7000+ ಕಾರುಗಳ ಒಡೆಯ 'ಸುಲ್ತಾನ್ ಆಫ್ ಬ್ರೂನಿ'

Written By:

'ಬ್ರೂನಿ' ಪೂರ್ವ ಏಷ್ಯಾದ ಬೊರ್ನಿಯೊ ದ್ವೀಪದ ಉತ್ತರ ತೀರ ಪ್ರದೇಶದಲ್ಲಿ ಸ್ಥಿತಗೊಂಡಿರುವ ಒಂದು ಪುಟ್ಟ ದೇಶ. ಈ ರಾಷ್ಟ್ರವೀಗ ವಿಶ್ವದೆಲ್ಲೇ ಅತಿ ಹೆಚ್ಚಿನ ಪ್ರಸಿದ್ಧಿ ಪಡೆದಿದೆ. ಕಾರಣ ಇಷ್ಟೇ, ಬ್ರೂನಿ ದೇಶದ ಸುಲ್ತಾನ ಹಸ್ಸಾನಾಲ್ ಬೋಲ್ಕಿಯಾ 7,000ಗಿಂತಲೂ ಹೆಚ್ಚು ಕಾರುಗಳ ಒಡೆಯರಾಗಿದ್ದಾರೆ.

Also Read: ಬ್ರಿಟನ್ ರಾಜಕುಮಾರನ ರಾಯಲ್ ಸವಾರಿ

ಸುಲ್ತಾನ್ ಆಫ್ ಬ್ರೂನಿ ಎಂದೇ ಚಿರಪರಿಚಿತರಾಗಿರುವ 50ರ ಹರೆಯದ ಹಸ್ಸಾನಾಲ್ ಬೋಲ್ಕಿಯಾ ಅಂದಾಜು 20 ಬಿಲಿಯನ್ ಅಮೆರಿಕನ್ ಡಾಲರ್ ಬೆಲೆ ಬಾಳುವಷ್ಟು ಸಂಪತ್ತನ್ನು ಹೊಂದಿದ್ದಾರೆ. ಇದನ್ನು ಭಾರತೀಯ ರುಪಾಯಿಗೆ ಪರಿವರ್ತಿಸಿದಾಗ ಸಿಗುವ ರುಪಾಯಿ ಮೌಲ್ಯ ಇಂತಿದೆ 1335599000000.00 ರು. [ವಿ.ಸೂ: ಇದು 2008ರ ಲೆಕ್ಕಾಚಾರ ಎಂಬುದನ್ನು ಮರೆಯದಿರಿ.]

ಹೆಸರಿನ ಮಹಿಮೆ

ಹೆಸರಿನ ಮಹಿಮೆ

ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಓರ್ವರಾಗಿರುವ ಸುಲ್ತಾನ್ ಆಫ್ ಬ್ರೂನಿ ಪೂರ್ಣ ಹೆಸರೇನು ಗೊತ್ತೇ ? ಇದನ್ನು ಆಂಗ್ಲ ಭಾಷೆಯಲ್ಲಿ ಕೊಡಲಾಗುವುದು. ಕನ್ನಡಕ್ಕೆ ಅನುವಾದ ಮಾಡಲು ಸಾಧ್ಯವಾದವರು ಕೆಳಗಡೆ ಕೊಟ್ಟಿರುವ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಿರಿ. ಸುಲ್ತಾನ್ ಆಫ್ ಬ್ರೂನಿ ಪೂರ್ಣ ಹೆಸರು ಇಲ್ಲಿದೆ: Sultan Haji Hassanal Bolkiah Mu'izzaddin Waddaulah ibni Al-Marhum Sultan Haji Omar Ali Saifuddien Sa'adul Khairi Waddien

7000+ ಕಾರುಗಳ ಒಡೆಯ 'ಸುಲ್ತಾನ್ ಆಫ್ ಬ್ರೂನಿ'

1984ನೇ ಇಸವಿಯಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಿಯನ್ನು ಪಡೆದ ಬ್ರೂನಿ ಕೆಲವೇ ವರ್ಷಗಳಲ್ಲಿ ವಿಶ್ವದ ಅತಿ ಶ್ರೀಮಂತ ರಾಷ್ಟ್ರವಾಗಿ ಪರಿವರ್ತನೆಗೊಂಡಿತ್ತು. ಇದರ ಹಿಂದಿರುವ ಪ್ರಮುಖ ಕಾರಣ ಇಲ್ಲಿರುವ ಬೃಹತ್ ಪ್ರಮಾಣದ ತೈಲ ನಿಕ್ಷೇಪ ಹಾಗೂ ಪೆಟ್ರೋಕೆಮಿಕಲ್ ಕೈಗಾರಿಕೋದ್ಯಮ.

7000+ ಕಾರುಗಳ ಒಡೆಯ 'ಸುಲ್ತಾನ್ ಆಫ್ ಬ್ರೂನಿ'

ಮುಸ್ಲಿಂ ಪ್ರಾಬಲ್ಯದ ಬ್ರೂನಿ ದೇಶದ ಸುಲ್ತಾನ ಜನಪ್ರಿಯ ನಿಯತಕಾಲಿತ ಫೋರ್ಬ್ಸ್ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲೂ ಮೊದಲಿಗರಿಗಾಗಿ ಗುರುತಿಸಿಕೊಂಡಿದ್ದಾರೆ. ಈ ಬಗ್ಗೆ ಹಿಂದೊಮ್ಮೆ ನಗೆ ಚಟಾಕಿ ಹಾರಿಸಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಬ್ರೂನಿ ಅವರ ಅಮೆರಿಕ ಭೇಟಿ ವೇಳೆ ಅಲ್ಲಿನ ಆರ್ಥಿಕತೆಗೆ ನೆರವಾಗುವ ನಿಟ್ಟಿನಲ್ಲಿ ಶಾಂಪಿಂಗ್‌ಗೆ ಮಾಡಬೇಕು ಎಂದಿದ್ದರು.

7000+ ಕಾರುಗಳ ಒಡೆಯ 'ಸುಲ್ತಾನ್ ಆಫ್ ಬ್ರೂನಿ'

ಜಗತ್ತಿನ ಶ್ರೀಮಂತ ವ್ಯಕ್ತಿ ಎಂದ ಮಾತ್ರಕ್ಕೆ ಸಹಜವಾಗಿಯೇ ಎಲ್ಲ ಐಷಾರಾಮಿ ಕಾರುಗಳನ್ನು ಸುಲ್ತಾನ್ ಆಫ್ ಬ್ರೂನಿ ತಮ್ಮದಾಗಿಸಿಕೊಂಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ 7000ಕ್ಕೂ ಹೆಚ್ಚು ಕಾರುಗಳನ್ನು ಹಸ್ಸಾನಾಲ್ ಬೋಲ್ಕಿಯಾ ಹೊಂದಿದ್ದಾರೆ.

ಸುಲ್ತಾನ್ ಆಫ್ ಬ್ರೂನಿ - ಯಾವ ಯಾವ ಕಾರು ಎಷ್ಟೆಷ್ಟು ಗೊತ್ತೇ?

ಸುಲ್ತಾನ್ ಆಫ್ ಬ್ರೂನಿ - ಯಾವ ಯಾವ ಕಾರು ಎಷ್ಟೆಷ್ಟು ಗೊತ್ತೇ?

 • ರೋಲ್ಸ್ ರಾಯ್ಸ್ - 604
 • ಮರ್ಸಿಡಿಸ್ ಬೆಂಝ್ - 574
 • ಫೆರಾರಿ - 452
 • ಬೆಂಟ್ಲಿ - 405
 • ಬಿಎಂಡಬ್ಲ್ಯು - 222
 • ಜಾಗ್ವಾರ್ - 179
 • ಕೋಯಿನ್‌ಸೆಗ್ - 134
 • ಲಂಬೋರ್ಗಿನಿ - 21
 • ಎಸ್‌ಎಸ್‌ಸಿ - 1
 • ಎಸಿ ಕಾರ್ಸ್ - 9
ಸುಲ್ತಾನ್ ಆಫ್ ಬ್ರೂನಿ - ಯಾವ ಯಾವ ಕಾರು ಎಷ್ಟೆಷ್ಟು ಗೊತ್ತೇ?

ಸುಲ್ತಾನ್ ಆಫ್ ಬ್ರೂನಿ - ಯಾವ ಯಾವ ಕಾರು ಎಷ್ಟೆಷ್ಟು ಗೊತ್ತೇ?

 • ಆಲ್ಪಾ ರೋಮಿಯೋ - 3
 • ಆಸ್ಟನ್ ಮಾರ್ಟಿನ್ - 94
 • ಆಡಿ - 17
 • ಬೈಮೊಟಾ - 3
 • ಬುಗಾಟಿ - 6
 • ಕೆಗಿವಾ - 4
 • ಸಿಝೆಟಾ ಮೊರೊಡರ್ - 3
 • ದೈಹಟ್ಸು - 4
 • ದೌವೆರ್ - 6
 • ಡುಕಾಟಿ - 3
7000+ ಕಾರುಗಳ ಒಡೆಯ 'ಸುಲ್ತಾನ್ ಆಫ್ ಬ್ರೂನಿ'

ಈ ಪೈಕಿ ಕೆಲವು ಕಾರುಗಳನ್ನು 24 ಕ್ಯಾರೆಟ್ ಅಪ್ಪಟ ಚಿನ್ನದಿಂದ ನಿರ್ಮಿಸಲಾಗಿದೆ. ಇದರಲ್ಲಿ ಮರ್ಸಿಡಿಸ್ ಬೆಂಝ್ ಸಿಎಲ್ ಕೆ ಜಿಟಿಆರ್ ಒಂದಾಗಿದೆ.

 ಇಸ್ತಾನಾ ನುರುಲ್ ಇಮಾನ್

ಇಸ್ತಾನಾ ನುರುಲ್ ಇಮಾನ್

ಇಸ್ತಾನಾ ನುರುಲ್ ಇಮಾನ್ (Istana Nurul Iman) ಸುಲ್ತಾನ್ ಆಫ್ ಬ್ರೂನಿ ವಾಸಿಸುವ ಅಧಿಕೃತ ಅರಮನೆಯಾಗಿದ್ದು, ವಿಶ್ವದಲ್ಲೇ ಅತಿ ದೊಡ್ಡ ಅರಮನೆಯೆಂಬ ಕೀರ್ತಿಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ ವಿಶ್ವದಲ್ಲೇ ಒಂದೇ ಕುಟುಂಬ ವಾಸಿಸುವ ಅತಿ ದೊಡ್ಡದಾದ ನಿವಾಸವೂ ಇದಾಗಿದೆ.

ಬಂಗಲೆ ವಿಶಿಷ್ಟತೆ - 110 ಕಾರು ಗ್ಯಾರೇಜ್

ಬಂಗಲೆ ವಿಶಿಷ್ಟತೆ - 110 ಕಾರು ಗ್ಯಾರೇಜ್

ಬ್ರೂನಿ ಬಂಗಲೆಯಲ್ಲಿ 1788 ರೂಂಗಳು, 257 ಶೌಚಾಲಯಗಳು, 5000 ಆತಿಥಿಗಳಿಗೆ ವ್ಯವಸ್ಥೆ ಒದಗಿಸಬಹುದಾದ ಬ್ಯಾಂಕ್ವೆಟ್ ಹಾಲ್, 1,500 ಮಂದಿಗೆ ಸೌಕರ್ಯವುಳ್ಳ ಮಸೀದಿ, 110 ಕಾರು ಗ್ಯಾರೇಜ್, 5 ಈಜುಕೊಳ ಮುಂತಾದ ವೈಶಿಷ್ಟ್ಯಗಳಿಂದ ತುಂಬಿ ತುಳುಕುತ್ತಿದೆ.

7000+ ಕಾರುಗಳ ಒಡೆಯ 'ಸುಲ್ತಾನ್ ಆಫ್ ಬ್ರೂನಿ'

ಕಾರುಗಳ ಹೊರತಾಗಿ ಬೋಯಿಂಗ್ 747-400, ಬೋಯಿಂಗ್ 767-200, ಏರ್ ಬಸ್ ಎ340-200 ಗಳಂತಹ ದುಬಾರಿ ವಿಮಾನಗಳು ಅವರ ಬಳಿಯಿದೆ. ಈ ಎಲ್ಲ ವಿಮಾನಗಳ ಒಳಮೈಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಅರಮನೆಗಿಂತಲೂ ಕಮ್ಮಿಯೇನಲ್ಲ.

7000+ ಕಾರುಗಳ ಒಡೆಯ 'ಸುಲ್ತಾನ್ ಆಫ್ ಬ್ರೂನಿ'

ಕುದುರೆ ಸವಾರಿ, ಬ್ಯಾಡ್ಮಿಂಟನ್ ವಿನೋದ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿರುವ ಬ್ರೂನಿ ಅವರ ಗ್ಯಾರೇಜ್ ನಲ್ಲಿ 600ರಷ್ಟು ಬೆಂಝ್ ಕಾರುಗಳಿವೆ. ಇಲ್ಲಿ ಎಸ್ ಕ್ಲಾಸ್ ಟೂರಿಂಗ್ ಮಾಡೆಲ್ ನಿಂದ ಆರಂಭಿಸಿ 1996-97ರ ಸಾಲಿನ 100ರಷ್ಟು ಮಾದರಿಗಳು, 1995-97ರ ಸಾಲಿನ 500ರಷ್ಟು ಸೆಡಾನ್ ಕಾರುಗಳು, ಎಸ್‌ಇಎಲ್, ಎಸ್‌ಎಲ್ ಕ್ಲಾಸ್ ಹಾಗೂ ಚಿನ್ನ ಲೇಪಿತ ಸಿಎಲ್ ಕೆ-ಜಿಟಿಆರ್ ಕಾರುಗಳು ಪ್ರಮುಖವೆನಿಸಿದೆ.

ಫೆರಾರಿ

ಫೆರಾರಿ

ಇಂಗ್ಲಿಂಷ್ ವರ್ಣಮಾಲೆಯಿಂದ ಆರಂಭವಾಗುವ ಬಹುತೇಕ ಎಲ್ಲ ಐಷಾರಾಮಿ ಕಾರು ಸಂಸ್ಥೆಗಳ ಕಾರುಗಳು ಬ್ರೂನಿ ಬಳಿಯಿದೆ ಎಂದು ಹೇಳುವುದು ಹೆಚ್ಚು ಸೂಕ್ತವೆನಿಸಲಿದೆ. ಯಾಕೆಂದರೆ ಫೆರಾರಿ ಪಟ್ಟಿ ತೆರೆದು ನೋಡಿದರೆ 192ರಷ್ಟು ಸಂಗ್ರಹಗಳು ಕಂಡುಬರುತ್ತದೆ. ಇಲ್ಲಿ ಫೆರಾರಿ 250 ಜಿಟಿಒ ದಿಂದ ಆರಂಭವಾಗಿ 456 ಜಿಟಿ, 458 ಇಟಲಿಯಾ, ಟಿಆರ್ ಸ್ಪೈಡರ್ ಗಳಂತಹ ಐಕಾನಿಕ್ ಮಾದರಿಗಳ ಸಂಗ್ರಹವಿದೆ.

ಬಿಎಂಡಬ್ಲ್ಯು

ಬಿಎಂಡಬ್ಲ್ಯು

ಬಿಎಂಡಬ್ಲ್ಯು ಕಾರುಗಳನ್ನು ಸಹ ಇಲ್ಲಿಂದ ಹೊರತುಪಡಿಸಿಲ್ಲ. ಇಲ್ಲಿ 222 ಬಿಎಂಡಬ್ಲ್ಯು ಕಾರುಗಳನ್ನು ಕಾಣಬಹುದಾಗಿದೆ. ಬಿಎಂಡಬ್ಲ್ಯು 1100 ಎಲ್‌ಟಿ, 735 ಐ, 830 ಐ, ಬಿ12 ಹಾಗೂ ಅತ್ಯಂತ ಶಕ್ತಿಶಾಲಿ ಎಂ1, ಎಂ3, ಎಂ3 ಜಿಟಿಆರ್, ಎಂ5 ಹಾಗೂ ಝಡ್4 ಮಾದರಿಗಳಿವೆ.

ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್

ಸುಲ್ತಾನ್ ಆಫ್ ಬ್ರೂನಿ ಪಾಲಿಗೆ ರೋಲ್ಸ್ ರಾಯ್ಸ್ ಅತಿ ನೆಚ್ಚಿನ ಕಾರು ಬ್ರಾಂಡ್ ಆಗಿದೆ. ರಾಜಮನೆತಕ್ಕೆ ತಕ್ಕಂದೆ ಕ್ಲಾಸಿಕ್ ವಿನ್ಯಾಸವನ್ನು ಮೈಗೂಡಿಸಿ ಬಂದಿರುವ ರೋಲ್ಸ್ ರಾಯ್ಸ್‌ನ 604ರಷ್ಟು ಕಾರುಗಳನ್ನು ಬ್ರೂನಿ ಹೊಂದಿದ್ದಾರೆ.

 ಜೀವನ ಶೈಲಿ

ಜೀವನ ಶೈಲಿ

ಒಟ್ಟಿನಲ್ಲಿ ಐಷಾರಾಮಿ ಕಾರುಗಳು ಬ್ರೂನಿ ಸುಲ್ತಾನನ ಜೀವನ ಶೈಲಿಯ ಭಾಗವಾಗಿಬಿಟ್ಟಿದೆ. ಇದಕ್ಕಾಗಿ ಇವನ್ನೆಲ್ಲ ಸರಿಯಾಗಿ ನಿರ್ವಹಿಸಲು ಅತಿ ದೊಡ್ಡ ಕಾರು ಗ್ಯಾರೇಜ್ ಸ್ಥಾಪಿಸಿದ್ದಾರೆ.

7000+ ಕಾರುಗಳ ಒಡೆಯ 'ಸುಲ್ತಾನ್ ಆಫ್ ಬ್ರೂನಿ'

ಇಲ್ಲಿ ವಿಪರ್ಯಾಸ ಸಂಗತಿಯೆಂದರೆ ಒಂದು ಕಾರನ್ನು ಹೊರ ತೆಗೆಯಬೇಕಾದರೆ ಗಂಟೆಗಳಷ್ಟು ಸಮಯ ಬೇಕಾಗಿದೆ. ಅಲ್ಲದೆ ದಿನಕ್ಕೊಂದು ಕಾರನ್ನು ಉಪಯೋಗಿಸುವುದಾದ್ದಲ್ಲಿ ಒಂದು ನಿರ್ದಿಷ್ಟ ಕಾರನ್ನು ಮಗದೊಮ್ಮೆ ಬಳಕೆ ಮಾಡಬೇಕಾದರೆ ವರ್ಷಗಳಷ್ಟು ಸಮಯ ಕಾಯಬೇಕಾಗುತ್ತದೆ.

ಇವನ್ನೂ ಓದಿ

ವಿಶ್ವಪ್ರಸಿದ್ಧ ರಾಜಮನೆತನದ ಕಾರುಗಳು

English summary
Sultan Of Brunei's Car Collection: 7000 Cars and Counting!
Story first published: Monday, November 30, 2015, 10:44 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark