ಕರೋನಾ ಎಫೆಕ್ಟ್- ಏಪ್ರಿಲ್ 20ರ ನಂತರ ಜಾರಿಯಾಗಲಿದೆ ಸಮ-ಬೆಸ ನಿಯಮ
ದೇಶದ ಹಲವು ಭಾಗಗಳಲ್ಲಿ ಏಪ್ರಿಲ್ 20ರಿಂದ ಲಾಕ್‌ಡೌನ್ ಅನ್ನು ಸ್ವಲ್ಪಮಟ್ಟಿಗೆ ಸಡಿಲಗೊಳಿಸುವ ಸಾಧ್ಯತೆಗಳಿವೆ. ಕೇರಳದಲ್ಲಿಯೂ ಅನೇಕ ಜಿಲ್ಲೆಗಳಿಗೆ ವಿನಾಯಿತಿ ನೀಡುವ ನಿರೀಕ್ಷೆಗಳಿವೆ. ಈ ರೀತಿ ವಿನಾಯಿತಿ ನೀಡಲು ಹಲವು ಷರತ್ತುಗಳನ್ನು ವಿಧಿಸಲಾಗುತ್ತದೆ.

ಕೇರಳದಲ್ಲಿ ಏಪ್ರಿಲ್ 20ರ ನಂತರ ಕೆಲವು ಜಿಲ್ಲೆಗಳಲ್ಲಿ ಬೆಸ-ಸಮ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಇತ್ತೀಚೆಗೆ ಕೇರಳದ ಮುಖ್ಯಮಂತ್ರಿಗಳು ತಿಳಿಸಿದ್ದರು. ಬೆಸ-ಸಮ ವ್ಯವಸ್ಥೆಯನ್ನು ಜಾರಿಗೊಳಿಸುವ ಮುನ್ನ ಷರತ್ತುಗಳನ್ನು ವಿಧಿಸಿದರೆ ದುರ್ಬಳಕೆಯಾಗುವುದು ತಪ್ಪುತ್ತದೆ.

ಬೆಸ-ಸಮ ವ್ಯವಸ್ಥೆಯನ್ನು ಜಾರಿಗೊಳಿಸಿದಾಗ ಮಹಿಳೆಯರಿಗೆ ವಿನಾಯಿತಿ ನೀಡಲಾಗುವುದು. ಕರೋನಾ ಸಾಂಕ್ರಾಮಿಕ ಪ್ರಕರಣಗಳು ಇಲ್ಲದಿರುವ ಕಡೆ ಹಾಗೂ ಸೋಂಕಿತ ಪ್ರಕರಣಗಳ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಬೆಸ-ಸಮ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಬೆಸ-ಸಮ ವ್ಯವಸ್ಥೆಯಲ್ಲಿ ಬೆಸ ಸಂಖ್ಯೆಯ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಹನಗಳನ್ನು ಬೆಸ ದಿನಗಳಲ್ಲಿ ಹಾಗೂ ಸಮ ಸಂಖ್ಯೆಯ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಹನಗಳಿಗೆ ಸಮ ದಿನಗಳಂದು ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಲಾಗುತ್ತದೆ.

ಕರೋನಾ ಪ್ರಕರಣಗಳ ಸಂಖ್ಯೆಯ ಆಧಾರದ ಮೇಲೆ ಜಿಲ್ಲೆಗಳನ್ನು ನಾಲ್ಕು ಜೋನ್‌ಗಳಾಗಿ ವಿಂಗಡಿಸಬೇಕಾಗಿರುವುದರಿಂದ ಬೆಸ-ಸಮ ವ್ಯವಸ್ಥೆಯನ್ನು ಯಾವ ಜಿಲ್ಲೆಗಳಲ್ಲಿ ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರವು ನಿರ್ಧರಿಸಿಲ್ಲ. ಇದಕ್ಕಾಗಿ ರಾಜ್ಯಗಳು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿವೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಏಪ್ರಿಲ್ 20ರವರೆಗೆ ಕರೋನಾ ಸೋಂಕಿನಿಂದ ಬಾಧಿತವಾಗಲಿರುವ ಜಿಲ್ಲೆಗಳು ಮೇ 3ರವರೆಗೆ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸ ಬೇಕಾಗುತ್ತದೆ. ಕರೋನಾ ಇಲ್ಲದ ಜಿಲ್ಲೆಗಳಿಗೆ ರಿಯಾಯಿತಿ ನೀಡಲಾಗುವುದು.

ಕರೋನಾ ಇಲ್ಲದ ಜಿಲ್ಲೆಗಳಿಗೆ ಕೆಲವು ಷರತ್ತುಗಳೊಂದಿಗೆ ಏಪ್ರಿಲ್ 20ರ ನಂತರ ಕೆಲವು ಅಗತ್ಯ ಕಾರ್ಯಗಳಿಗಾಗಿ ಲಾಕ್‌ಡೌನ್ ಸಡಿಸಲಾಗುವುದು ಎಂದು ಕೇಂದ್ರ ಸರ್ಕಾರವು ಇತ್ತೀಚೆಗೆ ತಿಳಿಸಿತ್ತು.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕೆಲವು ದಿನಗಳ ಹಿಂದೆ ತಮಿಳುನಾಡಿನಲ್ಲಿ ಇದೇ ರೀತಿಯ ವ್ಯವಸ್ಥೆಯನ್ನು ಘೋಷಿಸಲಾಗಿತ್ತು. ಬೆಸ-ಸಮ ವ್ಯವಸ್ಥೆಯನ್ನು ಹೋಲುವ ಕಲರ್ ಕೋಡಿಂಗ್ ಯೋಜನೆಯನ್ನು ತಮಿಳುನಾಡಿನಲ್ಲಿ ಜಾರಿಗೊಳಿಸಲಾಗಿದೆ.

ಈ ಯೋಜನೆಯಲ್ಲಿ ವಾಹನಗಳಿಗೆ ಬಣ್ಣವನ್ನು ನೀಡಲಾಗುವುದು. ಸಂಬಂಧಪಟ್ಟ ದಿನದಂದು ಆ ಬಣ್ಣದ ವಾಹನವನ್ನು ಹೊರತೆಗೆಯಬೇಕು. ಈ ನಿಯಮವನ್ನು ಪಾಲಿಸದಿದ್ದರೆ, ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತದೆ.


Click it and Unblock the Notifications








