ಬೈಕ್ ಸವಾರರೇ ಎಚ್ಚರ: ಹೆಲ್ಮೆಟ್ ಮೇಲೆ ಐ‍ಎಸ್‍ಐ ಮಾರ್ಕ್ ಇಲ್ಲದಿದ್ದರೇ ಬೀಳಲಿದೆ ಭಾರೀ ದಂಡ..!

ಈಗ ಎಲ್ಲೆಲ್ಲೂ ಭಾರೀ ಪ್ರಮಾಣದ ದಂಡವನ್ನು ವಿಧಿಸುತ್ತಿರುವುದರ ಬಗ್ಗೆಯೇ ಮಾತು. 2019ರ ಸೆಪ್ಟೆಂಬರ್ 1ರಿಂದ, ದಂಡ, ಲೈಸೆನ್ಸ್ ಹಾಗೂ ರಿಜಿಸ್ಟ್ರೇಷನ್‍ಗಳಿಗೆ ಸಂಬಂಧಪಟ್ಟ 63 ನಿಬಂಧನೆಗಳನ್ನು ಒಳಗೊಂಡಿರುವ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಅನ್ನು ಜಾರಿಗೊಳಿಸಲಾಗಿದೆ.

ಬೈಕ್ ಸವಾರರೇ ಎಚ್ಚರ: ಹೆಲ್ಮೆಟ್ ಮೇಲೆ ಐ‍ಎಸ್‍ಐ ಮಾರ್ಕ್ ಇಲ್ಲದಿದ್ದರೇ ಬೀಳಲಿದೆ ಭಾರೀ ದಂಡ..!

ಹೊಸ ಕಾಯ್ದೆಯು ಜನರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಿದೆ. ಇದರ ಜೊತೆಗೆ ನಮ್ಮ ದೇಶದ ಜನರಲ್ಲಿ ಸಾರಿಗೆ ನಿಯಮಗಳ ಬಗ್ಗೆ ಅರಿವು ಮೂಡಿಸಿ, ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಅಪಘಾತಗಳನ್ನು ತಡೆಯುವಂತೆ ಮಾಡುವ ಉದ್ದೇಶವನ್ನು ಹೊಂದಿದೆ.

ಬೈಕ್ ಸವಾರರೇ ಎಚ್ಚರ: ಹೆಲ್ಮೆಟ್ ಮೇಲೆ ಐ‍ಎಸ್‍ಐ ಮಾರ್ಕ್ ಇಲ್ಲದಿದ್ದರೇ ಬೀಳಲಿದೆ ಭಾರೀ ದಂಡ..!

ಈ ಹೊಸ ಕಾಯ್ದೆಯನ್ವಯ ನಮ್ಮ ಬೆಂಗಳೂರು ಪೊಲೀಸರು ಸಹ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸುತ್ತಿದ್ದಾರೆ. ಇದುವರೆಗೂ ವಿವಿಧ ರೀತಿಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರಿಗೆ ಒಟ್ಟಾರೆಯಾಗಿ ಸುಮಾರು ರೂ.31ಲಕ್ಷ ದಂಡ ವಿಧಿಸಲಾಗಿದೆ.

ಬೈಕ್ ಸವಾರರೇ ಎಚ್ಚರ: ಹೆಲ್ಮೆಟ್ ಮೇಲೆ ಐ‍ಎಸ್‍ಐ ಮಾರ್ಕ್ ಇಲ್ಲದಿದ್ದರೇ ಬೀಳಲಿದೆ ಭಾರೀ ದಂಡ..!

ಕುಡಿದು ಟ್ರಕ್ ಚಾಲನೆ ಮಾಡುತ್ತಿದ್ದ ಹರಿಯಾಣ ಮೂಲದ 45 ವರ್ಷದ ವ್ಯಕ್ತಿಯೊಬ್ಬನಿಗೆ ಬೆಂಗಳೂರು ಪೊಲೀಸರು ದಂಡ ವಿಧಿಸಿದ್ದಾರೆ. ಭರೂ ಲಾಲ್ ಎಂಬ ಟ್ರಕ್ ಚಾಲಕನನ್ನು ಹೆಬ್ಬಾಳದ ಬಳಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಆತ ಕುಡಿದು ಟ್ರಕ್ ಚಾಲನೆ ಮಾಡುತ್ತಿರುವುದು ಕಂಡು ಬಂದಿದೆ.

ಬೈಕ್ ಸವಾರರೇ ಎಚ್ಚರ: ಹೆಲ್ಮೆಟ್ ಮೇಲೆ ಐ‍ಎಸ್‍ಐ ಮಾರ್ಕ್ ಇಲ್ಲದಿದ್ದರೇ ಬೀಳಲಿದೆ ಭಾರೀ ದಂಡ..!

ಆತನನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಟ್ರಾಫಿಕ್ ಮುಂದೆ ಹಾಜರುಪಡಿಸಲಾಗಿದ್ದು, ಆತನಿಗೆ ರೂ.10,000 ದಂಡ ವಿಧಿಸಲಾಗಿದೆ. ಇದಕ್ಕೂ ಮೊದಲು ಕುಡಿದು ಬೈಕ್ ಚಲಾಯಿಸಿದ್ದ ಯುವಕನಿಗೆ ಕುಮಾರಸ್ವಾಮಿ ಲೇ‍ಔ‍‍ಟ್ ಪೊಲೀಸರು ರೂ.17,000 ದಂಡ ವಿಧಿಸಿದ್ದರು.

ಬೈಕ್ ಸವಾರರೇ ಎಚ್ಚರ: ಹೆಲ್ಮೆಟ್ ಮೇಲೆ ಐ‍ಎಸ್‍ಐ ಮಾರ್ಕ್ ಇಲ್ಲದಿದ್ದರೇ ಬೀಳಲಿದೆ ಭಾರೀ ದಂಡ..!

ಕುಡಿದು ವಾಹನ ಚಲಾಯಿಸಿದಕ್ಕೆ ರೂ.10,000, ಲೈಸೆನ್ಸ್ ಇಲ್ಲದೇ ವಾಹನ್ ಚಲಾಯಿಸಿದಕ್ಕಾಗಿ ರೂ.5,000, ಆತ ಹಾಗೂ ಹಿಂಬದಿ ಸವಾರ ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸಿದ ಕಾರಣಕ್ಕೆ ರೂ.2,000 ದಂಡ ವಿಧಿಸಲಾಗಿತ್ತು. ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಾಲನೆ ಮಾಡುವ ಸವಾರರಿಗೆ ರೂ.1,000ಗಳ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತಿದೆ.

ಬೈಕ್ ಸವಾರರೇ ಎಚ್ಚರ: ಹೆಲ್ಮೆಟ್ ಮೇಲೆ ಐ‍ಎಸ್‍ಐ ಮಾರ್ಕ್ ಇಲ್ಲದಿದ್ದರೇ ಬೀಳಲಿದೆ ಭಾರೀ ದಂಡ..!

