ಐತಿಹಾಸಿಕ ಸಾಧನೆ; ಸಮುದ್ರದಲ್ಲಿ ರಾಕೆಟ್ ಲ್ಯಾಂಡಿಂಗ್

Written By:

ಬೆಂಕಿಯುಗುಳುತ್ತಾ ಆಕಾಶಕ್ಕೆ ಚಿಮ್ಮುವ ರಾಕೆಟ್ ಗಳು ಭೂಮಿಗೆ ವಾಪಸಾಗಿರುವ ಇತಿಹಾಸ ಅತಿ ವಿರಳವಾಗಿದೆ. ಈ ಸಂಬಂಧ ನಿರಂತರ ಅಧ್ಯಯನ ಜಾರಿಯಲ್ಲಿರುವಂತೆಯೇ ರಾಕೆಟ್ ಮರುಬಳಕೆ ಮಾಡುವ ತಂತ್ರಜ್ಞಾನದಲ್ಲಿ ಮಗದೊಂದು ಮೈಲುಗಲ್ಲನ್ನಿಟ್ಟಿರುವ ಅಮೆರಿಕ ಮೂಲದ ಸ್ಪೇಸ್ ಎಕ್ಸ್ ಸಂಸ್ಥೆಯು 'ಫಾಲ್ಕನ್ 9' ರಾಕೆಟನ್ನು ಯಶಸ್ವಿಯಾಗಿ ಅಟ್ಲಾಂಟಿಕ್ ಸಮುದ್ರದದಲ್ಲಿ ಲ್ಯಾಂಡ್ ಮಾಡಿದೆ.

ಚಿಕ್ಕದಾದ ತೇಲುವ ಹಡಗಿನ ಮೇಲೆ ಫಾಲ್ಕನ್ 9 ರಾಕೆಟ್ ಲ್ಯಾಂಡ್ ಮಾಡುವ ಮೂಲಕ ಸ್ಪೇಸ್ ಎಕ್ಸ್, ವಿಶ್ವ ಬಾಹ್ಯಾಕಾಶ ಸಂಶೋಧನಾ ಮತ್ತು ಅಧ್ಯಯನದಲ್ಲಿ ನೂತನ ಅಧ್ಯಾಯ ಬರೆದಿದೆ. ಈ ಸಂಬಂಧ ಆಸಕ್ತಿದಾಯಕ ಮಾಹಿತಿಗಳಿಗಾಗಿ ಚಿತ್ರಪುಟದತ್ತ ಕಣ್ಣಾಯಿಸಿರಿ.

ಐತಿಹಾಸಿಕ ಸಾಧನೆ; ಸಮುದ್ರದಲ್ಲಿ ರಾಕೆಟ್ ಲ್ಯಾಂಡಿಂಗ್

ಇದು ಎರಡನೇ ಬಾರಿಗೆ ಸ್ಪೇಸ್ ಎಕ್ಸ್ ಯಶಸ್ವಿಯಾಗಿ ರಾಕೆಟನ್ನು ಲ್ಯಾಂಡ್ ಮಾಡುತ್ತಿದೆ. ಇದಕ್ಕೂ ಮೊದಲು ಡಿಸೆಂಬರ್ ನಲ್ಲಿ ಫ್ಲೋರಿಡಾದ ಕೇಪ್ ಕೆನವೆರಾಲ್ ಬಾಹ್ಯಾಕಾಶ ಕೇಂದ್ರದಲ್ಲಿ ಯಶಸ್ವಿ ಲ್ಯಾಂಡಿಂಗ್ ನಡೆಸಿತ್ತು.

ಐತಿಹಾಸಿಕ ಸಾಧನೆ; ಸಮುದ್ರದಲ್ಲಿ ರಾಕೆಟ್ ಲ್ಯಾಂಡಿಂಗ್

ಆದರೆ ಇದೇ ಮೊದಲ ಬಾರಿಗೆ ಸಮುದ್ರದಲ್ಲಿ ತೇಲುವ ಹಡಗಿನ ಮೇಲೆ ಲ್ಯಾಂಡಿಂಗ್ ಮಾಡುವ ಮೂಲಕ ಸ್ಪೇಸ್ ಎಕ್ಸ್ ಭೂಮಿ ಹಾಗೂ ಸಾಗರದಲ್ಲಿ ರಾಕೆಟ್ ಇಳಿಸುವ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿ ಕೊಟ್ಟಿದೆ.

ಐತಿಹಾಸಿಕ ಸಾಧನೆ; ಸಮುದ್ರದಲ್ಲಿ ರಾಕೆಟ್ ಲ್ಯಾಂಡಿಂಗ್

ಭೂಮಿಯ ಮೇಲೆ ರಾಕೆಟ್ ಇಳಿಸಲು ಅವಕಾಶವಿರುವಾಗ ಅದ್ಯಾಕೆ ಸಮುದ್ರದ ಅತಿ ಕಡಿಮೆ ಜಾಗದಲ್ಲಿ ಚಿಕ್ಕದಾದ ತೇಲುವ ಹಡಗಿನ ಮೇಲೆ ಇಳಿಸಲಾಗುತ್ತಿದೆ ಎಂಬ ಸಂಶಯ ನಿಮ್ಮಲ್ಲೂ ಮೂಡಬಹುದು.

ಐತಿಹಾಸಿಕ ಸಾಧನೆ; ಸಮುದ್ರದಲ್ಲಿ ರಾಕೆಟ್ ಲ್ಯಾಂಡಿಂಗ್

ನಿಜ, ಖಂಡಿತವಾಗಿಯೂ ಹಡಗಿಗಿಂತಲೂ ಹೆಚ್ಚು ವಿಶಾಲವಾದ ಭೂ ಪ್ರದೇಶ ಹೊಂದಿರುವ ನೆಲದ ಮೇಲೆ ಲ್ಯಾಂಡಿಂಗ್ ಮಾಡುವುದು ವಿಜ್ಞಾನಿಗಳ ಪಾಲಿಗೆ ಸುಲಭವಾದ ಕೆಲಸವಾಗಿದೆ.

ಐತಿಹಾಸಿಕ ಸಾಧನೆ; ಸಮುದ್ರದಲ್ಲಿ ರಾಕೆಟ್ ಲ್ಯಾಂಡಿಂಗ್

ಈ ಹಿಂದೆಯೆಲ್ಲ ಸಮುದ್ರದಲ್ಲಿ ಲ್ಯಾಂಡಿಂಗ್ ಮಾಡುವ ಪ್ರಯತ್ನ ಮಾಡಿದಾಗೆಲ್ಲ ಫಲಿತಾಂಶ ಬಹು ದೊಡ್ಡ ಸ್ಪೋಟವಾಗಿತ್ತು. ಇದರಿಂದಾಗಿ ಎಲ್ಲ ಯೋಜನೆಗಳು ತಲೆ ಕೆಳಗಾಗಿತ್ತು.

ಐತಿಹಾಸಿಕ ಸಾಧನೆ; ಸಮುದ್ರದಲ್ಲಿ ರಾಕೆಟ್ ಲ್ಯಾಂಡಿಂಗ್

ಹಡಗನ್ನು ಸಮುದ್ರದ ಮೇಲೆ ಇಳಿಸುವ ಯೋಜನೆಯ ಹಿಂದೆ ಹಲವು ಕಾರಣಗಳಿವೆ. ಇವುಗಳಲ್ಲಿ ಪ್ರಮುಖವಾಗಿರುವುದು ಇಂಧನ ಉಳಿತಾಯವಾಗಿದೆ. ಉಪಗ್ರಹ ಹೊತ್ತುಕೊಂಡು ಸಾಗುವ ಫಾಲ್ಕನ್ 9 ರಾಕೆಟ್ ನಿರ್ದಿಷ್ಟ ವಾಯು ವಲಯವನ್ನು ತಲುಪಿದಾಗ ಬೇರ್ಪಡುತ್ತದೆ.

ಐತಿಹಾಸಿಕ ಸಾಧನೆ; ಸಮುದ್ರದಲ್ಲಿ ರಾಕೆಟ್ ಲ್ಯಾಂಡಿಂಗ್

ರಾಕೆಟ್ ಪುನಃ ಭೂಮಿಗೆ ಮರಳಲು ಉಳಿದಿರುವ ಇಂಧನವನ್ನು ಬಳಸಿಕೊಳ್ಳುತ್ತದೆ. ಇಂಧನಗಳು ಸರಣಿ ದಹನಕಾರಿಯೊಂದಿಗೆ ಭೂಮಿಯ ಮೇಲೆ ಸರಿಯಾದ ಪ್ರದೇಶದಲ್ಲಿ ಬಂದಿಳಿಯಬೇಕಾಗುತ್ತದೆ.

ಐತಿಹಾಸಿಕ ಸಾಧನೆ; ಸಮುದ್ರದಲ್ಲಿ ರಾಕೆಟ್ ಲ್ಯಾಂಡಿಂಗ್

ವಿವಿಧ ಲ್ಯಾಂಡಿಂಗ್ ಗಳಿಗೆ ರಾಕೆಟ್ ಗಳನ್ನು ಎಳೆಯಲು ವಿವಿಧ ಪ್ರಮಾಣದ ಇಂಧನದ ಅಗತ್ಯವಿರುತ್ತದೆ. ಫಾಲ್ಕನ್ 9 ನೇರ ಮೇಲ್ಮುಖವಾಗಿ ಇಳಿಸಲು ಸಾಧ್ಯವಿಲ್ಲ. ಇದಕ್ಕಾಗಿ ಲಾಂಚ್ ಪ್ಯಾಡ್ ನಿಂದ ವಕ್ರಪಥವನ್ನು ಅನುಸರಿಸಲಾಗುತ್ತದೆ. ಇದರಿಂದಾಗಿ ನೆಲದ ಮೇಲೆ ಲ್ಯಾಂಡ್ ಮಾಡಲು, ವೇಗ ಕಡಿಮೆ ಮಾಡಲು, ತಿರುವುಗಳನ್ನು ಪಡೆಯಲು ಹೆಚ್ಚಿನ ಇಂಧನದ ಅವಶ್ಯಕತೆಯಿರುತ್ತದೆ.

ಐತಿಹಾಸಿಕ ಸಾಧನೆ; ಸಮುದ್ರದಲ್ಲಿ ರಾಕೆಟ್ ಲ್ಯಾಂಡಿಂಗ್

ಇವೆಲ್ಲವೂ ಲ್ಯಾಂಡಿಂಗ್ ದೂರವನ್ನು ಇಮ್ಮಡಿಗೊಳಿಸುತ್ತದೆ. ಇನ್ನೊಂದೆಡೆ ಸಾಗರದಲ್ಲಿ ರಾಕೆಟ್ ಇಳಿಸುವುದರಿಂದ ಡ್ರೋನ್ ಹಡಗು ರಾಕೆಟ್ ವ್ಯಾಪ್ತಿಯನ್ನು ಗ್ರಹಿಕೆ ಮಾಡಿ ಸೂಕ್ತ ಸ್ಥಾನ ನಿಗದಿ ಮಾಡಬಹುದಾಗಿದೆ. ಇದು ರಾಕೆಟ್ ಪ್ರಯಾಣ ದೂರವನ್ನು ಇಳಿಕೆ ಮಾಡುವುದಲ್ಲದೆ ಇಂಧನ ಪ್ರಮಾಣವನ್ನು ಕಡಿತಗೊಳಿಸುತ್ತದೆ.

ಐತಿಹಾಸಿಕ ಸಾಧನೆ; ಸಮುದ್ರದಲ್ಲಿ ರಾಕೆಟ್ ಲ್ಯಾಂಡಿಂಗ್

ರಾಕೆಟ್ ಗಳು ಭಾರಿ ಗಾತ್ರದ ಭಾರವನ್ನು ಹೊತ್ತೊಯ್ಯುವುದರಿಂದ ಹೆಚ್ಚುವರಿ ವೇಗದ ಅಗತ್ಯವಿರುತ್ತದೆ. ಇವೆಲ್ಲದಕ್ಕೂ ಹೆಚ್ಚಿನ ಪ್ರಮಾಣದ ಇಂಧನ ವ್ಯಯವಾಗುತ್ತದೆ. ಇದರಿಂದಾಗಿ ಲ್ಯಾಂಡಿಂಗ್ ವೇಳೆಯಲ್ಲಿ ಇಂಧನದ ಅಭಾವವೂ ಎದುರಾಗಲಿದೆ.

ಐತಿಹಾಸಿಕ ಸಾಧನೆ; ಸಮುದ್ರದಲ್ಲಿ ರಾಕೆಟ್ ಲ್ಯಾಂಡಿಂಗ್

ಇನ್ನೊಂದೆಡೆ ಡ್ರೋನ್ ಹಡಗುಗಳನ್ನು ಬಳಕೆ ಮಾಡುವುದರಿಂದ ಇಂತಹ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ. ಅಲ್ಲದೆ ಬಾಹ್ಯಾಕಾಶ ರಾಕೆಟನ್ನು ಮರು ಬಳಕೆ ಮಾಡಲು ಸಹಕಾರಿಯಾಗಲಿದೆ.

ಐತಿಹಾಸಿಕ ಸಾಧನೆ; ಸಮುದ್ರದಲ್ಲಿ ರಾಕೆಟ್ ಲ್ಯಾಂಡಿಂಗ್

ಸ್ಪೇಸ್ ಎಕ್ಸ್ ಸಂಸ್ಥೆಯ ಪ್ರಕಾರ ರಾಕೆಟ್ ಮರು ಬಳಕೆ ಮಾಡುವುದರಿಂದ ಉಡವಣಾ ವೆಚ್ಚವು ಶೇಕಡಾ 30ರಷ್ಟು ಇಳಿಕೆಯಾಗಲಿದೆ. ಅಲ್ಲದೆ ಪ್ರತಿ ಮೂರರಲ್ಲಿ ಒಂದರಷ್ಟು ರಾಕೆಟ್ ಗಳನ್ನು ಮಾತ್ರ ನೆಲದ ಮೇಲೂ ಮತ್ತು ಉಳಿದವುಗಳನ್ನು ಸಾಗರದಲ್ಲಿ ಇಳಿಕೆ ಮಾಡುವ ಯೋಜನೆ ಹೊಂದಿದೆ.

English summary
SpaceX Makes Falcon 9 Rocket Historic Landing At Sea
Story first published: Monday, April 11, 2016, 11:26 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark