ಟ್ರಾಫಿಕ್ ರೂಲ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಸಿನಿಮಾ ಟಿಕೆಟ್, ಫುಡ್ ಕೂಪನ್..!

ದೇಶಾದ್ಯಂತ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಕೂಡಾ ಹೆಚ್ಚುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ದಂಡದ ಮೊತ್ತವನ್ನು ಹೆಚ್ಚಳ ಮಾಡಿದ್ದರೂ ಸಹ ವಾಹನ ಸವಾರರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಅದೇ ರಾಗ ಅದೇ ಹಾಡು ಎನ್ನುವಂತೆ ರೂಲ್ಸ್ ಬ್ರೇಕ್ ಮಾಡುತ್ತಲೇ ಇರುವುದು ಮತ್ತಷ್ಟು ಹೊಸ ಹೊಸ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಚಾರಿ ನಿಯಮಗಳ ಪಾಲನೆ ಮಾಡುವ ವಾಹನ ಸವಾರರನ್ನು ಉತ್ತೇಜಿಸಲು ಮುಂದಾಗಿರುವ ಟ್ರಾಫಿಕ್ ಪೊಲೀಸರು ಭರ್ಜರಿ ಗಿಫ್ಟ್ ನೀಡುತ್ತಿದ್ದಾರೆ.

ಟ್ರಾಫಿಕ್ ರೂಲ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಸಿನಿಮಾ ಟಿಕೆಟ್, ಫುಡ್ ಕೂಪನ್..!

ಹೌದು, ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ಸಾಕಷ್ಟು ಜಾಗೃತಿ ಅಭಿಯಾನ ಕೈಗೊಂಡಿದ್ದರೂ ಸಹ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಇವರುಗಳ ಮಧ್ಯೆದಲ್ಲೇ ಟ್ರಾಫಿಕ್ ರೂಲ್ಸ್ ಅನುಸರಿ ಇತರಿಗೆ ಮಾದರಿಯಾಗುವ ವಾಹನ ಸವಾರರಿಗೆ ಹೈದ್ರಾಬಾದ್ ಪೊಲೀಸರು ವಿಶೇಷ ಉಡುಗೊರೆ ನೀಡುತ್ತಿದ್ದಾರೆ. ಯಾವುದೇ ಪ್ರಕರಣಗಳನ್ನು ಹೊಂದಿರದ ವಾಹನ ಸವಾರರನ್ನು ಅಭಿನಂದಿಸುತ್ತಿರುವ ಟ್ರಾಫಿಕ್ ಪೊಲೀಸರು ಉಚಿತವಾಗಿ ಸಿನಿಮಾ ವಿಕ್ಷಣೆಗಾಗಿ ಪಿವಿಆರ್ ಟಿಕೆಟ್ ನೀಡುತ್ತಿದ್ದಾರೆ.

ಟ್ರಾಫಿಕ್ ರೂಲ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಸಿನಿಮಾ ಟಿಕೆಟ್, ಫುಡ್ ಕೂಪನ್..!

ಇದಕ್ಕೂ ಮುನ್ನ ಪುಣೆ ಪೊಲೀಸರು ಸಹ ಯಾವುದೇ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡದ ವಾಹನ ಸವಾರರನ್ನು ಗುರುತಿಸಿ ಅಭಿನಂದನೆ ತಿಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಲ್ಲದೇ ಆನ್‌ಲೈನ್ ಮೂಲಕ ಫುಡ್ ಆರ್ಡರ್ ಮಾಡುವ ಗ್ರಾಹಕರಿಗೆ ಶೇ.50ರಷ್ಟು ರಿಯಾಯ್ತಿ ದರದ ಕೂಪನ್‌ಗಳನ್ನು ವಿತರಣೆ ಮಾಡಿದ್ದರು.

ಟ್ರಾಫಿಕ್ ರೂಲ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಸಿನಿಮಾ ಟಿಕೆಟ್, ಫುಡ್ ಕೂಪನ್..!

ಇದರಿಂದಾದರೂ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ವಾಹನ ಸವಾರರ ಸಂಖ್ಯೆ ಕಡಿಮೆಯಾಗಲಿ ಎನ್ನುವ ಉದ್ದೇಶದಿಂದ ಜನಾರ್ಷಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಂಚಾರಿ ನಿಯಮಗಳ ಉಲ್ಲಂಘನೆಯಿಂದಾಗಿ ಆಗುತ್ತಿರುವ ಪ್ರಾಣಹಾನಿ ಕುರಿತು ತಿಳುವಳಿಕೆ ಮೂಡಿಸಲಾಗುತ್ತಿದೆ.

ಟ್ರಾಫಿಕ್ ರೂಲ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಸಿನಿಮಾ ಟಿಕೆಟ್, ಫುಡ್ ಕೂಪನ್..!

ಟ್ರಾಫಿಕ್ ನಿಯಮಗಳ ಪಾಲನೆ ಅಭಿಯಾನ ಕುರಿತು ಸ್ವತಃ ಫೀಲ್ಡ್‌ಗೆ ಇಳಿದಿರುವ ಹೈದ್ರಾಬಾದ್ ಟ್ರಾಫಿಕ್ ಕಮಿಷನರ್ ಅಂಜನಿ ಕುಮಾರ್ ಅವರು, ಸಂಚಾರಿ ನಿಯಮಗಳನ್ನು ಪಾಲಿಸುವ ವಾಹನ ಸವಾರನ್ನು ಅಭಿನಂದಿಸಿದ್ದಲ್ಲದೇ ತಪ್ಪು ಮಾಡುವ ವಾಹನ ಸವಾರರಿಗೆ ಭರ್ಜರಿ ದಂಡ ವಸೂಲಿ ಮಾಡಿ ಖಡಕ್ ಎಚ್ಚರಿಕೆ ನೀಡುತ್ತಿದ್ದಾರೆ. ಅದಲ್ಲದೇ ಭಾರತದಲ್ಲೇ ಅತಿ ಹೆಚ್ಚು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆ ಕೂಡಾ ತೆಲಾಂಗಾಣದಲ್ಲಿ ಹೆಚ್ಚು ಪತ್ತೆಯಾಗಿದ್ದು, ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಇಂತಹ ವಿಶೇಷ ಕಾರ್ಯಕ್ರಮ ಅವಶ್ಯಕತೆಯಿದೆ ಎನ್ನುವುದು ಅಂಜನಿ ಕುಮಾರ್ ಅಭಿಪ್ರಾಯ.

ಟ್ರಾಫಿಕ್ ರೂಲ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಸಿನಿಮಾ ಟಿಕೆಟ್, ಫುಡ್ ಕೂಪನ್..!

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇನ್ನು ದೇಶಾದ್ಯಂತ ಹೊಸ ವಾಹನಗಳ ಸಂಖ್ಯೆ ಹೆಚ್ಚಾದಂತೆಲ್ಲಾ ಸಂಚಾರಿ ನಿಯಮಗಳ ಉಲ್ಲಂಘಟನೆ ಪ್ರಕರಣಗಳು ಹೆಚ್ಚುತ್ತಿರುವುದು ಸಾಕಷ್ಟು ಸಮಸ್ಯೆಗಳಿಗೆ ಹೊಸ ಕಾರಣವಾಗುತ್ತಿದ್ದು, ಹೊಸ ಮೋಟಾರ್ ವೆಹಿಕಲ್ ಕಾಯ್ದೆ ಜಾರಿಗೆ ಮಾಡಲು ಈಗಾಗಲೇ ಸಂಸತ್‌ನಲ್ಲಿ ಅನುಮೋದನೆ ಕೂಡಾ ದೊರೆತಿರುವುದು ಭಾರೀ ಪ್ರಮಾಣದ ದಂಡ ತೆತ್ತಬೇಕಾಗುತ್ತೆ.

ಟ್ರಾಫಿಕ್ ರೂಲ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಸಿನಿಮಾ ಟಿಕೆಟ್, ಫುಡ್ ಕೂಪನ್..!

ಬೇರೊಬ್ಬರು ಮಾಡುವ ತಪ್ಪಿನಿಂದಾಗಿ ಅಪಘಾತಗಳಲ್ಲಿ ಅಮಾಕರೇ ಹೆಚ್ಚು ಜೀವಕಳೆದುಕೊಳ್ಳುತ್ತಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಾಲನೆ ಮಾಡುವ ಪ್ರವೃತ್ತಿಯನ್ನು ತಡೆಯಲು ಈ ಹೊಸ ಸಂಚಾರಿ ನಿಯಮವು ಪರಿಣಾಮಕಾರಿಯಾಗಲಿದೆ ಎಂದು ಹೇಳಲಾಗಿದೆ.

ಟ್ರಾಫಿಕ್ ರೂಲ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಸಿನಿಮಾ ಟಿಕೆಟ್, ಫುಡ್ ಕೂಪನ್..!

ಹೊಸ ನಿಯಮ ಜಾರಿಯಿಂದಾಗಿ ಚಾಲ್ತಿಯಲ್ಲಿ ದಂಡದ ಮೊತ್ತಗಳು ದುಪ್ಪಟ್ಟಾಗಿದ್ದು, ಕೆಲವು ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ಗರಿಷ್ಠ ಮಟ್ಟದ ವಿಧಿಸುವ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಹೀಗಾಗಿ ಇಷ್ಟು ದಿನಗಳ ಕಾಲ ನಿಯಮ ಉಲ್ಲಂಘಿಸಿದರೂ ಕಡಿಮೆ ದಂಡದೊಂದಿಗೆ ಬಚಾವ್ ಆಗಬಹುದಾದ ಸನ್ನಿವೇಶ ಇನ್ಮುಂದೆ ಇರುವುದಿಲ್ಲ.

ಟ್ರಾಫಿಕ್ ರೂಲ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಸಿನಿಮಾ ಟಿಕೆಟ್, ಫುಡ್ ಕೂಪನ್..!

ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಡೆಯಲು ಈಗಾಗಲೇ ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದ್ದು, ಲೈಸೆನ್ಸ್ ಇಲ್ಲದೇ ವಾಹನ ಸವಾರಿ ಮಾಡುವುದು, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುವುದು, ನೋಂದಣಿಯಿಲ್ಲದ ವಾಹನಗಳ ಚಾಲನೆ ಮತ್ತು ಅಪಾಯಕಾರಿಯಾಗಿ ವಾಹನ ಚಲಾಯಿಸುವುವವರ ವಿರುದ್ಧ ಭಾರೀ ಮೊತ್ತದ ದಂಡವನ್ನು ವಸೂಲಿ ಮಾಡಲಾಗುತ್ತಿದೆ.

ಟ್ರಾಫಿಕ್ ರೂಲ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಸಿನಿಮಾ ಟಿಕೆಟ್, ಫುಡ್ ಕೂಪನ್..!

ಈ ಹಿಂದೆ ಇದ್ದ ಬಹುತೇಕ ಸಂಚಾರಿ ನಿಯಮಗಳ ದಂಡಗಳ ಮೊತ್ತವು ಕನಿಷ್ಠ ರೂ. 100ಕ್ಕೆ 500ಕ್ಕೆ ಮತ್ತು ರೂ.300 ಇದ್ದ ದಂಡದ ಮೊತ್ತಗಳು ರೂ.1 ಸಾವಿರಕ್ಕೆ ಏರಿಕೆಯಾಗಿದ್ದಲ್ಲಿ ಆಂಬ್ಯುಲೆನ್ಸ್ ಮತ್ತು ಯೋಗ್ಯತಾ ಪ್ರಮಾಣ ಪತ್ರವಿಲ್ಲದೆ ಸಾರ್ವಜನಿಕ ರಸ್ತೆಯ ಮೇಲೆ ಸಾರಿಗೆ ವಾಹನವನ್ನು ನಡೆಸುವುದು ಅಥವಾ ನಡೆಸಲು ಅನುಮತಿಸುವುದಕ್ಕೆ ರೂ. 3 ಸಾವಿರದಿಂದ ರೂ. 10 ಸಾವಿರ ತನಕ ದಂಡ ವಿಧಿಸಲು ಅನುಮತಿಸಲಾಗಿದೆ.

Most Read Articles

Kannada
English summary
Police Rewarding Riders With Free Movie Tickets. Read in Kannada.
Story first published: Wednesday, July 31, 2019, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more