ಪ್ರಭಾವಶಾಲಿ ನಿಲೇಕಣಿಯ ಪವರ್‌ಫುಲ್ ಎಲೆಕ್ಷನ್ ಗಾಡಿ

Written By:

ದೇಶದ ಪ್ರಭಾವಶಾಲಿ ಉದ್ಯಮಿಗಳಲ್ಲಿ ಓರ್ವರೆನಿಸಿಕೊಂಡಿರುವ ನಂದನ್ ಮನೋಹರ್ ನಿಲೇಕಣಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿದೆ. ಪ್ರಸಕ್ತ ಭಾರತ ಸರಕಾರದ ಯೂನಿಕ್ ಐಡೆಂಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎ, ಆಧಾರ್) ಮುಖ್ಯಸ್ಥರೂ ಆಗಿರುವ ನಿಲೇಕಣಿ ತಮ್ಮ ಪ್ರಚಾರ ಕಾರ್ಯಗಳಿಗೆ ಚುರುಕು ಮುಟ್ಟಿಸಲು, ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಪವರ್‌ಫುಲ್ ಥಾರ್ ಗಾಡಿ ತಮ್ಮದಾಗಿಸಿಕೊಂಡಿದ್ದಾರೆ.

ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಅಕೌಂಟ್‌ನಲ್ಲಿ ಉಲ್ಲೇಖಿಸಿರುವ ನಿಲೇಕಣಿ, ಮಹೀಂದ್ರ ಥಾರ್ ಮೂಲಕ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ನಿಮ್ಮ ಮಾಹಿತಿಗಾಗಿ, ಆರಂಭದಿಂದಲೂ ದೇಶದ ಪ್ರಖ್ಯಾತ ಉದ್ಯಮಿ ನಾರಾಯಣ ಮೂರ್ತಿ ಒಡನಾಡಿಯಾಗಿರುವ ನಂದನ್, ಇನ್ಪೋಸಿಸ್ ಸಂಸ್ಥೆಯ ಸಹ ಸ್ಥಾಪಕ ಕೂಡಾ ಹೌದು. ಪ್ರಸ್ತುತ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಪ್ರಭಾವಶಾಲಿ ನಿಲೇಕಣಿಯ ಪವರ್‌ಫುಲ್ ಎಲೆಕ್ಷನ್ ಗಾಡಿ

ದೇಶದ ಎಸ್‌ಯುವಿ ದೈತ್ಯ ಮಹೀಂದ್ರ ಮಹೀಂದ್ರ ಸಂಸ್ಥೆಯ ಸಬ್ ಕಾಂಪಾಕ್ಟ್ ಫೋರ್ ವೀಲ್ ಡ್ರೈವ್ ಆಗಿರುವ ಥಾರ್, ಪಕ್ಕಾ ಆಫ್ ರೋಡ್ ಗಾಡಿ ಆಗಿದೆ. ಇದನ್ನು ಮೊದಲ ಬಾರಿಗೆ 2010ನೇ ಇಸವಿಯಲ್ಲಿ ಲಾಂಚ್ ಮಾಡಲಾಗಿತ್ತು.

ಪ್ರಭಾವಶಾಲಿ ನಿಲೇಕಣಿಯ ಪವರ್‌ಫುಲ್ ಎಲೆಕ್ಷನ್ ಗಾಡಿ

ದೇಶದಲ್ಲಿ ಲಭ್ಯವಿರುವ ಟಾಪ್ 10 ಎಸ್‌ಯುವಿ ಪಟ್ಟಿಯಲ್ಲಿ ಗುರುತಿಸಿಕೊಳ್ಳುವಲ್ಲಿ ಥಾರ್ ಯಶ ಕಂಡಿದೆ. ಇದು ಡಿಐ ಟು ವೀಲ್ ಡ್ರೈವ್, ಡಿಐ ಫೋರ್ ವೀಲ್ ಡ್ರೈವ್ ಮತ್ತು ಸಿಆರ್‌ಡಿಇಗಳೆಂಬ ಮೂರು ವೆರಿಯಂಟ್‌ಗಳಲ್ಲಿ ದೊರಕುತ್ತದೆ.

ಪ್ರಭಾವಶಾಲಿ ನಿಲೇಕಣಿಯ ಪವರ್‌ಫುಲ್ ಎಲೆಕ್ಷನ್ ಗಾಡಿ

ಜೀಪ್ ದೇಹ ಭಾಷೆಯನ್ನು ಹೊಂದಿರುವ ಮಹೀಂದ್ರ ಥಾರ್, 2523 ಸಿಸಿ ಡೀಸೆಲ್ ಎಂಜಿನ್ ಹೊಂದಿದ್ದು 63 ಬಿಎಚ್‌ಪಿ (182.5 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಪ್ರಭಾವಶಾಲಿ ನಿಲೇಕಣಿಯ ಪವರ್‌ಫುಲ್ ಎಲೆಕ್ಷನ್ ಗಾಡಿ

ಇನ್ನು ಇಂಧನ ಕ್ಷಮತೆಯ ವಿಚಾರಕ್ಕೂ ಬಂದಾಗಲೂ ಉತ್ತಮ ಮೈಲೇಜ್ ಕಾಪಾಡಿಕೊಳ್ಳಲು ಮಹೀಂದ್ರ ಥಾರ್ ಯಶಸ್ವಿಯಾಗಿದೆ. ಇದು ಪ್ರತಿ ಲೀಟರ್‌ಗೆ 16ರಿಂದ 20 ಕೀ.ಮೀ.ಗಳಷ್ಟು ಮೈಲೇಜ್ ನೀಡುವಲ್ಲಿ ಸಕ್ಷಮವಾಗಿರಲಿದೆ.

ಪ್ರಭಾವಶಾಲಿ ನಿಲೇಕಣಿಯ ಪವರ್‌ಫುಲ್ ಎಲೆಕ್ಷನ್ ಗಾಡಿ

ಹಾಗೆಯೇ ವೇಗತೆಯ ಬಗ್ಗ ಮಾತನಾಡುವುದಾದ್ದಲ್ಲಿ ಇದು 17 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಅಂತೆಯೇ ಫೈವ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೂಂಡಿದೆ.

ಪ್ರಭಾವಶಾಲಿ ನಿಲೇಕಣಿಯ ಪವರ್‌ಫುಲ್ ಎಲೆಕ್ಷನ್ ಗಾಡಿ

ವಿವಿಧ ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗುವ ಮಹೀಂದ್ರ ಥಾರ್, ಆಫ್ ರೋಡ್ ನಿರ್ವಹಣೆಗೆ ತಕ್ಕ ದೇಹ ವಿನ್ಯಾಸವನ್ನು ಪಡೆದುಕೊಂಡಿದೆ.

ಪ್ರಭಾವಶಾಲಿ ನಿಲೇಕಣಿಯ ಪವರ್‌ಫುಲ್ ಎಲೆಕ್ಷನ್ ಗಾಡಿ

ಕಾರಿನೊಳಗೂ ಆರಾಮದಾಯಕ ಚಾಲನೆಗೆ ಆದ್ಯತೆ ಕೊಡಲಾಗಿದೆ. ಅಷ್ಟೇ ಅಲ್ಲದೆ ಟಾಪ್ ಎಂಡ್ ವೆರಿಯಂಟ್‌ನಲ್ಲಿ ಎಸಿ ಸೌಲಭ್ಯ ಕೂಡಾ ಇರಲಿದೆ.

ಪ್ರಭಾವಶಾಲಿ ನಿಲೇಕಣಿಯ ಪವರ್‌ಫುಲ್ ಎಲೆಕ್ಷನ್ ಗಾಡಿ

ಏಳು ಸೀಟುಗಳ ಆಸನ ವ್ಯವಸ್ಥೆ ಹೊಂದಿರುವ ಮಹೀಂದ್ರ ಥಾರ್ ಟಾಪ್ ಎಂಡ್ ವರ್ಷನ್‌ನಲ್ಲಿ ಮ್ಯೂಸಿಕ್ ಸಿಸ್ಟಂ ಜತೆ ಎಸಿ ಸೌಲಭ್ಯ ಲಭ್ಯವಿರಲಿದೆ.

ಪ್ರಭಾವಶಾಲಿ ನಿಲೇಕಣಿಯ ಪವರ್‌ಫುಲ್ ಎಲೆಕ್ಷನ್ ಗಾಡಿ

ಹಾಗಿದ್ದರೂ ಸುರಕ್ಷತೆಯ ವಿಚಾರದಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದೆ ಎಂದೇ ಹೇಳಬಹುದು. ಯಾಕೆಂದರೆ ಏರ್‌ಬ್ಯಾಗ್ ಸೌಲಭ್ಯವಿರುವುದಿಲ್ಲ.

ಪ್ರಭಾವಶಾಲಿ ನಿಲೇಕಣಿಯ ಪವರ್‌ಫುಲ್ ಎಲೆಕ್ಷನ್ ಗಾಡಿ

ಒಟ್ಟಿನಲ್ಲಿ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವಂತೆಯೇ ಚುನಾವಣೆ ಪ್ರಚಾರದ ಬಿಸಿ ಮುಟ್ಟುತ್ತಿದೆ. ಇದೀಗ ದೇಶದ ಪ್ರಭಾವಶಾಲಿ ಉದ್ಯಮಿಗೆ ಪವರ್‌ಫುಲ್ ಗಾಡಿ ಸಾಥ್ ನೀಡಲಿದೆ.

ಪ್ರಭಾವಶಾಲಿ ನಿಲೇಕಣಿಯ ಪವರ್‌ಫುಲ್ ಎಲೆಕ್ಷನ್ ಗಾಡಿ

ಅಷ್ಟಕ್ಕೂ ನಂದನ್ ನಿಲೇಕಣಿ ಈ ಬಾರಿ ಜಯಭೇರಿ ಮೊಳಗಿಸಲಿದ್ದಾರೆಯೇ? ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Story first published: Wednesday, March 26, 2014, 16:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark