ಕಿಟ್ಟಿಗೆ 63 ಲಕ್ಷ ಬೆಳೆಬಾಳುವ ದುಬಾರಿ ಕಾರು ಉಡುಗೊರೆ

Posted By:

ಸ್ಯಾಂಡಲ್‌ವುಡ್‌ನಲ್ಲೀಗ ಉಡುಗೊರೆಯ ಪರ್ವಕಾಲ ಮುಂದುವರಿದಿದೆ. ಕೆಲವು ದಿನಗಳ ಹಿಂದೆಯಷ್ಟೇ 'ದರ್ಶನ್ ಭಾಗ್ಯರೇಖೆ ಬದಲಾಯಿಸಿದ ಬುಲ್ ಬುಲ್' ಬಗ್ಗೆ ಮಾತನಾಡಿದ್ದೆವು. ಇದರ ಬೆನ್ನಲ್ಲೇ ಇನ್ನೊಂದು ಆಸಕ್ತಿದಾಯಕ ಸುದ್ದಿ ಹೊರಬಂದಿದೆ.

ಕನ್ನಡದ ಜನಪ್ರಿಯ ನಟ ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಇದೀಗ ವೋಲ್ವೋ ಎಕ್ಸ್ ಸಿ60 ಐಷಾರಾಮಿ ಕಾರಿನ ಹೆಮ್ಮೆಯ ಮಾಲಿಕರೆನಿಸಿದ್ದಾರೆ. 'ಬಹುಪರಾಕ್' ಚಿತ್ರದ ನಿರ್ಮಾಪಕರು ಈ ಕಾರನ್ನು ಕಿಟ್ಟಿಗೆ ಉಡುಗೊರೆಯಾಗಿ ನೀಡಿದ್ದಾರೆ.

'ಸಿಂಪಲ್ ಆಗ್ ಒಂದು ಲವ್ ಸ್ಟೋರಿ' ಚಿತ್ರದಲ್ಲಿ ಆತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಿಟ್ಟಿ ಯಾವುದೇ ಸಂಭಾವನೆ ಪಡೆದಿಲ್ಲ ಎಂಬುದು ಸ್ಯಾಂಡಲ್‌ವುಡ್ ಮೂಲಗಳ ವರದಿ. ಈ ಚಿತ್ರದ ಯಶಸ್ಸಿನ ಬಳಿಕ ಕಿಟ್ಟಿ ಪ್ರಮುಖ ಪಾತ್ರದಲೇ ನಿರ್ದೇಶಕ ಸುನಿ ನಿರ್ಮಿಸುತ್ತಿರುವ ನೂತನ ಚಿತ್ರ 'ಬಹುಪರಾಕ್'. ವಿಶೇಷವೆಂದರೆ ಸಿಂಪಲ್ಲಾಗ್ ಚಿತ್ರದ ನಾಯಕ ರಕ್ಷಿತ್ ಇಲ್ಲಿ ಆತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಂದ ಹಾಗೆ ಕಿಟ್ಟಿ ಮನೆಗೆ ಬಂದಿರುವ ಐಷಾರಾಮಿ ವೋಲ್ವೋ ಕಾರಿನ ದರ ಸರಿ ಸುಮಾರು 63 ಲಕ್ಷ ರು.ಗಳಾಗಿವೆ. ಈ ಹೈ ಎಂಡ್ ಐಷಾರಾಮಿ ವರ್ಷನ್ ಕಾರಿನಲ್ಲಿ 2400 ಸಿಸಿ, 5 ಸಿಲಿಂಡರ್ ಡಿ5 ಟ್ವಿನ್ ಟರ್ಬೊ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಇದು 215 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಕಿಟ್ಟಿಗೆ 63 ಲಕ್ಷ ಬೆಳೆಬಾಳುವ ದುಬಾರಿ ಕಾರು ಉಡುಗೊರೆ

ಸ್ಯಾಂಡಲ್‌ವುಡ್‌ನ ಇತರ ನಟರಿಗಿಂತಲೂ ವಿಭಿನ್ನವಾಗಿ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಅಭಿನಯಿಸುವ ಕಿಟ್ಟಿ ಹೆಚ್ಚು ಜನಮನ್ನಣೆಗೆ ಪಾತ್ರವಾಗಿದ್ದಾರೆ. ಕಿಟ್ಟಿ ಪಡೆದಿರುವ ನೂತನ ವೋಲ್ವೋ ಐಷಾರಾಮಿ ಕಾರು ಅತ್ಯಾಧುನಿಕ ತಂತ್ರಗಾರಿಕೆಗಳನ್ನು ಒಳಗೊಂಡಿದೆ.

ಕಿಟ್ಟಿಗೆ 63 ಲಕ್ಷ ಬೆಳೆಬಾಳುವ ದುಬಾರಿ ಕಾರು ಉಡುಗೊರೆ

ವೋಲ್ವೋ ಎಕ್ಸ್‌ಸಿ60 ಡೀಸೆಲ್ ಎಂಜಿನ್ 10 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಳವಡಿಸಲಾಗಿದೆ. ಹಾಗೆಯೇ ಆಲ್ ವೀಲ್ ಡ್ರೈವ್ ಆಯ್ಕೆ ಆರಾಮದಾಯಕ ಚಾಲನೆಗೆ ನೆರವಾಗುತ್ತದೆ.

ಕಿಟ್ಟಿಗೆ 63 ಲಕ್ಷ ಬೆಳೆಬಾಳುವ ದುಬಾರಿ ಕಾರು ಉಡುಗೊರೆ

ಇನ್ನು ಕೇವಲ 8.9 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯವನ್ನು ವೋಲ್ವೋ ಪಡೆದುಕೊಂಡಿದೆ.

ಕಿಟ್ಟಿಗೆ 63 ಲಕ್ಷ ಬೆಳೆಬಾಳುವ ದುಬಾರಿ ಕಾರು ಉಡುಗೊರೆ

ಮೊದಲ ನೋಟದಲ್ಲೇ ವೋಲ್ವೋ ಐಷಾರಾಮಿ ಕಾರು ಆಕ್ರಮಣಕಾರಿ ವಿನ್ಯಾಸವನ್ನು ಹೊಂದಿದೆ. ಇದರ ಮಾನವ ಕಣ್ಣಿನ ಆಕಾರದ ಹೆಡ್‌ಲ್ಯಾಂಪ್‌ಗಳು ಹೆಚ್ಚು ಆಕರ್ಷಕವಾಗಿದೆ.

ಕಿಟ್ಟಿಗೆ 63 ಲಕ್ಷ ಬೆಳೆಬಾಳುವ ದುಬಾರಿ ಕಾರು ಉಡುಗೊರೆ

ಕಾರಿನ ಒಳಗಡೆಯೂ ಸಂಪೂರ್ಣ ಆರಾಮ ಪ್ಯಾಕೇಜ್‌ನೊಂದಿಗೆ ಆಗಮವಾಗಿದ್ದು, ಲೆಥರ್ ಸೀಟ್, ಸ್ಟೀರಿಂಗ್ ವೀಲ್, ಪವರ್ ವಿಂಡೋ, ಎಸಿ ವೆಂಟ್, ಕಂಫರ್ಟ್ ಪಿಲ್ಲೊ, ರಿಯರ್ ಸೀಟ್ ಕವರ್, ಎಲೆಕ್ಟ್ರಿಕ್ ಹೀಟರ್, ರಿಮೋಟ್ ಸ್ಟಾರ್ಟ್‌ಗಳಂತಹ ಆಧುನಿಕ ಫೀಚರ್ಸ್‌ಗಳನ್ನು ಆಳವಡಿಸಲಾಗಿದೆ.

ಕಿಟ್ಟಿಗೆ 63 ಲಕ್ಷ ಬೆಳೆಬಾಳುವ ದುಬಾರಿ ಕಾರು ಉಡುಗೊರೆ

ಇನ್ನು ಮನರಂಜನೆಗಾಗಿ 12 ಸಿಡಿ ಬದಲಾಯಿಸಬಹುದಾದ ಎಂಪಿ3 ಮ್ಯೂಸಿಕ್ ಸಿಸ್ಟಂ, ಡ್ಯುಯಲ್ ಸ್ಕ್ರೀನ್ ಜತೆಗೆ ಡ್ಯುಯಲ್ ಡಿವಿಡಿ ಇರಲಿದೆ.

ಕಿಟ್ಟಿಗೆ 63 ಲಕ್ಷ ಬೆಳೆಬಾಳುವ ದುಬಾರಿ ಕಾರು ಉಡುಗೊರೆ

ಒಟ್ಟು ಏಳು ಕಲರ್ ವೆರಿಯಂಟ್‌ಗಳಲ್ಲಿ ವೋಲ್ವೋ ಎಕ್ಸ್‌ಸಿ60 ಆಗಮನವಾಗಲಿದೆ.

ಕಿಟ್ಟಿಗೆ 63 ಲಕ್ಷ ಬೆಳೆಬಾಳುವ ದುಬಾರಿ ಕಾರು ಉಡುಗೊರೆ

ವೋಲ್ವೋ ಎಕ್ಸ್‌ಸಿ60 ಫ್ರಂಟ್ ವ್ಯೂ

ಕಿಟ್ಟಿಗೆ 63 ಲಕ್ಷ ಬೆಳೆಬಾಳುವ ದುಬಾರಿ ಕಾರು ಉಡುಗೊರೆ

ವೋಲ್ವೋ ಎಕ್ಸ್‌ಸಿ60 ಸೈಡ್ ವ್ಯೂ

ಕಿಟ್ಟಿಗೆ 63 ಲಕ್ಷ ಬೆಳೆಬಾಳುವ ದುಬಾರಿ ಕಾರು ಉಡುಗೊರೆ

ರಿಯರ್ ವ್ಯೂ

ಕಿಟ್ಟಿಗೆ 63 ಲಕ್ಷ ಬೆಳೆಬಾಳುವ ದುಬಾರಿ ಕಾರು ಉಡುಗೊರೆ

ಒಟ್ಟಿನಲ್ಲಿ ವೋಲ್ವೋ ಎಕ್ಸ್‌ಸಿ60 ಕಾರು ಎಲ್ಲ ಹಂತದಲ್ಲೂ ಸುಖ ಪ್ರಯಾಣವನ್ನು ಖಾತ್ರಿಪಡಿಸಲಿದೆ.

ಕಿಟ್ಟಿಗೆ 63 ಲಕ್ಷ ಬೆಳೆಬಾಳುವ ದುಬಾರಿ ಕಾರು ಉಡುಗೊರೆ

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

English summary
Srinagar Kitty is now the proud owner of the luxury car Volvo XC60. He has been gifted this car by the producers of Bahuparak.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark