ಉದ್ದೀಪನ ಮದ್ದು ಸೇವನೆ; ಶರಪೋವಾ ಕೈ ಬಿಟ್ಟ ಪೋರ್ಷೆ

By Nagaraja

ಉದ್ದೀಪನ ಮದ್ದು ಸೇವನೆಯಲ್ಲಿ ಸಿಕ್ಕಿ ಬಿದ್ದಿರುವ ರಷ್ಯಾದ ಖ್ಯಾತ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ಅವರಿಗೆ ವಿಶ್ವದ ಪ್ರತಿಷ್ಠಿತ ಕಾರು ಸಂಸ್ಥೆ ಆಗಿರುವ ಪೋರ್ಷೆ ಸಹ ಕೈ ಕೊಟ್ಟಿದೆ.

Also Read: ಆಕ್ರಮಣಕಾರಿ ನಾಯಕನ ವಿರಾಟ ದರ್ಶನ

ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಕೂಟದ ದ್ರವ್ಯ ಸೇವನೆ ಪರೀಕ್ಷೆಯಲ್ಲಿ ಮರಿಯಾ ವಿಫಲವಾಗಿದ್ದರು. ಇದಾದ ಬೆನ್ನಲ್ಲೇ 28ರ ಹರೆಯದ ಈ ಟೆನಿಸ್ ಚೆಲುವೆ ತಪ್ಪೊಪ್ಪಿಗೆಯನ್ನು ನಡೆಸಿದ್ದರು.

ಉದ್ದೀಪನ ಮದ್ದು ಸೇವನೆ; ಶರಪೋವಾ ಕೈ ಬಿಟ್ಟ ಪೋರ್ಷೆ

ಶರಪೋವಾ ವಿಶ್ವದ ಅತಿ ಬೇಡಿಕೆಯ ಟೆನಿಸ್ ಆಟಗಾರ್ತಿಯರಲ್ಲಿ ಓರ್ವರಾಗಿದ್ದು, ಜರ್ಮನಿಯ ಮುಂಚೂಣಿಯ ಪೋರ್ಷೆ ಕಾರಿ ಮುಖ್ಯ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದರು. ಆದರೆ ಈಗ ಉದ್ದೀಪನಾ ಮದ್ದು ಪ್ರಕರಣದಿಂದಾಗಿ ಹಿಂಪಡೆಯಲು ಪೋರ್ಷೆ ನಿರ್ಧರಿಸಿದೆ.

ಉದ್ದೀಪನ ಮದ್ದು ಸೇವನೆ; ಶರಪೋವಾ ಕೈ ಬಿಟ್ಟ ಪೋರ್ಷೆ

ಉದ್ದೀಪನಾ ದ್ರವ್ಯ ಪರೀಕ್ಷೆಯಲ್ಲಿ ಶರಪೋವಾ ಮೆಲ್ಡೋನಿಯಂ ಎಂಬ ಮದ್ದು ಸೇವನೆ ಮಾಡಿರುವುದು ಪತ್ತೆಯಾಗಿದೆ. ಇದನ್ನು ಖಚಿತಪಡಿಸಿರುವ ವಿಶ್ವ ಉದ್ದೀಪನಾ ವಿರೋಧಿ ಘಟಕವು ಶರಪೋವಾ ಮೇಲೆ ತಾತ್ಕಾಲಿಕ ನಿಷೇಧ ಹೇರಿದೆ.

ಉದ್ದೀಪನ ಮದ್ದು ಸೇವನೆ; ಶರಪೋವಾ ಕೈ ಬಿಟ್ಟ ಪೋರ್ಷೆ

ಟೆನಿಸ್ ಲೋಕದ ಗ್ಲಾಮರಸ್ ತಾರೆಯಾಗಿರುವ ಮಾಜಿ ವಿಶ್ವ ನಂ.1 ಆಟಗಾರ್ತಿ ಮಾರಿಯಾ ಶರಪೋವಾ, ಕ್ರೀಡೆಯ ಹೊರಗೂ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಕಟ್ಟಿಕೊಂಡು ಬಂದಿದ್ದರು.

ಉದ್ದೀಪನ ಮದ್ದು ಸೇವನೆ; ಶರಪೋವಾ ಕೈ ಬಿಟ್ಟ ಪೋರ್ಷೆ

ಇದೇ ಕಾರಣಕ್ಕಾಗಿ ವಿಶ್ವದ ಪ್ರಖ್ಯಾತ ಬ್ರಾಂಡ್ ಆಗಿರುವ ಪೋರ್ಷೆ ಮುಖ್ಯ ರಾಯಭಾರಿಯಾಗಿ ನೇಮಕಗೊಳಿಸಿದ್ದರು. ಆದರೆ ಈಗ ಕ್ರೀಡೆಗೆ ಕಳಂಕ ತಂದಿರುವ ಶರಪೋವಾ ಅವರನ್ನು ಕೈಬಿಡಲು ಪೋರ್ಷೆ ಹಿಂದು ಮುಂದೂ ನೋಡದೆ ನೇರವಾಗಿ ಕ್ರಮ ಕೈಗೊಂಡಿದೆ.

ಉದ್ದೀಪನ ಮದ್ದು ಸೇವನೆ; ಶರಪೋವಾ ಕೈ ಬಿಟ್ಟ ಪೋರ್ಷೆ

ಈ ಬಗ್ಗೆ ಹೇಳಿಕೆ ಹೊರಡಿಸಿರುವ ಪೋರ್ಷೆ, "ತಾಜಾ ಬೆಳವಣಿಗೆಯಲ್ಲಿ ನಾವು ಖೇದ ವ್ಯಕ್ತಪಡಿಸುತ್ತಿದ್ದೇವೆ. ತನಿಖೆಯ ಹೆಚ್ಚಿನ ವಿವರಗಳು ಲಭ್ಯವಾಗುವ ವರೆಗೂ ಮರಿಯಾ ಶರಪೋವಾ ಅವರನ್ನು ವಜಾಗೊಳಿಸಲು ನಿರ್ಧರಿಸಿರುತ್ತೇವೆ" ಎಂದಿದೆ.

ಉದ್ದೀಪನ ಮದ್ದು ಸೇವನೆ; ಶರಪೋವಾ ಕೈ ಬಿಟ್ಟ ಪೋರ್ಷೆ

ನಿಮ್ಮ ಮಾಹಿತಿಗಾಗಿ, ಜರ್ಮನಿಯ ಐಷಾರಾಮಿ ಕಾರು ಬ್ರಾಂಡ್ ಆಗಿರುವ ಪೋರ್ಷೆ ವಿಶ್ವ ವಿಖ್ಯಾತ ಫೋಕ್ಸ್ ವ್ಯಾಗನ್ ಸಂಸ್ಥೆಯ ಭಾಗವಾಗಿದೆ.

ಇವನ್ನೂ ಓದಿ...

ಶತಮಾನದ ಬಾಕ್ಸರ್ ಮೇವೆದರ್ ಶತಕೋಟಿಯ ಕಾರುಗಳು

ಜಯಲಲಿತಾ ಐಷಾರಾಮಿ ಕಾರು ಅಕ್ರಮ ಸಂಪತ್ತೇ?

Most Read Articles

Kannada
English summary
Porsche Suspends Sponsorship Of Maria Sharapova
Story first published: Friday, March 11, 2016, 16:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X