Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂಚಾರಿ ನಿಯಮ ಉಲ್ಲಂಘಿಸಿದ ಆರ್‍ಟಿಒ ಅಧಿಕಾರಿಗೆ ಸಾರ್ವಜನಿಕರಿಂದ ಕ್ಲಾಸ್
ನೂತನ ಸಂಚಾರಿ ನಿಯಮ ಜಾರಿಯಾದ ಬಳಿಕ ಭಾರೀ ಪ್ರಮಾಣದಲ್ಲಿ ದುಬಾರಿ ದಂಡವನ್ನು ವಿಧಿಸುತ್ತಿದ್ದಾರೆ. ಈ ದುಬಾರಿ ದಂಡವನ್ನು ವಿಧಿಸುತ್ತಿರುವುದರಿಂದ ಸಾರ್ವಜನಿಕರು ಸರ್ಕಾರದ ವಿರುದ್ದ ಮಾತ್ರವಲ್ಲದೇ ಸರ್ಕಾರಿ ಅಧಿಕಾರಿಗಳ ಮೇಲೆಯೂ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರಿ ಅಧಿಕಾರಿಗಳು ಸಂಚಾರಿ ನಿಯಮವನ್ನು ಉಲ್ಲಂಘಿಸಿದಾಗ ಸಾರ್ವಾಜನಿಕರು ಅಧಿಕಾರಿಗಳನ್ನು ತಡೆದು ಸರ್ವಾಜನಿಕರು ತರಾಟೆಗೆ ತೆಗೆದುಕೊಳ್ಳುವ ಹಲವಾರು ವೀಡಿಯೊಗಳು ವೈರಲ್ ಆಗಿವೆ. ಅದೇ ರೀತಿಯಲ್ಲಿ ಆರ್‍ಟಿಒ ಅಧಿಕಾರಿಯೊಬ್ಬರು ಸಂಚಾರಿ ನಿಯಮವನ್ನು ಉಲ್ಲಂಘಿಸಿದಾಗ ಅವರ ವಾಹನವನ್ನು ತಡೆದು, ಅವರಿಗೆ ದಂಡವನ್ನು ವಿಧಿಸುವಂತೆ ಪೊಲೀಸರಿಗೆ ಹೇಳುವ ಘಟನೆಯೊಂದು ನಡೆದಿದೆ.

ಈ ಘಟನೆಯು ಉತ್ತರಪ್ರದೇಶದ ಪಿಲಿಭಿತ್‍ನಲ್ಲಿ ನಡೆದಿದೆ. ಸಂಚಾರಿ ನಿಯಮವನ್ನು ಉಲ್ಲಂಘಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಮಿತಾಭ್ ರಾಯ್ ಮಹೀಂದ್ರಾ ಬೊಲೆರೊದಲ್ಲಿ ತನ್ನ ವೈಯಕ್ತಿಕ ಭದ್ರತೆಯೊಂದಿಗೆ ಕರ್ತವ್ಯಕ್ಕೆ ತೆರಳುತ್ತಿದ್ದರು. ಇವರು ಕರ್ತವ್ಯಕ್ಕೆ ಬೊಲೆರೊ ವಾಹನದಲ್ಲಿ ತೆರಳುತ್ತಿರುವ ವೇಳೆಯಲ್ಲಿ ಇವರು ಸೀಟ್ ಬೆಲ್ಟ್ ಅನ್ನು ಧರಿಸಿರಲಿಲ್ಲ.

ಆರ್‍ಟಿಒ ಅಧಿಕಾರಿಯು ಸೀಟ್‍ಬೆಲ್ಟ್ ಧರಿಸದೆ ವಾಹನದಲ್ಲಿ ಸಂಚಾರಿಸುತ್ತಿರುವಾಗ ಸರ್ವಾಜನಿಕರು ವಾಹನವನ್ನು ತಡೆದು ಸೀಟ್‍ಬೆಲ್ಟ್ ಯಾಕೆ ಧರಿಸಲಿಲ್ಲವೆಂದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಯು ತನ್ನ ಚಾಲಕನು ಸೀಟ್‍ಬೆಲ್ಟ್ ಧರಿಸಿದ್ದಾನೆ, ಆತನು ಯಾವಗಲೂ ಸೀಟ್ ಬೆಲ್ಟ್ ಧರಿಸುತ್ತಾನೆ ಎಂದು ಹೇಳಿದ್ದಾರೆ.

ಸಾರ್ವಜನಿಕರು ಈ ಅಧಿಕಾರಿಯ ಉಡಾಫೆ ಉತ್ತರವನ್ನು ಒಪ್ಪುವುದಕ್ಕೆ ತಯಾರು ಇರಲಿಲ್ಲ. ಅಲ್ಲೇ ಇದ್ದ ಪೊಲೀಸರಿಗೆ ದಂಡವನ್ನು ವಿಧಿಸಲು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಯಾವ ಪ್ರಮಾಣದಲ್ಲಿ ದಂಡವನ್ನು ವಿಧಿಸಿದ್ದಾರೆ, ಮತ್ತು ಆರ್‍ಟಿಒ ಅಧಿಕಾರಿ ದಂಡವನ್ನು ಕಟ್ಟಿದಾರೆಯೇ ಇಲ್ಲವೆ ಎಂಬುದರ ಮಾಹಿತಿ ತಿಳಿದುಬಂದಿಲ್ಲ.

ಸೆಪ್ಟೆಂಬರ್ 1 ರಿಂದ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತಂದ ರಾಜ್ಯಗಳಲ್ಲಿ ಉತ್ತರಪ್ರದೇಶ ಕೂಡ ಒಂದು ಎಂಬ ವಿಷಯವನ್ನು ಗಮನಿಸಬೇಕು. ನೂತನ ಸಂಚಾರಿ ನಿಯಮ ಉಲ್ಲಂಘಿಸಿದರೆ ಸರ್ವಾಜನಿಕರಿಗೆ ದುಬಾರಿ ದಂಡವಾದರೇ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಅದರ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ.

ಸರ್ಕಾರಿ ಅಧಿಕಾರಗಳು ಸಾರ್ವಜನಿಕರಿಗೆ ಮಾದರಿ ಎಂಬ ಕಾರಣಕ್ಕೆ ಈ ಕಾನೂನನ್ನು ಮಾಡಿದ್ದಾರೆ. ಆದರೆ ಮಾದರಿಯಾಗಬೇಕಾದ ಸರ್ಕಾರಿ ಅಧಿಕಾರಿಗಳು ಸಂಚಾರಿ ನಿಯಮವನ್ನು ಉಲ್ಲಂಘಿಸಿ ಸರ್ವಾಜನಿಕರು ತರಾಟೆಗೆ ತೆಗೆದುಕೊಳ್ಳುವ ಅನೇಕ ವೀಡಿಯೊಗಳು ವೈರಲ್ ಆಗುತ್ತಿವೆ.

ಕಳೆದ ಬಾರಿ ಇದೇ ರೀತಿಯ ಘಟನೆಯಲ್ಲಿ, ಸೀಟ್ ಬೆಲ್ಟ್ ಧರಿಸಿದೆ ಸಂಚಾರಿ ನಿಯಮ ಉಲ್ಲಂಘಿಸಿದ ಪೊಲೀಸರನ್ನು ತಡೆದು ಕಾನೂನನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ ಪೊಲೀಸರೇ ನಿಯಮ ಉಲ್ಲಂಘಸಿದರೇ ಹೇಗೆ ಎಂದು ಸಾರ್ವಾಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ನಡುವೆ ಜನರ ಪ್ರತಿಭಟನೆ ಮತ್ತು ಆಕ್ರೋಶ ಹೆಚ್ಚಾಗುವುದನ್ನು ಕಂಡು ಪೊಲೀಸರು ಆತುರದಿಂದ ಸೀಟ್ ಬೆಲ್ಟ್ ಧರಿಸುತ್ತಾರೆ. ಆದರೆ ಅಲ್ಲಿ ಪ್ರತಿಭಟೆನೆಗೆ ಸೇರಿದ್ದ ಹಲವರು ಟಾಟಾ ಸಫಾರಿ ಸ್ಟಾರ್ಮ್‍ನಲ್ಲಿ ಸೀಟ್ ಬೆಲ್ಟ್ ಧರಿಸದೇ ಇರುವ ವಿಡಿಯೋವನ್ನು ಮಾಡಿದ್ದರು.

