Just In
- 47 min ago
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- 1 hr ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 2 hrs ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 3 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
Don't Miss!
- News
ಕೊವ್ಯಾಕ್ಸಿನ್ ಬಗ್ಗೆ ಎಚ್ಚರ: ಲಸಿಕೆಯು ಯಾರಿಗೆ ಸೂಕ್ತ, ಯಾರಿಗೆ ಸೂಕ್ತವಲ್ಲ?
- Finance
34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತೊಂದು ದುಬಾರಿ ಕಾರಿನ ಒಡೆಯನಾದ ಕ್ರಿಕೆಟಿಗ ವಿರಾಟ್ ಕೊಹ್ಲಿ
ಲಗ್ಷುರಿ ಸ್ಪೋರ್ಟ್ಸ್ ಕಾರುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಳಿ ಈಗಾಗಲೇ ಹಲವಾರು ದುಬಾರಿ ಕಾರುಗಳ ಸಂಗ್ರಹವೇ ಇದ್ದು, ಇದೀಗ ಮತ್ತೊಂದು ಐಷಾರಾಮಿ ಕಾರು ಕೊಹ್ಲಿ ಕಾರ್ ಅಡ್ಡದಲ್ಲಿ ಭಾರೀ ಸದ್ದು ಮಾಡುತ್ತಿದೆ.

ವಿರಾಟ್ ಕೊಹ್ಲಿ ಬಳಿ ಈಗಾಗಲೇ ಆಡಿ ಸಂಸ್ಥೆಯ ಆರ್8, ಆರ್8 ಎಲ್ಎಂಎಕ್ಸ್, ಎ8ಎಲ್, ಕ್ಯೂ 7 ಲಗ್ಷುರಿ ಸೆಡಾನ್ ಮಾದರಿ ಕಾರುಗಳಿದ್ದು, ಕೊಹ್ಲಿ ಕಾರು ಸಂಗ್ರಹದಲ್ಲಿ ಇದೀಗ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಸ್ಪೋರ್ಟ್ ಕಾರು ಭಾರೀ ಆಕರ್ಷಣೆ ಕಾರಣವಾಗಿದೆ. ಭಾರತದಲ್ಲಿ ಕೆಲವೇ ಉದ್ಯಮಿಗಳು ಮತ್ತು ಚಿತ್ರ ನಟರ ಈ ಕಾರಿದ್ದು, ಇದೀಗ ಕೊಹ್ಲಿ ಕೂಡಾ ತಮ್ಮ ಕನಸಿನ ಕಾರಿನ ಮಾಲೀಕರಾಗಿದ್ದಾರೆ.

ಸದ್ಯ ಜರ್ಮನಿಯ ಐಷಾರಾಮಿ ಕಾರು ಸಂಸ್ಥೆ ಆಡಿಯ ಮುಖ್ಯ ಪ್ರಚಾರ ರಾಯಭಾರಿಯೂ ವಿರಾಟ್ ಕೊಹ್ಲಿಯವರು ಅನೇಕ ಸಂದರ್ಭಗಳಲ್ಲಿ ಐಷಾರಾಮಿ ಕಾರುಗಳ ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದು, ತಮ್ಮ ಬಹುದಿನಗಳ ಕನಸು ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಸ್ಪೋರ್ಟ್ ಕಾರನ್ನು ಖರೀದಿಸಿ ಸಂಭ್ರಮಿಸುತ್ತಿದ್ದಾರೆ.

ಇತ್ತೀಚೆಗಷ್ಟೆ ತಮ್ಮ ಬಹುದಿನಗಳ ಗೆಳತಿ ಅನುಷ್ಕಾ ಶರ್ಮಾ ಕೈಹಿಡಿದಿರುವ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಕೇವಲ ವ್ಯಯಕ್ತಿಕ ಬುದುಕಿನಲ್ಲಿ ಅಷ್ಟೇ ಅಲ್ಲದೇ ವೃತ್ತಿಪರ ಜೀವನದಲ್ಲೂ ಬಹಳಷ್ಟು ಹೆಸರು ಮಾಡಿರುವ ಈ ಜೋಡಿಯು ಐಷಾರಾಮಿ ಕಾರುಗಳ ಸಂಗ್ರಹದಲ್ಲಿ ಅಂಬಾನಿ ಪುತ್ರರಿಗೂ ಟಕ್ಕರ್ ನೀಡುತ್ತಿದ್ದಾರೆ.

ಸದ್ಯ ಕೊಹ್ಲಿ ಕಾರು ಸಂಗ್ರಹದಲ್ಲಿ ಸದ್ದು ಮಾಡುತ್ತಿರುವ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಸ್ಪೋರ್ಟ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 3.70 ಕೋಟಿ ಬೆಲೆ ಹೊಂದಿದ್ದು, ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಈ ಸ್ಪೋರ್ಟ್ ಕಾರು ಅತ್ಯಾಧುನಿಕ ಡ್ರೈವ್ ಟೆಕ್ನಾಲಜಿ ಪಡೆದುಕೊಳ್ಳುವ ಮೂಲಕ ಪರ್ಫಾಮೆನ್ಸ್ ಪ್ರಿಯರ ಮೆಚ್ಚುಗೆಗೆ ಕಾರಣವಾಗಿದೆ.

ಹೊಸ ಕಾಂಟಿನೆಂಟಲ್ ಜಿಟಿ ಸ್ಪೋರ್ಟ್ ಕಾರುಗಳು 6.0-ಲೀಟರ್(6 ಸಾವಿರ ಸಿಸಿ) ಟ್ವಿನ್ ಟರ್ಬೋಚಾರ್ಜ್ಡ್ ಡಬ್ಲ್ಯು12 ಪೆಟ್ರೋಲ್ ಎಂಜಿನ್ ಹೊಂದಿದ್ದು, 8-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್‌ಮಿಷನ್‌ನೊಂದಿಗೆ 626-ಬಿಎಚ್‌ಪಿ ಮತ್ತು 900-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಈ ಮೂಲಕ 3.3 ಸೆಕೇಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮಿ ವೇಗ ಪಡೆಯುವ ಹೊಸ ಕಾಂಟಿನೆಂಟಲ್ ಜಿಟಿ ಕಾರು 333 ಕಿ.ಮಿ ಪ್ರತಿ ಗಂಟೆಗೆ ಟಾಪ್ ಸ್ಪೀಡ್ ಹೊಂದಿದ್ದು, ಇದು ಲಂಬೋರ್ಗಿನಿ, ಫೆರಾರಿಗಿಂತಲೂ ಉತ್ತಮ ಟಾರ್ಕ್ ಹಿಂದಿರುಗಿಸಬಲ್ಲದು.

ಐಷಾರಾಮಿ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬ್ರಿಟಿಷ್ ಮೋಟಾರ್ ಸಂಸ್ಥೆಯಾದ ಬೆಂಟ್ಲಿ ತನ್ನ ಹೊಚ್ಚ ಹೊಸ ಕಾಂಟಿನೆಂಟಲ್ ಜಿಟಿ ಕಾರನ್ನು ಕಳೆದ ಕೆಲದಿನಗಳ ಹಿಂದಷ್ಟೇ ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಈ ಕಾರು ಇದೀಗ ಕೊಹ್ಲಿ ನೆಚ್ಚಿನ ಕಾರು ಮಾದರಿಯಾಗಿ ಸುದ್ದಿಯಾಗುತ್ತಿದೆ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಸಂದರ್ಭಗಳಿಗೆ ಅನುಗುಣವಾಗಿ ವಿವಿಧ ಕಾರುಗಳನ್ನು ಬಳಕೆ ಮಾಡುವ ವಿರಾಟ್ ಕೊಹ್ಲಿಯವರು ಇವುಗಳ ನಿಯಂತ್ರಣಕ್ಕಾಗಿಯೇ ಪ್ರತ್ಯೇಕವಾಗಿ ಒಂದು ಗ್ಯಾರೇಜ್ ಕೂಡಾ ಹೊಂದಿದ್ದಾರೆ. ವಿಶೇಷ ಅಂದ್ರೆ ಹತ್ತಾರು ಐಷಾರಾಮಿ ಕಾರುಗಳ ಸಂಗ್ರಹ ಹೊಂದಿರುವ ಕೊಹ್ಲಿ ಬಳಿ ಡಸ್ಟರ್, ಸ್ವಿಫ್ಟ್ ನಂತರ ಕಾರುಗಳು ಕೂಡಾ ಸ್ಥಾನ ಪಡೆದಿವೆ.

ವಿರಾಟ್ ಕೊಹ್ಲಿ ಅವರು ಕಾರು ಸಂಗ್ರಹದಲ್ಲಿ ಸ್ಥಾನ ಪಡೆದಿರುವ ಬಹುತೇಕ ಕಾರುಗಳು ಆಡಿ ನಿರ್ಮಾಣದ ಕಾರುಗಳೇ ಹೆಚ್ಚಿದ್ದು, ರಾಯಭಾರಿಯಾಗಿರುವ ಹಿನ್ನೆಲೆ ಭಾರತದಲ್ಲಿ ಬಿಡುಗಡೆಯಾಗುವ ಪ್ರತಿ ಆಡಿ ಕಾರು ಕೂಡಾ ಕೊಹ್ಲಿ ಕಾರ್ ಸಂಗ್ರಹಕ್ಕೆ ಉಡುಗೊರೆಯಾಗಿ ಬರುವುದು ಹೊಸ ವಿಚಾರವೇನಲ್ಲ.
MOST READ: ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!
ಆದ್ರೆ ಆಡಿ ಕಾರುಗಳಿಂತ ತಮ್ಮ ಕನಸಿನ ಬೆಂಟ್ಲಿ ಕಾರು ಖರೀದಿ ಮಾಡಿರುವುದು ವಿರಾಟ್ ಕೊಹ್ಲಿಗೆ ಹೆಚ್ಚು ಖುಷಿ ಕೊಟ್ಟಿದ್ದು, ತಮ್ಮ ಪ್ರೀತಿಯ ಮಡದಿ ಅನುಷ್ಕಾ ಶರ್ಮಾ ಅವರ ಸಲಹೆ ಮೇರೆಗೆ ಹೊಸ ಬೆಂಟ್ಲಿ ಕಾರನ್ನು ಖರೀದಿಸಿ ಸಂಭ್ರಮಿಸುತ್ತಿದ್ದಾರೆ.