ಎಕ್ಸಾಸ್ಟ್ ಮಾಡಿಫೈಗೊಳಿಸಿ ಭಾರೀ ಸೌಂಡ್ ಮಾಡಿದ್ದಕ್ಕೆ ಬುಲೆಟ್ ಬೈಕ್ ಸವಾರನಿಗೆ ಬಿತ್ತು ದುಬಾರಿ ದಂಡ

ಭಾರತದಲ್ಲಿ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳ ಮೇಲೆ ಜನರಿಗಿರುವ ಕ್ರೇಜ್‌ ಇಂದು ನೆನ್ನೆಯದಲ್ಲ, ಅದು ಹಲವಾರು ದಶಕಗಳಿಂದ ಇರುವ ಕ್ರೇಜ್. ಇಂದಿಗೂ ರಾಯಲ್ ಎನ್‍ಫೀಲ್ಡ್ ಬೈಕ್ ಯುವಕರ ಕನಸಿನ ಬೈಕ್ ಮಾತ್ರವಲ್ಲದೇ ಯುವತಿಯರ ಕನಸಿನ ಬೈಕ್ ಕೂಡ ಆಗಿದೆ.

ಎಕ್ಸಾಸ್ಟ್ ಮಾಡಿಫೈಗೊಳಿಸಿ ಭಾರೀ ಸೌಂಡ್ ಮಾಡಿದ್ದಕ್ಕೆ ಬುಲೆಟ್ ಬೈಕ್ ಸವಾರನಿಗೆ ಬಿತ್ತು ದುಬಾರಿ ದಂಡ

ರಾಯಲ್ ಎನ್‍ಫೀಲ್ಡ್ ತನ್ನ ಕ್ಲಾಸಿಕ್ ವಿಶಿಷ್ಟವಾದ ಲುಕ್, ಶಬ್ಧ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್. ರಾಯಲ್ ಎನ್‍ಫೀಲ್ಡ್ ಬೈಕ್‌ಗಳ ಸರಣಿಯಲ್ಲಿ ಬುಲೆಟ್ ಭಾರತೀಯರ ಅತ್ಯಂತ ಪ್ರೀತಿಯ ಬೈಕ್‌ಗಳಲ್ಲಿ ಒಂದಾಗಿದೆ. ಈ ಬೈಕಿನ ವಿನ್ಯಾಸ ಎಲ್ಲಾ ಜನರಷನ್ ಜನರು ಇಷ್ಟ ಪಡುತ್ತಾರೆ. ಈ ಬೈಕಿನ ಎಕ್ಸಾಸ್ಟ್‌ನಿಂದ ಬರುವ ಸೌಂಡ್ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಕೆಲವರು ಇದನ್ನು ಮಾಡಿಫೈಗೊಳಿಸಿ ಇದರ ಸೌಂಡ್ ಅನ್ನು ಹೆಚ್ಚುಸುತ್ತಾರೆ. ಹಲವು ಕಡೆಗಳಲ್ಲಿ ಎಕ್ಸಾಸ್ಟ್ ಮಾಡಿಫೈಗೊಳಿಸಿರುವುದಕ್ಕೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ.

ಎಕ್ಸಾಸ್ಟ್ ಮಾಡಿಫೈಗೊಳಿಸಿ ಭಾರೀ ಸೌಂಡ್ ಮಾಡಿದ್ದಕ್ಕೆ ಬುಲೆಟ್ ಬೈಕ್ ಸವಾರನಿಗೆ ಬಿತ್ತು ದುಬಾರಿ ದಂಡ

ಅದೇ ರೀತಿ ನೇಷನ್ ಮಿರರ್ ಎಂಬ ಚಾನೆಲ್ ಅಪ್‌ಲೋಡ್ ಮಾಡಿರುವ ಯೂಟ್ಯೂಬ್ ವೀಡಿಯೋದಲ್ಲಿ, ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಸವಾರನೊಬ್ಬ ತನ್ನ ಬೈಕಿನ ಎಕ್ಸಾಸ್ಟ್ ಅನ್ನು ಮಾಡಿಫೈಗೊಳಿಸಿ ಸಿಡಿಯುವಂತಹ ಭಾರೀ ಸೌಂಡ್ ಮಾಡುವುದನ್ನು ನೋಡಬಹುದು.

ಎಕ್ಸಾಸ್ಟ್ ಮಾಡಿಫೈಗೊಳಿಸಿ ಭಾರೀ ಸೌಂಡ್ ಮಾಡಿದ್ದಕ್ಕೆ ಬುಲೆಟ್ ಬೈಕ್ ಸವಾರನಿಗೆ ಬಿತ್ತು ದುಬಾರಿ ದಂಡ

ಈ ಬುಲೆಟ್‌ನ ಎಕ್ಸಾಸ್ಟ್ ಪೈಪ್‌ನಿಂದ ಬರುವ ಸೌಂಡ್ ಕೇಳಿ ಸ್ಥಳೀಯ ಪೊಲೀಸರು ನಿಯಮಿತ ಸುರಕ್ಷತಾ ತಪಾಸಣೆಯಲ್ಲಿ ಇತನನ್ನು ನಿಲ್ಲಿಸುತ್ತಾರೆ. ಆದರೆ ಈ ಬೈಕ್ ಸವಾರ ಎಕ್ಸಾಸ್ಟ್ ಮಾಡಿಫೈಗೊಳಿಸಿರುವುದಕ್ಕೆ ಕ್ಷಮೆ ಕೇಳುವ ಬದಲು ಪೊಲೀಸರ್ ಜೊತೆ ವಾಗ್ವಾದಕ್ಕೆ ಇಳಿಯುತ್ತಾನೆ.

ಎಕ್ಸಾಸ್ಟ್ ಮಾಡಿಫೈಗೊಳಿಸಿ ಭಾರೀ ಸೌಂಡ್ ಮಾಡಿದ್ದಕ್ಕೆ ಬುಲೆಟ್ ಬೈಕ್ ಸವಾರನಿಗೆ ಬಿತ್ತು ದುಬಾರಿ ದಂಡ

ಪೊಲೀಸರ ಜೊತೆ ಮೊಂಡು ವಾದ ಮಾಡುತ್ತಾನೆ. ನಂತರ ಪೊಲೀಸರು ಇತನಿಗೆ ರೂ.15,000 ದಂಡವನ್ನು ವಿಧಿಸುತ್ತಾರೆ. ಕೆಲಕಾಲ ಆತನೊಂದಿಗೆ ವಾಗ್ವಾದ ನಡೆಸಿ, ಪೊಲೀಸರು ಬುಲೆಟ್ ಸವಾರನನ್ನು ಹೋಗಲು ಬಿಡುತ್ತಿರುವುದನ್ನು ಕಾಣಬಹುದು. ಅದರ ನಂತರವೂ ಆತ ಬೈಕ್ ಎಕ್ಸೆಲೇಟರ್ ಕೊಟ್ಟು ಭಾರೀ ಸೌಂಡ್ ಮಾಡುತ್ತಾನೆ. ಇದು ಪೊಲೀಸರು ಮತ್ತು ದಾರಿಹೋಕರನ್ನು ದಿಗ್ಭ್ರಮೆಗೊಳಿಸಿತು.

ಎಕ್ಸಾಸ್ಟ್ ಮಾಡಿಫೈಗೊಳಿಸಿ ಭಾರೀ ಸೌಂಡ್ ಮಾಡಿದ್ದಕ್ಕೆ ಬುಲೆಟ್ ಬೈಕ್ ಸವಾರನಿಗೆ ಬಿತ್ತು ದುಬಾರಿ ದಂಡ

