ಭಾರತಕ್ಕೂ ಕಾಲಿಟ್ಟ ಲೆ ಮನ್ಸ್ ಶೈಲಿಯ ರೇಸ್..!

ಮದ್ರಾಸ್ ಮೋಟಾರ್ ರೇಸ್ ಶೀಘ್ರದಲ್ಲೇ ರಾತ್ರಿ ರೇಸ್‍‍ಗಳನ್ನು ಆಯೋಜಿಸಲಿದೆ. ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಭಾರತದ ಮೋಟಾರ್ ಸ್ಪೋರ್ಟ್ ಶೀಘ್ರದಲ್ಲೇ ರಾತ್ರಿ ರೇಸ್ ಗಳನ್ನು ಆಯೋಜಿಸುವ ಮೂಲಕ ಹೊಸ ಆಯಾಮವನ್ನು ನೀಡಲಿದೆ. ಇದು ಖಂಡಿತವಾಗಿಯೂ ಸಾರ್ವಜನಿಕ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಲಿದ್ದು, ಮೋಟಾರ್‌ ಸ್ಪೋರ್ಟ್‌ನಲ್ಲಿ ಆಸಕ್ತಿಯನ್ನು ಬೆಳೆಸಲಿದೆ.

ಭಾರತಕ್ಕೂ ಕಾಲಿಟ್ಟ ಲೆ ಮನ್ಸ್ ಶೈಲಿಯ ರೇಸ್..!

ಶೋಲವರಂನಲ್ಲಿ ನಡೆಯುತ್ತಿದ್ದ ರೋಚಕ ರೇಸ್‍‍ಗಳಿಂದ, ಭಾರತದ ವಿವಿಧೆಡೆ ನಡೆದ ರ್‍ಯಾಲಿಗಳವರೆಗೆ, ಭಾರತವು ಮೋಟಾರ್ ಸ್ಪೋರ್ಟ್‍‍ನಲ್ಲಿ ದೀರ್ಘವಾದ ಇತಿಹಾಸವನ್ನು ಹೊಂದಿದೆ. ಭಾರತದಲ್ಲಿ ಈಗ ಮೂರು ಆಧುನಿಕ ಟ್ರಾಕ್‍ ಹಾಗೂ ಒಂದು ಎಫ್ಐಎ ಗ್ರೇಡ್ 1 ಟ್ರ್ಯಾಕ್‍‍ಗಳಿವೆ.

ಭಾರತಕ್ಕೂ ಕಾಲಿಟ್ಟ ಲೆ ಮನ್ಸ್ ಶೈಲಿಯ ರೇಸ್..!

ಪ್ರತಿ ರೇಸ್ ಅನ್ನು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡುವ ಹಾಗೂ ಮೂರು ರೇಸ್‌ಟ್ರಾಕ್‌ಗಳ ಪ್ರತಿಯೊಂದು ಮೂಲೆಯಲ್ಲೂ ಕ್ಯಾಮೆರಾ ಮಾನಿಟರ್ ಮಾಡುವ ಈ ವ್ಯವಸ್ಥೆಯನ್ನು ಭಾರತಕ್ಕೆ ತರಲು ಭಾರತೀಯ ಮೋಟಾರ್ ಸ್ಪೋರ್ಟ್ ಹಲವು ವರ್ಷಗಳನ್ನು ತೆಗೆದುಕೊಂಡಿದೆ.

ಭಾರತಕ್ಕೂ ಕಾಲಿಟ್ಟ ಲೆ ಮನ್ಸ್ ಶೈಲಿಯ ರೇಸ್..!

ಆದರೆ, ವೀಕ್ ಎಂಡ್‍‍ನಲ್ಲಿ ನಡೆಯುವ ರೇಸ್‍‍ಗಳನ್ನು ನೋಡಲು ರೇಸ್ ಟ್ರಾಕ್‍‍ನಲ್ಲಿ ಜನಸಂದಣಿ ಹೆಚ್ಚುತ್ತಿರುವುದು ಚಿಂತೆಗೀಡು ಮಾಡಿದೆ. ಕಚ್ಚಾ ರೇಸ್‍‍ಗಳಾದ ನಂದಿ ಹಿಲ್ ಕ್ಲೈಂಬ್, ಶೋಲವರಂ ಗ್ರ್ಯಾಂಡ್ ಪ್ರಿಕ್ಸ್, ಹಿಮಾಲಯನ್ ರ್‍ಯಾಲಿಗಳನ್ನು ಮನೆಯಲ್ಲಿ ಟೆಲಿವಿಷನ್ ಹೊಂದುವುದು ಪ್ರತಿಷ್ಟೆಯ ವಿಷಯವಾಗಿದ್ದ ಕಾಲದಲ್ಲಿಯೇ ಆಯೋಜಿಸಲಾಗಿತ್ತು.

ಭಾರತಕ್ಕೂ ಕಾಲಿಟ್ಟ ಲೆ ಮನ್ಸ್ ಶೈಲಿಯ ರೇಸ್..!

ರೇಸ್ ನಡೆಯುವ ದಿನದಂದು ರೇಸ್ ಟ್ರಾಕ್‍‍ನಲ್ಲಿ ಸೇರುವ ಜನಸಂದಣಿಯನ್ನು ನೋಡಿದರೆ ತಲೆ ತಿರುಗುವುದು ಗ್ಯಾರಂಟಿ. ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ (ಎಫ್‌ಎಂಎಸ್‌ಸಿಐ) ಹಾಗೂ ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ (ಎಂಎಂಎಸ್‌ಸಿ) ಒಟ್ಟಾಗಿ ರೇಸ್‌ಟ್ರಾಕ್‌ಗಳಿಗೆ ಈ ಹಬ್ಬದ ವಾತಾವರಣವನ್ನು ನೀಡುವ ನಿರ್ಧಾರ ತೆಗೆದುಕೊಂಡಿವೆ.

ರಾತ್ರಿ ರೇಸ್‌ಗಳು ಜನಸಂದಣಿಯನ್ನು ಮರಳಿ ತರಲಿದ್ದು, ಭಾರತದಲ್ಲಿ ಮೋಟಾರ್ ಸ್ಪೋರ್ಟ್‍‍ಗೆ ಮತ್ತೊಂದು ಆಯಾಮವನ್ನು ನೀಡಲಿವೆ ಎಂದು ನಿರೀಕ್ಷಿಸಲಾಗಿದೆ. ಆಕಾಶದಲ್ಲಿ ನಕ್ಷತ್ರ ಹಾಗೂ ಚಂದ್ರನಿರುವ ಸಮಯದಲ್ಲಿ, ಟ್ರ್ಯಾಕ್‌ನಲ್ಲಿ ಪ್ರತಿ ಗೇರ್‌ಗಳಲ್ಲಿ ರೆಡ್‌ಲೈನ್‌ಗೆ ಹತ್ತಿರ ಬಂದಾಗ ಸೌಂಡ್ ಮಾಡುವ ಎಂಜಿನ್‌ಗಳು, ಪ್ಯಾಡಾಕ್ ಪ್ರದೇಶದಲ್ಲಿನ ಸಂಗೀತ ಹಾಗೂ ಟ್ರ್ಯಾಕ್‌ನ ಸುತ್ತಮುತ್ತಲಿನ ಸ್ಥಳಗಳಲ್ಲಿ ಆಹಾರ ಹಾಗೂ ಪಾನೀಯ ಸ್ಟಾಲ್‌ಗಳನ್ನು ಹೊಂದಬೇಕೆಂಬ ಆಲೋಚನೆ ಇದೆ.

ಭಾರತಕ್ಕೂ ಕಾಲಿಟ್ಟ ಲೆ ಮನ್ಸ್ ಶೈಲಿಯ ರೇಸ್..!

ಈ ವಾತಾವರಣವು ಹೆಚ್ಚಿನ ಗಮನವನ್ನು ಸೆಳೆಯುವುದು ಖಚಿತ. ಇದಕ್ಕಾಗಿ ಮೊದಲು ಆಗಸ್ಟ್ 6 ಹಾಗೂ 7ರಂದು ಪರೀಕ್ಷಾ ಅಧಿವೇಶನವನ್ನು ನಡೆಸಲಾಗುವುದು. ಸಲೂನ್ ಹಾಗೂ ಸಿಂಗಲ್ ಸೀಟರ್ ಫಾರ್ಮುಲಾ ಕಾರುಗಳು ಸೇರಿದಂತೆ 40 ಕ್ಕೂ ಹೆಚ್ಚು ರೇಸ್‌ಕಾರ್‌ಗಳನ್ನು ಪರೀಕ್ಷಾ ಅಧಿವೇಶನದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ.

ಭಾರತಕ್ಕೂ ಕಾಲಿಟ್ಟ ಲೆ ಮನ್ಸ್ ಶೈಲಿಯ ರೇಸ್..!

ಪರೀಕ್ಷಾ ಅಧಿವೇಶನವು ಸಂಜೆ 7 ರಿಂದ 11 ರವರೆಗೆ ನಡೆಯುವ ನಿರೀಕ್ಷೆಯಿದ್ದು, 35 ತಾತ್ಕಾಲಿಕ ಬೆಳಕಿನ ಮಾಸ್ಟ್‌ಗಳನ್ನು ಅಳವಡಿಸಲಾಗುವುದು. ಪರೀಕ್ಷಾ ಅಧಿವೇಶನದಲ್ಲಿ 3.71 ಕಿ.ಮೀ ಉದ್ದದ ಸರ್ಕ್ಯೂಟ್‌ನಲ್ಲಿ ತಾತ್ಕಾಲಿಕ ಬೆಳಕಿನ ಮಾಸ್ಟ್‌ಗಳನ್ನು ಟಾರ್ಮ್ಯಾಕ್‌ನಿಂದ ಕೇವಲ 1 ರಿಂದ 3 ಮೀಟರ್ ಅಂತರದಲ್ಲಿ ಇರಿಸಲಾಗುತ್ತದೆ.

ಭಾರತಕ್ಕೂ ಕಾಲಿಟ್ಟ ಲೆ ಮನ್ಸ್ ಶೈಲಿಯ ರೇಸ್..!

ಅಂತಹ ವಸ್ತುಗಳನ್ನು ಟ್ರ್ಯಾಕ್‌ನಲ್ಲಿರುವ ಅಡೆತಡೆಗಳ ಹೊರಗೆ ಇಡಬೇಕು ಎಂದು ಸುರಕ್ಷತಾ ನಿಯಮಗಳು ಹೇಳುತ್ತಿರುವುದರಿಂದ, ಪರೀಕ್ಷಾ ಅವಧಿಗಳಲ್ಲಿ ಕಾರುಗಳು ಸಮತಟ್ಟಾಗಿ ಹೋಗಲು ಅನುಮತಿಸುವುದಿಲ್ಲ. ಆದ ಕಾರಣ ಬೆಳಕಿನ ಗೋಚರತೆಯನ್ನು ಅಳೆಯಲು ಮಾತ್ರ ಈ ಪರೀಕ್ಷೆ ನಡೆಯಲಿದೆ.

ಭಾರತಕ್ಕೂ ಕಾಲಿಟ್ಟ ಲೆ ಮನ್ಸ್ ಶೈಲಿಯ ರೇಸ್..!

ಎಂಆರ್‌ಎಫ್, ಎಂಎಂಎಸ್‌ಸಿ, ಎಫ್‌ಎಂಎಸ್‌ಸಿಐ, ಇಂಡಿಯನ್ ನ್ಯಾಷನಲ್ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್ ಅಧ್ಯಕ್ಷ ಹಾಗೂ ಎಂಎಂಎಸ್‌ಸಿ ಉಪಾಧ್ಯಕ್ಷ ವಿಕ್ಕಿ ಚಾಂದೋಕ್‍‍ರವರು ಮಾತನಾಡಿ ಈ ಸಮಯದಲ್ಲಿ ಇದು ತಾತ್ಕಾಲಿಕ ಮಾತ್ರ ಏಕೆಂದರೆ ಇವುಗಳು ಟ್ರ್ಯಾಕ್‌ಗೆ ಹತ್ತಿರದಲ್ಲಿರಬಹುದು. ನಾವು ಅಡೆತಡೆಗಳ ಹಿಂದೆ ಎಲ್ಲಾ ಬೆಳಕಿನ ಸ್ತಂಭಗಳನ್ನು ಹೊಂದಿರಬೇಕು. 7ನೇ ತಾರೀಕಿನ ಸಂಜೆಯ ಕ್ಷಣದಲ್ಲಿ ಅವು ಅಡೆತಡೆಗಳ ಹಿಂದೆ ಇರುವುದಿಲ್ಲ ಎಂದು ಹೇಳಿದರು.

ಭಾರತಕ್ಕೂ ಕಾಲಿಟ್ಟ ಲೆ ಮನ್ಸ್ ಶೈಲಿಯ ರೇಸ್..!

ಇದು ಕೇವಲ ಪರೀಕ್ಷೆಗೆ ಮಾತ್ರ. ನಾವು ಅವುಗಳನ್ನು ಟ್ರ್ಯಾಕ್‌ನ ಅಂಚಿನಿಂದ 1-3 ಮೀಟರ್ ದೂರದಲ್ಲಿ ಇರಿಸಲಿದ್ದೇವೆ. ದೀಪಗಳ ಸಾಮರ್ಥ್ಯವನ್ನು ನಾವು ನೋಡಬೇಕಾಗಿದೆ. ಸಾಕಷ್ಟು ಬೆಳಕು ಇದೆಯೆ ಎಂಬುದನ್ನು ಪರೀಕ್ಷಿಸಬೇಕಾಗಿದೆ. ಸರಿಯಾಗಿರದಿದ್ದರೆ ಕ್ಯಾಂಟಿಲಿವರ್‌ಗೆ ಹೋಗಿ ಸರಿಯಾದ ರಚನೆಯನ್ನು ಮಾಡುತ್ತೇವೆ ಎಂದು ಹೇಳಿದರು.

ಭಾರತಕ್ಕೂ ಕಾಲಿಟ್ಟ ಲೆ ಮನ್ಸ್ ಶೈಲಿಯ ರೇಸ್..!

ಬೆಳಕಿನ ಗೋಚರತೆಯ ಮಟ್ಟವು ತೃಪ್ತಿಕರವಾದ ನಂತರ, ಅಧಿಕಾರಿಗಳು ಪೂರ್ಣ ಪ್ರಮಾಣದ ಓಟಕ್ಕೆ ಹಸಿರು ನಿಶಾನೆ ನೀಡಲಿದ್ದಾರೆ. ರಾತ್ರಿ ರೇಸ್‌ಗಳು ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಈ ರೀತಿಯ ರೇಸುಗಳು ಆಯೋಜನೆಗೊಳ್ಳಲಿವೆ.

ಭಾರತಕ್ಕೂ ಕಾಲಿಟ್ಟ ಲೆ ಮನ್ಸ್ ಶೈಲಿಯ ರೇಸ್..!

ಮದ್ರಾಸ್ ಮೋಟಾರ್ ರೇಸ್ ಟ್ರ್ಯಾಕ್ (ಎಂಎಂಆರ್‍‍ಟಿ) ಆತಿಥ್ಯ ವಹಿಸಲಿರುವ ರಾತ್ರಿ ರೇಸ್‌ಗಳ ಮಾದರಿಯು ಸಿಂಗಾಪುರ್ ಜಿಪಿ ಅಥವಾ ಬಹ್ರೇನ್ ಜಿಪಿಯಲ್ಲಿನ ಫಾರ್ಮುಲಾ ಒನ್ ರೇಸ್‌ಗಳಿಗಿಂತ ಭಿನ್ನವಾಗಿರಲಿದೆ. ಅಲ್ಲಿ ಇಡೀ ಟ್ರ್ಯಾಕ್‍‍ಗಳಿಗೆ ಫ್ಲಡ್‌ಲೈಟ್‌ಗಳಿಂದ ಬೆಳಕನ್ನು ನೀಡಲಾಗುತ್ತದೆ.

ಭಾರತಕ್ಕೂ ಕಾಲಿಟ್ಟ ಲೆ ಮನ್ಸ್ ಶೈಲಿಯ ರೇಸ್..!

ಎಂಎಂಆರ್‍‍ಟಿ ಎಂಡ್ಯೂರೆನ್ಸ್ ರೇಸ್ ಮಾದರಿಯನ್ನು ಅನುಸರಿಸಲಿದೆ. ಇದರಲ್ಲಿ ರೇಸಿನ ಉಸ್ತುವಾರಿ ವಹಿಸಿರುವವರು, ಮಾರ್ಷಲ್‍‍ಗಳು ಹಾಗೂ ಅಧಿಕಾರಿಗಳು ಅಪಘಾತದ ಸಂದರ್ಭದಲ್ಲಿ ಪಾರುಗಾಣಿಕಾ ಆಪ್ ಅನ್ನು ಮೇಲ್ವಿಚಾರಣೆ ಮಾಡಲು ಟ್ರ್ಯಾಕ್ ಮೇಲೆ ಬೆಳಕನ್ನು ಬಿಡಬೇಕಾಗುತ್ತದೆ. ಓಟದ ಕಾರುಗಳು ಲೆ ಮನ್ಸ್ ಶೈಲಿಯಲ್ಲಿ ತಮ್ಮದೇ ಆದ ಹೆಡ್‌ಲ್ಯಾಂಪ್‌ಗಳನ್ನು ಹೊಂದಿರಬೇಕು.

ಭಾರತಕ್ಕೂ ಕಾಲಿಟ್ಟ ಲೆ ಮನ್ಸ್ ಶೈಲಿಯ ರೇಸ್..!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮದ್ರಾಸ್ ಮೋಟಾರ್ ರೇಸ್ ಟ್ರಾಕ್‍‍ನಲ್ಲಿ ಹಲವಾರು ಭಾರತೀಯ ಮೋಟಾರ್ ಸ್ಪೋರ್ಟ್ ರೇಸುಗಳನ್ನು ಆಯೋಜಿಸಲಾಗಿದೆ. ಇತ್ತೀಚಿಗೆ ಈ ಟ್ರಾಕ್‍‍ನಲ್ಲಿ ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್‍‍ಶಿಪ್ ಆಯೋಜಿಸಲಾಗಿತ್ತು.

ಭಾರತಕ್ಕೂ ಕಾಲಿಟ್ಟ ಲೆ ಮನ್ಸ್ ಶೈಲಿಯ ರೇಸ್..!

ಈ ಟ್ರಾಕಿನಲ್ಲಿ ಸೂಪರ್ ಮೋಟೊ ಹಾಗೂ ರ್‍ಯಾಲಿ ಕ್ರಾಸ್‍‍ಗಳನ್ನು ಆಯೋಜಿಸಲಾಗುವುದೆಂಬ ವದಂತಿಗಳಿವೆ. ರಾತ್ರಿ ರೇಸುಗಳನ್ನು ಆಯೋಜಿಸಿದ ನಂತರ ಎಂಎಂ‍ಆರ್‍‍ಟಿ ಪೂರ್ಣ ಪ್ರಮಾಣದ ಮೋಟಾರ್ ಸ್ಪೋರ್ಟ್ಸ್ ಪಾರ್ಕ್ ಆಗಲಿದೆ.

Most Read Articles

Kannada
English summary
Le Mans Style Night Races To Be held In India — MMRT To Add A New Dimension To Indian Motorsport - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more