ಗುರುತ್ವ ಬಲವನ್ನು ಹಿಮ್ಮೆಟ್ಟಿಸಿ 360 ಡಿಗ್ರಿಯಲ್ಲಿ ಸರ್ರನೆ ಸುತ್ತಿದ ಕಾರು

Written By:

ನ್ಯೂಟನ್ನನ ಗುರುತ್ವ ಬಲ ಸಿದ್ಧಾಂತವನ್ನೇ ಹಿಮ್ಮೆಟ್ಟಿಸುವ ಮೂಲಕ ಜಾಗ್ವಾರ್ ಕಾರೊಂದು 360 ಡಿಗ್ರಿಯಲ್ಲಿ ಸರ್ರನೆ ಸುತ್ತಿದ ಸಾಧನೆಯನ್ನು ಮಾಡಿದೆ. ಪ್ರಸ್ತುತ ದಾಖಲೆ ಗಿನ್ನೆಸ್ ದಾಖಲೆ ಪುಟವನ್ನು ಸೇರ್ಪಡೆಗೊಂಡಿದೆ.

ಗಿನ್ನೆಸ್ ದಾಖಲೆ ಪುಟ

ಜಾಗ್ವಾರ್‌ನ ಅತಿ ನೂತನ ಎಫ್-ಪೇಸ್ (F-PACE) ಎಂಬ ಕ್ರೀಡಾ ಕಾರೇ ಇಂತಹದೊಂದು ಮಹತ್ತರ ದಾಖಲೆಗೆ ಪಾತ್ರವಾಗಿದೆ. ಈ ವಿಶಿಷ್ಟ ಗಿನ್ನೆಸ್ ದಾಖಲೆಯ ಸಮಗ್ರ ಮಾಹಿತಿ, ವಿಡಿಯೋ ಹಾಗೂ ಚಿತ್ರಗಳಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

To Follow DriveSpark On Facebook, Click The Like Button
ಗುರುತ್ವ ಬಲವನ್ನು ಹಿಮ್ಮೆಟ್ಟಿಸಿ 360 ಡಿಗ್ರಿಯಲ್ಲಿ ಸರ್ರನೆ ಸುತ್ತಿದ ಕಾರು

ಜರ್ಮನಿಯಲ್ಲಿ ವಿಶೇಷವಾಗಿ ಸಜ್ಜುಗೊಳಿಸಲಾದ ವೃತ್ತಕಾರಾದ 19.08 ಮೀಟರ್ ಎತ್ತರದ ಟ್ರ್ಯಾಕ್ ನಲ್ಲಿ ಜಾಗ್ವಾರ್ ಇಂತಹದೊಂದು ಸಾಧನೆ ಮಾಡಿದೆ.

ಗುರುತ್ವ ಬಲವನ್ನು ಹಿಮ್ಮೆಟ್ಟಿಸಿ 360 ಡಿಗ್ರಿಯಲ್ಲಿ ಸರ್ರನೆ ಸುತ್ತಿದ ಕಾರು

ನೂತನ ದಾಖಲೆಗಳನ್ನು ಬರೆಯುವುದನ್ನು ಹವ್ಯಾಸ ಮಾಡಿಕೊಂಡಿರುವ ಬ್ರಿಟನ್ ಮೂಲದ ರೇಸ್ ಚಾಲಕ ಟೆರ್ರಿ ಗ್ರಾಂಟ್ (Terry Grant) ಎಂಬವರೇ ಜಾಗ್ವಾರ್ ಕಾರಿಗೆ ನೂತನ ಕೀರ್ತಿ ತರಲು ಕಾರಣರಾಗಿದ್ದಾರೆ.

ಗುರುತ್ವ ಬಲವನ್ನು ಹಿಮ್ಮೆಟ್ಟಿಸಿ 360 ಡಿಗ್ರಿಯಲ್ಲಿ ಸರ್ರನೆ ಸುತ್ತಿದ ಕಾರು

360 ಡಿಗ್ರಿಯಲ್ಲಿ ಶರವೇಗದಲ್ಲಿ ಸುತ್ತುವ ಕಾರು ನೋಡುಗರನ್ನು ಮಂತ್ರ ಮುಗ್ಧಗೊಳಿಸಿತ್ತು. ಇದೊಂದು ಅಪೂರ್ವ ಕ್ಷಣ ಎಂದು ಟೆರ್ರಿ ಗ್ರಾಂಟ್ ಅಭಿಪ್ರಾಯಪಡುತ್ತಾರೆ.

ಗುರುತ್ವ ಬಲವನ್ನು ಹಿಮ್ಮೆಟ್ಟಿಸಿ 360 ಡಿಗ್ರಿಯಲ್ಲಿ ಸರ್ರನೆ ಸುತ್ತಿದ ಕಾರು

ವಿಶೇಷವೆಂದರೆ ವಿಶ್ವದ ಅತಿ ದೊಡ್ಡ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಅನಾವರಣಗೊಳ್ಳಲಿರುವಂತೆಯೇ ಜಾಗ್ವಾರ್ ಈ ವಿಶಿಷ್ಟ ದಾಖಲೆ ಬರೆದಿದೆ.

ಗುರುತ್ವ ಬಲವನ್ನು ಹಿಮ್ಮೆಟ್ಟಿಸಿ 360 ಡಿಗ್ರಿಯಲ್ಲಿ ಸರ್ರನೆ ಸುತ್ತಿದ ಕಾರು

ಇವೆಲ್ಲರ ಮೂಲಕ ಜಾಗ್ವಾರ್‌ನ ನೂತನ ಎಫ್-ಫೇಸ್ ಕಾರು ತನ್ನ ಚುರುಕುತನ, ವೇಗ ಮತ್ತು ನಿರ್ವಹಣೆಯನ್ನು ಪ್ರದರ್ಶಿಸಿದೆ.

ಗುರುತ್ವ ಬಲವನ್ನು ಹಿಮ್ಮೆಟ್ಟಿಸಿ 360 ಡಿಗ್ರಿಯಲ್ಲಿ ಸರ್ರನೆ ಸುತ್ತಿದ ಕಾರು

ಅಂದ ಹಾಗೆ ಟೆರ್ರಿ ಗ್ರಾಂಟ್ ಇದು ಮೊದಲೇನಲ್ಲ ದಾಖಲೆ ಬರೆಯುತ್ತಿರುವುದು. ಮೋಟಾರುಸ್ಪೋರ್ಟ್ ವಿಭಾಗದಲ್ಲಿ ವಿಭಿನ್ನ ದಾಖಲೆಗಳನ್ನು ಬರೆಯುವುದರಲ್ಲಿ ನಿಸ್ಸೀಮವಾಗಿರುವ ಅವರು ಬುಗರಿಯಂತೆ ಗಿರ್ರನೆ ತಿರುಗುವ ಕಾರಿನ ಮೇಲೆ ನಿಂತುಕೊಳ್ಳುವ ಮೂಲಕ ದಾಖಲೆ ಬರೆದಿದ್ದರು.

ವೀಡಿಯೋ ವೀಕ್ಷಿಸಿ

English summary
New Jaguar car and stunt pro Terry Grant defy gravity with largest loop the loop ever
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark