ಆಕಾಶಕ್ಕೆ ಹಾರಿದ್ದೇ ತಡ ಕಳಚಿ ಬಿತ್ತು 100 ಕೆ.ಜಿ ತೂಕದ ಕಾರ್ಗೋ ವಿಮಾನದ ಚಕ್ರ

ಕಳೆದ ಮಂಗಳವಾರ ಇಟಲಿಯಲ್ಲಿ 180 ಟನ್ ತೂಕದ ಕಾರ್ಗೋ ಜೆಟ್‌ನಿಂದ 100 ಕೆ.ಜಿಯ ವಿಮಾನದ ಚಕ್ರವು ನೆಲಕ್ಕೆ ಬಿದ್ದ ದೃಷ್ಯವನ್ನು ಏವಿಯೇಷನ್ ಬ್ಲಾಗ್ ಸೆರೆಹಿಡಿದಿದೆ. ಈ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂದು ವರದಿಗಳು ತಿಳಿಸಿವೆ.

ಆಕಾಶಕ್ಕೆ ಹಾರಿದ್ದೇ ತಡ ಕಳಚಿ ಬಿತ್ತು 100 ಕೆ.ಜಿ ತೂಕದ ಕಾರ್ಗೋ ವಿಮಾನದ ಚಕ್ರ

ಬ್ರೆಜಿಲಿಯನ್ ಏವಿಯೇಷನ್ ಬ್ಲಾಗ್ ಏರೋಯಿನ್ ದಕ್ಷಿಣದ ನಗರವಾದ ಟ್ಯಾರೆಂಟೊದಿಂದ ಟೇಕ್ ಆಫ್ ಆಗುತ್ತಿದ್ದಂತೆ ವಿಶ್ವದ ಅತಿ ಉದ್ದದ ಸರಕು ವಿಮಾನವಾದ ಬೋಯಿಂಗ್ ಡ್ರೀಮ್‌ಲಿಫ್ಟರ್‌ನಿಂದ ಚಕ್ರ ನೆಲಕ್ಕೆ ಉರುಳಿದ್ದು, ಈ ವಿಡಿಯೋವನ್ನು ಏವಿಯೇಷನ್ ಬ್ಲಾಗ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ.

ಆಕಾಶಕ್ಕೆ ಹಾರಿದ್ದೇ ತಡ ಕಳಚಿ ಬಿತ್ತು 100 ಕೆ.ಜಿ ತೂಕದ ಕಾರ್ಗೋ ವಿಮಾನದ ಚಕ್ರ

ಬೋಯಿಂಗ್ 747-400 ಡ್ರೀಮ್‌ಲಿಫ್ಟರ್ ವಿಮಾನದ ಟೈರ್‌ಗಳಲ್ಲಿ ಒಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿದ್ದು, ಟೇಕ್‌ಆಫ್ ಆದ ನಂತರ ಅದರ ಚಕ್ರವನ್ನು ಕಳೆದುಕೊಂಡಿದೆ ಎಂದು ಬ್ಲಾಗ್ ತನ್ನ ಟ್ವಿಟರ್‌ನಲ್ಲಿ ವೀಡಿಯೊದೊಂದಿಗೆ ಪೋಸ್ಟ್ ಮಾಡಿದೆ.

ಆಕಾಶಕ್ಕೆ ಹಾರಿದ್ದೇ ತಡ ಕಳಚಿ ಬಿತ್ತು 100 ಕೆ.ಜಿ ತೂಕದ ಕಾರ್ಗೋ ವಿಮಾನದ ಚಕ್ರ

ಅಟ್ಲಾಸ್ ಏರ್ ಫ್ಲೈಟ್ N718BA ಎಂದು ಕೋಡ್ ನೇಮ್ ಇಡಲಾಗಿರುವ ಬೋಯಿಂಗ್ ಡ್ರೀಮ್‌ಲಿಫ್ಟರ್ ವಿಮಾನವು, ಅಕ್ಟೋಬರ್ 11 ರಂದು US ಕಾರ್ಗೋ ಏರ್‌ಲೈನ್ ಅಟ್ಲಾಸ್ ಏರ್‌ನಿಂದ ಕಾರ್ಯನಿರ್ವಹಿಸುತ್ತಿತ್ತು, ಈ ವಿಮಾನ ದಕ್ಷಿಣ ಕೆರೊಲಿನಾದ ಚಾರ್ಲ್ಸ್‌ಟನ್‌ಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ.

