ವಿಮಾನಗಳ ಲ್ಯಾಂಡಿಂಗ್ ವೇಳೆ ಪೈಲಟ್‌ಗಳು ಮಾತನಾಡದಿರಲು ಕಾರಣಗಳಿವು

ವಿಮಾನಗಳ ಪೈಲಟ್‌ಗಳಿಗೆ ಹಲವಾರು ನಿಯಮಗಳಿರುತ್ತವೆ. ಇವುಗಳಲ್ಲಿ ವಿಮಾನವು 10 ಸಾವಿರ ಅಡಿಗಳಿಗಿಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವಾಗ ಮಾತನಾಡಬಾರದು ಎಂಬ ನಿಯಮವು ಸೇರಿದೆ.

ವಿಮಾನಗಳ ಲ್ಯಾಂಡಿಂಗ್ ವೇಳೆ ಪೈಲಟ್‌ಗಳು ಮಾತನಾಡದಿರಲು ಕಾರಣಗಳಿವು

ವಿಮಾನ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ವಿಮಾನಗಳು 10,000 ಅಡಿಗಳಿಗಿಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವಾಗ ಪೈಲಟ್‌ಗಳು ಮಾತನಾಡುವುದನ್ನು ನಿಷೇಧಿಸಲಾಗಿದೆ. ಈ ನಿಯಮವನ್ನು ಸ್ಟರೈಲ್ ಕಾಕ್‌ಪಿಟ್ ನಿಯಮ ಎಂದು ಕರೆಯಲಾಗುತ್ತದೆ. ವಿಮಾನ ಅಪಘಾತಗಳಲ್ಲಿ ಮೃತಪಟ್ಟ ಪ್ರಯಾಣಿಕರ ಸಂಖ್ಯೆಯಿಂದಾಗಿ ಈ ನಿಯಮವನ್ನು ಜಾರಿಗೆ ತರಲಾಗಿದೆ.

ವಿಮಾನಗಳ ಲ್ಯಾಂಡಿಂಗ್ ವೇಳೆ ಪೈಲಟ್‌ಗಳು ಮಾತನಾಡದಿರಲು ಕಾರಣಗಳಿವು

1974ರ ಸೆಪ್ಟೆಂಬರ್'ನಲ್ಲಿ ಚಾರ್ಲ್‌ಸ್ಟನ್‌ನಿಂದ ಷಾರ್ಲೆಟ್ ಡೌಗ್ಲಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಈಸ್ಟರ್ನ್ ಏರ್‌ಲೈನ್ಸ್ ಫ್ಲೈಟ್ 212 ನಿಲ್ದಾಣದಲ್ಲಿ ಇಳಿಯುವ ಮುನ್ನವೇ ನೆಲಕ್ಕೆ ಅಪ್ಪಳಿಸಿತು.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ವಿಮಾನಗಳ ಲ್ಯಾಂಡಿಂಗ್ ವೇಳೆ ಪೈಲಟ್‌ಗಳು ಮಾತನಾಡದಿರಲು ಕಾರಣಗಳಿವು

ಈ ವಿಮಾನದಲ್ಲಿದ್ದ ಪ್ರಯಾಣಿಸುತ್ತಿದ್ದ 82 ಪ್ರಯಾಣಿಕರಲ್ಲಿ 69 ಮಂದಿ ಸಾವನ್ನಪ್ಪಿದ್ದರು. ವಿಮಾನದ ಕ್ಯಾಪ್ಟನ್ ಹಾಗೂ ಮತ್ತೊಬ್ಬ ಅಧಿಕಾರಿ ಸಂಬಂಧವಿಲ್ಲದ ಮಾತುಕತೆಯಲ್ಲಿ ಭಾಗಿಯಾಗಿದ್ದ ಕಾರಣ ಈ ಅಪಘಾತ ಸಂಭವಿಸಿತು ಎಂದು ತನಿಖೆಯಿಂದ ತಿಳಿದುಬಂದಿತ್ತು.

ವಿಮಾನಗಳ ಲ್ಯಾಂಡಿಂಗ್ ವೇಳೆ ಪೈಲಟ್‌ಗಳು ಮಾತನಾಡದಿರಲು ಕಾರಣಗಳಿವು

ಈ ಮಾತುಕತೆಯ ಕಾರಣದಿಂದಾಗಿ ಅವರ ಗಮನವು ಬೇರೆಡೆ ತಿರುಗಿ, ಲ್ಯಾಂಡಿಂಗ್ ಮಾಡುವ ಮುನ್ನ ತಪಾಸಣೆ ನಡೆಸಲು ಬೇಕಾದ ಉಪಕರಣಗಳನ್ನು ನೋಡಲು ಅವರು ವಿಫಲರಾಗಿದ್ದರು.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ವಿಮಾನಗಳ ಲ್ಯಾಂಡಿಂಗ್ ವೇಳೆ ಪೈಲಟ್‌ಗಳು ಮಾತನಾಡದಿರಲು ಕಾರಣಗಳಿವು

ಈ ಘಟನೆ ನಡೆದ 7 ವರ್ಷಗಳ ನಂತರ ಸ್ಟರೈಲ್ ಕಾಕ್‌ಪಿಟ್ ನಿಯಮವನ್ನು ಜಾರಿಗೊಳಿಸಲಾಯಿತು. ಎಲ್ಲಾ ವಿಮಾನಯಾನ ಕಂಪನಿಗಳು ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು.

ವಿಮಾನಗಳ ಲ್ಯಾಂಡಿಂಗ್ ವೇಳೆ ಪೈಲಟ್‌ಗಳು ಮಾತನಾಡದಿರಲು ಕಾರಣಗಳಿವು

ಈ ನಿಯಮದ ಅನುಸಾರ ವಿಮಾನವನ್ನು ಸುರಕ್ಷಿತವಾಗಿ ನಿರ್ವಹಿಸಲು ಕಾರ್ಯಾಚರಣೆಯನ್ನು ಹೊರತುಪಡಿಸಿ ಎಲ್ಲಾ ಚಟುವಟಿಕೆಗಳನ್ನು ವಿಮಾನ ಹಾರಾಟದ ನಿರ್ಣಾಯಕ ಹಂತದಲ್ಲಿ ನಿಷೇಧಿಸಲಾಗಿದೆ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ವಿಮಾನಗಳ ಲ್ಯಾಂಡಿಂಗ್ ವೇಳೆ ಪೈಲಟ್‌ಗಳು ಮಾತನಾಡದಿರಲು ಕಾರಣಗಳಿವು

ಈ ನಿಯಮವು ಕಾಕ್‌ಪಿಟ್‌ನಲ್ಲಿರುವ ಪೈಲಟ್‌ಗಳಿಗೆ ಮಾತ್ರವಲ್ಲದೇ ಎಲ್ಲಾ ಫ್ಲೈಟ್ ಅಟೆಂಡೆಂಟ್‌ಗಳಿಗೆ ಅನ್ವಯಿಸುತ್ತದೆ. ಈ ಸಮಯದಲ್ಲಿ ಯಾರೊಂದಿಗೂ ಅನಗತ್ಯಸಂಭಾಷಣೆಯಲ್ಲಿ ತೊಡಗುವಂತಿಲ್ಲ.

ವಿಮಾನಗಳ ಲ್ಯಾಂಡಿಂಗ್ ವೇಳೆ ಪೈಲಟ್‌ಗಳು ಮಾತನಾಡದಿರಲು ಕಾರಣಗಳಿವು

ಪುಸ್ತಕಗಳನ್ನು ಓದುವುದಾದರೆ ಆ ಪುಸ್ತಕವು ವಿಮಾನದ ಸುರಕ್ಷಿತ ಕಾರ್ಯಾಚರಣೆಗೆ ಸಂಬಂಧಿಸಿರಬೇಕು. ಎಲ್ಲಾ ಪೈಲಟ್‌ಗಳು ಹಾಗೂ ಫ್ಲೈಟ್ ಅಟೆಂಡೆಂಟ್‌ಗಳ ಗಮನವನ್ನು ಬೇರೆಡೆಗೆ ಹೋಗುವುದನ್ನು ತಪ್ಪಿಸಲು ಈ ನಿಯಮವನ್ನು ಅನುಸರಿಸಲಾಗುತ್ತದೆ.

MOSTREAD: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ವಿಮಾನಗಳ ಲ್ಯಾಂಡಿಂಗ್ ವೇಳೆ ಪೈಲಟ್‌ಗಳು ಮಾತನಾಡದಿರಲು ಕಾರಣಗಳಿವು

ವಿಮಾನವು 10 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿರುವಾಗ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ವಿಮಾನದಲ್ಲಿ ಪೈಲಟ್‌ಗಳಿಗೆ ಟೇಕ್ ಆಫ್ ಹಾಗೂಲ್ಯಾಂಡಿಂಗ್'ನಂತಹ ಸವಾಲಿನ ಕೆಲಸಗಳಿರುತ್ತವೆ.

ವಿಮಾನಗಳ ಲ್ಯಾಂಡಿಂಗ್ ವೇಳೆ ಪೈಲಟ್‌ಗಳು ಮಾತನಾಡದಿರಲು ಕಾರಣಗಳಿವು

ಈ ಸಮಯದಲ್ಲಿ, ಪೈಲಟ್‌ಗಳು ವಿಮಾನ ನಿಯಂತ್ರಣ ಕೇಂದ್ರದೊಂದಿಗೆ ಮಾತನಾಡಬೇಕಾಗುತ್ತದೆ. ಅವರು ವಿಮಾನದ ಕಂಪ್ಯೂಟರ್ ಹಾಗೂ ಕ್ರಾಸ್ ಚೆಕ್ ಎಕ್ವಿಪ್'ಮೆಂಟ್ ಗಳಲ್ಲಿ ಮಾಹಿತಿಯನ್ನು ಒದಗಿಸುವ ಅಗತ್ಯವಿರುತ್ತದೆ. ಇದರಿಂದ ಈ ಸಮಯದಲ್ಲಿ ವಿಮಾನವನ್ನು ಸುರಕ್ಷಿತವಾಗಿ ನಿರ್ವಹಿಸುವುದು ಪೈಲಟ್‌ಗಳ ಮುಖ್ಯಸ್ಥರ ಕರ್ತವ್ಯವಾಗಿರುತ್ತದೆ.

Most Read Articles

Kannada
English summary
Reasons for pilots forbidden to talk below 10000 feet. Read in Kannada.
Story first published: Saturday, May 1, 2021, 14:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X