ಕಾಸು ಖರ್ಚು ಮಾಡಿ ಕೇಸ್ ಹಾಕಿಸಿಕೊಂಡ ಭೂಪ ಇವನು...!!

Written By:

ಇತ್ತೀಚಿಗಷ್ಟೇ ಮಾರುತಿ ಸುಜುಕಿ ಬಲೆನೊ ಕಾರನ್ನು ಮರ್ಸಿಡಿಸ್ ಎ ಕ್ಲಾಸ್ ಕಾರಿನಂತೆ ಕಾಣುವ ರೀತಿಯಲ್ಲಿ ಮಾಡಿಫಿಕೇಷನ್ ಮಾಡಿ ವ್ಯಕ್ತಿಯೊಬ್ಬರು ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿದ್ದರು. ಆದ್ರೆ, ಈ ಪ್ರಚಾರವೇ ಅವರಗೆ ಸದ್ಯ ಮುಳ್ಳಾಗಿದೆ ಎನ್ನಬಹುದು.

ಕಾಸು ಖರ್ಚು ಮಾಡಿ ಕೇಸ್ ಹಾಕಿಸಿಕೊಂಡ ಭೂಪ ಇವನು...!!

ಹೌದು, ಕೇರಳದ ಕಾರು ಪ್ರಿಯರೊಬ್ಬರು ಇತ್ತೀಚಿಗೆ ಕೊಂಡ ತಮ್ಮ ಮಾರುತಿ ಸುಜುಕಿ ಬಲೆನೊ ಕಾರನ್ನು ಮಾರ್ಪಡು ಮಾಡಲು ನಿರ್ಧರಿಸಿದ್ದರು. ನಿರ್ಧರಿಸಿದಂತೆ, ಮಾಡಿಫಿಕೇಷನ್ ಸಹ ಮಾಡಿಸಿದ್ದರು. ಆದ್ರೆ, ಈ ನಿರ್ಧಾರವೇ ಕೊನೆಗೆ ಪೊಲೀಸ್ ಕೇಸ್ ಆಗುತ್ತದೆ ಎಂದು ಅವರು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ.

ಕಾಸು ಖರ್ಚು ಮಾಡಿ ಕೇಸ್ ಹಾಕಿಸಿಕೊಂಡ ಭೂಪ ಇವನು...!!

ಈ ವಿಚಾರ ಎಷ್ಟರಮಟ್ಟಿಗೆ ಪ್ರಚಾರ ಪಡೆದುಕೊಂಡಿತ್ತೆಂದರೆ, ಈ ಕಾರಿಗೆ ಅಭಿಮಾನಿ ಬಳಗವೇ ಕೇರಳ ರಾಜ್ಯದಲ್ಲಿ ಸೃಷ್ಟಿಯಾಗಿತ್ತು. ಯಾವಾಗ ಈ ವಿಚಾರ ಆರ್‌ಟಿಓ ಅಧಿಕಾರಿಗಳ ಕಿವಿಗೆ ಬಿತ್ತೋ, ಆಗ ಶುರುವಾಯಿತು ನೋಡಿ ಅಸಲಿ ಆಟ.

ಕಾಸು ಖರ್ಚು ಮಾಡಿ ಕೇಸ್ ಹಾಕಿಸಿಕೊಂಡ ಭೂಪ ಇವನು...!!

ಮರ್ಸಿಡಿಸ್ ಕಂಪನಿಯ ಲಾಂಛನವನ್ನು ಬಳಸಿ ಮಾರ್ಪಾಡು ಮಾಡಿರುವುದು ಮತ್ತು ಕಾರಿನ ಆರ್.ಸಿ ದಾಖಲೆಗಳಿಗೂ ಮತ್ತು ಕಾರಿನ ವಿನ್ಯಾಸಕ್ಕೂ ಅಜಗಜಾಂತರ ವ್ಯತ್ಯಾಸವಿರುವುದು ಪರೀಶೀಲಿಸಿದ ಅಧಿಕಾರಿಗಳು, ಕಾರನ್ನು ಮುಟ್ಟುಗೋಲು ಹಾಕಿಕೊಂಡು ಕೇಸ್ ಜಡಿದಿದ್ದರು.

ಕಾಸು ಖರ್ಚು ಮಾಡಿ ಕೇಸ್ ಹಾಕಿಸಿಕೊಂಡ ಭೂಪ ಇವನು...!!

ನಂತರ ಪೋಲೀಸರ ಸೂಚನೆಯಂತೆ, ಕಾರಿನ ಮಾಲೀಕ ತಾನು ಮಾಡಿಸಿರುವ ಎಲ್ಲಾ ರೀತಿಯ ಮಾರ್ಪಾಡಿಗಳನ್ನು ತೆರವುಗೊಳಿಸಿ ಮತ್ತೆ ಹಳೆಯ ರೀತಿಯಲ್ಲಿ ಕಾರನ್ನು ಬಿಡಿಭಾಗಗಳನ್ನು ಅಳವಡಿಸಿದ್ದು, ಷರತ್ತುಬದ್ಧ ನಿಯಮಗಳನ್ನು ಹಾಕಿ ಮತ್ತೆ ರಸ್ತೆಯಲ್ಲಿ ಚಲಾಯಿಸಲು ಅನುವು ಮಾಡಿಕೊಡಲಾಗಿದೆ.

ಕಾಸು ಖರ್ಚು ಮಾಡಿ ಕೇಸ್ ಹಾಕಿಸಿಕೊಂಡ ಭೂಪ ಇವನು...!!

ಕಾರಿನ ಬದಲಾವಣೆಯ ವಿಚಾರ :

ಈ ಬಲೆನೊ ಕಾರು ಮುಂಭಾಗದಲ್ಲಿ ಮರ್ಸಿಡಿಸ್ ಸಿ ಕ್ಲಾಸ್ ಕಾರಿನ ರೀತಿಯಲ್ಲಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು ಮತ್ತು ಎಲ್ಇಡಿ ದೀಪಗಳನ್ನೂ ಸಹ ಹೊಂದಿರುವುದು ಮತ್ತೊಂದು ವಿಶೇಷ.

ಕಾಸು ಖರ್ಚು ಮಾಡಿ ಕೇಸ್ ಹಾಕಿಸಿಕೊಂಡ ಭೂಪ ಇವನು...!!

ಹಿಂಭಾಗದಲ್ಲಿ, ಮಾಲೀಕರು ಹೊಸ ಸ್ಪೋರ್ಟಿ ಬಂಪರ್ ಅಳವಡಿಕೆ ಮಾಡಿದ್ದಾರೆ. ನಾಲ್ಕು ಎಕ್ಸ್‌ಸಾಸ್ಟ್ ಸುಳಿವುಗಳನ್ನು ನೀವು ನೋಡಬಹುದಾಗಿದೆ ಮತ್ತು ಹಿಂಭಾಗದ ಡಿಫ್ಯೂಸರ್ ಕಾರಿಗೆ ಸ್ಪೋರ್ಟ್ಸ್ ಲುಕ್ ನೀಡಿದೆ.

ಕಾರಿನ ಚಕ್ರಗಳ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲಾಗಿದೆ. ಈ ಕಾರಿನ ಟೈರುಗಳು 5 ಸ್ಪೋಕ್ಸ್ 16 ಇಂಚಿನೊಂದಿಗೆ ಅಪ್‌ಡೇಟ್ ಮಾಡಲ್ಪಟ್ಟಿವೆ ಮತ್ತು ಕಾರಿನ ಒಳಗಡೆಯ ಕ್ಯಾಬಿನ್ ಕೂಡಾ ಮರ್ಸಿಡಿಸ್ ಎ-ಕ್ಲಾಸ್ ಕಾರಿಗೆ ಹೋಲುತ್ತದೆ.

ಕಾಸು ಖರ್ಚು ಮಾಡಿ ಕೇಸ್ ಹಾಕಿಸಿಕೊಂಡ ಭೂಪ ಇವನು...!!

ಒಟ್ಟಿನಲ್ಲಿ, ಏನೋ ಮಾಡಲು ಹೋಗಿ ಏನು ಮಾಡಿದೆ ನಾನು ? ಎನ್ನುವ ಪರಿಸ್ಥಿತಿಯಲ್ಲಿ ಮಾಲೀಕನಿರುವುದು ಖಂಡಿತ ಸತ್ಯ. ಸಾಕಷ್ಟು ಹಣ ಮತ್ತು ಸಮಯವನ್ನು ವ್ಯಹಿಸಿದರೂ ಸಹ ಅಡ್ಡದಾರಿಯಲ್ಲಿ ಹೋದರೆ ತೊಂದರೆ ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಈ ಕಾರು ಮಾಲೀಕನೇ ಸಾಕ್ಷಿ !!

English summary
Modified Maruti Baleno Got Seized By Police. Read in kannada.
Story first published: Friday, December 8, 2017, 16:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark