ಮೋದಿ ಕಮಾಲ್ - ಇನ್ಮೇಲೆ ಹಾಲು, ತರಕಾರಿ ತರ ಪೆಟ್ರೋಲ್ ಕೂಡ ನಿಮ್ ಮನೆ ಬಾಗಿಲಿಗೆ ಬರುತ್ತೆ !!

Written By:

ಪ್ರತಿ ದಿನ ಮನೆ ಬಾಗಿಲಿಗೆ ಬರುವಂತಹ ನ್ಯೂಸ್ ಪೇಪರ್, ಹಾಲು ಮತ್ತಿತರ ಪದಾರ್ಥಗಳಂತೆ ಮನೆ ಬಾಗಿಲಿಗೆ ಪೆಟ್ರೋಲ್ ಅತ್ವ ಡೀಸೆಲ್ ಬಂದ್ರೆ ಹೇಗ್ ಇರುತ್ತೆ ಯೋಚ್ನೆ ಮಾಡಿ. ಹೌದು, ಇಂತಹ ಮಹತ್ತರ ನಿರ್ಧಾರವನ್ನು ತೆಗೆದುಕೊಳ್ಳಲು ಕೇಂದ್ರ ಇಂಧನ ಸಚಿವಾಲಯ ನಿರ್ಧರಿಸಿದೆ.

ಬಲ್ಲ ಮೂಲಗಳ ಪ್ರಕಾರ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುವ ವಾಹನಗಳ ಮೂಲಕ ಈ ಯೋಜನೆ ಕಾರ್ಯರೂಪಕ್ಕೆ ತರಲು ಕೇಂದ್ರ ನಿರ್ಧರಿಸಿದ್ದು, ಅಗತ್ಯವಿರುವ ವಸ್ತುಗಳನ್ನು ಮನೆ ಬಾಗಿಲುಗಳಲ್ಲಿ ಈ ವಾಹನ ತಲುಪಿಸುತ್ತದೆ.

ಬಹಳಷ್ಟು ದಿನಗಳಿಂದ ಈ ವಿಚಾರವಾಗಿ ತಜ್ಞರೊಂದಿಗೆ ಗಂಭೀರ ಚೆರ್ಚೆ ಸೆಡೆಸಿರುವ ಕೇಂದ್ರ ಸರ್ಕಾರ, ತನ್ನ ಈ ಬೃಹತ್ ಯೋಜನೆಯ ಬಗ್ಗೆ ಇತ್ತೀಚೆಗೆ ಟ್ವೀಟ್ ಮಾಡಿದೆ.

"ಮಿನಿ ಪೆಟ್ರೋಲ್ ಬಂಕ್" ಉದ್ದೇಶವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಂಡ ದಿಟ್ಟ ಹೆಜ್ಜೆ ಇಟ್ಟಿದ್ದು, ಜನರಿಗೆ ಅನುಕೂಲಕರ ಮಟ್ಟವನ್ನು ಹೆಚ್ಚಿಸಲು ಚಕ್ರಗಳನ್ನು ಉಪಯೋಗಿಸುತ್ತೇವೆ" ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದರು.

ನಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ಕ್ರೀಡಾ ಬಳಕೆಯ ವಾಹನಗಳು 70 ರಿಂದ 80 ಲೀಟರ್ ಇಂಧನ ತುಂಬಬಹುದಾದ ಬೃಹತ್ ಟ್ಯಾಂಕರ್ ಹೊಂದಿದ್ದು, ಈ ರೀತಿಯ 4 ಅಥವಾ 5 ಕ್ರೀಡಾ ಬಳಕೆಯ ಕಾರುಗಳಿಗೆ ತುಂಬುವಷ್ಟು ಇಂಧನದ ವಾಹನ ನಿಮ್ಮ ಮನೆ ಬಾಗಿಲಿಗೆ ಬಂದರೆ ಹೇಗಿರುತ್ತದೆ, ಒಮ್ಮೆ ಯೋಚಿಸಿ.

