Just In
Don't Miss!
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಈ ಹಿಂದಿನ ದಾಖಲೆಯನ್ನು ಮುರಿಯಲಿದೆ ಕೇಂದ್ರ ಸರ್ಕಾರ
ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಯೋಜನೆಗಳ ಮೇಲೆ ವಿಶೇಷ ಆಸಕ್ತಿ ವಹಿಸಿರುವ ಕೇಂದ್ರ ಸರ್ಕಾರವು ಭಾರೀ ಪ್ರಮಾಣದಲ್ಲಿ ಹಣ ವ್ಯಯಿಸುತ್ತಿದ್ದು, 2020-2021ರ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ದಿನಂಪ್ರತಿ ದೇಶಾದ್ಯಂತ ಕನಿಷ್ಠ 37 ಕಿ.ಮೀ ಹೆದ್ದಾರಿ ನಿರ್ಮಿಸಿ ದಾಖಲೆ ನಿರ್ಮಿಸಿದೆ.

2022ರ ಕೇಂದ್ರ ಬಜೆಟ್‌ನಲ್ಲಿ ಹಲವಾರು ಹೊಸ ಯೋಜನೆಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಮಾಣವನ್ನು ಹೆಚ್ಚಿಸಲು ಮಹತ್ವದ ಯೋಜನೆ ರೂಪಿಸಲಾಗಿದ್ದು, 2022-23ನೇ ಸಾಲಿನ ಕೇಂದ್ರ ಬಜೆಟ್‍ನಲ್ಲಿ 25 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ.

ಗುರಿಸಾಧನೆಗಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಕ್ರಿಯೆಯನ್ನು ತೀವ್ರಗೊಳಿಸಿರುವ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಪ್ರಸಕ್ತ ವರ್ಷದಲ್ಲಿ ದಿನಂಪ್ರತಿ ಕನಿಷ್ಠ 50 ಕಿ.ಮೀ ಹೆದ್ದಾರಿ ನಿರ್ಮಾಣ ಮಾಡುವ ನಿರ್ಧಾರ ಕೈಗೊಂಡಿದೆ.

ಹೆದ್ದಾರಿ ನಿರ್ಮಾಣ ಯೋಜನೆಗಳ ಕುರಿತಾಗಿ ಭಾರತದ ಆರ್ಥಿಕ ಅಭಿವೃದ್ದಿಗೆ ಸಂಬಂಧಿಸಿದಂತೆ ಎಕನಾಮಿಕ್ ಟೈಮ್ಸ್ ಹಮ್ಮಿಕೊಂಡಿದ್ದ ಗ್ಲೋಬಲ್ ಬಿಸಿನೆಸ್ ಶೃಂಗಸಭೆಯಲ್ಲಿ ಮಾತನಾಡಿದ ಸಚಿವ ನಿತಿನ್ ಗಡ್ಕರಿ ಅವರು ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ಗಡಿ ರಾಜ್ಯಗಳಲ್ಲಿ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ವಿಶೇಷ ಗಮನ ಹರಿಸುತ್ತಿದೆ ಎಂದರು.

ಜೊತೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೆದ್ದಾರಿ ನಿರ್ಮಾಣ ಕಾರ್ಯವನ್ನು ಕ್ಷೀಪಗತಿಯಲ್ಲಿ ಮಾಡಲಾಗುವುದು ಮತ್ತು ದಿನಕ್ಕೆ ಕನಿಷ್ಠ 50 ಕಿಮೀ ರಸ್ತೆಗಳನ್ನು ನಿರ್ಮಿಸುವ ಗುರಿಯನ್ನು ಸಹ ಸಾಧಿಸಲಾಗುವುದು ಎಂದರು.

ದೇಶಾದ್ಯಂತ ವಿವಿಧ ಭಾಗಗಗಳಲ್ಲಿನ ಸುಮಾರು 1,000 ಕಿಮೀ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕಡತಕ್ಕೆ ವಾರದ ಹಿಂದಷ್ಟೇ ಕಡತಕ್ಕೆ ಸಹಿ ಹಾಕಿರುವುದಾಗಿ ತಿಳಿಸಿದ ಗಡ್ಕರಿಯವರು ಕಳೆದ ವರ್ಷ ಕೋವಿಡ್-19 ನಿರ್ಬಂಧಗಳಿಂದ ರಸ್ತೆ ನಿರ್ಮಾಣಕ್ಕೆ ತೊಂದರೆಯಾಗಿತ್ತು. ಆದರೆ ಈ ಪ್ರಸಕ್ತ ವರ್ಷ ಹೆದ್ದಾರಿ ನಿರ್ಮಾಣ ಕಾರ್ಯಗಳು ವೇಗ ಪಡೆದುಕೊಂಡಿವೆ ಎಂದರು.

