100 ಕೋಟಿ ಲಸಿಕೆ ವಿತರಣೆ ಸಾಧನೆಯನ್ನು ವಿಶಿಷ್ಟವಾಗಿ ಆಚರಿಸಿದ ಸ್ಪೈಸ್ ಜೆಟ್

ಖ್ಯಾತ ವಿಮಾನಯಾನ ಕಂಪನಿಯಾದ ಸ್ಪೈಸ್ ಜೆಟ್ ಗುರುವಾರ ತನ್ನ ಬೋಯಿಂಗ್ 737 ವಿಶೇಷ ವಿಮಾನವನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರದರ್ಶಿಸಿದೆ. ಭಾರತದಲ್ಲಿ 100 ಕೋಟಿ ಕೋವಿಡ್ 19 ಲಸಿಕೆ ವಿತರಿಸಿದ ಐತಿಹಾಸಿಕ ಸಾಧನೆಯನ್ನು ಸಂಭ್ರಮಿಸಲು ಕಂಪನಿಯು ಈ ವಿಶೇಷ ವಿಮಾನವನ್ನು ಪ್ರದರ್ಶಿಸಿದೆ. ಮಾಹಿತಿಗಳ ಪ್ರಕಾರ ಸ್ಪೈಸ್ ಜೆಟ್ ನ ಮೂರು ಬೋಯಿಂಗ್ 737 ವಿಮಾನಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಆರೋಗ್ಯ ಕಾರ್ಯಕರ್ತರ ಚಿತ್ರಗಳನ್ನು ಹೊಂದಿವೆ.

100 ಕೋಟಿ ಲಸಿಕೆ ವಿತರಣೆ ಸಾಧನೆಯನ್ನು ವಿಶಿಷ್ಟವಾಗಿ ಆಚರಿಸಿದ ಸ್ಪೈಸ್ ಜೆಟ್

ಬೋಯಿಂಗ್ 737 ವಿಮಾನದ ಈ ಸಂಭ್ರಮಾಚರಣೆಯಲ್ಲಿ ಕೇಂದ್ರ ಆರೋಗ್ಯ ಸಚಿವರಾದ ಮನ್ಸುಖ್ ಮಾಂಡವಿಯಾ ಸಹ ಹಾಜರಿದ್ದರು. ಈ ಸಂದರ್ಭದಲ್ಲಿ ಸ್ಪೈಸ್ ಜೆಟ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಅಜಯ್ ಸಿಂಗ್ ಸಹ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇವಲ 279 ದಿನಗಳಲ್ಲಿ 100 ಕೋಟಿ ಕೋವಿಡ್ 19 ಲಸಿಕೆ ನೀಡಿರುವುದು ಆರೋಗ್ಯ ಕಾರ್ಯಕರ್ತರ ಪ್ರಯತ್ನಗಳಿಗೆ ಹಾಗೂ ನಾಗರಿಕರ ಸಹಕಾರಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

100 ಕೋಟಿ ಲಸಿಕೆ ವಿತರಣೆ ಸಾಧನೆಯನ್ನು ವಿಶಿಷ್ಟವಾಗಿ ಆಚರಿಸಿದ ಸ್ಪೈಸ್ ಜೆಟ್

ಸ್ಪೈಸ್‌ಜೆಟ್ ಹಾಗೂ ಸ್ಪೈಸ್‌ಹೆಲ್ತ್ ಸೇರಿದಂತೆ ನಮ್ಮ ಮುಂಚೂಣಿಯ ಕೆಲಸಗಾರರು ಮತ್ತು ಕರೋನಾ ಯೋಧರ ಅಸಾಧಾರಣ ಕೊಡುಗೆ ಈ ವಿಶೇಷ ಉಲ್ಲೇಖಕ್ಕೆ ಅರ್ಹವಾಗಿದೆ ಹಾಗೂ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಅವರು ಹೇಳಿದರು. ನಮ್ಮ ವಿಮಾನಗಳ ಲಿವರಿಯು ಭಾರತದ ಲಸಿಕೆ ಕಾರ್ಯಾಚರಣೆಯ ಯಶಸ್ಸಿಗೆ ಒಂದು ಸಣ್ಣ ಗೌರವವಾಗಿದ್ದು, ಇದು ಎಂದಿಗೂ ತನ್ನ ಚೈತನ್ಯವನ್ನು ಬಿಟ್ಟುಕೊಡುವುದಿಲ್ಲವೆಂದು ಅವರು ಹೇಳಿದರು.

100 ಕೋಟಿ ಲಸಿಕೆ ವಿತರಣೆ ಸಾಧನೆಯನ್ನು ವಿಶಿಷ್ಟವಾಗಿ ಆಚರಿಸಿದ ಸ್ಪೈಸ್ ಜೆಟ್

ಭಾರತದಲ್ಲಿ ನೀಡಲಾಗುತ್ತಿರುವ ಕೋವಿಡ್ 19 ಲಸಿಕೆ ಡೋಸ್ ಪ್ರಮಾಣವು ನಿನ್ನೆ 100 ಕೋಟಿಗಳ ಗಡಿ ದಾಟಿದೆ. ಭಾರತದಲ್ಲಿ ಅರ್ಹ ವಯಸ್ಕ ಜನಸಂಖ್ಯೆಯ 75% ನಷ್ಟು ಜನರಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗಿದ್ದರೆ, ಸುಮಾರು 31% ನಷ್ಟು ಜನರಿಗೆ ಲಸಿಕೆಯ ಎರಡೂ ಡೋಸ್‌ಗಳನ್ನು ನೀಡಲಾಗಿದೆ. ಭಾರತದಲ್ಲಿ ಕೋವಿಡ್ 19 ಲಸಿಕೆಯನ್ನು ಅಭಿಯಾನವನ್ನು ಜನವರಿ 16 ರಂದು ಆರಂಭಿಸಲಾಯಿತು.

100 ಕೋಟಿ ಲಸಿಕೆ ವಿತರಣೆ ಸಾಧನೆಯನ್ನು ವಿಶಿಷ್ಟವಾಗಿ ಆಚರಿಸಿದ ಸ್ಪೈಸ್ ಜೆಟ್

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಯಿತು. ಮುಂಚೂಣಿಯ ಕಾರ್ಮಿಕರಿಗೆ ಫೆಬ್ರವರಿ 2 ರಿಂದ ಲಸಿಕೆ ನೀಡಲಾಯಿತು. ಇನ್ನು ಸ್ಪೈಸ್ ಜೆಟ್ ವಿಮಾನಯಾನ ಕಂಪನಿಯ ಬಗ್ಗೆ ಹೇಳುವುದಾದರೆ, ಕಂಪನಿಯು ಹಲವಾರು ವರ್ಷಗಳಿಂದ ಭಾರತದಲ್ಲಿ ಸೇವೆಗಳನ್ನು ನೀಡುತ್ತಿದೆ. ಸ್ಪೈಸ್ ಜೆಟ್ ಕಂಪನಿಯು ಕೆಲವು ತಿಂಗಳ ಹಿಂದಷ್ಟೇ ತನ್ನ ಉದ್ಯೋಗಿಗಳ ಚಲನೆಗಾಗಿ ಎಲೆಕ್ಟ್ರಿಕ್ ವಾಹನಗಳ ಸಮೂಹವನ್ನು ನಿಯೋಜಿಸಲು ಇಇ ಟ್ಯಾಕ್ಸಿ ಸ್ಟಾರ್ಟಪ್ ಕಂಪನಿ ಜೊತೆಗೆ ಕೈಜೋಡಿಸಿತ್ತು.

100 ಕೋಟಿ ಲಸಿಕೆ ವಿತರಣೆ ಸಾಧನೆಯನ್ನು ವಿಶಿಷ್ಟವಾಗಿ ಆಚರಿಸಿದ ಸ್ಪೈಸ್ ಜೆಟ್

ಇದರಿಂದ ಲಾಜಿಸ್ಟಿಕ್ಸ್ ವೆಚ್ಚ, ಪ್ರಯಾಣದ ಸಮಯ ಹಾಗೂ ಕಾರ್ಬನ್ ಹೊರ ಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಕಂಪನಿ ಹೇಳಿದೆ. ಮೊದಲ ಹಂತದಲ್ಲಿ ಗುರುಗ್ರಾಮ, ಗಾಜಿಯಾಬಾದ್, ನೋಯ್ಡಾ, ಗ್ರೇಟರ್ ನೋಯ್ಡಾ, ಫರಿದಾಬಾದ್ ಸೇರಿದಂತೆ ದೆಹಲಿ ಎನ್‌ಸಿಆರ್ ಪ್ರದೇಶದಾದ್ಯಂತ ಪ್ರೀಮಿಯಂ ಎಲೆಕ್ಟ್ರಿಕ್ ವಾಹನಗಳ ಸಮೂಹವನ್ನು ನಿಯೋಜಿಸಲಗುವುದು ಎಂದು ಸ್ಪೈಸ್ ಜೆಟ್ ತಿಳಿಸಿದೆ.

100 ಕೋಟಿ ಲಸಿಕೆ ವಿತರಣೆ ಸಾಧನೆಯನ್ನು ವಿಶಿಷ್ಟವಾಗಿ ಆಚರಿಸಿದ ಸ್ಪೈಸ್ ಜೆಟ್

ಸ್ಪೈಸ್ ಜೆಟ್ ಕಂಪನಿಯು ಈ ಯೋಜನೆಯನ್ನು ಹಂತ ಹಂತವಾಗಿ ದೇಶಾದ್ಯಂತ ವಿಸ್ತರಿಸಲು ನಿರ್ಧರಿಸಿದೆ. ಈ ಯೋಜನೆಯಿಂದಾಗಿ ನೌಕರರ ಲಾಜಿಸ್ಟಿಕ್ಸ್ ವೆಚ್ಚ, ಪ್ರಯಾಣದ ಸಮಯ ಹಾಗೂ ಕಾರ್ಬನ್ ಡೈ ಆಕ್ಸೈಡ್ ಹೊರ ಸೂಸುವಿಕೆ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಸುಸ್ಥಿರತೆ ಗುರಿಗಳ ಕಡೆಗೆ ತನ್ನ ಬದ್ಧತೆಯನ್ನು ಪೂರೈಸುತ್ತದೆ ಎಂದು ಕಂಪನಿ ಹೇಳಿದೆ.

100 ಕೋಟಿ ಲಸಿಕೆ ವಿತರಣೆ ಸಾಧನೆಯನ್ನು ವಿಶಿಷ್ಟವಾಗಿ ಆಚರಿಸಿದ ಸ್ಪೈಸ್ ಜೆಟ್

ಇಇ ಟ್ಯಾಕ್ಸಿಯ ಸ್ಮಾರ್ಟ್ ಅಲ್ಗಾರಿದಮ್ ವಿಮಾನಯಾನವು ತನ್ನ ಕಾರ್ಯಾಚರಣೆಯನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ. ಪ್ರಯಾಣ ಹಾಗೂ ಪ್ರಯಾಣ ನಿರ್ವಹಣೆಯನ್ನು ಹೆಚ್ಚಿಸುವ ಮೂಲಕ ವಿಮಾನ ನಿಲ್ದಾಣಗಳಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಎಂದು ಸ್ಪೈಸ್ ಜೆಟ್ ಕಂಪನಿ ಹೇಳಿದೆ. ರೂಟ್ ಹಾಗೂ ಕ್ಯಾಬ್ ಆಪ್ಟಿಮೈಸೇಶನ್ ಮೂಲಕ ಕಂಪನಿಯು 12 ಗಂಟೆಗಳ ಕಾಲಾವಧಿಯಲ್ಲಿ ಪ್ರತಿ ವಾಹನಕ್ಕೆ 30% ನಷ್ಟು ವೆಚ್ಚವನ್ನು ಉಳಿಸಲು ಬಯಸುತ್ತಿದೆ ಎಂದು ಹೇಳಲಾಗಿದೆ.

100 ಕೋಟಿ ಲಸಿಕೆ ವಿತರಣೆ ಸಾಧನೆಯನ್ನು ವಿಶಿಷ್ಟವಾಗಿ ಆಚರಿಸಿದ ಸ್ಪೈಸ್ ಜೆಟ್

ಈ ಎಲೆಕ್ಟ್ರಿಕ್ ವಾಹನಗಳ ಸಂಪೂರ್ಣ ಕಾರ್ಯಾಚರಣೆಯನ್ನು ನೆಟ್‌ವರ್ಕ್ ಆಪರೇಷನ್ ಸೆಂಟರ್ (ಎನ್‌ಒಸಿ) ಮೂಲಕ ನಿರ್ವಹಿಸಲಾಗುವುದು ಎಂದು ಸ್ಪೈಸ್‌ಜೆಟ್ ಹೇಳಿದೆ. ಇ ಟ್ಯಾಕ್ಸಿಗಳು ಗುಣಮಟ್ಟದ ಪರೀಕ್ಷೆಗಳ ಮೂಲಕ ಸಕಾಲಿಕ ರವಾನೆ ಹಾಗೂ ನಿರಂತರ ಟ್ರ್ಯಾಕಿಂಗ್ ಅನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ವಿಮಾನಯಾನ ಸಿಬ್ಬಂದಿಗೆ ತಡೆರಹಿತವಾದ ಹಾಗೂ ಸುರಕ್ಷಿತವಾದ ಅನುಭವವನ್ನು ನೀಡುತ್ತವೆ ಎಂದು ಕಂಪನಿ ಹೇಳಿದೆ.

100 ಕೋಟಿ ಲಸಿಕೆ ವಿತರಣೆ ಸಾಧನೆಯನ್ನು ವಿಶಿಷ್ಟವಾಗಿ ಆಚರಿಸಿದ ಸ್ಪೈಸ್ ಜೆಟ್

ಇನ್ನು ವಿಮಾನಗಳು ಎಷ್ಟು ವರ್ಷಗಳವರೆಗೆ ಬಾಳಿಕೆ ಬರುತ್ತವೆ ಎಂಬ ಪ್ರಶ್ನೆ ಹಲವರನ್ನು ಕಾಡುವುದು ಸಹಜ. ದೊಡ್ಡ ವಿಮಾನಗಳು ಹಲವು ದಶಕಗಳವರೆಗೆ ಸೇವೆ ಸಲ್ಲಿಸುತ್ತವೆ ಎಂಬುದು ಕೆಲವರ ಅಭಿಪ್ರಾಯ. ಆದರೆ ವಿಮಾನವೊಂದರ ಸರಾಸರಿ ಜೀವಿತಾವಧಿ ಕೇವಲ 25 ವರ್ಷದಿಂದ 30 ವರ್ಷಗಳಾಗಿರುತ್ತದೆ. ವಿಮಾನಗಳ ವಯಸ್ಸನ್ನು ಸಾಮಾನ್ಯವಾಗಿ ಪ್ರೆಷರ್ ಸೈಕಲ್'ಗಳಿಂದ ಅಳೆಯಲಾಗುತ್ತದೆ. ಪ್ರತಿ ಬಾರಿ ವಿಮಾನವು ಹಾರಾಟ ನಡೆಸಿದಾಗ ಅದು ಒತ್ತಡಕ್ಕೊಳಗಾಗುತ್ತದೆ. ಇದು ವಿಮಾನದ ಪ್ಯೂಸ್ ಲೇಜ್ ಹಾಗೂ ರೆಕ್ಕೆಗಳ ಮೇಲೆ ಒತ್ತಡವನ್ನು ಬೀರುತ್ತದೆ.

100 ಕೋಟಿ ಲಸಿಕೆ ವಿತರಣೆ ಸಾಧನೆಯನ್ನು ವಿಶಿಷ್ಟವಾಗಿ ಆಚರಿಸಿದ ಸ್ಪೈಸ್ ಜೆಟ್

ಈ ಕಾರಣಕ್ಕಾಗಿಯೇ ವಿಮಾನ ತಯಾರಕ ಕಂಪನಿಗಳು ವಿಮಾನಗಳ ನಿರ್ವಹಣೆ ವೇಳೆಯಲ್ಲಿ ವಿಮಾನದ ಬಿಡಿ ಭಾಗಗಳು ಒತ್ತಡದಿಂದ ಹಾನಿಗೊಳಗಾಗಿವೆಯೇ ಎಂದು ಪರಿಶೀಲಿಸುತ್ತವೆ. ಯಾವುದೇ ವಿಮಾನವು ಸಂಪೂರ್ಣವಾಗಿ ಹಳೆಯದಾಗುವವರೆಗೆ ಕಾಯುವುದಿಲ್ಲ. ಹಲವು ವಿಮಾನಗಳು ತಮ್ಮ ಪೂರ್ಣ ಜೀವನವನ್ನು ಸಹ ತಲುಪುವುದಿಲ್ಲ.

100 ಕೋಟಿ ಲಸಿಕೆ ವಿತರಣೆ ಸಾಧನೆಯನ್ನು ವಿಶಿಷ್ಟವಾಗಿ ಆಚರಿಸಿದ ಸ್ಪೈಸ್ ಜೆಟ್

ವಿಮಾನದ ಜೀವಿತಾವಧಿ ಸುಮಾರು 25 ವರ್ಷಗಳೇ ಆದರೂ ಬಹುತೇಕ ವಿಮಾನಗಳು 18 ವರ್ಷ ಸೇವೆ ಸಲ್ಲಿಸಿದ ನಂತರ ನಿವೃತ್ತಿಯಾಗುತ್ತವೆ. ವಿಮಾನವು ನಿವೃತ್ತಿಯಾದ ನಂತರ ತನ್ನ ಕೊನೆಯ ಹಾರಾಟವನ್ನು ಸ್ಟೋರೆಜ್ ವಿಮಾನ ನಿಲ್ದಾಣಕ್ಕೆ ಮಾಡುತ್ತದೆ. ಈ ಸ್ಟೋರೆಜ್ ವಿಮಾನ ನಿಲ್ದಾಣವು ದೊಡ್ಡದಾಗಿದ್ದು, ತೆರೆದ ಆಕಾಶದ ಅಡಿಯಲ್ಲಿರುತ್ತದೆ.

Most Read Articles

Kannada
Read more on ವಿಮಾನ plane
English summary
Spicejet company celebrates 100 crore covid 19 vaccination moment in unique way details
Story first published: Friday, October 22, 2021, 17:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X