ಹೇಗೆ ಕಾರ್ಯನಿರ್ವಹಿಸುತ್ತದೆ ?

ನೀವು ನಾಳೆ ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆ ಹೋರಾಡುತ್ತೀರಿ ಎಂದುಕೊಳ್ಳಿ, ತಕ್ಷಣ ನೀವು ಇಂಧನ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಆಗಿ ಆನ್ಲೈನ್ ಮೂಲಕ ಹಣ ಪಾವತಿ ಮಾಡಿ.

ಮತ್ತೊಂದು ಕಾಲಂನಲ್ಲಿ ನಿಮಗೆಷ್ಟು ಇಂಧನದ ಅವಶ್ಯಕತೆ ಇದೆ, ಎಷ್ಟು ಗಂಟೆಗೆ ಮನೆಗೆ ತಲುಪಿಸಬೇಕು ಎಂಬೆಲ್ಲಾ ಸೂಕ್ಷ್ಮ ವಿವರಣೆಗಳನ್ನು ತುಂಬಿದ ನಂತರ ಮಾಹಿತಿ ಬಗ್ಗೆ ದೃಢೀಕರಣ ಗುಂಡಿ ಒತ್ತಿದರೆ ನಿಮ್ಮ ಕೆಲಸ ಮುಗಿದಂತೆ.

ಆನ್ಲೈನ್ ಮೂಲಕ ರಸೀದಿ ಸಹ ಪಡೆಯಬಹುದಾಗಿದ್ದು, ಇದರಿಂದಾಗಿ ಪ್ರತಿಯೊಬ್ಬ ನಾಗರೀಕ ಎಷ್ಟು ಇಂಧನ ಉಪಯೋಗಿಸುತ್ತಿದ್ದಾನೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ತಿಳಿಯಲಿದೆ.

ಸುರಕ್ಷತೆ ಹೇಗೆ ?

"ಚಕ್ರಗಳ ಮೇಲೆ ಪೆಟ್ರೋಲ್ ಸಾಗಿಸುವ ಕಾರ್ಯದಲ್ಲಿ ಸುರಕ್ಷತೆ ಹೇಗೆ ಹೆಚ್ಚಿನ ಒಟ್ಟು ನೀಡಲಾಗಿದ್ದು, ಇಂಧನ ಸುರಕ್ಷತಾ ನಿಯಂತ್ರಕ ಮತ್ತು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಗಳಿಂದ ಪರೀಕ್ಷೆ ನೆಡೆಸಿದ ಮೇಲೆಯೇ ಮುಂದಿನ ಹೆಜ್ಜೆ ಇಡಲಾಗುವುದು" ಎಂದು ಸಚಿವರು ಹೇಳಿದರು.

 

"ದೊಡ್ಡ ಕಾರುಗಳಾದ ಎಸ್‌ಯುವಿಗಳು ದೊಡ್ಡ ಇಂಧನ ಟ್ಯಾಂಕ್‌ಗಳನ್ನು ಹೊಂದಿದ್ದು, ರಸ್ತೆಗಳಲ್ಲಿ ಯಾವುದೇ ತೊಂದರೆ ಇಲ್ಲದೆ ಚಲಿಸುತ್ತಿವೆ. ಅದೇ ರೀತಿ ಪೆಟ್ರೋಲ್ ಟ್ಯಾಂಕ್ ವಾಹನಗಳೂ ಕೂಡ ಚಲಿಸಲಿವೆ" ಎಂದು ಇಂಧನ ಇಲಾಖೆ ತಿಳಿಸಿದೆ.

Read more on ಇಂಧನ fuel
English summary
Read in Kannada about Petrol and Diesel to be delivered at Home says petrol Ministry. Get more details about Petrol and Diesel to be delivered at Home and more.
Please Wait while comments are loading...

Latest Photos