ಆಕಾಶಕ್ಕೆ ಹಾರಿದ್ದೇ ತಡ ಕಳಚಿ ಬಿತ್ತು 100 ಕೆ.ಜಿ ತೂಕದ ಕಾರ್ಗೋ ವಿಮಾನದ ಚಕ್ರ

ಇನ್ನು ವಿಡಿಯೋದಲ್ಲಿ ನೋಡುವುದಾದರೆ ವಿಮಾನವು ಟೇಕ್ ಆಫ್ ಆಗುವಾಗ ಚಕ್ರವು ತಕ್ಷಣವೇ ಉರುಳುವುದನ್ನು ಕಾಣಬಹುದು. ಚಕ್ರವು ನೆಲಕ್ಕೆ ಕಳಚಿ ಬೀಳುವ ಮೊದಲು ಲ್ಯಾಂಡಿಂಗ್ ಗೇರ್ ಪ್ರದೇಶದಿಂದ ಹೊಗೆ ಬರುತ್ತಿತ್ತು. ಡ್ರೀಮ್‌ಲಿಫ್ಟರ್ ವಿಮಾನಕ್ಕೆ 18 ಚಕ್ರಗಳಿದ್ದು, ಪ್ರತಿಯೊಂದ ಚಕ್ರವು ನಾಲ್ಕು ಅಡಿ ಅಂತರವನ್ನು ಹೊಂದಿವೆ.

ಆಕಾಶಕ್ಕೆ ಹಾರಿದ್ದೇ ತಡ ಕಳಚಿ ಬಿತ್ತು 100 ಕೆ.ಜಿ ತೂಕದ ಕಾರ್ಗೋ ವಿಮಾನದ ಚಕ್ರ

ಈ ಘಟನೆಯ ಬಳಿಕ ಟ್ಯಾರಂಟೊ-ಗ್ರೊಟಾಗ್ಲಿ ವಿಮಾನ ನಿಲ್ದಾಣದ ಸಮೀಪವಿರುವ ದ್ರಾಕ್ಷಿತೋಟದಲ್ಲಿ ಚಕ್ರ ಪತ್ತೆಯಾಗಿದ್ದು, ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂದು ವರದಿಗಳು ತಿಳಿಸಿವೆ. ಬೋಯಿಂಗ್ ಘಟನೆಯನ್ನು ದೃಢಪಡಿಸಿದ ಬಳಿಕ ಅಕ್ಟೋಬರ್ 11 ರಂದು ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಆಕಾಶಕ್ಕೆ ಹಾರಿದ್ದೇ ತಡ ಕಳಚಿ ಬಿತ್ತು 100 ಕೆ.ಜಿ ತೂಕದ ಕಾರ್ಗೋ ವಿಮಾನದ ಚಕ್ರ

ಅಟ್ಲಾಸ್ ಏರ್ ನಿರ್ವಹಿಸುವ ಡ್ರೀಮ್‌ಲಿಫ್ಟರ್ ಕಾರ್ಗೋ ಫ್ಲೈಟ್ ಇಟಲಿಯ ಟ್ಯಾರಂಟೊ-ಗ್ರೊಟಾಗ್ಲಿ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುವಾಗ ಲ್ಯಾಂಡಿಂಗ್ ಗೇರ್‌ನಿಂದ ಚಕ್ರವನ್ನು ಕಳೆದುಕೊಂಡಿತ್ತು. ನಂತರ ಚಾರ್ಲ್ಸ್‌ಟನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದ್ದು, ಚಕ್ರವನ್ನು ಮರುಜೋಡಣೆ ಮಾಡಲಾಗಿದೆ.

ಆಕಾಶಕ್ಕೆ ಹಾರಿದ್ದೇ ತಡ ಕಳಚಿ ಬಿತ್ತು 100 ಕೆ.ಜಿ ತೂಕದ ಕಾರ್ಗೋ ವಿಮಾನದ ಚಕ್ರ

ಡ್ರೀಮ್‌ಲಿಫ್ಟರ್ ಒಂದು ಪರಿವರ್ತಿತ ಬೋಯಿಂಗ್ 747 ವಿಮಾನವಾಗಿದ್ದು, ಬೋಯಿಂಗ್‌ನ ಹೊಸ 787 ಡ್ರೀಮ್‌ಲೈನರ್‌ನ ಭಾಗಗಳನ್ನು ಖಂಡಗಳ ನಡುವೆ ಸಾಗಿಸಲು 2000ರ ದಶಕದ ಆರಂಭದಲ್ಲಿ ವಿನ್ಯಾಸಗೊಳಿಸಲಾಗಿದೆ. ಆಗಿನಿಂದಲೂ ಈ ವಿಮಾನವು ಹಲವು ದೇಶಗಳಿಗೆ ಸರಕುಗಳನ್ನು ಸಾಗಿಸುತ್ತಾ ಸೇವೆ ಸಲ್ಲಿಸುತ್ತಿದೆ.

ಆಕಾಶಕ್ಕೆ ಹಾರಿದ್ದೇ ತಡ ಕಳಚಿ ಬಿತ್ತು 100 ಕೆ.ಜಿ ತೂಕದ ಕಾರ್ಗೋ ವಿಮಾನದ ಚಕ್ರ

ನಾಳೆ ಬೆಂಗಳೂರಿಗೆ ಬಂದಿಳಿಯಲಿದೆ ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಮೊದಲ ಬಾರಿಗೆ ವಿಶ್ವದ ಅತಿದೊಡ್ಡ ಪ್ರಯಾಣಿಕ ವಿಮಾನ ಏರ್‌ಬಸ್ ಎ 380 ಅನ್ನು ಸ್ವಾಗತಿಸಲು ಸಿದ್ಧವಾಗಿದೆ. ಎಮಿರೇಟ್ಸ್ ಏರ್‌ಲೈನ್ಸ್ ಒಡೆತನದ ವಿಮಾನವು ನಾಳೆ, (ಅಕ್ಟೋಬರ್ 14) ಭಾರತದಲ್ಲಿ ಇಳಿಯಲಿದೆ.

ಆಕಾಶಕ್ಕೆ ಹಾರಿದ್ದೇ ತಡ ಕಳಚಿ ಬಿತ್ತು 100 ಕೆ.ಜಿ ತೂಕದ ಕಾರ್ಗೋ ವಿಮಾನದ ಚಕ್ರ

ಎಮಿರೇಟ್ಸ್ ಏರ್‌ಲೈನ್ಸ್ ವಿಮಾನವು ಎರಡು ವಾರಗಳ ನಂತರ ಭಾರತದಲ್ಲಿ ಇಳಿಯಲು ಈ ಹಿಂದೆ ಯೋಜಿಸಲಾಗಿದ್ದರಿಂದ ವಿಮಾನದ ಮೊದಲ ಹಾರಾಟವನ್ನು ಪೂರ್ವಭಾವಿಯಾಗಿ ನಿಗದಿಪಡಿಸಲಾಗಿದೆ. ಗರ್ಹೌಡ್ ಮೂಲದ ಏರ್‌ಲೈನ್ ಮಾಲೀಕತ್ವದ ಡಬಲ್ ಡೆಕ್ಕರ್ ವಿಮಾನವು ದುಬೈನಿಂದ ಬೆಂಗಳೂರಿಗೆ ಬಂದಿಳಿಯಲಿದೆ.

ಆಕಾಶಕ್ಕೆ ಹಾರಿದ್ದೇ ತಡ ಕಳಚಿ ಬಿತ್ತು 100 ಕೆ.ಜಿ ತೂಕದ ಕಾರ್ಗೋ ವಿಮಾನದ ಚಕ್ರ

ಇದಲ್ಲದೆ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನದ ಲ್ಯಾಂಡಿಂಗ್ ಅನ್ನು ನಿರ್ವಹಿಸಲು ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನವನ್ನು ಸ್ವಾಗತಿಸಲು ಸಿದ್ಧತೆ ನಡೆಸುತ್ತಿರುವ ಸುದ್ದಿಯನ್ನು ತಮ್ಮ ಅಧಿಕೃತ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ.

ಆಕಾಶಕ್ಕೆ ಹಾರಿದ್ದೇ ತಡ ಕಳಚಿ ಬಿತ್ತು 100 ಕೆ.ಜಿ ತೂಕದ ಕಾರ್ಗೋ ವಿಮಾನದ ಚಕ್ರ

"ಎಮಿರೇಟ್ಸ್ ಏರ್‌ಬಸ್ A380 ಅಕ್ಟೋಬರ್ 14 ರಂದು #BLRA ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ನಮ್ಮ ತಂಡಗಳು #BLR ಗೆ ಈ ಐತಿಹಾಸಿಕ ಚೊಚ್ಚಲ ಹಾರಾಟಕ್ಕೆ ಸಜ್ಜಾಗುತ್ತಿವೆ. ನಮ್ಮ ಎಂಜಿನಿಯರ್‌ಗಳು ಮತ್ತು ಕಾರ್ಯಾಚರಣೆ ತಂಡವು ಮೂಲಸೌಕರ್ಯ ಮತ್ತು ಪ್ರಕ್ರಿಯೆಗಳನ್ನು ಪರೀಕ್ಷಿಸುತ್ತಿವೆ. ನಾವು ಉಸಿರು ಬಿಗಿಹಿಡಿದು ಈ ದಿನಕ್ಕಾಗಿ ಕಾಯುತ್ತಿದ್ದೇವೆ. #Emirates #Smoothlanding." ಎಂದು ಪೋಸ್ಟ್‌ ಮಾಡಲಾಗಿದೆ.

ಆಕಾಶಕ್ಕೆ ಹಾರಿದ್ದೇ ತಡ ಕಳಚಿ ಬಿತ್ತು 100 ಕೆ.ಜಿ ತೂಕದ ಕಾರ್ಗೋ ವಿಮಾನದ ಚಕ್ರ

ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಏರ್‌ಬಸ್ A380 ನಡೆಸುತ್ತಿರುವ ಎಮಿರೇಟ್ಸ್ ಇಕೆ 562 ವಿಮಾನವು ದುಬೈನಿಂದ ಬೆಳಿಗ್ಗೆ 10 ಗಂಟೆಗೆ ಟೇಕಾಫ್ ಆಗಲಿದೆ. ನಾಳೆ ಮಧ್ಯಾಹ್ನ 3:40 ರ ಸುಮಾರಿಗೆ ಬೆಂಗಳೂರಿಗೆ ಇಳಿಯಲಿದೆ. ಇದರ ನಂತರ, ವಿಮಾನವು ಬೆಂಗಳೂರಿನಿಂದ ದುಬೈಗೆ ಹಿಂದಿರುಗಲಿದೆ.

ಆಕಾಶಕ್ಕೆ ಹಾರಿದ್ದೇ ತಡ ಕಳಚಿ ಬಿತ್ತು 100 ಕೆ.ಜಿ ತೂಕದ ಕಾರ್ಗೋ ವಿಮಾನದ ಚಕ್ರ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಟೈರ್ ಕಳಚಿ ನೆಳಕ್ಕುರುಳಿರುವ ಘಟನೆ ಕುರಿತು ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಇನ್ನು ನಾಳೆ ಬೆಳಗಳೂರಿಗೆ ಮೊದಲ ಬಾರಿಗೆ ವಿಶ್ವದ ಅತಿದೊಡ್ಡ ಪ್ರಯಾಣಿಕ ವಿಮಾನ ಏರ್‌ಬಸ್ ಎ 380 ಆಗಮನ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ಗಳಲ್ಲಿ ತಿಳಿಸಿ.

Most Read Articles

Kannada
Read more on ವಿಮಾನ plane
English summary
The wheel of the 100 kg cargo plane came off in the sky
Story first published: Thursday, October 13, 2022, 18:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X