ಹೊಸ ವಿಷಯವೆಂದರೆ, ಐ‍ಎಸ್‍ಐ ಮಾರ್ಕ್ ಇಲ್ಲದ ಹೆಲ್ಮೆಟ್‍‍ಗಳನ್ನು ಧರಿಸಿ ವಾಹನ ಚಲಾಯಿಸಿದರೂ ದಂಡ ಬೀಳಲಿದೆ. ದಂಡವನ್ನು ಭಾರೀ ಪ್ರಮಾಣದಲ್ಲಿ ವಿಧಿಸಲಾಗುವುದು. ಆದರೆ ಆರಂಭಿಕ ಹಂತವಾಗಿ ನಮ್ಮ ಪೊಲೀಸರ ವಿರುದ್ಧ ಈ ಕಾರ್ಯಾಚರಣೆಯನ್ನು ಕೈಗೊಳ್ಳುವುದಾಗಿ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಬಿ.ಆರ್ ರವಿಕಾಂತಗೌಡರವರು ತಿಳಿಸಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬೈಕ್ ಸವಾರರೇ ಎಚ್ಚರ: ಹೆಲ್ಮೆಟ್ ಮೇಲೆ ಐ‍ಎಸ್‍ಐ ಮಾರ್ಕ್ ಇಲ್ಲದಿದ್ದರೇ ಬೀಳಲಿದೆ ಭಾರೀ ದಂಡ..!

ಐಎಸ್ಐ ಅಲ್ಲದ ಹೆಲ್ಮೆಟ್‍‍ಗಳನ್ನು ಬಳಸುವ ಜನರಿಗೆ ದಂಡವನ್ನು ವಿಧಿಸುವ ಮೊದಲು, ದ್ವಿಚಕ್ರ ವಾಹನಗಳನ್ನು ಓಡಿಸುವ ಪೊಲೀಸರು ಐ‍ಎಸ್‍ಐ ಮಾರ್ಕ್ ಹೊಂದಿರುವ ಹೆಲ್ಮೆಟ್‍‍ಗಳನ್ನು ಮಾತ್ರ ಧರಿಸಬೇಕೆಂದು ಅವರು ಹೇಳಿದ್ದಾರೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಬೈಕ್ ಸವಾರರೇ ಎಚ್ಚರ: ಹೆಲ್ಮೆಟ್ ಮೇಲೆ ಐ‍ಎಸ್‍ಐ ಮಾರ್ಕ್ ಇಲ್ಲದಿದ್ದರೇ ಬೀಳಲಿದೆ ಭಾರೀ ದಂಡ..!

ಐಎಸ್ಐ ಮಾರ್ಕ್ ಹೊಂದಿರುವ ಹೆಲ್ಮೆಟ್‌ಗಳನ್ನು ಏಕೆ ಕಡ್ಡಾಯಗೊಳಿಸಲಾಗುತ್ತಿದೆ ಎಂದು ಈಗ ಅನೇಕರು ಪ್ರಶ್ನಿಸಬಹುದಾದರೂ, ಹೆಲ್ಮೆಟ್ ಧರಿಸುವವರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

MOST READ: ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ಬೈಕ್ ಸವಾರರೇ ಎಚ್ಚರ: ಹೆಲ್ಮೆಟ್ ಮೇಲೆ ಐ‍ಎಸ್‍ಐ ಮಾರ್ಕ್ ಇಲ್ಲದಿದ್ದರೇ ಬೀಳಲಿದೆ ಭಾರೀ ದಂಡ..!

ಬಿಐಎಸ್ ಸ್ಟ್ಯಾಂಡರ್ಡ್ ಐಎಸ್ 451, ಹೆಲ್ಮೆಟ್ ತಯಾರಿಸಲು ಹಲವಾರು ಮಾನದಂಡಗಳನ್ನು ನಿಗದಿಪಡಿಸುತ್ತದೆ. ಈ ಮಾನದಂಡವು ಯುರೋಪಿಯನ್ ಸ್ಟ್ಯಾಂಡರ್ಡ್ ಇಸಿಇ 22.05ಗೆ ಸಮನಾಗಿದೆ. ಈ ಮಾರ್ಕ್ ಅನ್ನು ಎಲ್ಲಾ ಮಾನದಂಡಗಳಲ್ಲಿಯೇ ಉತ್ತಮವಾದುದೆಂದು ಪರಿಗಣಿಸಲಾಗುತ್ತದೆ.

ಬೈಕ್ ಸವಾರರೇ ಎಚ್ಚರ: ಹೆಲ್ಮೆಟ್ ಮೇಲೆ ಐ‍ಎಸ್‍ಐ ಮಾರ್ಕ್ ಇಲ್ಲದಿದ್ದರೇ ಬೀಳಲಿದೆ ಭಾರೀ ದಂಡ..!

ಸ್ಟಡ್, ಸ್ಟೀಲ್‍‍ಬರ್ಡ್, ವೆಗಾ ಸೇರಿದಂತೆ ಹಲವು ಕಂಪನಿಗಳು, ಐಎಸ್ಐ ಮಾರ್ಕಿನ ಹೆಲ್ಮೆಟ್‌ ಮಾರಾಟ ಮಾಡುತ್ತವೆ. ಈ ಕಂಪನಿಗಳು ಮಾರಾಟ ಮಾಡುವ ಹೆಲ್ಮೆಟ್‍‍ಗಳು ರಸ್ತೆ ಬದಿ ಮಾರಾಟವಾಗುವ ಹೆಲ್ಮೆಟ್‌ಗಳಿಗಿಂತ ವಿಭಿನ್ನವಾಗಿರುತ್ತವೆ. ಹಾಗೂ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತವೆ.

ಬೈಕ್ ಸವಾರರೇ ಎಚ್ಚರ: ಹೆಲ್ಮೆಟ್ ಮೇಲೆ ಐ‍ಎಸ್‍ಐ ಮಾರ್ಕ್ ಇಲ್ಲದಿದ್ದರೇ ಬೀಳಲಿದೆ ಭಾರೀ ದಂಡ..!

ಆದರೂ ಸಹ ಬಹುತೇಕ ದ್ವಿಚಕ್ರ ವಾಹನ ಸವಾರರು ಕಡಿಮೆ ಬೆಲೆಗೆ ರಸ್ತೆಬದಿಯಲ್ಲಿ ಮಾರಾಟವಾಗುವ ರಸ್ತೆಬದಿಯ ಹೆಲ್ಮೆಟ್‍‍ಗಳನ್ನು ಖರೀದಿಸುತ್ತಾರೆ. ಇದರಿಂದಾಗಿ ತಮ್ಮ ಜೀವನವನ್ನು ಅಪಾಯಕ್ಕೆ ಸಿಲುಕಿಸಿಕೊಳ್ಳುತ್ತಾರೆ. ರಸ್ತೆ ಬದಿ ಮಾರಾಟವಾಗುವ ಹೆಲ್ಮೆಟ್‍‍ಗಳು ಉತ್ತಮ ಗುಣಮಟ್ಟವನ್ನು ಹೊಂದಿರುವುದಿಲ್ಲ.

ಬೈಕ್ ಸವಾರರೇ ಎಚ್ಚರ: ಹೆಲ್ಮೆಟ್ ಮೇಲೆ ಐ‍ಎಸ್‍ಐ ಮಾರ್ಕ್ ಇಲ್ಲದಿದ್ದರೇ ಬೀಳಲಿದೆ ಭಾರೀ ದಂಡ..!

ಆದ ಕಾರಣ ರಸ್ತೆ ಬದಿ ಮಾರಾಟವಾಗುವ ಕಡಿಮೆ ಬೆಲೆಯ ಹೆಲ್ಮೆಟ್‍‍ಗಳನ್ನು ಖರೀದಿಸುವ ಬದಲು ಬೆಲೆ ಹೆಚ್ಚಾದರೂ ಸರಿ ಐ‍ಎಸ್‍ಐ ಮಾರ್ಕ್ ಹೊಂದಿರುವ ಗುಣಮಟ್ಟದ ಹೆಲ್ಮೆಟ್‍‍ಗಳನ್ನು ಧರಿಸುವುದು ಒಳ್ಳೆಯದು.

Most Read Articles

Kannada
English summary
Only ISI helmets are legal others will be fined – Read in kannada
Story first published: Saturday, September 7, 2019, 13:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X