ಮದುವೆ ಮನೆಯಲ್ಲಿ ಕಾರಿನ ಸ್ಟಂಟ್ ಮಾಡಿ ಪೊಲೀಸ್ ಅತಿಥಿಯಾದ !!

Written By:

ಕಳೆದ ವಾರ ಮದುವೆ ಮನೆಯಲ್ಲಿ ಕಾರಿನ ಸ್ಟಂಟ್ ಮಾಡಿ ಸಾಮಾಜಿಕ ಜಾಲತಾಣಗಲ್ಲಿ ಹರಿಬಿಟ್ಟಿದ್ದ ವ್ಯಕ್ತಿಯೊಬ್ಬನ್ನು ಪೊಲೀಸರು ಬಂಧಿಸಿ ಶ್ರೀಕೃಷ್ಣನ ಜನ್ಮಸ್ಥಳವನ್ನು ತೋರಿಸಿದ್ದಾರೆ.

ಇತ್ತೀಚೆಗೆ ನೆಡೆಯುತ್ತಿರುವ ಭೀಕರ ಅಪಘಾತಗಳು, ಬೈಕ್ ಮತ್ತು ಕಾರುಗಳಲ್ಲಿ ಸ್ಟಂಟ್ ಮಾಡುವ ವೇಳೆ ಸಂಭವಿಸುತ್ತಿರುವ ಅವಘಡಗಳ ಬಗ್ಗೆ ಹೆಚ್ಚು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸ್ಟಂಟ್ ಅಥವಾ ಡ್ರ್ಯಾಗ್ ರೇಸ್ ಗಳಂತಹ ಅಪಾಯಕಾರಿ ಕೆಲ್ಸಗಳ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ.

ಮದುವೆಗೆ ಬಂದ ಅತಿಥಿಯೊಬ್ಬರು ತೆಗೆದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ವೈರಲ್ ಆಗಿತ್ತು ಕೂಡ. ಈ ವಿಡಿಯೋ ನೋಡಿದ ಪೊಲೀಸ್ ತಕ್ಷಣ ಎಚ್ಚೆತ್ತುಕೊಂಡು ಕಾರು ಓಡಿಸಿದ ವ್ಯಕ್ತಿಯನ್ನು ಹಿಡಿದು ಬಂಧಿಸಿದ್ದಾರೆ.ಅಕ್ಕ ಪಕ್ಕದಲ್ಲಿ ನಿಂತಿದ್ದ ದ್ವಿಚಕ್ರ ವಾಹನ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ.

ಈ ಕಾರಿಗೆ ನಂಬರ್ ಪ್ಲೇಟ್ ಇಲ್ಲದೇ ಈ ರೀತಿಯ ಸಾಹಸಕ್ಕೆ ಕೈ ಹಾಕಿದ್ದು ಪೊಲೀಸರಿಗೆ ಹೆಚ್ಚು ತಲೆನೋವಾಗಿ ಪರಿಣಮಿಸಿತ್ತು, ಕೊನೆಗೂ ಎಮಿರೇತಿ ಎಂಬ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಂಧನದಿಂದ ಹೆಚ್ಚು ಜನಕ್ಕೆ ಈ ರೀತಿಯ ಸ್ಟಂಟ್ಸ್ ಮಾಡಬಾರದು ಎಂಬ ಸಂದೇಶವನ್ನು ಪೊಲೀಸ್ ನೀಡಿದ್ದಾರೆ.

ಹೊಚ್ಚ ಹೊಸ ಹೋಂಡಾ ಸಿವಿಕ್ 2017 ಕಾರಿನ ಚಿತ್ರಗಳನ್ನು ವೀಕ್ಷಿಸಿ

 

Read more on ಪೊಲೀಸ್ police
English summary
A stunt video posted on social media has gone viral which lead to the arrest of the driver in Sharjah. The driver was driving his vehicle on two wheels.
Please Wait while comments are loading...

Latest Photos