ಕುಡಿದು ವಾಹನ ಚಾಲನೆ- ಖ್ಯಾತ ಗಾಲ್ಫ್ ಕ್ರೀಡಾಪಟು ಟೈಗರ್ ವುಡ್ಸ್ ಅರೆಸ್ಟ್

Written By:

ಕುಡಿದು ವಾಹನ ಚಲಾಯಿಸಿದರೆಂಬ ಆರೋಪದ ಹಿನ್ನೆಲೆ ಅಮೆರಿಕದ ಖ್ಯಾತ ಗಾಲ್ಫ್ ಆಟಗಾರ ಟೈಗರ್‌ವುಡ್ಸ್‌ , ಬಂಧನಕ್ಕೊಳಗಾದ ಘಟನೆ ದಕ್ಷಿಣ ಫ್ಲೋರಿಡಾದಲ್ಲಿ ನಡೆದಿದೆ.

To Follow DriveSpark On Facebook, Click The Like Button
ಕುಡಿದು ವಾಹನ ಚಾಲನೆ- ಖ್ಯಾತ ಗಾಲ್ಫ್ ಕ್ರೀಡಾಪಟ ಟೈಗರ್ ವುಡ್ಸ್ ಅರೆಸ್ಟ್

ಟೈಗರ್ ವುಡ್ಸ್ ಸೋಮವಾರ ಮುಂಜಾನೆ 3 ಗಂಟೆಯ ಸುಮಾರಿಗೆ ದಕ್ಷಿಣ ಫ್ಲೋರಿಡಾದಲ್ಲಿ ಪಾನಮತ್ತರಾಗಿ ವಾಹನ ಚಲಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಸ್ಥಳೀಯ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಕುಡಿದು ವಾಹನ ಚಾಲನೆ- ಖ್ಯಾತ ಗಾಲ್ಫ್ ಕ್ರೀಡಾಪಟ ಟೈಗರ್ ವುಡ್ಸ್ ಅರೆಸ್ಟ್

ಫ್ಲೋರಿಡಾದ ಜುಪಿಟರ್‌ನ ಪಾಲಮ್‌ ಬೀಚ್‌‌ನ ಕೌಂಟಿ ಜೈಲಿಗೆ ವುಡ್ಸ್ ಕರೆದೊಯ್ದು ಪೊಲೀಸರು, ತೀವ್ರ ವಿಚಾರಣೆ ನಂತರ 10.50ಕ್ಕೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

ಕುಡಿದು ವಾಹನ ಚಾಲನೆ- ಖ್ಯಾತ ಗಾಲ್ಫ್ ಕ್ರೀಡಾಪಟ ಟೈಗರ್ ವುಡ್ಸ್ ಅರೆಸ್ಟ್

ಈ ನಡುವೆ ವುಡ್ಸ್ ಬಳಿಯಿಂದ ಯಾವುದೇ ಸೂಕ್ತ ದಾಖ​ಲಾತಿಗಳನ್ನು ಪಡೆಯದೇ ಬಿಡುಗಡೆಗೊಳಿಸಿರುವುದು ಪೊಲೀಸರ ವರ್ತನೆ ಅನುಮಾನಕ್ಕೆ ಎಡೆಮಾಡಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕುಡಿದು ವಾಹನ ಚಾಲನೆ- ಖ್ಯಾತ ಗಾಲ್ಫ್ ಕ್ರೀಡಾಪಟ ಟೈಗರ್ ವುಡ್ಸ್ ಅರೆಸ್ಟ್

ಇನ್ನು ಘಟನೆ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ವುಡ್ಸ್, ತಾವು ಕಾರು ಚಲಾಯಿಸುವಾಗ ಕುಡಿದಿರಲಿಲ್ಲ. ಬದಲಾಗಿ ಈ ಹಿಂದೆ ಬೆನ್ನುಹುರಿ ಚಿಕಿತ್ಸೆಗಾಗಿ ವೈದ್ಯರು ನೀಡಿದ್ದ ಔಷಧಿ ಮಂಪರು ತರಿಸಿತ್ತು ಎಂದು ಹೇಳಿದ್ದಾರೆ.

ಕುಡಿದು ವಾಹನ ಚಾಲನೆ- ಖ್ಯಾತ ಗಾಲ್ಫ್ ಕ್ರೀಡಾಪಟ ಟೈಗರ್ ವುಡ್ಸ್ ಅರೆಸ್ಟ್

ಇದಲ್ಲದೇ ಫ್ಲೋರಿಡಾದ ಜ್ಯೂಪಿಟರ್‌ ಐಸ್‌ ಲ್ಯಾಂಡ್‌ ನಲ್ಲಿ ವುಡ್ಸ್‌ ನಿವಾಸವಿದ್ದು, ಕಳೆದ ಏಪ್ರಿಲ್‌ನಲ್ಲಿ ಅವರು ಬೆನ್ನುಹುರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.

ಕುಡಿದು ವಾಹನ ಚಾಲನೆ- ಖ್ಯಾತ ಗಾಲ್ಫ್ ಕ್ರೀಡಾಪಟ ಟೈಗರ್ ವುಡ್ಸ್ ಅರೆಸ್ಟ್

ಇದೇ ಸಮಸ್ಯೆಯಿಂದ ವುಡ್ಸ್‌ ಸದ್ಯ ಮೈದಾನದಿಂದ ದೂರ ಉಳಿದಿದ್ದು, ಜೊತೆಗೆ ಲೈಂಗಿಕ ಹಗರಣದಲ್ಲಿ ಸಿಲುಕಿ ಮತ್ತು ಪದೇಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಕುಡಿದು ವಾಹನ ಚಾಲನೆ- ಖ್ಯಾತ ಗಾಲ್ಫ್ ಕ್ರೀಡಾಪಟ ಟೈಗರ್ ವುಡ್ಸ್ ಅರೆಸ್ಟ್

ಆದ್ರೆ ಟೈಗರ್ ಕುಡಿದು ವಾಹನ ಚಾಲನೆ ಮಾಡಿ ಸಿಕ್ಕಿ ಬಿದ್ದಿರೋದು ಇದೇ ಮೊದಲೇನಲ್ಲ. ಈ ಹಿಂದೆ 2009ರಲ್ಲೂ ಕುಡಿದ ಅಮಲಲ್ಲಿ ಗಾಡಿ ಚಲಾಯಿಸಿದ್ದರು.

ಕುಡಿದು ವಾಹನ ಚಾಲನೆ- ಖ್ಯಾತ ಗಾಲ್ಫ್ ಕ್ರೀಡಾಪಟ ಟೈಗರ್ ವುಡ್ಸ್ ಅರೆಸ್ಟ್

ಈ ವೇಳೆ ಕಾರನ್ನು ಮರವೊಂದಕ್ಕೆ ಗುದ್ದಿಸಿದ್ದರ ಪರಿಣಾಮ ಸಣ್ಣಪುಟ್ಟ ಗಾಯಮಾಡಿಕೊಂಡಿದ್ದರು. ಅದಾದ ನಂತರ ಇದೀಗ ಮತ್ತೆ ಡ್ರಿಂಕ್ & ಡ್ರೈವ್ ಕೇಸ್ ನಲ್ಲಿ ಸಿಕ್ಕಿಬಿದ್ದಿದ್ದಾರೆ.

Read more on ಕ್ರೈಂ crime
English summary
Read in Kannada about Tiger Woods, the former golf champion was arrested in South Florida on Monday morning for drunk driving charges.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark