ಗೋಲ್ಡನ್ ಸ್ಟಾರ್‌ಗೆ ಮಡದಿಯಿಂದ ಬೊಂಬಾಟ್ ಉಡುಗೊರೆ

Written By:

'ಶ್ರಾವಣಿ ಸುಬ್ರಮಣ್ಯ' ಹಾಗೂ 'ದಿಲ್ ರಂಗೀಲಾ' ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳ ಬಳಿಕ ಗೋಲ್ಡನ್ ಸ್ಟಾರ್ ಗಣೇಶ ನಿಜಕ್ಕೂ ಬಹುಬೇಡಿಕೆಯ ನಟರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.

ಸಂಜನಾಳ ಸಿಕ್ರೇಟ್ ಏನು ಗೊತ್ತೇ? ಮುಂದೆ ಓದಿ

ಅಷ್ಟೇ ಯಾಕೆ ಮುಂದಿನ ಚಿತ್ರ 'ಸ್ಟೈಲ್ ಕಿಂಗ್'‌ನಲ್ಲಿ ನೈಜ ಶೈಲಿ ತೋರಿಸಲು ಹೊರಟಿದ್ದಾರೆ. ಹಾಗಿರಬೇಕೆಂದರೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಗಣೇಶನಿಗೆ ಪತ್ನಿ ಶಿಲ್ಪಾ ಗಣೇಶ ಬೊಂಬಾಟ್ ಉಡುಗೊರೆಯೊಂದನ್ನು ನೀಡಿದ್ದಾರೆ. ಅದೇನಂತೀರಾ? ಸಸ್ಪೆನ್ಸ್ ಬ್ರೇಕ್ ಮಾಡಲು ಚಿತ್ರಸಂಪುಟದತ್ತ ತೆರಳಿರಿ...

ಗೋಲ್ಡನ್ ಸ್ಟಾರ್‌ಗೆ ಮಡದಿಯಿಂದ ಬೊಂಬಾಟ್ ಉಡುಗೊರೆ

ಹೌದು, ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಗಣೇಶನಿಗೆ ಮಡದಿ ಶಿಲ್ಪಾ, ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿರುವ ಮರ್ಸಿಡಿಸ್ ಬೆಂಝ್ ಜಿಎಲ್ ಕ್ಲಾಸ್ ಸನ್ಮಾನಿಸಿದ್ದಾರೆ.

ಗೋಲ್ಡನ್ ಸ್ಟಾರ್‌ಗೆ ಮಡದಿಯಿಂದ ಬೊಂಬಾಟ್ ಉಡುಗೊರೆ

ಚಿತ್ರ ನಿರ್ಮಾಪಕಿಯೂ ಆಗಿರುವ ಶಿಲ್ಪಾ, ಈ ಮೂಲಕ ಅತಿ ವಿಶಿಷ್ಟ ಉಡುಗೊರೆಯನ್ನು ನೀಡಿದ್ದಾರೆ. ಬೆಂಝ್ ಮೈಸೂರು ವಿತರಕರಿಂದ ಕಾರನ್ನು ಹಸ್ತಾಂತರಿಸಲಾಗಿದೆ. ಗಣೇಶ-ಶಿಲ್ಪಾ ದಂಪತಿಯ ಮುದ್ದಿನ ಮಗಳು ಸಹ ಈ ವೇಳೆ ಅಪ್ಪ-ಅಮ್ಮಂದಿರ ಜೊತೆಗಿದ್ದರು.

ಗೋಲ್ಡನ್ ಸ್ಟಾರ್‌ಗೆ ಮಡದಿಯಿಂದ ಬೊಂಬಾಟ್ ಉಡುಗೊರೆ

ಜುಲೈ 2ರಂದು (ಇಂದು) ಗೋಲ್ಡನ್ ಸ್ಟಾರ್ ತಮ್ಮ 33ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದರಂತೆ ಸ್ವತ: ಶಿಲ್ಪಾ ಅವರೇ ಗಣೇಶನ ಅಭಿರುಚಿಗೆ ತಕ್ಕಂತೆ ಕಾರಿನ ಬಣ್ಣ ಹಾಗೂ ವೈಶಿಷ್ಟ್ಯಗಳನ್ನು ಆರಿಸಿದ್ದಾರೆ.

ಗೋಲ್ಡನ್ ಸ್ಟಾರ್‌ಗೆ ಮಡದಿಯಿಂದ ಬೊಂಬಾಟ್ ಉಡುಗೊರೆ

ಇನ್ನು ಮುಂದೆ ಇದೇ ಕಾರಲ್ಲಿ ಗಣೇಶ ಶೂಟಿಂಗ್ ಸ್ಥಳಕ್ಕೆ ತೆರಳುವ ಸಾಧ್ಯತೆಯಿದೆ. ಇದರ ಎಎಂಜಿ ಶೈಲಿಯ ಬಾಡಿಕಿಟ್ ಇನ್ನು ವಿಶೇಷವಾಗಿಸಿದೆ.

ಬೆಂಝ್ ಜಿಎಲ್ ಕ್ಲಾಸ್ ವಿಶಿಷ್ಟತೆಗಳು

ಬೆಂಝ್ ಜಿಎಲ್ ಕ್ಲಾಸ್ ವಿಶಿಷ್ಟತೆಗಳು

ಪ್ಯಾನೋರಾಮಿಕ್ ಸನ್‌ರೂಫ್,

ಕ್ರಾಸ್‌ವಿಂಡ್ ಅಸಿಸ್ಟ್,

ಡ್ರೈವಿಂಗ್ ಅಸಿಸ್ಟನ್ಸ್ ಸಿಸ್ಟಂ,

ಎಎಂಜಿ ಎಕ್ಸ್‌ಟೀರಿಯರ್ ಸ್ಪೋರ್ಟ್ಸ್ ಪ್ಯಾಕೇಜ್,

ಹೆಚ್ಚು ಸ್ಥಳಾವಕಾಶ

ಗೋಲ್ಡನ್ ಸ್ಟಾರ್‌ಗೆ ಮಡದಿಯಿಂದ ಬೊಂಬಾಟ್ ಉಡುಗೊರೆ

ಬೆಂಝ್‌ನ ಶಕ್ತಿಶಾಲಿ ಎಸ್‌ಯುವಿಗಳಲ್ಲಿ ಒಂದಾಗಿರುವ ಜಿಎಲ್‌ ಕ್ಲಾಸ್ 5.5 ಲೀಟರ್ ಟ್ವಿನ್ ಟರ್ಬೊ ವಿ8 ಎಎಂಜಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 557 ಅಶ್ವಶಕ್ತಿ (760ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಗೋಲ್ಡನ್ ಸ್ಟಾರ್‌ಗೆ ಮಡದಿಯಿಂದ ಬೊಂಬಾಟ್ ಉಡುಗೊರೆ

ಜಿಲ್ ಕ್ಲಾಸ್ ಎಂಜಿನ್ ಎಎಂಜಿ ಸ್ಪೀಡ್ ಶಿಫ್ಟ್ ಪ್ಲಸ್ 7ಜಿ ಟ್ರಾನಿಕ್ ಗೇರ್ ಬಾಕ್ಸ್ ಪಡೆದುಕೊಂಡಿದೆ. ಇದು 4.9 ಸೆಕೆಂಡುಗಳಲ್ಲಿ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಗೋಲ್ಡನ್ ಸ್ಟಾರ್‌ಗೆ ಮಡದಿಯಿಂದ ಬೊಂಬಾಟ್ ಉಡುಗೊರೆ

ಕಾರಿನ ಒಳಮೈಯಲ್ಲೂ ಐಷಾರಾಮಿ ವೈಶಿಷ್ಟ್ಯಗಳಿಗೆ ಹೆಚ್ಚು ಒತ್ತು ಕೊಡಲಾಗಿದ್ದು, ಗರಿಷ್ಠ ಗುಣಮಟ್ಟದ ಉಪಕರಣಗಳನ್ನು ಬಳಕೆ ಮಾಡಲಾಗಿದೆ.

ಗೋಲ್ಡನ್ ಸ್ಟಾರ್‌ಗೆ ಮಡದಿಯಿಂದ ಬೊಂಬಾಟ್ ಉಡುಗೊರೆ

ರೇಂಜ್ ರೋವರ್ ಸ್ಪೋರ್ಟ್ಸ್ ಹಾಗೂ ಪೋರ್ಷೆ ಕಯೆನ್ನೆ ಟರ್ಬೊ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಬೆಂಝ್ ಜಿಲ್ ಕ್ಲಾಸ್ ಒಂದು ವರೆ ಕೋಟಿ ರು.ಗಳಷ್ಟು ದುಬಾರಿಯೆನಿಸಿದೆ.

ಗೋಲ್ಡನ್ ಸ್ಟಾರ್‌ಗೆ ಮಡದಿಯಿಂದ ಬೊಂಬಾಟ್ ಉಡುಗೊರೆ

ಇದರ 350ಸಿಡಿ ಬ್ಲೂ ಎಫಿಸಿಯನ್ಸಿ ವೆರಿಯಂಟ್ 2987ಸಿಸಿ ಡೀಸೆಲ್ ಎಂಜಿನ್ ಹೊಂದಿದ್ದು 75 ಲಕ್ಷ ರು.ಗಳಷ್ಟು ದುಬಾರಿಯೆಸಿದೆ. ಅದೇ ಹೊತ್ತಿಗೆ ಶಕ್ತಿಶಾಲಿ ಜಿಲ್ ಕ್ಲಸ್ 63 ಎಂಎಂಜಿ ಒಂದು ವರೆಗೆ ಕೋಟಿ ರು.ಗಳಷ್ಟು ದುಬಾರಿಯೆನಿಸಿದೆ.

ಗೋಲ್ಡನ್ ಸ್ಟಾರ್‌ಗೆ ಮಡದಿಯಿಂದ ಬೊಂಬಾಟ್ ಉಡುಗೊರೆ

ಒಟ್ಟಿನಲ್ಲಿ ಆಫ್ ರೋಡ್ ಸೇರಿದಂತೆ ಎಲ್ಲ ವಿಧದ ಭೂಪ್ರದೇಶದಲ್ಲೂ ಬೆಂಝ್ ಜಿಎಲ್ ಕ್ಲಾಸ್ ಪರಿಪೂರ್ಣವೆನಿಸಿದ್ದು, ಈ ಏಳು ಸೀಟುಗಳ ಕಾರು ನಿಮಗೆ ಐಷಾರಾಮಿ ಅನುಭವ ನೀಡಲಿದೆ. ಇದರ ವೇಗವರ್ಧನೆ ಹಾಗೂ ಪಿಕಪ್‌ ಅತ್ಯಾದ್ಭುತ ಎಂಬುದು ವಿಮರ್ಶಕರ ಅಭಿಪ್ರಾಯವಾಗಿದೆ.

ಗೋಲ್ಡನ್ ಸ್ಟಾರ್‌ಗೆ ಮಡದಿಯಿಂದ ಬೊಂಬಾಟ್ ಉಡುಗೊರೆ

ಹಾಗಿದ್ದರೂ ಬೆಂಝ್ ಜಿಎಲ್ ಕ್ಲಾಸ್ ನಿರ್ವಹಣೆ ವೆಚ್ಚ ತುಂಬಾನೇ ಜಾಸ್ತಿ ಎಂಬ ಅಪವಾದವಿದೆ. ಹಾಗೆಯೇ ಇಂಧನ ಕ್ಷಮತೆಯು ತೃಪ್ತಿ ತಂದಿಲ್.

ಗೋಲ್ಡನ್ ಸ್ಟಾರ್‌ಗೆ ಮಡದಿಯಿಂದ ಬೊಂಬಾಟ್ ಉಡುಗೊರೆ

ಈ ಎಲ್ಲ ವಿಷಯಗಳು ಒಂದೆಡೆಯಾದರೆ ಕೋಟಿ ಬೆಲೆಬಾಳುವ ಕಾರು ಹೊಂದಿರುವವರ ಸಾಲಲ್ಲಿ ಸದ್ಯ ಗಣೇಶ ಸಹ ಸೇರ್ಪಡೆಯಾಗಿರುವುದಂತೂ ನಿಜ.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark