ಗುಡಿಕೈಗಾರಿಕೆ ನೆನಪಿಸುವ ಜಗತ್ತಿನ ಮೊದಲ ನೇಯ್ದ ಕಾರು

ಸಾಮಾನ್ಯವಾಗಿ ಕಾರುಗಳ ಬಾಡಿಗಳಿಗೆ ಮೆಟಲ್‌ ಫಿನಿಶಿಂಗ್ ವರ್ಕ್ ನೀಡಲಾಗುತ್ತದೆ. ಆ ಬಳಿಕ ಅಂದ ಚಂದವಾದ ವರ್ಣೀಯ ಬಣ್ಣಗಳನ್ನು ಬಳಿಯಲಾಗುತ್ತದೆ. ಆದರೆ ನಾವಿಂದು ವಿಶ್ವದ ಮೊದಲ ನೇಯ್ದ ಕಾರನ್ನು ಪರಿಚಯಿಸಲಿದ್ದೇವೆ. ಇಲ್ಲಿ ಕಾರಿನ ಹೊರಕವಚದ ಸಂಪೂರ್ಣ ಕೆಲಸವನ್ನು ಕೈಯಿಂದಲೇ ಮಾಡಲಾಗಿದೆ.

ಒಜೊ ಒಬಾನಿಯಿ ( Ojo Obaniyi) ಎಂಬವರು ಕೈಯಿಂದಲೇ ನೇಯ್ದ ಕಾರನ್ನು ತಯಾರಿಸಿದ್ದಾರೆ. ಇದು ನಮಗೆ ಸಾಂಪ್ರಾದಾಯಿಕ ಗುಡಿಕೈಗಾರಿಕೆಗಳಲ್ಲಿ ಒಂದಾದ ಬೆತ್ತದ ಬುಟ್ಟಿ ತಯಾರಿಕೆಯನ್ನು ನೆನಪಿಸುತ್ತದೆ. ಹಾಗಿದ್ದರೆ ಬನ್ನಿ ತನ್ನದೇ ಆದ ವಿಶಿಷ್ಟ ಶೈಲಿ ಹೊಂದಿರುವ ಈ ವಿಶೇಷ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯೋಣ...

ಗುಡಿಕೈಗಾರಿಕೆ ನೆನಪಿಸುವ ಜಗತ್ತಿನ ಮೊದಲ ನೇಯ್ದ ಕಾರು

ನೈಜಿರಿಯಾದ 40ರ ಹರೆಯದ ಓಜೊ ಒಬಾನಿಯಿ ಎಂಬವರು ಸಾಂಪ್ರಾದಾಯಿಕ ಗುಡಿಕೈಗಾರಿಕೆಯಾದ ಬುಟ್ಟಿ ತಯಾರಿಕೆಯಿಂದ ಸ್ಪೂರ್ತಿ ಪಡೆದು ಕಾರನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಿದ್ದಾರೆ.

ಗುಡಿಕೈಗಾರಿಕೆ ನೆನಪಿಸುವ ಜಗತ್ತಿನ ಮೊದಲ ನೇಯ್ದ ಕಾರು

ಪ್ರಸ್ತುತ ತಂತ್ರಗಾರಿಕೆಯನ್ನು ಫೋಕ್ಸ್‌ವ್ಯಾಗನ್ ಪಿಕಪ್ ಟ್ರಕ್‌ಗೆ ಆಳವಡಿಸಲಾಗಿದ್ದು, ಹೆಚ್ಚಿನ ಅಂದತೆಗೆ ಕಾರಣವಾಗಿದೆ.

ಗುಡಿಕೈಗಾರಿಕೆ ನೆನಪಿಸುವ ಜಗತ್ತಿನ ಮೊದಲ ನೇಯ್ದ ಕಾರು

ಸ್ಥಳೀಯವಾಗಿ ಲಭಿಸುವ ತಾಳೆ ಮರದ ವಿವಿಧ ತರಹದ ಸೋಗೆಗಳನ್ನು ಕೈಯಿಂದ ನೇಯ್ದು ಕಾರಿಗೆ ಈ ವಿಶೇಷ ರೂಪ ಕೊಡಲಾಗಿದೆ.

ಗುಡಿಕೈಗಾರಿಕೆ ನೆನಪಿಸುವ ಜಗತ್ತಿನ ಮೊದಲ ನೇಯ್ದ ಕಾರು

ಅಂದ ಹಾಗೆ ಬುಟ್ಟಿಯಿಂದ ಹಿಡಿದು ವಿವಿಧ ತರಹದ ಗೃಹ ಬಳಕೆಯ ಮರದ ಪೀಠೋಪಕರಣಗಳನ್ನು ತಯಾರಿಸುವುದರಲ್ಲಿ ಓಜೊ ನಿಸ್ಸೀಮರಾಗಿದ್ದಾರೆ.

ಗುಡಿಕೈಗಾರಿಕೆ ನೆನಪಿಸುವ ಜಗತ್ತಿನ ಮೊದಲ ನೇಯ್ದ ಕಾರು

ನೀವು ಚಿತ್ರದಲ್ಲಿ ನೋಡುತ್ತಿರುವಂತೆಯೇ ಸೀಟ್, ವೀಲ್ ಕವರ್, ಸ್ಟೀರಿಂಗ್ ವೀಲ್ ಹಾಗೂ ಇತರ ಬಾಡಿ ವರ್ಕ್ಸ್ ಗಳನ್ನು ಕೈಯಿಂದಲೇ ತಯಾರಿಸಲಾಗಿದೆ.

ಗುಡಿಕೈಗಾರಿಕೆ ನೆನಪಿಸುವ ಜಗತ್ತಿನ ಮೊದಲ ನೇಯ್ದ ಕಾರು
ಗುಡಿಕೈಗಾರಿಕೆ ನೆನಪಿಸುವ ಜಗತ್ತಿನ ಮೊದಲ ನೇಯ್ದ ಕಾರು

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Most Read Articles

Kannada
English summary
A weaver by profession, Ojo Obaniyi decided to utilize his skills to create a unique piece of art. The piece of art not only amazes his town folks, but has now been seen by millions around the world, thanks to the internet. Check out the world's first hand woven car in the gallery below.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X