YouTube

ಫ್ಲಾಶರ್, ಸೈರನ್ ಬಳಸಿದ ಇನ್ಸ್ ಪೆಕ್ಟರ್‍‍ಗೆ ಬಿತ್ತು ದಂಡ..!

ವಾಹನಗಳ ಟಾಪ್ ಮೇಲೆ ಸೈರನ್ ಹಾಗೂ ಫ್ಲಾಶರ್‍‍ಗಳನ್ನು ಬಳಸುವುದು ಭಾರತದಲ್ಲಿ ಕಾನೂನುಬಾಹಿರ ಮಾತ್ರವಲ್ಲದೇ ಭಾರೀ ಪ್ರಮಾಣದ ದಂಡವನ್ನು ಸಹ ವಿಧಿಸಲಾಗುವುದು. ಪ್ರಧಾನಮಂತ್ರಿಯವರನ್ನೂ ಒಳಗೊಂಡಂತೆ ಯಾರೇ ಆಗಲಿ ತಮ್ಮ ವಾಹನಗಳ ಮೇಲೆ ಫ್ಲಾಶರ್‍‍ಗಳನ್ನು ಅಳವಡಿಸಿಕೊಳ್ಳುವಂತಿಲ್ಲ.

ಫ್ಲಾಶರ್, ಸೈರನ್ ಬಳಸಿದ ಇನ್ಸ್ ಪೆಕ್ಟರ್‍‍ಗೆ ಬಿತ್ತು ದಂಡ..!

ಕೆಲವರು ಈ ನಿಯಮದ ಬಗ್ಗೆ ಗೊತ್ತಿದ್ದರೂ ಕಾನೂನು ಬಾಹಿರವಾಗಿ ಫ್ಲಾಶರ್‍‍ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಈ ರೀತಿಯಾಗಿ ನಿಯಮಗಳನ್ನು ಉಲ್ಲಂಘಿಸುವವ ಬಹುತೇಕರು ಹಿರಿಯ ಪೊಲೀಸ್ ಅಧಿಕಾರಿಗಳಾಗಿರುತ್ತಾರೆ ಅಥವಾ ಸರ್ಕಾರಿ ಅಧಿಕಾರಿಗಳಾಗಿರುತ್ತಾರೆ. ಇದರ ಜೊತೆಗೆ ಈ ವಾಹನಗಳ ಮೇಲೆ ತಮ್ಮ ಹುದ್ದೆಯ ಸ್ಟಿಕ್ಕರ್‍‍ಗಳನ್ನು ಸಹ ಅಂಟಿಸಿಕೊಳ್ಳುತ್ತಾರೆ.

ಫ್ಲಾಶರ್, ಸೈರನ್ ಬಳಸಿದ ಇನ್ಸ್ ಪೆಕ್ಟರ್‍‍ಗೆ ಬಿತ್ತು ದಂಡ..!

ಹಿರಿಯ ಅಧಿಕಾರಿ ಎಂಬ ಕಾರಣಕ್ಕೆ ಪೊಲೀಸರೂ ಸಹ ಈ ರೀತಿಯ ವಾಹನಗಳಿಗೆ ದಂಡ ವಿಧಿಸಲು ಹಿಂಜರಿಯುತ್ತಾರೆ. ಆದರೆ ಉತ್ತರಖಂಡದಲ್ಲಿ ನಡೆದ ಘಟನೆಯೊಂದರಲ್ಲಿ ಸಂಚಾರಿ ಪೊಲೀಸರು ತಮ್ಮ ವಾಹನದ ಮೇಲೆ ಫ್ಲಾಶರ್ ಹಾಗೂ ಸೈರನ್ ಅಳವಡಿಸಿಕೊಂಡಿದ್ದ ಪೊಲೀಸ್ ಇನ್ಸ್ಪೆಕ್ಟರ್‍‍ರವರಿಗೆ ದಂಡ ವಿಧಿಸಿದ್ದಾರೆ.

ಫ್ಲಾಶರ್, ಸೈರನ್ ಬಳಸಿದ ಇನ್ಸ್ ಪೆಕ್ಟರ್‍‍ಗೆ ಬಿತ್ತು ದಂಡ..!

ಉತ್ತರ ಪ್ರದೇಶದ ಈ ಇನ್ಸ್ಪೆಕ್ಟರ್‍‍ರವರಿಗೆ ದಂಡ ವಿಧಿಸಿದ ಸಮಯದಲ್ಲಿ ಅವರು ತಮ್ಮ ಖಾಸಗಿ ವಾಹನವನ್ನು ಚಲಾಯಿಸುತ್ತಿದ್ದರು. ವರದಿಗಳ ಪ್ರಕಾರ, ಉತ್ತರ ಪ್ರದೇಶದ ಬದಾನ್‍ ಜಿಲ್ಲೆಯ ಈ ಅಧಿಕಾರಿ ತಮ್ಮ ಮಾರುತಿ ಸುಜುಕಿ ಡಿಜೈರ್‍‍ನಲ್ಲಿ ತಮ್ಮ ಸ್ನೇಹಿತರೊಂದಿಗೆ ತೆರಳುತ್ತಿದ್ದರು.

ಫ್ಲಾಶರ್, ಸೈರನ್ ಬಳಸಿದ ಇನ್ಸ್ ಪೆಕ್ಟರ್‍‍ಗೆ ಬಿತ್ತು ದಂಡ..!

ಈ ಎಲ್ಲರೂ ಜತೆಗೂಡಿ ಉತ್ತರಖಂಡದಲ್ಲಿ ರಜೆ ಕಳೆಯಲು ಬಂದಿದ್ದರು. ಖಾಸಗಿ ವ್ಯಕ್ತಿಯ ಹೆಸರಿನಲ್ಲಿ ರಿಜಿಸ್ಟರ್ ಮಾಡಲಾಗಿರುವ ಈ ಕಾರಿನ ಟಾಪ್ ಮೇಲೆ ಸೈರನ್ ಹಾಗೂ ಫ್ಲಾಶರ್‍‍ಗಳನ್ನು ಅಳವಡಿಸಲಾಗಿತ್ತು.

ಫ್ಲಾಶರ್, ಸೈರನ್ ಬಳಸಿದ ಇನ್ಸ್ ಪೆಕ್ಟರ್‍‍ಗೆ ಬಿತ್ತು ದಂಡ..!

ಉತ್ತರಖಂಡ ಪೊಲೀಸರು ಅಲ್ಮೋರಾ ನಗರದಲ್ಲಿರುವ ಟ್ಯಾಕ್ಸಿ ಸ್ಟಾಂಡ್ ಬಳಿ ಈ ಕಾರ್ ಅನ್ನು ತಡೆದು ನಿಲ್ಲಿಸಿದ್ದಾರೆ. ಕಾರ್ ಅನ್ನು ತಡೆದು ನಿಲ್ಲಿಸಿದಾಗ ಹೊರ ಬಂದ ವ್ಯಕ್ತಿ ತಾವು ಉತ್ತರಪ್ರದೇಶದ ಬದಾನ್‍‍ನ ಹಿರಿಯ ಪೊಲೀಸ್ ಅಧಿಕಾರಿಯೆಂದು ಹೇಳಿದ್ದಾರೆ.

ಫ್ಲಾಶರ್, ಸೈರನ್ ಬಳಸಿದ ಇನ್ಸ್ ಪೆಕ್ಟರ್‍‍ಗೆ ಬಿತ್ತು ದಂಡ..!

ತಾವು ರಜೆಯ ಕಾರಣಕ್ಕೆ ಈ ನಗರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ನಂತರ ಕೆಲ ಕಾಲ ವಾಗ್ವಾದ ನಡೆದಿದೆ. ಸಂಚಾರಿ ಪೊಲೀಸರು ಸಿಟಿ ಪ್ಯಾಟ್ರೋಲ್ ಯುನಿಟ್ ಅನ್ನು ಸ್ಥಳಕ್ಕೆ ಕರೆಸಿದ್ದಾರೆ. ಆ ಇನ್ಸ್ಪೆಕ್ಟರ್ ಈ ರೀತಿಯಾಗಿ ತಾವು ಫ್ಲಾಶರ್ ಹೊಂದಿರುವ ಕಾರಿನಲ್ಲಿ ಚಲಿಸಿದಾಗ ಉತ್ತರ ಪ್ರದೇಶದಲ್ಲಿ ಯಾವುದೇ ಸಮಸ್ಯೆಯಾಗಿಲ್ಲವೆಂದು ಹೇಳಿದ್ದಾರೆ.

MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಫ್ಲಾಶರ್, ಸೈರನ್ ಬಳಸಿದ ಇನ್ಸ್ ಪೆಕ್ಟರ್‍‍ಗೆ ಬಿತ್ತು ದಂಡ..!

ಆದರೆ ಉತ್ತರಖಂಡ ಪೊಲೀಸರು ಈ ರೀತಿಯಾಗಿ ಸಂಚರಿಸುವುದು ಕಾನೂನುಬಾಹಿರವೆಂದು ತಿಳಿಸಿದ್ದಾರೆ. ನಂತರ ಆ ಇನ್ಸ್ಪೆಕ್ಟರ್‍‍ಗೆ ರೂ.2,000 ದಂಡ ವಿಧಿಸಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, 2017ರಲ್ಲಿ ವಿ‍ಐ‍‍ಪಿಗಳೂ ಸೇರಿದಂತೆ ಯಾರೂ ಸಹ ತಮ್ಮ ವಾಹನಗಳಲ್ಲಿ ಸೈರನ್ ಬಳಸದಂತೆ ನಿಷೇಧ ಹೇರಲಾಗಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಫ್ಲಾಶರ್, ಸೈರನ್ ಬಳಸಿದ ಇನ್ಸ್ ಪೆಕ್ಟರ್‍‍ಗೆ ಬಿತ್ತು ದಂಡ..!

ಈ ಆದೇಶವನ್ನು ವಿರೋಧಿಸಿ ಕೆಲವು ರಾಜಕಾರಣಿಗಳು ಪ್ರತಿಭಟನೆ ನಡೆಸಿದ್ದರು. ಆದರೆ ಪೊಲೀಸರು ಈ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದ ಕಾರಣಕ್ಕೆ ವಾಹನಗಳಲ್ಲಿ ಸೈರನ್ ಬಳಕೆ ಕಡಿಮೆಯಾಗಿದೆ. ಪ್ರಧಾನಮಂತ್ರಿಯವರೂ ಸಹ ತಮ್ಮ ವಾಹನದಲ್ಲಿ ಸೈರನ್ ಬಳಸುವಂತಿಲ್ಲ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಫ್ಲಾಶರ್, ಸೈರನ್ ಬಳಸಿದ ಇನ್ಸ್ ಪೆಕ್ಟರ್‍‍ಗೆ ಬಿತ್ತು ದಂಡ..!

ತುರ್ತು ಸೇವೆಯನ್ನು ನೀಡುವ ಪೊಲೀಸ್ ವಾಹನಗಳು, ಸೇನಾ ವಾಹನಗಳು, ಆಂಬ್ಯುಲೆನ್ಸ್ ಹಾಗೂ ಫೈರ್ ಟ್ರಕ್‍‍ಗಳು ಮಾತ್ರ ತಮ್ಮ ವಾಹನದ ಟಾಪ್ ಮೇಲೆ ಫ್ಲಾಶರ್ ಹಾಗೂ ಸೈರನ್ ಬಳಸಬಹುದಾಗಿದೆ. ಇತ್ತೀಚಿಗೆ ರಾಜಸ್ತಾನ ಸರ್ಕಾರವು ಸರ್ಕಾರದ ಯಾವುದೇ ಸಿಬ್ಬಂದಿ ತಮ್ಮ ವಾಹನಗಳ ಮೇಲೆ ತಮ್ಮ ಹುದ್ದೆಯ ಬಗ್ಗೆಗಿನ ಸ್ಟಿಕ್ಕರ್‍‍ಗಳನ್ನು ಅಳವಡಿಸಿಕೊಳ್ಳದಂತೆ ಕಾನೂನು ಜಾರಿ ಮಾಡಿದೆ.

ಫ್ಲಾಶರ್, ಸೈರನ್ ಬಳಸಿದ ಇನ್ಸ್ ಪೆಕ್ಟರ್‍‍ಗೆ ಬಿತ್ತು ದಂಡ..!

ನೋಯಿಡಾ ಪೊಲೀಸರೂ ಸಹ ತಮ್ಮ ಸರ್‍‍ನೇಮ್‍‍ಗಳನ್ನು ತಮ್ಮ ವಾಹನದ ಹಿಂಭಾಗದಲ್ಲಿ ಅಳವಡಿಸಿಕೊಂಡಿದ್ದ ವಾಹನ ಸವಾರರಿಗೆ ಸಾವಿರಾರು ರೂಪಾಯಿಗಳ ದಂಡ ವಿಧಿಸಿದ್ದರು. ಕಾನೂನುಬಾಹಿರವಾಗಿ ಸೈರನ್ ಹಾಗೂ ಫ್ಲಾಶರ್‍‍ಗಳನ್ನು ತಮ್ಮ ವಾಹನಗಳಲ್ಲಿ ಅಳವಡಿಸಿಕೊಳ್ಳುವವರು ಬೇರೆ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುವುದರ ಜೊತೆಗೆ ಬೇಜವಾಬ್ದಾರಿಯಿಂದ ವಾಹನಗಳನ್ನು ಚಲಾಯಿಸುತ್ತಾರೆ. ಇವುಗಳೆಲ್ಲವನ್ನು ತಡೆಗಟ್ಟುವ ಸಲುವಾಗಿ ಸೆಪ್ಟೆಂಬರ್ 1ರಿಂದ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

Most Read Articles

Kannada
English summary
Police inspector fined for using flasher and siren on personal car - Read in Kannada
Story first published: Thursday, October 3, 2019, 13:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X