ಕಾರ್ಡ್ ಬಳಕೆಗೂ ಮುನ್ನ ಹುಷಾರ್- ಪೆಟ್ರೋಲ್ ಬಂಕ್‌ನಲ್ಲಿ 20 ಲಕ್ಷ ಎಗರಿಸಿದ ಸಿಬ್ಬಂದಿ..!

Written By:

ಪೆಟ್ರೋಲ್ ಬಂಕ್‌‌ಗಳಲ್ಲಿ ಇನ್ಮುಂದೆ ಕಾರ್ಡ್ ಬಳಕೆಗೂ ಮುನ್ನ ಹುಷಾರ್ ಆಗಿ ವ್ಯವಹಾರ ಮಾಡಿ. ಯಾಕೇಂದ್ರೆ ನಿಮ್ಮ ಕಾರ್ಡ್‌ನಲ್ಲಿರುವ ಹಣ ಖದೀಮರ ಪಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

To Follow DriveSpark On Facebook, Click The Like Button
ಕಾರ್ಡ್ ಬಳಕೆಗೂ ಮುನ್ನ ಹುಷಾರ್- 20 ಲಕ್ಷ ಎಗರಿಸಿದ ಬಂಕ್ ಸಿಬ್ಬಂದಿ..!

ಆತ ಕೊಯಮತ್ತೂರು ಮೂಲದ ಉದ್ಯಮಿ. ಕಳೆದ 5 ದಿನಗಳ ಹಿಂದೆ ತಮ್ಮ ಎಟಿಎಂ ಕಾರ್ಡ್‌ನಿಂದ 59,000 ರೂಪಾಯಿ ಡ್ರಾ ಆಗಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ಮಾಡಿದಾಗ ಪೊಲೀಸರಿಗೆ ಶಾಕ್ ಕಾದಿತ್ತು.

ಕಾರ್ಡ್ ಬಳಕೆಗೂ ಮುನ್ನ ಹುಷಾರ್- 20 ಲಕ್ಷ ಎಗರಿಸಿದ ಬಂಕ್ ಸಿಬ್ಬಂದಿ..!

ಯಾಕೇಂದ್ರೆ ಕೊಯಮತ್ತೂರು ಉದ್ಯಮಿ ಕೊವೈ ರಾಜೀವ್ ಮಾಹಾಲಿಂಗಂ ಖಾತೆಯಿಂದ 59,000 ರೂಪಾಯಿ ಕಳ್ಳತನವಾಗಿದ್ದು ಬೇರೆಯಲ್ಲೂ ಅಲ್ಲಾ. ರಾಜೀವ್ ಖಾಯಂ ಆಗಿ ಹೋಗುತ್ತಿದ್ದ ಪೆಟ್ರೋಲ್ ಬಂಕ್ ಒಂದರಲ್ಲಿ ಈ ಕೃತ್ಯ ನಡೆದಿತ್ತು ಅಂದ್ರೆ ನಂಬಲೇಬೇಕು.

ಕಾರ್ಡ್ ಬಳಕೆಗೂ ಮುನ್ನ ಹುಷಾರ್- 20 ಲಕ್ಷ ಎಗರಿಸಿದ ಬಂಕ್ ಸಿಬ್ಬಂದಿ..!

ಇನ್ನು ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರಿಗೆ ಮೊದಮೊದಲು ಇದೊಂದು ಆನ್‌ಲೈನ್ ಹ್ಯಾಕಿಂಗ್ ಅಂದುಕೊಂಡಿರುವಾಗಲೇ ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೂ ಅನುಮಾನ ಸೃಷ್ಠಿಯಾಗುವಂತೆ ಮಾಡಿತ್ತು.

ಕಾರ್ಡ್ ಬಳಕೆಗೂ ಮುನ್ನ ಹುಷಾರ್- 20 ಲಕ್ಷ ಎಗರಿಸಿದ ಬಂಕ್ ಸಿಬ್ಬಂದಿ..!

ಹೀಗಾಗಿ ಅನುಮಾನದ ಜಾಡು ಹಿಡಿದು ತನಿಖೆ ಕೈಗೊಂಡ ಪೊಲೀಸರು, ಕೊಯಮತ್ತೂರಿನ ಅವಿನಾಶಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ ಒಂದರ ಸಿಬ್ಬಂದಿಗಳ ಚಲವಲನಗಳ ಮೇಲೆ ಕಣ್ಣಿಟ್ಟಿದ್ದರು.

ಕಾರ್ಡ್ ಬಳಕೆಗೂ ಮುನ್ನ ಹುಷಾರ್- 20 ಲಕ್ಷ ಎಗರಿಸಿದ ಬಂಕ್ ಸಿಬ್ಬಂದಿ..!

ಪೊಲೀಸರು ಅಂದುಕೊಂಡತೆ ಗ್ರಾಹಕರ ಎಟಿಎಂ ಕಾರ್ಡ್‌ಗಳ ಸಂಖ್ಯೆ ಮತ್ತು ಸಿಕ್ರೆಟ್ ಪಿನ್‌ಗಳನ್ನು ಮೋಸದಿಂದ ತಿಳಿದುಕೊಳ್ಳುತ್ತಿದ್ದ ಕೆಲ ಸಿಬ್ಬಂದಿ, ಆನ್‌ಲೈನ್‌ನಲ್ಲಿ ಕದ್ದ ನಂಬರ್‌ಗಳಿಂದ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತಿರುವುದನ್ನು ಸಾಬೀತಾಗಿತ್ತು.

ಕಾರ್ಡ್ ಬಳಕೆಗೂ ಮುನ್ನ ಹುಷಾರ್- 20 ಲಕ್ಷ ಎಗರಿಸಿದ ಬಂಕ್ ಸಿಬ್ಬಂದಿ..!

ಕದ್ದ ಪಿನ್‌ ನಂಬರ್‌ಗಳಿಂದ ಆನ್‌ಲೈನ್‌ನಲ್ಲೇ ದೋಖಾ ಮಾಡಿ ಮಜಾ ಮಾಡುತ್ತಿದ್ದ ಆನಂದ್ ಮತ್ತು ಮಹೇಂದ್ರನ್ ಎಂಬಾತ ಸಿಕ್ಕಿಬಿದ್ದಿದ್ದು, ಬೇರೆಯವರು ದುಡ್ಡಲ್ಲಿ ಮಾಜಾ ಮಾಡಿ ಇದೀಗ ಕಂಬಿ ಎಣಿಸುತ್ತಿದ್ದಾರೆ.

ಕಾರ್ಡ್ ಬಳಕೆಗೂ ಮುನ್ನ ಹುಷಾರ್- 20 ಲಕ್ಷ ಎಗರಿಸಿದ ಬಂಕ್ ಸಿಬ್ಬಂದಿ..!

ತನಿಖೆಯಲ್ಲಿ ಕಾದಿತ್ತು ಮತ್ತೊಂದು ಶಾಕ್

ಹೌದು, ಕೇವಲ ರಾಜೀವ್ ಅವರ ಕಾರ್ಡ್ ದುರ್ಬಳಕೆ ಮಾತ್ರವಲ್ಲದೇ ಇಂತಹದ್ದೇ 40 ಕೇಸ್‌ಗಳಲ್ಲಿ ಈ ಇಬ್ಬರು ಅಸಾಮಿಗಳು ಸಿಕ್ಕಿಬಿದ್ದಿದ್ದಾರೆ. ಇದರೊಂದಿಗೆ ಸುಮಾರು 20 ಲಕ್ಷ ರೂಪಾಯಿ ಕಮಾಯಿಸಿರುವ ಈ ಇಬ್ಬರು ಕಾರ್ಡ್ ಬಳಕೆ ಮಾಡುವರಿಗೆ ಶಾಕ್ ನೀಡಿದ್ದಾರೆ.

ಕಾರ್ಡ್ ಬಳಕೆಗೂ ಮುನ್ನ ಹುಷಾರ್- 20 ಲಕ್ಷ ಎಗರಿಸಿದ ಬಂಕ್ ಸಿಬ್ಬಂದಿ..!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಇದೀಗ ಎಲ್ಲ ಕಡೆಗೂ ಕ್ಯಾಶ್ ಲೆಸ್ ವ್ಯವಹಾರ ಸುಗಮವಾಗುತ್ತಿದ್ದು, ಈ ನಡುವೆ ಇಂತಹ ಮೋಸದ ವ್ಯವಹಾರಗಳು ಪತ್ತೆಯಾಗುತ್ತಿವೆ. ಹೀಗಾಗಿ ಕಾರ್ಡ್ ಮೂಲಕ ಬಿಲ್ ಪಾವತಿ ಮಾಡುವ ಸಂದರ್ಭಗಳಲ್ಲಿ ಎಚ್ಚರ ವಹಿಸುವುದು ಒಳಿತು.

Read more on ಕ್ರೈಂ crime
English summary
Read in Kannada about Bank Card Skimming Rampant in Petrol Pumps so everyone Alert.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark