ಬಿಎಂಡಬ್ಲ್ಯು ಜಿಎಸ್ 1200 ಬೈಕ್ ಮೇಲೆ ಹರಿದ ಟ್ರಕ್- ಘಟನೆಯಲ್ಲಿ ಪೈಲಟ್ ದುರ್ಮರಣ

Written By:

ಆತ ವೃತ್ತಿಯಲ್ಲಿ ಪೈಲಟ್. ಆದರೂ ಸೂಪರ್ ಬೈಕ್‌ಗಳ ರೈಡಿಂಗ್ ಅಂದ್ರೆ ಆತನಿಗೆ ಎಲ್ಲಿಲ್ಲದ ಹುಚ್ಚು. ಹೀಗಾಗಿ ಸ್ನೇಹಿತರ ಜೊತೆಗೂಡಿ ಸೂಪರ್ ಬೈಕ್‌ನಲ್ಲಿ ರೈಡಿಂಗ್‌ಗೆ ಅಂತಾ ಹೋಗಿದ್ದ. ಆದ್ರೆ ವಿಧಿಯಾಟ ಬಲ್ಲವರು ಯಾರು? ಬೈಕ್ ಚಾಲನೆ ವೇಳೆ ಟ್ರಕ್ ಹರಿದ ಪರಿಣಾಮ ಯುವ ಪೈಲಟ್ ದುರಂತದಲ್ಲಿ ಅಂತ್ಯ ಕಂಡಿದ್ದಾನೆ.

ಬಿಎಂಡಬ್ಲ್ಯು ಜಿಎಸ್ 1200 ಬೈಕ್ ಮೇಲೆ ಹರಿದ ಟ್ರಕ್- ಘಟನೆಯಲ್ಲಿ ಪೈಲಟ್ ದುರ್ಮರಣ

ಪೈಲಟ್‍ವೊಬ್ಬರು ಬೈಕ್ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡ ಘಟನೆ ಮಹಾರಾಷ್ಟ್ರದ ಸಾತಿವಾಲಿ ಬ್ರಿಡ್ಜ್ ಬಳಿ ನಡೆದಿದ್ದು, ವೃತ್ತಿಯಲ್ಲಿ ಪೈಲಟ್ ಆಗಿದ್ದ ಭಾಯಂದರ್ ನಿವಾಸಿ ವರುಣ್ ಬರ್ಮೋಡಿ ಅವರನ್ನು ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಬಿಎಂಡಬ್ಲ್ಯು ಜಿಎಸ್ 1200 ಬೈಕ್ ಮೇಲೆ ಹರಿದ ಟ್ರಕ್- ಘಟನೆಯಲ್ಲಿ ಪೈಲಟ್ ದುರ್ಮರಣ

ಟ್ರೇಲರ್ ಟ್ರಕ್‍ವೊಂದರ ಕೆಳಗೆ ಬೈಕ್ ಸಿಲುಕಿದ ಪರಿಣಾಮ ವರುಣ್ ಸಾವನ್ನಪ್ಪಿದ್ದು, ಘಟನೆ ನಡೆದಾಗ ವರುಣ್ ತನ್ನ 10-15 ಸ್ನೇಹಿತರೊಂದಿಗೆ ಬಿಎಂಡಬ್ಲ್ಯು ಜಿಎಸ್ 1200 ಬೈಕ್‍ನಲ್ಲಿ ಭಾಯಂದರ್‍‌ನಿಂದ ಮ್ಯಾನರ್‍‌ಗೆ ಹೋಗುತ್ತಿದ್ದರು ಎನ್ನಲಾಗಿದೆ.

ಬಿಎಂಡಬ್ಲ್ಯು ಜಿಎಸ್ 1200 ಬೈಕ್ ಮೇಲೆ ಹರಿದ ಟ್ರಕ್- ಘಟನೆಯಲ್ಲಿ ಪೈಲಟ್ ದುರ್ಮರಣ

ಈ ವೇಳೆ ಸಾತಿವಾಲಿ ಬ್ರಿಡ್ಜ್ ಬಳಿ ತಲುಪಿದಾಗ ಮಧ್ಯದ ಲೇನ್‍ನಲ್ಲಿ ಟ್ರೇಲರ್ ಟ್ರಕ್ ವೇಗವಾಗಿ ಬಂದಿದ್ದು, ವರುಣ್ ಅದನ್ನು ಓವರ್ ಟೇಕ್ ಮಾಡಲು ಮುಂದಾಗಿದ್ದಾನೆ. ಆದ್ರೆ ನಿಯಂತ್ರಣ ತಪ್ಪಿದ ವರುಣ ಹಿಂಭಾಗದ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾನೆ.

ಬಿಎಂಡಬ್ಲ್ಯು ಜಿಎಸ್ 1200 ಬೈಕ್ ಮೇಲೆ ಹರಿದ ಟ್ರಕ್- ಘಟನೆಯಲ್ಲಿ ಪೈಲಟ್ ದುರ್ಮರಣ

ಘಟನೆಯ ಸಂದರ್ಭದಲ್ಲಿ ವರುಣ್ ಸಹೋದರ ಕುನಾಲ್ ಕೂಡಾ ಜೊತೆಗಿದ್ದ ಎನ್ನಲಾಗಿದ್ದು, ಟ್ರಕ್ ಅಡಿ ಸಿಲುಕಿ ತೀವ್ರ ಗಾಯಗೊಂಡಿದ್ದ ವರುಣ್‌ನನ್ನು ಸ್ಥಳೀಯರ ಸಹಾಯದೊಂದಿಗೆ ಆಸ್ಪತ್ರೆಗೆ ಕರೆ ತರಲಾಗಿತ್ತು.

ಬಿಎಂಡಬ್ಲ್ಯು ಜಿಎಸ್ 1200 ಬೈಕ್ ಮೇಲೆ ಹರಿದ ಟ್ರಕ್- ಘಟನೆಯಲ್ಲಿ ಪೈಲಟ್ ದುರ್ಮರಣ

ಆದ್ರೆ ತಲೆ ಭಾಗಕ್ಕೆ ಬಲವಾದ ಹೊಡೆತ ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯದಲ್ಲೇ ವರುಣ್ ಬರ್ಮೋಡಿ ಜೀವ ಬಿಟ್ಟಿದ್ದಾನೆ ಎಂದು ಆತನ ಸ್ನೇಹಿತರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಪ್ಪದೇ ಓದಿ-60 ಸಾವಿರ ಬೆಲೆಯ ಹೆಲ್ಮೆಟ್ ಹಾಕಿದ್ರು ಆ ಯುವಕನ ಜೀವ ಉಳಿಲಿಲ್ಲ...

ಬಿಎಂಡಬ್ಲ್ಯು ಜಿಎಸ್ 1200 ಬೈಕ್ ಮೇಲೆ ಹರಿದ ಟ್ರಕ್- ಘಟನೆಯಲ್ಲಿ ಪೈಲಟ್ ದುರ್ಮರಣ

ಪ್ರಕರಣದ ಬಗ್ಗೆ ವಾಲೀವ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಅಪಘಾತದ ನಂತರ ಟ್ರಕ್ ಚಾಲಕ ನಾಪತ್ತೆಯಾಗಿದ್ದಾನೆ. ಆದ್ರೆ ಅಪಘಾತದ ಟ್ರಕ್ ಪೊಲೀಸರ ವಶದಲ್ಲಿದ್ದು, ನಾಪತ್ತೆಯಾಗಿರುವ ಚಾಲಕನಿಗೆ ಪೊಲೀಸರು ಬಲೆ ಬಿಸಿದ್ದಾರೆ.

ಬಿಎಂಡಬ್ಲ್ಯು ಜಿಎಸ್ 1200 ಬೈಕ್ ಮೇಲೆ ಹರಿದ ಟ್ರಕ್- ಘಟನೆಯಲ್ಲಿ ಪೈಲಟ್ ದುರ್ಮರಣ

ಇನ್ನು ಅಪಘಾತದಲ್ಲಿ ಸಾವನ್ನಪ್ಪಿದ ವರುಣ್ ಬರ್ಮೋಡಿ ಸರ್ಟಿಫೈಡ್ ಬೈಕರ್‍‌ಗಳಾಗಿದ್ದು, ಸ್ನೇಹಿತರು ನೀಡಿರುವ ಮಾಹಿತಿ ಪ್ರಕಾರ ವರುಣ್ ಉತ್ತಮ ಬೈಕ್ ಸವಾರನಾಗಿದ್ದ ಎಂಬ ಮಾಹಿತಿ ದೊರೆತಿದೆ. ಆದ್ರೆ ವಿಧಿಯಾಟ ಒಂದು ಕ್ಷಣದಲ್ಲಿ ಆದ ತಪ್ಪು ಅವನ ಜೀವವನ್ನೇ ಪಡೆದಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Read more on accident ಅಪಘಾತ
English summary
Mumbai: Bhayander Pilot Crushed To Death By Truck After Vehicle Overtakes His Bike.
Story first published: Monday, December 25, 2017, 16:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark