ಸೃಷ್ಟಿಯ ವೈಚಿತ್ರ್ಯ; ತನ್ನಿಂದ ತಾನೇ ಬೆಟ್ಟ ಹತ್ತುವ ಕಾರು!

By Nagaraja

ನಿಮ್ಮಲ್ಲಿ ಹಲವರಿಗೆ ಈ ಬಗ್ಗೆ ಗೊತ್ತಿರಲಾರದು. ನೀವು ಯಾವತ್ತಾದರೂ ಜಮ್ಮು ಮತ್ತು ಕಾಶ್ಮೀರದ ಲೇಹ್ ಮತ್ತು ಲಡಾಕ್‌ಗೆ ಭೇಟಿ ಕೊಟ್ಟಿರುವೀರಾ? ಇಲ್ಲವಾದ್ದಲ್ಲಿ ಈಗಲೇ ನಿಮ್ಮ ಪ್ರವಾಸವನ್ನು ಯೋಜನೆ ಮಾಡಿಕೊಳ್ಳಿ. ಯಾಕೆಂದರೆ ನಾವಿಂದು ಪರಿಚಯಿಸುವ ಬೆಟ್ಟದಲ್ಲಿ ವಾಹನಗಳು ತನ್ನಿಂದ ತಾನೇ ಬೆಟ್ಟವನ್ನು ಹತ್ತಲಿದೆ.

ಆಹಾ, ಏನು ಪವಾಡವಿದು? ಸೃಷ್ಟಿಯ ವೈಚಿತ್ರ್ಯವೇ ಸರಿ! ಪ್ರಸ್ತುತ ಮ್ಯಾಗ್ನೆಟಿಕ್ ಹಿಲ್ ಅಥವಾ ಅಯಸ್ಕಾಂತ ಬೆಟ್ಟ ಲಡಾಕ್‌ನಲ್ಲಿದೆ. ಇನ್ನು ಆಸಕ್ತಿದಾಯಕ ಮಾಹಿತಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ಮ್ಯಾಗ್ನೆಟಿಕ್ ಹಿಲ್ ಅಥವಾ ಅಯಸ್ಕಾಂತ ಬೆಟ್ಟ

ಅಯಸ್ಕಾಂತ ಬೆಟ್ಟ ಎಂದೇ ಖ್ಯಾತಿ ಪಡೆದಿರುವ ಮ್ಯಾಗ್ನೆಟಿಕ್ ಹಿಲ್ ನಲ್ಲಿ ಗುರುತ್ವಾಕರ್ಷಣೆಯ ಸಿದ್ಧಾಂತವು ತಪ್ಪು ಎಂಬುದು ಅಕ್ಷರಶ: ಸಾಬೀತಾಗುತ್ತದೆ. ಯಾಕೆಂದರೆ ಇಲ್ಲಿ ವಾಹನ ಚಾಲನೆ ಇಲ್ಲದಿದ್ದರೂ ತನ್ನಿಂದ ತಾನೇ ಚಲಿಸತೊಡಗುತ್ತದೆ.

ಮ್ಯಾಗ್ನೆಟಿಕ್ ಹಿಲ್ ಅಥವಾ ಅಯಸ್ಕಾಂತ ಬೆಟ್ಟ

ಲೇಹ್-ಕಾರ್ಗಿಲ್-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲೇಹ್‌ನಿಂದ ಸುಮಾರು 30 ಕೀ.ಮೀ. ದೂರದಲ್ಲಿ ಸಮುದ್ರ ಮಟ್ಟಕ್ಕಿಂತ 11,000 ಅಡಿ ಎತ್ತರದಲ್ಲಿ ಮ್ಯಾಗ್ನಿಟಿಕ್ ಹಿಲ್ ಸ್ಥಿತಗೊಂಡಿದೆ.

ಮ್ಯಾಗ್ನೆಟಿಕ್ ಹಿಲ್ ಅಥವಾ ಅಯಸ್ಕಾಂತ ಬೆಟ್ಟ

ಮ್ಯಾಗ್ನಿಟಿಕ್ ಹಿಲ್ ದಕ್ಷಿಣ ಭಾಗದಲ್ಲಿ ಸಿಂಧೂ ನದಿ ಹರಿದು ಹೋಗುತ್ತದೆ. ನಿಮಗೆಲ್ಲರಿಗೂ ಗೊತ್ತಿರುವಂತೆಯೇ ಟಿಬೆಟ್ ನಿಂದ ಉಗಮವಾಗುವ ಸಿಂಧೂ ನದಿ ಪಾಕಿಸ್ತಾನದತ್ತ ಹರಿಯುತ್ತದೆ.

ಮ್ಯಾಗ್ನೆಟಿಕ್ ಹಿಲ್ ಅಥವಾ ಅಯಸ್ಕಾಂತ ಬೆಟ್ಟ

ಈಗ ಕಾರು ಹಾಗೂ ಬೈಕ್ ಪ್ರವಾಸಿಗಾರರಿಗೆ ಮ್ಯಾಗ್ನಿಟಿಕ್ ಹಿಲ್ ನೆಚ್ಚಿನ ಪ್ರವಾಸಿ ತಾಣವಾಗಿ ಮಾರ್ಪಾಟ್ಟಿದೆ. ಯಾವುದೋ ಅದೃಷ್ಟ ಶಕ್ತಿ ತಳ್ಳುವಂತೆಯೇ ಇಲ್ಲಿ ಕಾರುಗಳು ಸರಾಗವಾಗಿ ಬೆಟ್ಟವೇರಿ ಬರುತ್ತದೆ.

ಮ್ಯಾಗ್ನೆಟಿಕ್ ಹಿಲ್ ಅಥವಾ ಅಯಸ್ಕಾಂತ ಬೆಟ್ಟ

ಸುತ್ತಲೂ ಬೆಟ್ಟದಿಂದ ಆವರಿಸ್ಪಟ್ಟ ಮ್ಯಾಗ್ನಿಟಿಕ್ ಹಿಲ್ ನಿಜಕ್ಕೂ ಸೃಷ್ಟಿಯ ವೈಚಿತ್ರ್ಯವೇ ಸರಿ. ಇಲ್ಲಿನ ಸ್ಥಳೀಯರು ಇದನ್ನು ಕಾಣದ ದೇವರ ಅದೃಷ್ಟ ಶಕ್ತಿಯ ಪ್ರಭಾವ ಎಂದು ನಂಬಿಕೊಂಡಿದ್ದಾರೆ.

ಮ್ಯಾಗ್ನೆಟಿಕ್ ಹಿಲ್ ಅಥವಾ ಅಯಸ್ಕಾಂತ ಬೆಟ್ಟ

ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಇದರ ಅನುಭವವಾಗಲು ಇಲ್ಲಿ ಸಂಕೇತ ಚಿಹ್ನೆಯನ್ನು ಕೊಡಲಾಗಿದೆ. ಈ ಮೂಲಕ ಪ್ರತಿಯೊಬ್ಬ ಕಾರು ಸಂಚಾರಿಯೂ ಈ ಅನುಭವ ತಮ್ಮದಾಗಿಸಿಕೊಳ್ಳಬಹುದಾಗಿದೆ.

ಮ್ಯಾಗ್ನೆಟಿಕ್ ಹಿಲ್ ಅಥವಾ ಅಯಸ್ಕಾಂತ ಬೆಟ್ಟ

ಒಟ್ಟಿನಲ್ಲಿ ಅಯಸ್ಕಾಂತ ಬೆಟ್ಟ ಅಥವಾ ಮ್ಯಾಗ್ನೆಟಿಕ್ ಹಿಲ್ ಬಗ್ಗೆ ಕೇಳಿದ ಬಳಿಕ ನಿಮ್ಮಲ್ಲಿ ಉಂಟಾಗುವ ಭಾವನೆಗಳೇನು? ನೀವಿದನ್ನು ನಂಬುವೀರಾ? ಇದರ ಹಿಂದಿರುವ ವೈಜ್ಞಾನಿಕ ಸತ್ಯಗಳೇನು? ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಿರಿ.

Most Read Articles

Kannada
Read more on ಕಾರು car
English summary
Magnetic Hill or gravity hill located near Leh in Ladakh, India. The alignment of the road with the slope of the background can give the illusion that cars are able to drift upwards.
Story first published: Friday, May 29, 2015, 9:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X