5.3 ಮಿಲಿಯನ್ ಕೀ.ಮೀ.; ಇದು ಸ್ಕಾನಿಯಾ ಟ್ರಕ್ ಸಾಧನೆ

By Nagaraja

ಸ್ಕಾನಿಯಾ ಟ್ರಕ್ ಐತಿಹಾಸಿಕ ಸಾಧನೆಯೊಂದನ್ನು ಬರೆದಿದ್ದು, 5.3 ಮಿಲಿಯನ್ ಕೀ.ಮೀ. ಕ್ರಮಿಸುವ ಮೂಲಕ ದಾಖಲೆ ಸ್ಥಾಪಿಸಿದೆ. ಆಸ್ಟ್ರೇಲಿಯಾದ ಮೂಲದ ಹಿರಿಯ ಟ್ರಕ್ ಚಾಲಕ ಪೀಯರ್ ರಾಯ್ಟರ್ (Peter Royter) ಎಂಬವರ 1989ನೇ ಇಸವಿಯಾ ಸ್ಕಾನಿಯಾ 113ಎಂ ಈ ದಾಖಲೆಗೆ ಪಾತ್ರವಾಗಿದೆ.

ತಮ್ಮ ಇಡೀ ಜೀವಮಾನವನ್ನು ಟ್ರಕ್ ಚಾಲನೆ ಮಾಡುವುದರಲ್ಲೇ ಕಳೆದಿರುವ ಸಿಡ್ನಿ ಮೂಲದ ಪೀಟರ್, ಈಗ ಸುರಕ್ಷಿತ ಚಾಲನೆಗಾಗಿ 'ರಾಷ್ಟ್ರೀಯ ರಸ್ತೆ ಸಾರಿಗೆ ಹಾಲ್ ಆಫ್ ಫೇಮ್' ಗೌರವಕ್ಕೂ ಭಾಜನರಾಗಿದ್ದಾರೆ.

5.3 ಮಿಲಿಯನ್ ಕೀ.ಮೀ.; ಇದು ಸ್ಕಾನಿಯಾ ಟ್ರಕ್ ಸಾಧನೆ

ಪೀಟರ್ ರಾಯ್ಟರ್ ತಮ್ಮ ಮೊದಲ ಟ್ರಕ್ ಅನ್ನು 1970ರ ದಶಕದಲ್ಲಿ ಖರೀದಿಸಿದ್ದರು. ಆಸ್ಟ್ರೇಲಿಯಾ ಮಾರುಕಟ್ಟೆಗೆ ಸ್ಕಾನಿಯಾ ಪ್ರವೇಶಿಸಿದಾಗ ಎಲ್‌ಬಿ80 ಮಾದರಿಯನ್ನು ಪೀಟರ್ ತಮ್ಮದಾಗಿಸಿಕೊಂಡಿದ್ದರು.

5.3 ಮಿಲಿಯನ್ ಕೀ.ಮೀ.; ಇದು ಸ್ಕಾನಿಯಾ ಟ್ರಕ್ ಸಾಧನೆ

ತದಾ ಬಳಿಕ ಸ್ಕಾನಿಯಾ ಟ್ರಕ್ ನೆಚ್ಚಿಕೊಂಡಿರುವ ಈ ಹಿರಿಯ ಚಾಲಕ, ಇದು ಅತ್ಯುತ್ತಮ ಟ್ರಕ್ ಎಂದು ಸ್ವೀಡನ್ ಮೂಲದ ಸ್ಕಾನಿಯಾ ಟ್ರಕ್ ಗಳ ಬಗೆಗಿನ ತಮ್ಮ ಪ್ರೀತಿಯನ್ನು ಬಯಲು ಮಾಡುತ್ತಾರೆ.

5.3 ಮಿಲಿಯನ್ ಕೀ.ಮೀ.; ಇದು ಸ್ಕಾನಿಯಾ ಟ್ರಕ್ ಸಾಧನೆ

23 ವರ್ಷಗಿಂತಲೂ ಹೆಚ್ಚು ಕಾಲ ಟ್ರಕ್ ಚಾಲನೆ ಮಾಡುವ ಮೂಲಕ ಹೆಸರು ಮಾಡಿರುವ 67ನೇ ಹರೆಯದ ಪೀಟರ್ ಈಗ ನಿವೃತ್ತಿ ಜೀವನವನ್ನು ತಮ್ಮ ಕುಟಂಬದ ಜೊತೆಗೆ ಸಾಗಿಸುತ್ತಿದ್ದಾರೆ.

5.3 ಮಿಲಿಯನ್ ಕೀ.ಮೀ.; ಇದು ಸ್ಕಾನಿಯಾ ಟ್ರಕ್ ಸಾಧನೆ

ಮೆಲ್ಪರ್ನ್, ಸಿಡ್ನಿ ಸೇರಿದಂತೆ ಆಸ್ಟ್ರೇಲಿಯಾದ್ಯಾಂತ ನಿರಂತರ ಚಾಲನೆಯಲ್ಲಿ ತಮ್ಮ ಸೇವೆ ಸಲ್ಲಿಸಿರುವ ಪೀಟರ್ ತಮ್ಮ ಟ್ರಕ್ ಗಳಲ್ಲಿ ಪ್ರಮುಖವಾಗಿಯೂ ತಾಳೆ ಮರಗಳ ಸಾಗಾಣಿಕೆ ಮಾಡುತ್ತಿದ್ದರು.

5.3 ಮಿಲಿಯನ್ ಕೀ.ಮೀ.; ಇದು ಸ್ಕಾನಿಯಾ ಟ್ರಕ್ ಸಾಧನೆ

ತಮ್ಮೇ 17ನೇ ವರ್ಷದಲ್ಲಿ ಚಾಲನೆ ಶುರು ಮಾಡಿಕೊಂಡಿದ್ದ ಪೀಟರ್ ಅವರು ನಾಲ್ಕು ವರ್ಷಗಳ ಹಿಂದೆ ರಾಷ್ಟ್ರೀಯ ರಸ್ತೆ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರವಾಗಿದ್ದರು. ಅಲ್ಲದೆ ಅವರ ಟ್ರಕ್ ಅನ್ನು ಆಲಿಸ್ ಸ್ಪ್ರಿಂಗ್ ಮ್ಯೂಸಿಯಂನಲ್ಲಿ ಸಾರ್ವಜನಿಕ ದರ್ಶನಕ್ಕೀಡಲಾಗಿದೆ.


Most Read Articles

Kannada
English summary
With 5.3 million kilometres on the clock Peter Royter and his impressive 1989-year model Scania 113M have both gracefully retired after a full life on the road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X