಿರುವ ವಿಡಿಯೋ ಮುಖಾಂತರ ಈ ದೃಶ್ಯಾವಳಿಗಳನ್ನು ನೀವು ವೀಕ್ಷಿಸಬಹುದಾಗಿದ್ದು, ಚೆನ್ನೈ ಪ್ರವಾಹ ಎಷ್ಟರ ಮಟ್ಟಿನಲ್ಲಿ ಅಪಾಯವನ್ನು ಸೃಷ್ಟಿಸಿದೆ ಎಂಬುದಕ್ಕೆ ಇಂದೊಂದು ನೈಜ ದೃಷ್ಟಾಂತವಾಗಿದೆ.

ಚೆನ್ನೈ ಪ್ರವಾಹ ಬೈಕ್ ಸವಾರನ ರಕ್ಷಣೆ ವಿಡಿಯೋ ವೀಕ್ಷಿಸಿ

Read more on ಬೈಕ್ bike
English summary
Man saved from being washed off in Chennai flood waters
Story first published: Wednesday, December 2, 2015, 13:00 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark