ಅಬ್ಬಾ!! ಮೈಸೂರಿನ ಅಮ್ಮ ಮಗಳ ಈ ಸಾಹಸಕ್ಕೆ ಭೇಷ್ ಎನ್ನಲೇ ಬೇಕು

ಮೈಸೂರಿನ ಆಡ್ರೆ ದೀಪಿಕಾ ಮಾಬೆನ್‌ ಮತ್ತು ಆಕೆಯ ಮಗಳು ಅಮಿ ಮೆಹ್ತಾರವರು ಲಘು ವಿಮಾನದಲ್ಲಿ ಒಟ್ಟು 80 ದಿನಗಳಲ್ಲಿ 50 ಸಾವಿರ ಕಿ.ಮೀ ಪ್ರಯಾಣಿಸಿ, ವಿಶ್ವ ಪರ್ಯಟನೆ ನಡೆಸಲು ನಿರ್ಧರಿಸಿದ್ದಾರೆ.

By Girish

ಹೌದು, ಮೈಸೂರಿನ ಮೂಲದ ಅಮ್ಮ ಮತ್ತು ಮಗಳು ಈ ವಿಶಿಷ್ಟ ಸಾಹಸಕ್ಕೆ ಕೈಹಾಕಿದ್ದಾರೆ. ಮುಂದಿನ ವರ್ಷದ ಫೆಬ್ರವರಿಯಲ್ಲಿ ಈ ಪ್ರಯಾಣ ಆರಂಭವಾಗಲಿದ್ದು, ಈ ಇಬ್ಬರ ದಾಖಲೆಯ ಯಾನಕ್ಕೆ ಜಕ್ಕೂರು ವಿಮಾನ ಕೇಂದ್ರದಲ್ಲಿ ತರಬೇತಿ ಈಗಾಗಲೇ ಪ್ರಾರಂಭವಾಗಿದೆ ಎನ್ನಲಾಗಿದೆ.

ಅಬ್ಬಾ!! ಮೈಸೂರಿನ ಅಮ್ಮ ಮಗಳ ಈ ಸಾಹಸಕ್ಕೆ ಭೇಷ್ ಎನ್ನಲೇ ಬೇಕು

ಮಹಿಳಾ ಸಬಲೀಕರಣ ಕುರಿತ ಜಾಗೃತಿ ಮೂಡಿಸುವ ಸಲುವಾಗಿ ಈ ಪ್ರವಾಸ ಕೈಗೊಳ್ಳಲು ಈ ಜೋಡಿ ನಿರ್ಧರಿಸಿದ್ದು, ಈ ಮುಖೇನ ದಾಖಲೆಯ ವಿಶ್ವ ಪರ್ಯಟನೆ ನಡೆಸುವ ಮೊದಲ ಭಾರತೀಯ ಮಹಿಳೆಯರು ಎನ್ನುವ ಖ್ಯಾತಿ ಇವರದಾಗಲಿದೆ.

ಅಬ್ಬಾ!! ಮೈಸೂರಿನ ಅಮ್ಮ ಮಗಳ ಈ ಸಾಹಸಕ್ಕೆ ಭೇಷ್ ಎನ್ನಲೇ ಬೇಕು

ಸ್ಲೊವೇನಿಯಾ ದೇಶಕ್ಕೆ ಸೇರಿದ ಸೈಸನ್‌ ಪಿಪಿಸ್ಟ್ರೆಲ್‌-912 ಲಘು ವಿಮಾನದಲ್ಲಿ 4 ರಿಂದ 5ಗಂಟೆ ನಿರಂತರವಾಗಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಗಂಟೆಗೆ ಸರಾಸರಿ 110 ಕಿ.ಮೀ ವೇಗದಲ್ಲಿ ವಿಮಾನವು ಸಂಚರಿಸಲಿದೆ.

ಅಬ್ಬಾ!! ಮೈಸೂರಿನ ಅಮ್ಮ ಮಗಳ ಈ ಸಾಹಸಕ್ಕೆ ಭೇಷ್ ಎನ್ನಲೇ ಬೇಕು

'ಹಲವು ವರ್ಷಗಳಿಂದ ನಾನು ಮೈಕ್ರೋ ಲೈಟ್‌ನಲ್ಲಿ ಸುರಕ್ಷಿತ ಹಾರಾಟ ನಡೆಸಿದ್ದೇನೆ. ಜಕ್ಕೂರಿನಿಂದ ಆರಂಭಿಸಿ ವಾಪಸ್‌ ಜಕ್ಕೂರಿಗೆ ಮರಳುವ ಮೂಲಕ ನನ್ನ ಗುರಿ ತಲುಪುತ್ತೇನೆ. ಇಂತಹ ಸವಾಲಿನಲ್ಲಿ ನನ್ನ ಮಗಳನ್ನು ಸೇರ್ಪಡೆಗೊಳಿಸುತ್ತಿದ್ದೇನೆ. ಆಕೆಗಿಂತ ಬೇರೆ ಒಳ್ಳೆಯ ಜೊತೆಗಾರರು ಯಾರೂ ಇಲ್ಲ' ಎಂದು ದೀಪಿಕಾ ಹೇಳಿದರು.

ಅಬ್ಬಾ!! ಮೈಸೂರಿನ ಅಮ್ಮ ಮಗಳ ಈ ಸಾಹಸಕ್ಕೆ ಭೇಷ್ ಎನ್ನಲೇ ಬೇಕು

ಪ್ರಯಾಣದ ವೇಳೆ ಫಿಟ್ನೆಸ್‌ ಅತಿಮುಖ್ಯವಾದ ಅಂಶವಾಗಿದ್ದು, ಹಲವು ತಿಂಗಳುಗಳಿಂದ ಪ್ರಾಣಾಯಾಮ, ಯೋಗ, ದೈಹಿಕ ವ್ಯಾಯಾಮ, ಪೌಷ್ಟಿಕ ಆಹಾರ ಸೇವನೆ ಮಾಡುತ್ತಿರುವುದಾಗಿ ಅಮ್ಮ ಮತ್ತು ಮಗಳು ತಮ್ಮ ತಯಾರಿಯ ಬಗ್ಗೆ ತಿಳಿಸಿದ್ದಾರೆ.

ಅಬ್ಬಾ!! ಮೈಸೂರಿನ ಅಮ್ಮ ಮಗಳ ಈ ಸಾಹಸಕ್ಕೆ ಭೇಷ್ ಎನ್ನಲೇ ಬೇಕು

ಮೈಸೂರಿನಲ್ಲಿ 200 ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಯನ್ನು ನಡೆಸುತ್ತಿರುವ ದೀಪಿಕಾ ಮಾಬೆನ್‌ ಅವರು 15 ವರ್ಷದವಳಿರುವಾಗ ಗ್ಲೈಡರ್‌ ಹಾರಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು ಹಾಗು 22ನೇ ವರ್ಷದಲ್ಲಿ ಗರ್ಭಿಣಿ ಆಗಿದ್ದಾಗಲೂ ಕೂಡ ಮೊದಲ ಬಾರಿ ಮೈಕ್ರೋ ಲೈಟ್‌ ಹಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.

ಅಬ್ಬಾ!! ಮೈಸೂರಿನ ಅಮ್ಮ ಮಗಳ ಈ ಸಾಹಸಕ್ಕೆ ಭೇಷ್ ಎನ್ನಲೇ ಬೇಕು

ಈ ಪರ್ಯಟನೆಗೆ 'ವುಮೆನ್‌ ಎಂಪವರ್‌ಮೆಂಟ್‌' ಎಂದು ಹೆಸರಿಡಲಾಗಿದ್ದು, ತಾಯಿ ಮಗಳ ಈ ಸಾಹಸಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೂ ಸಹ ಬೆಂಬಲ ನೀಡಿದೆ.

Most Read Articles

Kannada
English summary
mother-daughter duo from Karnataka to fly around the world in 80 days.
Story first published: Wednesday, December 13, 2017, 18:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X