Just In
- 13 hrs ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- 13 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 14 hrs ago
30.9 ಕಿ.ಮೀ ಮೈಲೇಜ್‌ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ
- 14 hrs ago
ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ
Don't Miss!
- News
ಪಂಜಾಬ್: ತ್ರಿವರ್ಣ ಧ್ವಜದ ಮೇಲೆ ಬಿಜೆಪಿ ರಾಜಕೀಯ- ಅಮರಿಂದರ್ ಸಿಂಗ್
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ತುಲಾ, ಮೇಷ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರಿಗೆ ಶುಭ ದಿನ
- Movies
ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!
- Sports
ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಶೋರೂಂನಲ್ಲಿ ಅಗ್ನಿ ಅವಘಡ: ಘಟನೆಯಲ್ಲಿ ಸುಟ್ಟು ಕರಕಲಾದ ಎಥರ್ ಇವಿ ಸ್ಕೂಟರ್‌ಗಳು!
ಎಲೆಕ್ಟ್ರಿಕ್ ವಾಹನಗಳಲ್ಲಿನ ಅಗ್ನಿ ಅವಘಡ ಪ್ರಕರಣಗಳು ಇತ್ತೀಚೆಗೆ ಇವಿ ವಾಹನ ಉದ್ಯಮದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದ್ದು, ಇವಿ ಸ್ಕೂಟರ್‌ಗಳಲ್ಲಿನ ಅಗ್ನಿ ಅವಘಡ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಇದೀಗ ಮತ್ತೊಂದು ಘಟನೆ ಇವಿ ವಾಹನ ಪ್ರಿಯರಿಗೆ ಶಾಕ್ ನೀಡಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಬೇಡಿಕೆ ಹರಿದುಬರುತ್ತಿರುವ ಸಂದರ್ಭದಲ್ಲಿಯೇ ಅಗ್ನಿ ಅವಘಡ ಪ್ರಕರಣಗಳು ಗ್ರಾಹಕರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ಇದೀಗ ಗ್ರಾಹಕರ ವಲಯದಲ್ಲಿ ಇತರೆ ಇವಿ ಸ್ಕೂಟರ್ ಮಾದರಿಗಳಿಂತಲೂ ಹೆಚ್ಚಿನ ಸುರಕ್ಷಾ ವಿಶ್ವಾಸ ಹೊಂದಿರುವ ಎಥರ್ ಸ್ಕೂಟರ್‌ಗಳಲ್ಲೂ ಬೆಂಕಿ ಕಾಣಿಸಿಕೊಂಡಿತಾ ಎನ್ನುವ ಅನುಮಾನ ವ್ಯಕ್ತವಾಗಿವೆ.

ಚೆನ್ನೈನಲ್ಲಿರುವ ಎಥರ್ ಶೋರೂಂನಲ್ಲಿ ನಡೆದಿರುವ ಅಗ್ನಿ ಅವಘಡವು ಇಂತದೊಂದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಘಟನೆಗೆ ಇನ್ನು ನಿಖರವಾದ ಕಾರಣ ಏನು ಎಂಬುವುದು ಬಹಿರಂಗವಾಗಿಲ್ಲವಾದರೂ ಘಟನೆಯಲ್ಲಿ ಶೋರೂಂನಲ್ಲಿ ಹಲವು ಇವಿ ಸ್ಕೂಟರ್‌ಗಳು ಸುಟ್ಟು ಕರಕಲಾಗಿವೆ.

ಘಟನೆಯಲ್ಲಿ ಶೋರೂಂ ಸಿಬ್ಬಂದಿಯು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಿಲ್ಲದೆ ಬಚಾವ್ ಆಗಿದ್ದು, ಘಟನೆಗೆ ಶೋರೂಂನಲ್ಲಿರುವ ತಾಂತ್ರಿಕ ಅಂಶಗಳು ಕಾರಣವಾ? ಅಥವಾ ಇವಿ ಸ್ಕೂಟರ್‌ನಿಂದಾಗಿದೆಯಾ ಎನ್ನುವ ಯಾವುದೇ ನಿಖರ ಮಾಹಿತಿಗಳಿಲ್ಲ.

ಘಟನೆ ನಡೆಯುತ್ತಿದ್ದಂತೆ ಸಿಬ್ಬಂದಿಗಳೆಲ್ಲಾ ಹೊರನಡೆದಿದ್ದು, ಘಟನೆ ಕುರಿತಂತೆ ಎಥರ್ ಕಂಪನಿಯೇ ಮಾಹಿತಿ ಹಂಚಿಕೊಂಡಿದೆ. ಘಟನೆಯಿಂದ ಇವಿ ಸ್ಕೂಟರ್‌ಗಳ ಸುರಕ್ಷತೆ ಕುರಿತಾದ ಪ್ರಶ್ನೆಗಳು ಉದ್ಭವಿಸಬಹುದಾದ ಹಿನ್ನಲೆಯಲ್ಲಿ ಕಂಪನಿಯೇ ಈ ಮಾಹಿತಿ ಹಂಚಿಕೊಂಡಿದ್ದು, ಶೀಘ್ರದಲ್ಲಿ ಘಟನೆಗೆ ಕಾರಣವಾದ ಅಂಶವನ್ನು ಬಹಿರಂಗಪಡಿಸುವುದಾಗಿ ಹೇಳಿಕೊಂಡಿದೆ.

ಕಂಪನಿಯು ಮಾಹಿತಿ ಹಂಚಿಕೊಂಡ ವಿಧಾನವನ್ನು ನೋಡಿದರೆ ಘಟನೆಗೆ ಶೋರೂಂನಲ್ಲಿರುವ ತಾಂತ್ರಿಕ ಅಂಶಗಳೇ ಕಾರಣವಾಗಿರುವ ಸಾಧ್ಯತೆಗಳಿದ್ದು, ಶೀಘ್ರದಲ್ಲಿಯೇ ಘಟನೆಗೆ ನಿಖರವಾದ ಕಾರಣವನ್ನು ಬಹಿರಂಗಪಡಿಸಲಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಸದ್ಯ ಇತರೆ ಮಾದರಿಗಳಿಂತಲೂ ಹೆಚ್ಚು ಗ್ರಾಹಕರ ವಿಶ್ವಾಸಗಳಿಸಿರುವ ಎಥರ್ ಎನರ್ಜಿ ಉತ್ಪನ್ನಗಳು ದುಬಾರಿ ಬೆಲೆ ನಡುವೆಯೂ ಉತ್ತಮ ಬೇಡಿಕೆ ಹೊಂದಿದ್ದು, ಇದುವರೆಗೂ ಎಥರ್ ಸ್ಕೂಟರ್‌ಗಳಲ್ಲಿ ಯಾವುದೊಂದು ಬೆಂಕಿ ಅವಘಡ ಸಂಭವಿಸಿಲ್ಲ ಎನ್ನಬಹುದು.

ಹೊಸ ಸ್ಕೂಟರ್ ಬಿಡುಗಡೆ ಮುನ್ನ ಸುಮಾರು 5 ವರ್ಷಗಳ ಕಾಲ ಇವಿ ಸ್ಕೂಟರ್‌ಗಳ ತಂತ್ರಜ್ಞಾನ ಅಭಿವೃದ್ದಿ, ಸಂಶೋಧನೆ ಮತ್ತು ದೀರ್ಘಕಾಲದ ಪರೀಕ್ಷಾರ್ಥಗಳನ್ನು ಮುಗಿಸಿರುವ ಎಥರ್ ಕಂಪನಿಯು ಹೊಸ ಇವಿ ಸ್ಕೂಟರ್ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದೆ.