ಆನೇಕ ರಾಯಲ್ ಎನ್‌ಫೀಲ್ಡ್ ಬುಲೆಟ್ ರೈಡರ್‌ಗಳು ತಮ್ಮ ಬೈಕ್‌ಗಳಲ್ಲಿ ಎಕ್ಸಾಸ್ಟ್ ಮಾಡಿಫೈಗೊಳಿಸಿಸಿ ಭಾರೀ ಸೌಂಡ್ ಮಾಡಿ ರೈಡ್ ಮಾಡುತ್ತಾರೆ, ಇದರಿಂದ ಇತರ ವಾಹನ ಸವಾರರ ಗಮನ ಬೇರೆ ಕಡೆ ಸೆಳೆಯುದರ ಜೊತೆಗೆ ಅವರಿಗೆ ಕಿರಿಕಿರಿ ಉಂಟು ಮಾಡುತ್ತದೆ.

ಎಕ್ಸಾಸ್ಟ್ ಮಾಡಿಫೈಗೊಳಿಸಿ ಭಾರೀ ಸೌಂಡ್ ಮಾಡಿದ್ದಕ್ಕೆ ಬುಲೆಟ್ ಬೈಕ್ ಸವಾರನಿಗೆ ಬಿತ್ತು ದುಬಾರಿ ದಂಡ

ರಾಯಲ್ ಎನ್‌ಫೀಲ್ಡ್ ಬುಲೆಟ್ ಬಹಳ ದೀರ್ಘಕಾಲದಿಂದ ಮಾರುವಾಗುತ್ತಿರುವ ಬೈಕ್ ಆಗಿದೆ, ಈ ಬೈಕ್ ಅನ್ನು ದಶಕಗಳಿಂದ ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ ಮತ್ತು ಸಾಂಪ್ರದಾಯಿಕ ಶೈಲಿ ವಿನ್ಯಾಸವನ್ನು ಉಳಿಸಿಕೊಂಡಿರುವ ಮಾದಿಯಾಗಿದೆ,

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬೈಕಿನಲ್ಲಿ 346 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಒಳಗೊಂಡಿದೆ, ಈ ಎಂಜಿನ್ 19.3 ಬಿ‍‍ಹೆಚ್‍‍ಪಿ ಪವರ್ ಮತ್ತು 28 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಎಕ್ಸಾಸ್ಟ್ ಮಾಡಿಫೈಗೊಳಿಸಿ ಭಾರೀ ಸೌಂಡ್ ಮಾಡಿದ್ದಕ್ಕೆ ಬುಲೆಟ್ ಬೈಕ್ ಸವಾರನಿಗೆ ಬಿತ್ತು ದುಬಾರಿ ದಂಡ

ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ರೇರ್ ಶಾಕ್ ಅಬ್ಸಾರ್ಬರ್ ಸೆಟಪ್ ಅನ್ನು ಒಳಗೊಂಡಿದೆ.

ಎಕ್ಸಾಸ್ಟ್ ಮಾಡಿಫೈಗೊಳಿಸಿ ಭಾರೀ ಸೌಂಡ್ ಮಾಡಿದ್ದಕ್ಕೆ ಬುಲೆಟ್ ಬೈಕ್ ಸವಾರನಿಗೆ ಬಿತ್ತು ದುಬಾರಿ ದಂಡ

ಇನ್ನು ಈ ಬೈಕಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಸುರಕ್ಷತೆಗಾಗಿ ಮುಂಭಾಗದಲ್ಲಿ 280 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 153 ಎಂಎಂ ಡ್ರಮ್ ಬೈಕ್ ಅನ್ನು ಹೊಂದಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್ ಸ್ಟ್ಯಾಡಂರ್ಡ್ ಆಗಿ ಅಳವಡಿಸಿದೆ.

ಎಕ್ಸಾಸ್ಟ್ ಮಾಡಿಫೈಗೊಳಿಸಿ ಭಾರೀ ಸೌಂಡ್ ಮಾಡಿದ್ದಕ್ಕೆ ಬುಲೆಟ್ ಬೈಕ್ ಸವಾರನಿಗೆ ಬಿತ್ತು ದುಬಾರಿ ದಂಡ

ಇನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತದಲ್ಲಿ ನ್ಯೂ ಜನರೇಷನ್ ಬುಲೆಟ್ 350 ಅನ್ನು 2022 ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹೊಸ ಮಾದರಿಯು ಬ್ರ್ಯಾಂಡ್‌ನ 'ಜೆ' ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಕ್ಲಾಸಿಕ್ 350 ಮತ್ತು ಮಿಟಿಯರ್ 350 ಗಳಿಗೂ ಸಹ ಆಧಾರವಾಗಿದೆ. ವಿನ್ಯಾಸವು ಕೆಲವು ಬದಲಾವಣೆಗಳಿಗೆ ಒಳಗಾಗುತ್ತದೆ, ಆದರೂ ಬುಲೆಟ್‌ನ ರೆಟ್ರೊ ಸ್ಟೈಲ್ ಅನ್ನು ಸಂರಕ್ಷಿಸಲಾಗಿದೆ.

ಎಕ್ಸಾಸ್ಟ್ ಮಾಡಿಫೈಗೊಳಿಸಿ ಭಾರೀ ಸೌಂಡ್ ಮಾಡಿದ್ದಕ್ಕೆ ಬುಲೆಟ್ ಬೈಕ್ ಸವಾರನಿಗೆ ಬಿತ್ತು ದುಬಾರಿ ದಂಡ

ಈ ನ್ಯೂ ಜನರೇಷನ್ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಮಾದರಿಯು ಅನಾಲಾಗ್ ಸ್ಪೀಡೋಮೀಟರ್ ಮತ್ತು ಟ್ರಿಪ್‌ಮೀಟರ್, ಫ್ಯುಯಲ್ ಗೇಜ್ ಇತ್ಯಾದಿಗಳಿಗೆ ಡಿಜಿಟಲ್ ಡಿಸ್‌ಪ್ಲೇ ಒಳಗೊಂಡಿರುವ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಪಡೆದುಕೊಳ್ಳಬಹುದು ಎಂದು ನಿರೀಕ್ಷಿಸುತ್ತೇವೆ. ಆಫರ್‌ನಲ್ಲಿರುವ ಇತರ ವೈಶಿಷ್ಟ್ಯಗಳು ಫ್ರಂಟ್ ಡಿಸ್ಕ್ ಬ್ರೇಕ್, ಸಿಂಗಲ್-ಚಾನಲ್ ಎಬಿಎಸ್ ಮತ್ತು ಸೆಲ್ಫ್ ಸ್ಟಾರ್ಟ್, ರೇರ್ ಡಿಸ್ಕ್ ಬ್ರೇಕ್ (ಡ್ಯುಯಲ್-ಚಾನೆಲ್ ಎಬಿಎಸ್ ನೊಂದಿಗೆ) ಒಂದು ಆಯ್ಕೆಯಾಗಿ ನೀಡಲಾಗುವುದು.

ಎಕ್ಸಾಸ್ಟ್ ಮಾಡಿಫೈಗೊಳಿಸಿ ಭಾರೀ ಸೌಂಡ್ ಮಾಡಿದ್ದಕ್ಕೆ ಬುಲೆಟ್ ಬೈಕ್ ಸವಾರನಿಗೆ ಬಿತ್ತು ದುಬಾರಿ ದಂಡ

ಬಿಡುಗಡೆಯಾಗಲಿರುವ ನ್ಯೂ ಜನರೇಷನ್ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಪ್ರಸ್ತುತ ಮಾದರಿಗಿಂತ ತುಸು ದುಬಾರಿಯಾಗಿರುತ್ತದೆ. ಈ ಹೊಸ ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಜಾವಾ, ಹೋಂಡಾ ಸಿಬಿ350 ಹೈನಸ್, ಬೆನೆಲ್ಲಿ ಇಂಪಿರಿಯಲ್ 400 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Royal enfield bullet rider fined for modified exhaust makes cracker noises details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X