ಹೊಸ ಯೋಜನೆಗಳೊಂದಿಗೆ ಸರಕು-ಸಾಗಾಣಿಕೆ ವಾಹನಗಳ ವೆಚ್ಚವನ್ನು ತಗ್ಗಸುವುದು ನಮ್ಮ ಮುಖ್ಯ ಧ್ಯೇಯ ಎಂದಿರುವ ನಿತಿನ್ ಗಡ್ಕರಿಯವರು ಲಾಜಿಸ್ಟಿಕ್ಸ್ ವೆಚ್ಚವನ್ನು ಶೇ.10ಕ್ಕೆ ತಗ್ಗಿಸುವ ಆಶಯ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಭಾರತದಲ್ಲಿ ಲಾಜಿಸ್ಟಿಕ್ಸ್ ಸಾಗಾಣಿಕೆ ವೆಚ್ಚವು ಶೇ.16 ರಷ್ಟಿದ್ದರೆ ಚೀನಾದಲ್ಲಿ ಶೇ. 12ರಷ್ಟು , ಯುಎಸ್ಎನಲ್ಲಿ ಶೇ.11 ರಷ್ಟು ಮತ್ತು ಯುರೋಪ್ ದೇಶಗಳಲ್ಲಿ ಶೇ.10 ರಷ್ಟಿದ್ದು, ಇದು ಮುಂಬರುವ ದಿನಗಳಲ್ಲಿ ಭಾರತದಲ್ಲೂ ಹೊಸ ಬದಲಾವಣೆಯಾಗಲಿದೆ ಎಂದಿದ್ದಾರೆ.

ದೇಶದ ಆರ್ಥಿಕತೆಯ ಅಭಿವೃದ್ದಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಪ್ರಮುಖ ಪಾತ್ರವಹಿಸುತ್ತಿದ್ದು, ಇದೇ ಕಾರಣಕ್ಕೆ ಸಾರಿಗೆ ಸಂಪರ್ಕವನ್ನು ಬಲಪಡಿಸಲು ವಿಶ್ವದ ಪ್ರಮುಖ ರಾಷ್ಟ್ರಗಳು ಹೆದ್ದಾರಿಗಳ ನಿರ್ಮಾಣದ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿವೆ.

ಅತ್ಯುತ್ತಮ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಸಾರಿಗೆ ಸಂಪರ್ಕವನ್ನು ಸರಳಗೊಳಿಸಿ ಆರ್ಥಿಕತೆಗೆ ಉತ್ತೇಜನ ನೀಡಲಾಗುತ್ತಿದ್ದು, ಸ್ವತಂತ್ರ ಭಾರತದ ನಂತರ ಅಂತಾರಾಜ್ಯಗಳ ಸಂಪರ್ಕಕ್ಕಾಗಿ ಹಲವಾರು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಯ್ತು.

ಇತ್ತೀಚೆಗೆ ಕಳೆದ ಒಂದು ದಶಕ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ನಿರ್ವಹಣೆಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಈ ಮೂಲಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುತ್ತಿದ್ದು, ಸಾರಿಗೆ ಸಂಪರ್ಕದಲ್ಲಿ ಹೊಸ ಕ್ರಾಂತಿಗೆ ಕಾರಣವಾಗುತ್ತಿದೆ.

ಕೇಂದ್ರ ಸರ್ಕಾರವು ಸದ್ಯ ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವುದರ ಜೊತೆಗೆ ಅಸ್ತಿತ್ವದಲ್ಲಿರುವ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಉತ್ಸುಕವಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವಲ್ಲಿ ದಿಟ್ಟ ಹೆಜ್ಜೆಯನ್ನಿಡುತ್ತಿದೆ.

ಭಾರತದಲ್ಲಿ ವಿವಿಧ ಹೆದ್ದಾರಿಗಳ ಒಟ್ಟು ಅಂತರವು 1.40 ಲಕ್ಷ ಕಿ.ಮೀ ಗಳಾಗಿದ್ದು, 2025ರ ವೇಳೆಗೆ ಎಲ್ಲಾ ಹೆದ್ದಾರಿಗಳ ಒಟ್ಟು ಅಂತರವನ್ನು 2 ಲಕ್ಷ ಕಿ.ಮೀ ಗೆ ಹೆಚ್ಚಿಸುವ ಗುರಿಹೊಂದಲಾಗಿದೆ. ಇದಕ್ಕಾಗಿ ವಾರ್ಷಿಕ ಬಜೆಟ್‌ನಲ್ಲಿ ಹೆಚ್ಚಿನ ಹಣ ವಿನಿಯೋಗಿಸಲಾಗುತ್ತಿದ್ದು, 2022-23ನೇ ಸಾಲಿನ ಬಜೆಟ್‍ನಲ್ಲಿ 25 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ.

ಕೇಂದ್ರ ಸರ್ಕಾರವು ಹೆದ್ದಾರಿ ನಿರ್ಮಾಣ ಕಾರ್ಯಗಳನ್ನು ವೇಗಗೊಳಿಸುವುದರ ಜೊತೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಅಪಘಾತಗಳನ್ನು ಕಡಿಮೆಗೊಳಿಸಲು ಸಹ ಪ್ರಯತ್ನಿಸುತ್ತಿದ್ದು, ಟೋಲ್ ನಿರ್ವಹಣೆಯಲ್ಲಿ ಮಹತ್ವದ ಬದಲಾವಣೆಯೊಂದಿಗೆ ವಾಹನಗಳ ಚಾಲನೆಯನ್ನು ಸಹ ವೇಗಗೊಳಿಸಲಾಗಿದೆ.