ದುಬಾರಿ ಇಂಧನ ಪರಿಣಾಮ ಇವಿ ವಾಹನ ಮಾರಾಟ ಹೆಚ್ಚುತ್ತಿರುವುದರಿಂದ ಗ್ರಾಹಕರ ಬೇಡಿಕೆಯೆಂತೆ ವಿವಿಧ ಇವಿ ಸ್ಕೂಟರ್ ಮಾದರಿಗಳನ್ನು ಪರಿಚಯಿಸಲು ಸಿದ್ದವಾಗುತ್ತಿರುವ ಎಥರ್ ಎನರ್ಜಿ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ 450 ಪ್ಲಸ್ ಮತ್ತು 450ಎಕ್ಸ್ ಮಾದರಿಗಳಿಂತಲೂ ವಿಭಿನ್ನವಾದ ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಪ್ರೀಮಿಯಂ ಸ್ಥಾನ ಪಡೆದುಕೊಂಡಿರುವ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳು ಪ್ರತಿಸ್ಪರ್ಧಿ ಮಾದರಿಗಿಂತಲೂ ತುಸು ದುಬಾರಿಯಾಗಿದ್ದರೂ ವಿಭಿನ್ನವಾದ ತಾಂತ್ರಿಕ ಸೌಲಭ್ಯ, ಗುಣಮಟ್ಟ ಮತ್ತು ಸುರಕ್ಷತೆಯಲ್ಲಿ ಇತರೆ ಮಾದರಿಗಿಂತಲೂ ಹೆಚ್ಚು ಗ್ರಾಹಕ ವಿಶ್ವಾಸ ಹೊಂದಿವೆ.

ಹೀಗಾಗಿ ಮೂಲ ಮಾದರಿಗಳಲ್ಲಿನ ಗುಣಮಟ್ಟವನ್ನು ಆಧರಿಸಿ ಕಂಪನಿಯು ಮುಂಬರುವ ದಿನಗಳಲ್ಲಿ ಒಂದು ಬಜೆಟ್ ಬೆಲೆಯ ಸ್ಕೂಟರ್ ಮಾದರಿಯನ್ನು ಮತ್ತೊಂದು 450ಎಕ್ಸ್ ಮಾದರಿಗಿಂತಲೂ ಹೆಚ್ಚಿನ ಶ್ರೇಣಿ ಮತ್ತು ತಂತ್ರಜ್ಞಾನ ಸೌಲಭ್ಯ ಹೊಂದಿರುವ ಮ್ಯಾಕ್ಸಿ ಸ್ಕೂಟರ್ ಪರಿಚಯಿಸಲಿದೆ.

ಬಜೆಟ್ ಬೆಲೆಯ ಇವಿ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ ಕನಿಷ್ಠ 90 ಕಿ.ಮೀ ನಿಂದ 100 ಕಿ.ಮೀ ಮೈಲೇಜ್ ರೇಂಜ್‌ನೊಂದಿಗೆ ಬಿಡುಗಡೆಯಾಗಲಿದ್ದು, ಇದರಲ್ಲಿ ಕೆಲವು ಪ್ರೀಮಿಯಂ ಫೀಚರ್ಸ್ ತೆಗೆದುಹಾಕಲಿರುವ ಕಂಪನಿಯು ರೂ.1 ಲಕ್ಷದೊಳಗೆ ಬಿಡುಗಡೆ ಮಾಡಬಹುದಾಗಿದೆ.

ಮತ್ತೊಂದು ಹೊಸ ಮಾದರಿಯಾದ ಮ್ಯಾಕ್ಸಿ ಇವಿ ಸ್ಕೂಟರ್ ಮಾದರಿಯು 450ಎಕ್ಸ್ ಮಾದರಿಗಿಂತಲೂ ಹೆಚ್ಚು ಫೀಚರ್ಸ್ ಮತ್ತು ಬ್ಯಾಟರಿ ಮಾದರಿಯೊಂದಿಗೆ ಬಿಡುಗಡೆಯಾಗಲಿದ್ದು, ಇದು ಪ್ರತಿ ಚಾರ್ಜ್‌ಗೆ 140 ಕಿ.ಮೀ ಗಿಂತಲೂ ಹೆಚ್ಚು ಮೈಲೇಜ್‌ನೊಂದಿಗೆ 450ಎಕ್ಸ್ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ.

ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಬೆಲೆಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,31,647 ಮತ್ತು 450ಎಕ್ಸ್ ಬೆಲೆಯನ್ನು ರೂ. 1,50,657ಕ್ಕೆ ಮಾರಾಟಗೊಳ್ಳುತ್ತಿದ್ದು, ಮುಂಬರುವ ಎರಡು ಹೊಸ ಮಾದರಿಗಳು ವಿಭಿನ್ನ ಗ್ರಾಹಕರ ವರ್ಗವನ್ನು ಸೆಳೆಯಲು ಸಿದ್ದವಾಗುತ್ತಿವೆ.