ನಂತರ ಟ್ರಾಫಿಕ್ ಪೊಲೀಸರಿಗೆ ಸಾರ್ವಜನಿಕರು ಟಾಟಾ ಸಫಾರಿ ಸ್ಟಾರ್ಮ್‍ನಲ್ಲಿರುವ ಪೊಲೀಸರಿಗೆ ದಂಡದ ಚಲನ್ ನೀಡಲು ಒತ್ತಾಯಿಸುತ್ತಾರೆ. ಸಂಚಾರಿ ನಿಯಮದಂತೆ ಸೀಟ್ ಬೆಲ್ಟ್ ಧರಿಸಿದಿದ್ದಕ್ಕಾಗಿ ರೂ. 1,000 ದಂಡವನ್ನು ವಿಧಿಸುವಂತೆ ಟ್ರಾಫಿಕ್ ಪೊಲೀಸರನ್ನು ಒತ್ತಾಯಿಸುತ್ತಾರೆ. ಜನರ ಆಕ್ರೋಶದಿಂದ ಟ್ರಾಫಿಕ್ ಪೊಲೀಸರು ಟಾಟಾ ಸಫಾರಿ ಸ್ಟಾರ್ಮ್ ಪೊಲೀಸರ ಕಾರನ್ನು ಬದಿಗೆ ಸರಿಸಲು ಹೇಳಿ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದರು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್
ಸರ್ಕಾರಿ ಅಧಿಕಾರಿಗಳು ಮಾತ್ರ ಸಂಚಾರಿ ನಿಯಮವನ್ನು ಸರಿಯಾಗಿ ಪಾಲಿಸುತ್ತಿಲ್ಲ ಮತ್ತು ದಂಡವನ್ನು ಕೂಡ ಪಾವತಿಸುತ್ತಿಲ್ಲ. ಯಾಕೆ ಅಂದರೆ ಅವರು ಸರ್ಕಾರಿ ಎಂಬ ಅಧಿಕಾರಿಗಳು ಎಂಬ ದರ್ಪ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಸಾರ್ವಜನಿಕರು ಪೊಲೀಸರು ಅಥವಾ ಸರ್ಕಾರಿ ಅಧಿಕಾರಿಗಳು ಸಂಚಾರಿ ನಿಯಮವನ್ನು ಉಲ್ಲಂಘಿಸಿದಾಗ ಅವರ ವಾಹನವನ್ನು ತಡೆದು ವೀಡಿಯೊವನ್ನು ಚಿತ್ರಿಕರಿಸುತ್ತಾರೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸಾರ್ವಜನಿಕರು ಸರ್ಕಾರಿ ಅಧಿಕಾರಿಗಳು ಸಂಚಾರಿ ನಿಯಮ ಉಲ್ಲಂಘಿಸಿದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟು ವೈರಲ್ ಆದ ಸಂದರ್ಭದಲ್ಲಿ ದಂಡವನ್ನು ವಿಧಿಸಿದ ಪ್ರಕರಣಗಳು ಕೂಡ ನಡೆದಿದೆ. ಭಾರತೀಯ ರಸ್ತೆಗಳು ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಒಂದಾಗಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಭಾರತೀಯ ರಸ್ತೆಗಳಲ್ಲಿ ಪ್ರತಿ ವರ್ಷ ಲಕ್ಷಾಂತರ ಅಪಘಾತಗಳು ಸಂಭವಿಸುತ್ತವೆ ಮತ್ತು ಈ ಅಪಘಾತಗಳು ಭೀಕರತೆಯಿಂದ ಕೂಡಿರುತ್ತವೆ. ಅಪಘಾತಗಳಾಗುದನ್ನು ತಪ್ಪಿಸಲು ಮತ್ತು ಚಾಲಕರು ಸಂಚಾರಿ ನಿಯಮ ಪಾಲಿಸಲಿ ಎಂದು ಹೊಸ ಸಂಚಾರಿ ನಿಯಮವನ್ನು ಜಾರಿಗೊಳಿಸಲಾಗಿದೆ. ದಂಡಕ್ಕೆ ಹೆದರಿಯಾದರೂ ಚಾಲಕರು ಸಂಚಾರಿ ನಿಯಮ ಪಾಲಿಸಲಿ ಎಂಬುದು ಇದರ ಉದ್ದೇಶವಾಗಿದೆ.
Source: UP Tak/YouTube