Just In
- 45 min ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 1 hr ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 2 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
- 14 hrs ago
ಮಧ್ಯಮ ಗಾತ್ರದ ಕಾರುಗಳಿಗೆ ಹೊಸ ಡೀಸೆಲ್ ಎಂಜಿನ್ ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
Don't Miss!
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- News
''ಹಿಂಸಾಚಾರವನ್ನು ಎಂದಿಗೂ ಸಹಿಸುವುದಿಲ್ಲ'': ಮೆಲಾನಿಯಾ ಟ್ರಂಪ್ ವಿದಾಯದ ಭಾಷಣ
- Finance
ಕಾರು ಖರೀದಿಗೆ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ ಬ್ಯಾಂಕ್ ಗಳಿವು
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಐಷಾರಾಮಿ ಕಾರುಗಳ ಒಡೆಯ ವಿರಾಟ್ ಕೊಹ್ಲಿಗೆ ಬಿತ್ತು ರೂ.500 ದಂಡ..!
ದೇಶದ ಬಹುತೇಕ ಭಾಗಗಳಲ್ಲಿ ಕನಿಷ್ಠ ಪ್ರಮಾಣದ ಮಳೆಯೂ ಇಲ್ಲದೆ ಹನಿ ನೀರಿಗೂ ಪರದಾಟುವ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಕೆಲವರು ಇದಕ್ಕೆ ತಲೆಕೆಡಿಸಿಕೊಳ್ಳದೇ ಬೇಕಾಬಿಟ್ಟಿಯಾಗಿ ನೀರು ಬಳಕೆ ಮಾಡುತ್ತಿರುವುದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ ಅಂದ್ರೆ ತಪ್ಪಾಗುವುದಿಲ್ಲ.

ಹೌದು, ದೇಶದ ಬಹುತೇಕ ಕಡೆಗಳಲ್ಲಿ ಜನ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರೇ ಇತ್ತ ಕೆಲವರು ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಲಭ್ಯವಿರುವ ನೀರನ್ನು ಬೇಕಾಬಿಟ್ಟಿಯಾಗಿ ಬಳಕೆ ಮಾಡುತ್ತಿದ್ದಾರೆ. ಇಂತದೊಂದು ಆರೋಪ ಇದೀಗ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿರುದ್ಧವೂ ಕೇಳಿ ಬಂದಿದ್ದು, ಮನೆಗೆಲಸದ ಕಾರ್ಮಿಕನು ವಿರಾಟ್ ಕೊಹ್ಲಿಯವರ ಐಷಾರಾಮಿ ಕಾರುಗಳನ್ನು ಕುಡಿಯುವ ನೀರಿನಿಂದ ತೊಳೆಯುತ್ತಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ದೆಹಲಿ ಬಳಿಯ ಗುರುಗ್ರಾಮ್‌ನಲ್ಲಿರುವ ಡಿಎಲ್‌ಎಫ್ ಫೇಸ್-1ನಲ್ಲಿರುವ ವಿರಾಟ್ ಕೊಹ್ಲಿ ಅವರ ನಿವಾಸದಲ್ಲಿ ಅರ್ಧ ಡಜನ್‌ಗೂ ಹೆಚ್ಚು ಐಷಾರಾಮಿ ಕಾರುಗಳಿದ್ದು, ಮನೆ ಕೆಲಸದವರು ಕುಡಿಯುವ ನೀರು ಬಳಕೆ ಮಾಡಿ ಕಾರುಗಳನ್ನು ತೊಳೆಯುವ ಮೂಲಕ ಸಾವಿರಾರು ಲೀಟರ್ ಕುಡಿಯುವ ನೀರು ಪೋಲು ಮಾಡುತ್ತಿದ್ದಾರೆ.

ಈ ಕುರಿತು ಸ್ಥಳೀಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಗುರುಗ್ರಾಮ್ ಮುನ್ಸಿಪಾಲ್ ಕಾರ್ಪೊರೇಷನ್ ಅಧಿಕಾರಿಗಳು ವಿರಾಟ್ ಕೊಹ್ಲಿ ವಿರುದ್ಧ ಕ್ರಮ ಕೈಗೊಂಡಿದ್ದು, ಕುಡಿಯುವ ನೀರನ್ನು ಕಾರ್ ಕ್ಲಿನ್‌ಗಾಗಿ ಬಳಕೆ ಮಾಡಿದ್ದಕ್ಕಾಗಿ ರೂ.500 ದಂಡ ವಿಧಿಸಿದ್ದಾರೆ.

ವಿರಾಟ್ ಕೊಹ್ಲಿ ಸದ್ಯ ಇಂಗ್ಲೆಂಡ್‌ನಲ್ಲಿದ್ದು, 12ನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಆದ್ರೆ ಅದೇನೆ ಇರಲಿ ಬೆೇಸಿಗೆ ಅವಧಿಯಲ್ಲಿ ಕುಡಿಯುವ ನೀರನ್ನು ಕಾರು ತೊಳೆಯುವುದುಕ್ಕಾಗಿ ಸಾವಿರ ಲೀಟರ್ ದುರ್ಬಳಕೆ ಮಾಡಿಕೊಂಡಿದ್ದು ತಪ್ಪು.

ಇನ್ನು ಲಗ್ಷುರಿ ಸ್ಪೋರ್ಟ್ಸ್ ಕಾರುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಳಿ ಈಗಾಗಲೇ ಹಲವಾರು ದುಬಾರಿ ಕಾರುಗಳ ಸಂಗ್ರಹವೇ ಇದ್ದು, ಆಡಿ ಆರ್8, ಆರ್8 ಎಲ್ಎಂಎಕ್ಸ್, ಎ8ಎಲ್, ಕ್ಯೂ 7 ಲಗ್ಷುರಿ ಸೆಡಾನ್ ಮಾದರಿ ಕಾರುಗಳಿದ್ದು, ಕೊಹ್ಲಿ ಕಾರು ಸಂಗ್ರಹದಲ್ಲಿ ಇದೀಗ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಸ್ಪೋರ್ಟ್ ಕಾರು ಭಾರೀ ಆಕರ್ಷಣೆ ಕಾರಣವಾಗಿದೆ ಕಾರಣವಾಗಿದೆ.

ಸದ್ಯ ಜರ್ಮನಿಯ ಐಷಾರಾಮಿ ಕಾರು ಸಂಸ್ಥೆ ಆಡಿಯ ಮುಖ್ಯ ಪ್ರಚಾರ ರಾಯಭಾರಿಯೂ ವಿರಾಟ್ ಕೊಹ್ಲಿಯವರು ಅನೇಕ ಸಂದರ್ಭಗಳಲ್ಲಿ ಐಷಾರಾಮಿ ಕಾರುಗಳ ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದು, ತಮ್ಮ ಬಹುದಿನಗಳ ಕನಸು ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಸ್ಪೋರ್ಟ್ ಕಾರನ್ನು ಖರೀದಿಸಿ ಸಂಭ್ರಮಿಸುತ್ತಿದ್ದಾರೆ.

ಇತ್ತೀಚೆಗಷ್ಟೆ ತಮ್ಮ ಬಹುದಿನಗಳ ಗೆಳತಿ ಅನುಷ್ಕಾ ಶರ್ಮಾ ಕೈಹಿಡಿದಿರುವ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಕೇವಲ ವ್ಯಯಕ್ತಿಕ ಬುದುಕಿನಲ್ಲಿ ಅಷ್ಟೇ ಅಲ್ಲದೇ ವೃತ್ತಿಪರ ಜೀವನದಲ್ಲೂ ಬಹಳಷ್ಟು ಹೆಸರು ಮಾಡಿರುವ ಈ ಜೋಡಿಯು ಐಷಾರಾಮಿ ಕಾರುಗಳ ಸಂಗ್ರಹದಲ್ಲಿ ಅಂಬಾನಿ ಪುತ್ರರಿಗೂ ಟಕ್ಕರ್ ನೀಡುತ್ತಿದ್ದಾರೆ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಸದ್ಯ ಕೊಹ್ಲಿ ಕಾರು ಸಂಗ್ರಹದಲ್ಲಿ ಸದ್ದು ಮಾಡುತ್ತಿರುವ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಸ್ಪೋರ್ಟ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 3.70 ಕೋಟಿ ಬೆಲೆ ಹೊಂದಿದ್ದು, ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಈ ಸ್ಪೋರ್ಟ್ ಕಾರು ಅತ್ಯಾಧುನಿಕ ಡ್ರೈವ್ ಟೆಕ್ನಾಲಜಿ ಪಡೆದುಕೊಳ್ಳುವ ಮೂಲಕ ಪರ್ಫಾಮೆನ್ಸ್ ಪ್ರಿಯರ ಮೆಚ್ಚುಗೆಗೆ ಕಾರಣವಾಗಿದೆ.

ಹಾಗೆಯೇ ಸಂದರ್ಭಗಳಿಗೆ ಅನುಗುಣವಾಗಿ ವಿವಿಧ ಕಾರುಗಳನ್ನು ಬಳಕೆ ಮಾಡುವ ವಿರಾಟ್ ಕೊಹ್ಲಿಯವರು ಇವುಗಳ ನಿಯಂತ್ರಣಕ್ಕಾಗಿಯೇ ಪ್ರತ್ಯೇಕವಾಗಿ ಒಂದು ಗ್ಯಾರೇಜ್ ಕೂಡಾ ಹೊಂದಿದ್ದಾರೆ. ವಿಶೇಷ ಅಂದ್ರೆ ಹತ್ತಾರು ಐಷಾರಾಮಿ ಕಾರುಗಳ ಸಂಗ್ರಹ ಹೊಂದಿರುವ ಕೊಹ್ಲಿ ಬಳಿ ಡಸ್ಟರ್, ಸ್ವಿಫ್ಟ್ ನಂತರ ಕಾರುಗಳು ಕೂಡಾ ಸ್ಥಾನ ಪಡೆದಿವೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ವಿರಾಟ್ ಕೊಹ್ಲಿ ಅವರು ಕಾರು ಸಂಗ್ರಹದಲ್ಲಿ ಸ್ಥಾನ ಪಡೆದಿರುವ ಬಹುತೇಕ ಕಾರುಗಳು ಆಡಿ ನಿರ್ಮಾಣದ ಕಾರುಗಳೇ ಹೆಚ್ಚಿದ್ದು, ರಾಯಭಾರಿಯಾಗಿರುವ ಹಿನ್ನೆಲೆ ಭಾರತದಲ್ಲಿ ಬಿಡುಗಡೆಯಾಗುವ ಪ್ರತಿ ಆಡಿ ಕಾರು ಕೂಡಾ ಕೊಹ್ಲಿ ಕಾರ್ ಸಂಗ್ರಹಕ್ಕೆ ಉಡುಗೊರೆಯಾಗಿ ಬರುವುದು ಹೊಸ ವಿಚಾರವೇನಲ್ಲ.