ವಿಮಾನಕ್ಕೂ ಬಂತು ನೋಡಿ 'ಸನ್ ರೂಫ್'; ನಿಮ್ಮ ಪ್ರಯಾಣ ಸ್ಮರಣೀಯವಾಗಿಸಿ!

Written By:

ಹಾಗೊಂದು ವೇಳೆ ವಿಮಾನದಲ್ಲಿ ಹಾರಾಡುವ ವೇಳೆ ವಿಂಡೋ ಸೀಟು ಸಿಕ್ಕದೇ ಹೋದ್ದಲ್ಲಿ ಪ್ರಯಾಣದ ಅದ್ಭುತ ಅನುಭವವನ್ನು ಸವಿಯುವುದರಿಂದ ವಂಚಿತರಾಗುವಿರಿ. ಇವೆಲ್ಲದಕ್ಕೂ ಮಿಗಿಲಾಗಿ ಪ್ರಯಾಣದ ಉದ್ದಕ್ಕೂ ದಣಿವು ನಿಮ್ಮನ್ನು ಮತ್ತಷ್ಟು ಕೆರಳಿಸಲಿದೆ. ಗಂಟೆಗೆ 1000 ಕೀ.ಮೀ. ವೇಗದಲ್ಲಿ ಸಂಚರಿಸುವ ಹೊರತಾಗಿಯೂ ಭೂಮಿ ಮತ್ತು ಆಕಾಶದ ನಡುವೆ ಓಡಾಡುವ ಮೇಘಗಳ ಅತ್ಯಾದ್ಭುತ ದರ್ಶನದಿಂದ ವಂಚಿರಾಗುವಿರಿ.

ಇದಕ್ಕೊಂದು ಶಾಶ್ವತ ಪರಿಹಾರ ಬೇಡವೇ? ನಿಮ್ಮೆಲ್ಲ ಸಮಸ್ಯೆಗಳನ್ನು ಆಲಿಸಿಕೊಂಡಿರುವ ಬ್ರೆಜಿಲ್ ವ್ಯೋಮಯಾನ ಸಂಸ್ಥೆಯೊಂದು ವಿನೂತನ ಪರಿಕಲ್ಪನೆಯೊಂದಿಗೆ ಮುಂದೆ ಬಂದಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಚಿತ್ರಪುಟದತ್ತ ಮುಂದುವರಿಯಿರಿ.

ವಿಮಾನಕ್ಕೂ ಬಂತು ನೋಡಿ 'ಸನ್ ರೂಫ್'; ನಿಮ್ಮ ಪ್ರಯಾಣ ಸ್ಮರಣೀಯವಾಗಿಸಿ!

ಬ್ರೆಜಿಲ್ ವಿಮಾನಯಾನ ಸಂಸ್ಥೆಯಾಗಿರುವ ಎಂಬ್ರೇಯರ್ ಅತಿ ನೂತನ 'ಏರ್ ಶಿಪ್ ಕ್ಯೂಟೊ' (Airship Kyoto) ಎಂಬ ಕಾನ್ಸೆಪ್ಟ್ ವಿನ್ಯಾಸವನ್ನು ಅನಾವರಣಗೊಳಿಸಿದೆ.

ವಿಮಾನಕ್ಕೂ ಬಂತು ನೋಡಿ 'ಸನ್ ರೂಫ್'; ನಿಮ್ಮ ಪ್ರಯಾಣ ಸ್ಮರಣೀಯವಾಗಿಸಿ!

ಕಳೆದ ವರ್ಷ ಮೊದಲ ಬಾರಿಗೆ ಅನಾವರಣಗೊಳಿಸಿರುವ ಈ ಕಾನ್ಸೆಪ್ಟ್ ವಿಮಾನದ ಮೇಲ್ಗಡೆಯಾಗಿ ಸನ್ ರೂಫ್ ಲಗತ್ತಿಸಲಾಗುವುದು. ಇದು ನಿಮ್ಮ ಪಯಣವನ್ನು ಉಲ್ಲಾಸದಾಯಕವಾಗಿಸಲಿದೆ.

ವಿಮಾನಕ್ಕೂ ಬಂತು ನೋಡಿ 'ಸನ್ ರೂಫ್'; ನಿಮ್ಮ ಪ್ರಯಾಣ ಸ್ಮರಣೀಯವಾಗಿಸಿ!

ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಖಾಸಗಿ ವಿಮಾನಗಳಲ್ಲಿ ಸನ್ ರೂಫ್ ಲಗತ್ತಿಸಿ ಕೊಡಲಾಗುತ್ತಿದೆ. ತನ್ಮೂಲಕ ನೈಸರ್ಗಿಕ ಸೌಂದರ್ಯವನ್ನು ಸವಿಯಬಹುದಾಗಿದೆ ಎಂದು ಸಂಸ್ಥೆಯು ಅಭಿಪ್ರಾಯಪಡುತ್ತಿದೆ.

ವಿಮಾನಕ್ಕೂ ಬಂತು ನೋಡಿ 'ಸನ್ ರೂಫ್'; ನಿಮ್ಮ ಪ್ರಯಾಣ ಸ್ಮರಣೀಯವಾಗಿಸಿ!

ನೀವೇ ಯೋಚಿಸಿ ನೋಡಿ, ಬೆಳಂದಿಗಳ ರಾತ್ರಿಯಲ್ಲಿ ವಿಂಡೋಗಳಿಂದ ಆವರಿಸಿದ ಸನ್ ರೂಫ್ ವಿಮಾನಗಳಲ್ಲಿ ಸಂಚರಿಸಿದ್ದಲ್ಲಿ ಹೇಗಿರಬಹುದು? ಇಲ್ಲಿ ದೊರಕುವ ಮನರಂಜನೆಗೆ ಸಾಟಿಯೇ ಇರಲಾರದು.

ವಿಮಾನಕ್ಕೂ ಬಂತು ನೋಡಿ 'ಸನ್ ರೂಫ್'; ನಿಮ್ಮ ಪ್ರಯಾಣ ಸ್ಮರಣೀಯವಾಗಿಸಿ!

ಪ್ರಯಾಣಿಕರ ಕನಸನ್ನು ನನಸಾಗಿಸುವುದು ನಮ್ಮ ಧ್ಯೇಯವಾಗಿದೆ. ಹಾಗಿದ್ದರೂ ಕೆಲವೊಂದು ಬಾರಿ ವ್ಯೋಮಯಾನ ಮಾನ್ಯತೆಯ ತೊಂದರೆಯಿಂದಾಗಿ ಗ್ರಾಹಕರನ್ನು ಇದನ್ನು ಲಗತ್ತಿಸಲು ಹಿಂಜರಿಯುತ್ತಾರೆ ಎಂದು ಸಂಸ್ಥೆಯು ತಿಳಿಸಿದೆ.

ವಿಮಾನಕ್ಕೂ ಬಂತು ನೋಡಿ 'ಸನ್ ರೂಫ್'; ನಿಮ್ಮ ಪ್ರಯಾಣ ಸ್ಮರಣೀಯವಾಗಿಸಿ!

ಸನ್ ರೂಫ್ ವಿಂಡೋಗಳನ್ನು ಲಗತ್ತಿಸುವುದು ತುಂಬಾನೇ ಸರಳವಾಗಿದೆ. ಹಾಗಿದ್ದರೂ ಇದರಿಂದ ಹೆಚ್ಚು ಇಂಧನ ಬಳಕೆಯಾಗಲಿದೆ ಎಂಬುದನ್ನು ಸಂಸ್ಥೆಯು ಒಪ್ಪಿಕೊಂಡಿದೆ.

ವಿಮಾನಕ್ಕೂ ಬಂತು ನೋಡಿ 'ಸನ್ ರೂಫ್'; ನಿಮ್ಮ ಪ್ರಯಾಣ ಸ್ಮರಣೀಯವಾಗಿಸಿ!

ಅತಿ ಶ್ರೀಮಂತ ಗ್ರಾಹಕರಿಗೆ ಇಂದೊಂದು ಸಮಸ್ಯೆಯಾಗಲಾರದು. ಇವೆಲ್ಲದಕ್ಕೂ ಮಿಗಿಲಾಗಿ ಗಗನ ಯಾತ್ರೆಯಲ್ಲಿ ದೊರಕುವ ಅದ್ಭುತ ಅನುಭವವನ್ನು ಮಾತುಗಳಿಂದ ವರ್ಣಿಸಲು ಸಾಧ್ಯವೇ ?

ವಿಮಾನಕ್ಕೂ ಬಂತು ನೋಡಿ 'ಸನ್ ರೂಫ್'; ನಿಮ್ಮ ಪ್ರಯಾಣ ಸ್ಮರಣೀಯವಾಗಿಸಿ!

ಸನ್ ರೂಫ್ ಗಳನ್ನು ಲಗತ್ತಿಸುವುದರಿಂದ ವಿಮಾನದ ರಚನೆಗೆ ಯಾವುದೇ ಧಕ್ಕೆಯುಂಟಾಗುವುದಿಲ್ಲ ಎಂಬುದನ್ನು ಎಂಬ್ರೇಯರ್ ಖಾತ್ರಿಪಡಿಸಿದೆ.

ವಿಮಾನಕ್ಕೂ ಬಂತು ನೋಡಿ 'ಸನ್ ರೂಫ್'; ನಿಮ್ಮ ಪ್ರಯಾಣ ಸ್ಮರಣೀಯವಾಗಿಸಿ!

ಅಂದ ಹಾಗೆ ಕಳೆದ ವರ್ಷ ಸೂಪರ್ ಯಾಚ್ಜ್ ವಿನ್ಯಾಸಗಾರ ಪ್ಯಾಟ್ರಿಕ್ ನೋವ್ಲ್ಸ್ ಜೊತೆಗಾರಿಕೆಯಲ್ಲಿ 800 ಚದರ ಅಡಿ ಲಿವಿಂಗ್ ಜಾಗವಿರುವ 1000 ಇ ಖಾಸಗಿ ಜೆಟ್ ವಿಮಾನವನ್ನು ಎಂಬ್ರೇಯರ್ ಅನಾವರಣಗೊಳಿಸಿತ್ತು. ಅಲ್ಲದೆ ಗ್ರಾಹಕರಿಗೆ ತಮ್ಮ ಬೇಡಿಕೆಗೆ ತಕ್ಕಂತೆ ವಿಶೇಷವಾಗಿ ಮಾರ್ಪಾಡುಗೊಳಿಸುವ ಅವಕಾಶವನ್ನು ಒದಗಿಸಲಾಗಿತ್ತು.

Read more on ವಿಮಾನ plane
English summary
Now you can put a sunroof in your plane

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark