ದೇಶದ ಅತಿ ದೊಡ್ಡ ಯುದ್ಧ ನೌಕೆ ಐಎನ್‌ಎಸ್ ವಿಶಾಖಪಟ್ಟಣಂ ಲೋಕಾರ್ಪಣೆ

Written By:

ದೇಶದ ಅತಿ ದೊಡ್ಡ ಯುದ್ಧ ನೌಕೆ ಐಎನ್ ಎಸ್ ವಿಶಾಖಪಟ್ಟಣಂ (INS Visakhapatnam) ಲೋಕಾರ್ಪಣೆಯಾಗಿದೆ. ಅತ್ಯಾಧುನಿಕ ಯುದ್ಧೋಪಕರಣ ಹಾಗೂ ಸಜ್ಜೀಕರಣದ ಈ ಸಮರ ನೌಕೆಯು ಪರಮಾಣು, ಜೈವಿಕ ಹಾಗೂ ರಾಸಾಯನಿಕ ವಾತಾವರಣಗಳಲ್ಲೂ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲ ಶಕ್ತಿಯನ್ನು ಹೊಂದಿದೆ.

ಬರೋಬ್ಬರಿ 29,340 ಕೋಟಿ ರು.ಗಳ ಬೃಹತ್ ಯೋಜನೆಯಡಿಯಲ್ಲಿ ಇಂತಹ ನಾಲ್ಕು ಸಮರ ನೌಕೆಗಳು ನಿರ್ಮಾಣವಾಗುತ್ತಿದೆ. ಅಲ್ಲದೆ 2018ರ ವೇಳೆಯಾಗುವಾಗ ಭಾರತೀಯ ನೌಕಾದಳವನ್ನು ಸೇರ್ಪಡೆಯಾಗಲಿದೆ. ಈಗ ಐಎನ್ ಎಸ್ ವಿಶಾಖಪಟ್ಟಣಂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 10 ರೋಚಕ ಅಂಶಗಳ ಬಗ್ಗೆ ನಾವು ಮಾಹಿತಿಯನ್ನು ಒದಗಿಸಲಿದ್ದೇವೆ.

To Follow DriveSpark On Facebook, Click The Like Button
10. ಶೇ.65 ಸ್ವದೇಶಿ

10. ಶೇ.65 ಸ್ವದೇಶಿ

'ಪ್ರೊಜೆಕ್ಟ್ 15ಬಿ' ಯೋಜನೆಡಿಯಲ್ಲಿ ವಿಶಾಖಪಟ್ಟಣಂ ಕ್ಲಾಸ್ ಯುದ್ಧ ನೌಕೆ ಸಿದ್ಧಗೊಂಡಿದೆ. ಅಲ್ಲದೆ ಶೇಕಡಾ 65ರಷ್ಟನ್ನು ದೇಶಿಯವಾಗಿ ನಿರ್ಮಿಸಲಾಗಿದೆ.

09. 7,300 ಟನ್ ತೂಕ

09. 7,300 ಟನ್ ತೂಕ

ಭರ್ಜರಿ 7,300 ಟನ್ ಗಳಷ್ಟು ಭಾರ ಹೊಂದಿರುವ ಐಎನ್ ಎಸ್ ವಿಶಾಖಪಟ್ಟಣಂ ವಿಮಾನದಲ್ಲಿ ಇಸ್ರೇಲಿನ ಬಹು ಕ್ರಿಯಾತ್ಮಕ ಕಣ್ಗಾವಲು ಅಪಾಯ ಎಚ್ಚರ ರಾಡಾರ್ (ಎಂಎಫ್-ಎಸ್ ಟಿಎಆರ್) ಆಳವಡಿಸಲಾಗಿದೆ. ಇದು ಈ ಯುದ್ಧ ನೌಕೆಯಲ್ಲಿರುವ ಕ್ಷಿಪಣಿಗಳಿಗೆ 32 ಬರಾಕ್ 8 ದೂರಗಾಮಿ ಮೇಲ್ಮೈ ಗುರಿ ಮಾಹಿತಿಯನ್ನು ಒದಗಿಸಲಿದೆ. ಭಾರತ ಹಾಗೂ ಇಸ್ರೇಲ್ ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿದೆ.

08. ಬ್ರಹ್ಮೋಸ್ ವಿಮಾನ

08. ಬ್ರಹ್ಮೋಸ್ ವಿಮಾನ

ಪ್ರಸ್ತುತ ಯುದ್ಧ ನೌಕೆಯು ಎಂಟು ಬ್ರಹ್ಮೋಸ್ ಮಿಸೈಲ್ ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

07. ವಾಯುಮಂಡಲ ನಿಯಂತ್ರಣ ವ್ಯವಸ್ಥೆ

07. ವಾಯುಮಂಡಲ ನಿಯಂತ್ರಣ ವ್ಯವಸ್ಥೆ

ಐಎನ್ ಎಸ್ ವಿಶಾಖಪಟ್ಟಣಂ ಸಮರ ನೌಕೆಯು ಪೂರ್ಣ ಪ್ರಮಾಣದ ಒಟ್ಟಾರೆ ವಾಯುಮಂಡಲ ನಿಯಂತ್ರಣ ವ್ಯವಸ್ಥೆಯನ್ನು (Total Atmosphere Control System ) ಹೊಂದಿರುತ್ತದೆ.

06. 127 ಎಂಎಂ ಮೈನ್ ಗನ್

06. 127 ಎಂಎಂ ಮೈನ್ ಗನ್

ಕೋಲ್ಕತ್ತಾ ಕ್ಲಾಸ್ ವಿನ್ಯಾಸ ತಳಹದಿಯಲ್ಲಿ ನಿರ್ಮಾಣವಾಗಿರುವ ಐಎನ್ ಎಸ್ ವಿಶಾಖಪಟ್ಟಣಂದಲ್ಲಿ 127 ಎಂಎಂ ಮೈನ್ ಗನ್ ವ್ಯವಸ್ಥೆಯಿರಲಿದೆ. ಇನ್ನೊಂದೆಡೆ ಕೋಲ್ಕತ್ತಾ ಕ್ಲಾಸ್ ನಲ್ಲಿ 76 ಎಂಎಂ ಸೂಪರ್ ರಾಪಿಡ್ ಗನ್ ಮೌಂಟ್ (ಎಸ್ ಆರ್ ಜಿಎಂ) ಬಳಕೆಯಾಗಿದೆ. ಹಾಗಿದ್ದರೂ ಇವೆರಡೂ ಎಕೆ-630 ಆ್ಯಂಟಿ ಮಿಸೈಲ್ ಗನ್ ವ್ಯವಸ್ಥೆಯನ್ನು ಹಂಚಿಕೊಂಡಿದೆ.

05. ವಿಶೇಷ ರಕ್ಷಣಾ ಕವಚ

05. ವಿಶೇಷ ರಕ್ಷಣಾ ಕವಚ

ಕೋಲ್ಕತ್ತಾಗಿಂತಲೂ ಹೆಚ್ಚು ಶಕ್ತಿಶಾಲಿ ಎನಿಸಿಕೊಂಡಿರುವ ವಿಶಾಖಪಟ್ಟಣಂ ಸಮರ ನೌಕೆಯ ಸಿಬ್ಬಂದಿಗಳು ತಮ್ಮ ಆತ್ಮರಕ್ಷಣೆಗಾಗಿ ವಿಶೇಷ ರಕ್ಷಣಾ ಕವಚಗಳನ್ನು ಧರಿಸಲಿದ್ದಾರೆ.

04. ಹೆಲಿಕಾಪ್ಟರ್

04. ಹೆಲಿಕಾಪ್ಟರ್

ಯುದ್ಧದಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಹೆಲಿಕಾಪ್ಟರ್ ಗೆ ಹಾದು ಹೋಗುವ ವ್ಯವಸ್ಥೆಯನ್ನು ಇದರಲ್ಲಿ ಮಾಡಲಾಗಿದೆ.

03. ಇತರೆ ವೈಶಿಷ್ಟ್ಯಗಳು

03. ಇತರೆ ವೈಶಿಷ್ಟ್ಯಗಳು

ಇನ್ನು ಹಡಗು ಮಾಹಿತಿ ಜಾಲ (ಎಸ್ ಡಿಎನ್), ಆಟೋಮ್ಯಾಟಿಕ್ ಪವರ್ ಮ್ಯಾನೇಜ್ ಮೆಂಟ್ ಸಿಸ್ಟಂ ಮತ್ತು ಯುದ್ಧ ನಿರ್ವಹಣಾ ವ್ಯವಸ್ಥೆಯನ್ನು ಪಡೆದುಕೊಂಡಿದೆ.

 02. 2018ರಲ್ಲಿ ನೌಕಾಪಡೆಗೆ

02. 2018ರಲ್ಲಿ ನೌಕಾಪಡೆಗೆ

ಈಗ 2015 ಎಪ್ರಿಲ್ 20ರಂದು ಬಿಡುಯಾಗಿರುವ ಐಎನ್ ಎಸ್ ವಿಶಾಖಪಟ್ಟಣಂ 2018ನೇ ಸಾಲಿನಲ್ಲಿ ಭಾರತೀಯ ನೌಕೆಯನ್ನು ಸೇರ್ಪಡೆಗೊಳ್ಳಲಿದೆ.

01. ಇನ್ನಿತರ ಸಮರ ನೌಕೆಗಳು

01. ಇನ್ನಿತರ ಸಮರ ನೌಕೆಗಳು

ಬಲ್ಲ ಮೂಲಗಳ ಪ್ರಕಾರ ವಿಶಾಖಪಟ್ಟಣಂ ಕ್ಲಾಸ್ ಮುಂಬರುವ ಸಮರ ನೌಕೆಗಳು ಐಎನ್ ಎಸ್ ಪೋರ್ ಬಂದರ್ ಹಾಗೂ ಐಎನ್ ಎಎಸ್ ಮಾರ್ಮಗೋವಾ ಎಂದೆನಿಸಿಕೊಳ್ಳಲಿದೆ. ಇವೆರಡು ಅನುಕ್ರಮವಾಗಿ 2020 ಹಾಗೂ 2022 ರಲ್ಲಿ ಭಾರತೀಯ ನೌಕೆಗೆ ಸೇರ್ಪಡೆಯಾಗಲಿದೆ. ಆದರೂ ಹೆಸರಿಗೆ ಸಂಬಂಧಪಟ್ಟಂತೆ ರಾಷ್ಟ್ರಪತಿಯಿಂದ ಇನ್ನಷ್ಟೇ ಅನುಮೋದನೆ ಸಿಗಬೇಕಾಗಿದೆ.

English summary
10 Interesting facts about INS Visakhapatnam
Story first published: Monday, April 20, 2015, 14:56 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark