ಕಾರಿನ ಬ್ಯಾನೆಟ್ ಕುಳಿತು ಜಾಲಿ ರೈಡ್- ವೈರಲ್ ಆದ ಬೆಂಗಳೂರು ಯುವಕನ ಅತಿರೇಕದ ವಿಡಿಯೋ..!!

Written By:

ಈಗಿನ ಕೆಲವು ಯುವಕರಿಗೆ ವ್ಹೀಲಿಂಗ್ ಮಾಡುವುದೆಂದರೆ ಥ್ರಿಲ್. ನಾನಾ ರೀತಿಯ ಸೂಪರ್ ಬೈಕ್, ಸ್ಪೋರ್ಟ್ ಕಾರು ಸಿಕ್ಕರಂತೂ ಮುಗಿದೇ ಹೋಯ್ತು. ಯುವಕರ ವ್ಹೀಲಿಂಗ್, ಸ್ಟಂಟ್ ಕ್ರೇಜ್ ನಿಂದಾಗಿ ಹಲವು ಮುಗ್ದ ಜನ ಪ್ರಾಣಗಳೇ ಬಲಿಯಾಗುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಂತೂ ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ.

ಕಾರಿನ ಬ್ಯಾನೆಟ್ ಕುಳಿತು ಜಾಲಿ ರೈಡ್- ವೈರಲ್ ಆದ ಬೆಂಗಳೂರು ಯುವಕನ ಅತಿರೇಕದ ವಿಡಿಯೋ..!!

ರಾಜಧಾನಿ ಬೆಂಗಳೂರಿನಲ್ಲಿ ಮುನ್ನೆಚ್ಚರಿಕೆ ಇಲ್ಲದ ಬೈಕ್ ಸ್ಟಂಟ್ ಮತ್ತು ಕಾರುಗಳ ಸ್ಟಂಟ್ ಅಬ್ಬರಕ್ಕೆ ಏನು ಕಡಿಮೆ ಇಲ್ಲಾ. ಸಾರ್ವಜನಿಕ ಪ್ರದೇಶಗಳಲ್ಲಿ ಪುಡಾರಿ ಯುವಕರ ಗುಂಪುಗಳು ಮಾಡುವ ಕೆಲ ಅಘಾತಕಾರಿ ಬೈಕ್ ವ್ಹೀಲಿಂಗ್ ಮತ್ತು ಕಾರು ಸ್ಟಂಟ್‌ಗಳು ಹಲವು ದುರಂತಗಳಿಗೆ ಎಡೆಮಾಡಿಕೊಡುತ್ತಿದ್ದು, ನಿನ್ನೆ ನಡೆದ ಘಟನೆ ಒಂದು ಕೂಡಾ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಕಾರಿನ ಬ್ಯಾನೆಟ್ ಕುಳಿತು ಜಾಲಿ ರೈಡ್- ವೈರಲ್ ಆದ ಬೆಂಗಳೂರು ಯುವಕನ ಅತಿರೇಕದ ವಿಡಿಯೋ..!!

ನಗರದ ಹೆಚ್‌ಎಸ್ಆರ್ ಲೇಔಟ್‌ನಲ್ಲಿ ಯುವಕರ ಗುಂಪೊಂದು ನಿನ್ನೆ ಮಧ್ಯಾಹ್ನ ಕಾರು ಸ್ಟಂಟ್ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಮಾಡಿದಲ್ಲದೇ ಬ್ಯಾನೆಟ್ ಮೇಲೆ ಏರಿ ಪ್ರಯಾಣಿಸುತ್ತಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾರಿನ ಬ್ಯಾನೆಟ್ ಕುಳಿತು ಜಾಲಿ ರೈಡ್- ವೈರಲ್ ಆದ ಬೆಂಗಳೂರು ಯುವಕನ ಅತಿರೇಕದ ವಿಡಿಯೋ..!!

ಡ್ರೈವ್ ಸ್ಪಾರ್ಕ್ ತಂಡಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದ ಹೆಚ್‌ಎಸ್ಆರ್ ಲೇಔಟ್ ನಿವಾಸಿಯೊಬ್ಬರು ಆಕ್ಸ್‌ಫರ್ಡ್ ಕಾಲೇಜು ಬಳಿ ಯುವಕರು ಕಾರ್ ಸ್ಟಂಟ್ ಮಾಡುವ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದು, ಪುಡಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Recommended Video - Watch Now!
India Car Stunts Caught On Camera
ಕಾರಿನ ಬ್ಯಾನೆಟ್ ಕುಳಿತು ಜಾಲಿ ರೈಡ್- ವೈರಲ್ ಆದ ಬೆಂಗಳೂರು ಯುವಕನ ಅತಿರೇಕದ ವಿಡಿಯೋ..!!

ಹ್ಯುಂಡೈ ಐ10 ಕಾರಿನಲ್ಲಿದ್ದ ಮೂವರು ವಿದ್ಯಾರ್ಥಿಗಳು ಸ್ಟಂಟ್ ಮಾಡಲಾಗುತ್ತಿದ್ದ ಕಾರಿನ ವಿಡಿಯೋವನ್ನು ಸಹ ಸೆರೆ ಹಿಡಿಯಲಾಗಿದ್ದು, ಕಾರಿನ ಸಂಖ್ಯೆಯು ಕೆಎ 04 ಎಂಎಫ್ 1991 ಎಂಬುವುದು ಪತ್ತೆಯಾಗಿದೆ.

ಕಾರಿನ ಬ್ಯಾನೆಟ್ ಕುಳಿತು ಜಾಲಿ ರೈಡ್- ವೈರಲ್ ಆದ ಬೆಂಗಳೂರು ಯುವಕನ ಅತಿರೇಕದ ವಿಡಿಯೋ..!!

ಇನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಕಾರು ಸ್ಟಂಟ್ ಮತ್ತು ಬೈಕ್ ವೀಲಿಂಗ್ ಪ್ರಕರಣಗಳನ್ನು ತಗ್ಗಿಸಲು ಬೆಂಗಳೂರು ಪೊಲೀಸರು ಎಷ್ಟೇ ಕಠಿಣ ಕ್ರಮಗಳನ್ನು ಜಾರಿಗೆ ಮಾಡಿದರು ಇಂತಹ ಪ್ರಕರಣ ಹೆಚ್ಚುತ್ತಲೇ ಇದ್ದು, ಕಾರಿನ ಮೇಲೆ ಕುಳಿತಿರುವ ಪುಡಾರಿ ವಿರುದ್ಧ ಕಠಿಣ ಕ್ರಮ ಅಗತ್ಯವಿದೆ.

ಕಾರಿನ ಬ್ಯಾನೆಟ್ ಕುಳಿತು ಜಾಲಿ ರೈಡ್- ವೈರಲ್ ಆದ ಬೆಂಗಳೂರು ಯುವಕನ ಅತಿರೇಕದ ವಿಡಿಯೋ..!!

ಸಾರ್ವಜನಿಕರು ನೀಡಿರುವ ಮಾಹಿತಿ ಅನ್ವಯ ಡ್ರೈವ್ ಸ್ಪಾರ್ಕ್ ತಂಡವು ಈ ಲೇಖನವನ್ನು ಪ್ರಕಟಿಸಲಾಗುತ್ತಿದ್ದು, ಸಂಬಂಧಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳು ಈ ಪ್ರಕರಣದ ಬಗ್ಗೆ ಕುಲಂಕೂಶವಾಗಿ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುವುದು ನಮ್ಮ ಆಶಯವಾಗಿದೆ.

ಕಾರಿನ ಬ್ಯಾನೆಟ್ ಕುಳಿತು ಜಾಲಿ ರೈಡ್- ವೈರಲ್ ಆದ ಬೆಂಗಳೂರು ಯುವಕನ ಅತಿರೇಕದ ವಿಡಿಯೋ..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಾರು ಸ್ಟಂಟ್ ಮತ್ತು ಬೈಕ್ ವ್ಹೀಲಿಂಗ್ ಮಾಡುವ ಚಾಣಾಕ್ಷತೆ ತಪ್ಪಲ್ಲ. ಆದ್ರೆ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಇಂತಹ ಸಾಹಸ ಕಾರ್ಯಗಳಿಗೆ ಕೈಹಾಕುವುದು ಒಳಿತು. ಇಲ್ಲವಾದ್ರೆ ಕಾನೂನು ಬಾಹಿರ ಚಟುವಟಿಕೆಗಳಿಂದ ನಿಮಗೂ ತೊಂದರೆಯಾಗುವುದಲ್ಲದೇ ಅಮಾನಕರ ಬಲಿಯಾಗಬೇಕಾಗುತ್ತದೆ ಎಂಬುವುದನ್ನು ಮರೆಯಬಾರದು.

Trending On DriveSpark Kannada:

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಅಲಾಯ್ ಚಕ್ರ V/s ಸ್ಪೋಕ್ ಚಕ್ರ- ಇವುಗಳಲ್ಲಿ ಯಾವುದು ಉತ್ತಮ?

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

Trending DriveSpark YouTube Videos

Subscribe To DriveSpark Kannada YouTube Channel - Click Here

Read more on traffic rules bengaluru
English summary
Young Man Takes Joyride On Car’s Bonnet; Gets Reported With Video.
Story first published: Friday, February 2, 2018, 15:47 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark