ಕಂಡ ಕನಸು ನನಸಾಯ್ತು; ವಿಶ್ವದ ಅಂತ್ಯಂತ ಶೀತಪ್ರದೇಶ ತಲುಪಿದ ಬೆಂಗಳೂರು ಮಹಿಳೆ..!!

Written By:

ಸಾಧನೆಗೆ ಎಂದೂ ಗಡಿಯಿಲ್ಲ, ಅಂತೆಯೇ ಬೆಂಗಳೂರು ಮೂಲದ ಮಹಿಳೆ ನಿಧಿ ತಿವಾರಿ ಮಾಡಿದ ಸಾಧನೆಯೂ ಅಷ್ಟಿಷ್ಟಲ್ಲ. ಎರಡು ಮಕ್ಕಳ ತಾಯಿಯಾದರೂ ಅವರ ಮುಖದಲ್ಲಿ ಸದಾ ಸಾಧನೆಯ ತುಡಿತವಿದೆ. ಅದಕ್ಕಾಗಿಯೇ ಅವರು 15 ವರ್ಷಗಳ ಹಿಂದೆ ಕಂಡ ಕನಸು ಇಂದು ನನಸಾಗಿದೆ. ವಿಶ್ವದ ಅತಿ ಶೀತ ಪ್ರದೇಶಗಳಲ್ಲಿ ಒಂದಾಗಿರುವ ಸೈಬೇರೀಯಾ ದೇಶದ ಒಯ್ಮ್ಯಕೊಂ ಪ್ರವೇಶ ಮಾಡಿ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಕಂಡ ಕನಸು ನನಸಾಯ್ತು; ವಿಶ್ವದ ಅಂತ್ಯಂತ ಶೀತಪ್ರದೇಶ ತಲುಪಿದ ಬೆಂಗಳೂರು ಮಹಿಳೆ..!!

ಈ ಹಿಂದೆ ರಾಜಧಾನಿ ದೆಹಲಿಯಿಂದ ಲಂಡನ್‌ಗೆ ಕಾರಿನಲ್ಲಿ ಪ್ರಯಾಣಿಸಿ ಹೊಸದೊಂದು ದಾಖಲೆ ಮಾಡಿದ್ದ ನಿಧಿ ತಿವಾರಿ, ತಮ್ಮ ಇಬ್ಬರು ಸಂಗಡಿರೊಂದಿಗೆ ಸೇರಿ 21,477 ಕಿಲೋ ಮೀಟರ್‌ ರಸ್ತೆ ಸಂಚಾರ ಮಾಡಿದ್ದರು.

ನಿಧಿ ತಿವಾರಿಯವರಿಗೆ ಸಾಥ್ ನೀಡಿದ್ದ ರಶ್ಮಿ ಕೋಪ್ಪರ್ ಹಾಗೂ ಸೌಮ್ಯ ಗೋಯಲ್ ದೂರದ ಲಂಡನ್ ತಲುಪಿ ದೇಶದ ಕೀರ್ತಿ ಹೆಚ್ಚಿಸಿದ್ದರು.

ಕಂಡ ಕನಸು ನನಸಾಯ್ತು; ವಿಶ್ವದ ಅಂತ್ಯಂತ ಶೀತಪ್ರದೇಶ ತಲುಪಿದ ಬೆಂಗಳೂರು ಮಹಿಳೆ..!!

ಸದ್ಯ ಸಾಧನೆಯ ಹಾದಿಯಲ್ಲಿರುವ ನಿಧಿ ತಿವಾರಿ, ಲಂಡನ್ ಪ್ರವಾಸ ನಂತರ ಸೈಬೇರಿಯಾದಲ್ಲಿ ತಮ್ಮ ಯೋಶೋಗಾಥೆ ಪ್ರದರ್ಶಿಸಿದ್ದಾರೆ. 5 ಸಾವಿರ ಕಿಲೋ ಮೀಟರ್ ಕಾರಿನಲ್ಲೇ ಪ್ರಯಾಣಿಸಿ ಜಗತ್ತಿನ ಅತಿ ಶೀತ ಪ್ರದೇಶವೆಂದೇ ಕರೆಯಲ್ಪಡುವ ಒಯ್ಮ್ಯಕೊಂ ತಲುಪಿ ತಮ್ಮ ಕನಸನ್ನು ನನಾಸಾಗಿಸಿದ್ದಾರೆ.

ಕಂಡ ಕನಸು ನನಸಾಯ್ತು; ವಿಶ್ವದ ಅಂತ್ಯಂತ ಶೀತಪ್ರದೇಶ ತಲುಪಿದ ಬೆಂಗಳೂರು ಮಹಿಳೆ..!!

-59 ಡಿಗ್ರಿ ತಾಪಮಾನದ ಹೊಂದಿರುವ ಒಯ್ಮ್ಯಕೊಂ ಪ್ರದೇಶದ ಪ್ರವೇಶ ಅಷ್ಟು ಸುಲಭದ ಮಾತಲ್ಲ. ಅಲ್ಲದೇ ಪರಿಚಯವಿಲ್ಲದ ಸ್ಥಳ, ಗೊತ್ತಿಲ್ಲದ ಭಾಷೆ ಇಂತಹ ಹತ್ತು ಹಲವು ಅಡೆತಡೆಗಳನ್ನು ಮೀರಿ ನಿಧಿ ತಿವಾರಿ ಸಾಧನೆ ತೊರಿದ್ದು ಹೆಮ್ಮೆಯ ವಿಚಾರ.

ಕಂಡ ಕನಸು ನನಸಾಯ್ತು; ವಿಶ್ವದ ಅಂತ್ಯಂತ ಶೀತಪ್ರದೇಶ ತಲುಪಿದ ಬೆಂಗಳೂರು ಮಹಿಳೆ..!!

ಸದಾ ಒಂದಿಲ್ಲೊಂದು ಸಾಧನೆ ತೋರುತ್ತಿರುವ ನಿಧಿ ತಿವಾರಿಯವರಿಗೆ ಮತ್ತಷ್ಟು ಮಹತ್ತರ ಸಾಧನೆಗಳನ್ನು ಮಾಡುವ ತವಕ. ಹೀಗಾಗಿ ಸದಾ ಸಾಧನೆಯ ಕುರಿತು ಯೋಚನೆ ಮಾಡುವ ನಿಧಿ ತಿವಾರಿ, ಅಂದುಕೊಂಡಿದ್ದನ್ನು ಮಾಡಿ ಮುಗಿಸುವ ಗಟ್ಟಿಗಿತ್ತಿ. ಇದೀಗ ಒಯ್ಮ್ಯಕೊಂ ತಲುಪಿದ್ದು, ಆ ಅದ್ಙುತ ಕ್ಷಣಗಳನ್ನು ಕಣ್ಮುಂಬ್ತಿಕೊಂಡು ಬಂದಿದ್ದಾರೆ.

ಕಂಡ ಕನಸು ನನಸಾಯ್ತು; ವಿಶ್ವದ ಅಂತ್ಯಂತ ಶೀತಪ್ರದೇಶ ತಲುಪಿದ ಬೆಂಗಳೂರು ಮಹಿಳೆ..!!

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ 35 ವರ್ಷದ ನಿಧಿ ತಿವಾರಿಯವರು, ಆಫ್ ರೋಡಿಂಗ್ ಹಾಗೂ ದೂರದ ಯಾತ್ರೆಗಳ ಬಗೆಗೆ ಹೆಚ್ಚು ಕ್ರೇಜ್ ಹೊಂದಿದ್ದಾರೆ. ಅಂದಹಾಗೆ ಇಷ್ಟೆಲ್ಲಾ ಸಾಧನೆಗೆ ಸಾಥ್ ಕೊಟ್ಟಿರುವುದು ಅವರ ನೆಚ್ಚಿನ ಯುಎಸ್‌ವಿ ಸ್ಕಾರ್ಪಿಯೋ ಕಾರು,

ಹೀಗಾಗಿಯೇ ಅವರ ಎಲ್ಲ ಸಾಧನೆಗೂ ಇದುವೇ ಮೂಕ ಸಾಕ್ಷಿ.

ಕಂಡ ಕನಸು ನನಸಾಯ್ತು; ವಿಶ್ವದ ಅಂತ್ಯಂತ ಶೀತಪ್ರದೇಶ ತಲುಪಿದ ಬೆಂಗಳೂರು ಮಹಿಳೆ..!!

ಕೇವಲ ಸಾಧನೆಗಳು, ಪ್ರಶಸ್ತಿಗಳ ಬಗ್ಗೆ ವ್ಯಾಮೋಹ ಹೊಂದಿರದ ನಿಧಿ ತಿವಾರಿ, ಮಹಿಳಾ ಸಬಲೀಕರಣ ಕುರಿತು ವಿಶೇಷ ಕಾಳಜಿ ಹೊಂದಿದ್ದಾರೆ. ಅದಕ್ಕಾಗಿಯೇ ಮಹಿಳಾ ಸಾಧನೆಗೆ ಚೌಕಟ್ಟು ನಿರ್ಮಿಸಿರುವರರನ್ನು ವಿರೋಧಿಸುವ ತಿವಾರಿಯವರು, ಇತರೆ ಮಹಿಳೆಯರಿಗಿಂತ ಭಿನ್ನವಾಗಿ ಆಲೋಚಿಸುತ್ತಾರೆ.

ಕಂಡ ಕನಸು ನನಸಾಯ್ತು; ವಿಶ್ವದ ಅಂತ್ಯಂತ ಶೀತಪ್ರದೇಶ ತಲುಪಿದ ಬೆಂಗಳೂರು ಮಹಿಳೆ..!!

ಕೇವಲ ಸಾಧನೆ ಮಾಡುವುದಾಗಿ ಮಾತಿನಲ್ಲೇ ಹೇಳಿ ಸುಮ್ಮನಾಗುವ ಮಹಿಳೆಯಲ್ಲ ಈ ಸಾಧಕಿ ನಿಧಿ ತಿವಾರಿ. ಸಾಧನೆಗೂ ಮುನ್ನ ಅದಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಾರೆ. ಜೊತೆಗೆ ಸಾಹಸ ಯಾತ್ರೆಗಳಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿದೆ ಸಾಧನೆಗೆ ಮುನ್ನುಗ್ಗುತ್ತಾರೆ. ಅದರ ಪ್ರತಿಫಲವೇ ಇಂದು ಸೈಬೇರಿಯಾದ ಒಯ್ಮ್ಯಕೊಂ ಪ್ರಯಾಣ.

ಕಂಡ ಕನಸು ನನಸಾಯ್ತು; ವಿಶ್ವದ ಅಂತ್ಯಂತ ಶೀತಪ್ರದೇಶ ತಲುಪಿದ ಬೆಂಗಳೂರು ಮಹಿಳೆ..!!

ಸದಾ ಸಕಾರಾತ್ಮಕವಾಗಿಯೇ ಯೋಚಿಸುವ ನಿಧಿ ತಿವಾರಿ, ಅಂದುಕೊಂಡಿದ್ದು ಮಾಡಿ ಮುಗಿಸಿಬಿಡುವ ದಿಟ್ಟ ಛಲಗಾತಿ. ಹೀಗಾಗಿ 11 ವಯಸ್ಸಿನಲ್ಲೇ ತಮ್ಮ ತಾಯಿಯ ಸಹಾಯದೊಂದಿಗೆ ಹಿಮಾಲಯ ಶಿಖರ ತಲುಪಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದರು.

ಕಂಡ ಕನಸು ನನಸಾಯ್ತು; ವಿಶ್ವದ ಅಂತ್ಯಂತ ಶೀತಪ್ರದೇಶ ತಲುಪಿದ ಬೆಂಗಳೂರು ಮಹಿಳೆ..!!

ಸದ್ಯ ಸಾಧನೆಯ ಶಿಖರದಲ್ಲಿರುವ ನಿಧಿ ತಿವಾರಿ, ಹತ್ತಾರು ಕಷ್ಟಕರ ಅನುಭವಿಸಿ ಗುರಿ ಸಾಧನೆ ತಲುಪಿದ್ದಾರೆ. ಪ್ರತಿದಿನ 600 ಕಿಲೋ ಮೀಟರ್ ಕಾರು ಪ್ರಯಾಣಿಸುತ್ತಾ ಸಮಯಕ್ಕೆ ಸರಿಯಾಗಿ ನೀರು, ಊಟವಿಲ್ಲದೇ ಸಾಧನೆಯ ಹಾದಿಯನ್ನು ತಲುಪಿದ್ದು, ಅವರ ಸಾಧನೆ ಲಕ್ಷಾಂತರ ಜನ ಸಾಹಸಿ ಪ್ರವೃತ್ತಿ ಹೊಂದಿವರಿಗೆ ಸ್ಪೂರ್ತಿಯಾಗಿದ್ದಾರೆ.

ಕಂಡ ಕನಸು ನನಸಾಯ್ತು; ವಿಶ್ವದ ಅಂತ್ಯಂತ ಶೀತಪ್ರದೇಶ ತಲುಪಿದ ಬೆಂಗಳೂರು ಮಹಿಳೆ..!!

ಇನ್ನೂ ನಿಧಿ ತಿವಾರಿಯವರ ಪಟ್ಟಿಯಲ್ಲಿ ಇಂತಹ ಹತ್ತಾರು ಕನಸುಗಳಿವೆ. ತಮ್ಮ ಕನಸನ್ನು ಸಾಕಾರಗೊಳಿಸುವತ್ತ ಯೋಚಿಸುತ್ತಿರುವ ನಿಧಿ ಸದ್ಯಕ್ಕೆ ಮಹಿಳಾ ಸಮಾನತೆ ಹಾಗೂ ಲಿಂಗ ಅಸಮಾನತೆ ಸರಿದೂಗಿಸುವ ಅಭಿಯಾನದತ್ತ ಗಮನಹರಿಸಿದ್ದಾರೆ. ಒಟ್ಟಿನಲ್ಲಿ ವಿಶ್ವಮಟ್ಟದಲ್ಲಿ ಕನ್ನಡಿಗರು ಮಿಂಚುತ್ತಿರುವುದೇ ನಮಗೆ ಹೆಮ್ಮೆಯ ವಿಚಾರ.

ನೂತನವಾಗಿ ಬಿಡುಗಡೆಗೊಂಡಿರುವ 2017 ಹೋಂಡಾ ಸಿಟಿ ಕಾರಿನ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಭಾರತ india
English summary
indian women made history in South Siberia. She drove to the coldest inhabited place on earth.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark