ಹೆಲ್ಮೆಟ್ ಇಲ್ಲದೆ ಬೈಕ್ ರೈಡ್- ಪ್ರಶ್ನಿಸಿದ ಪೊಲೀಸರ ಮೇಲೆ ಯುವತಿಯಿಂದ ಹಲ್ಲೆ..!!

Written By:

ಯುವತಿಯೊಬ್ಬಳು ತನ್ನ ಬಾಯ್‌ಫ್ರೆಂಡ್ ಜೊತೆ ಹೆಲ್ಮೆಟ್ ಇಲ್ಲದೆ ಬೈಕ್ ರೈಡ್ ಮಾಡುತ್ತಿದ್ದಾಗ ಪೊಲೀಸರ ಕೈ ಸಿಕ್ಕಿಬಿದ್ದಿದ್ದು, ಬೈಕ್ ತಡೆಯಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಿರುವ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಹೆಲ್ಮೆಟ್ ಇಲ್ಲದೆ ಬೈಕ್ ರೈಡ್- ಪ್ರಶ್ನಿಸಿದ ಪೊಲೀಸರ ಮೇಲೆ ಯುವತಿಯಿಂದ ಹಲ್ಲೆ..!!

ದೆಹಲಿಯ ಕಂಟೋನ್ಮೆಂಟ್ ಬಳಿ ಈ ಘಟನೆ ನಡೆದಿದ್ದು, ವಾಹನಗಳ ತಪಾಸಣೆ ವೇಳೆ ಹೆಲ್ಮೆಟ್ ಇಲ್ಲದೇ ಬೈಕ್ ರೈಡ್ ಮಾಡುತ್ತಿದ್ದ ಯುವತಿಯನ್ನು ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್‌ ಒಬ್ಬರು ತಡೆಯಲು ಮುಂದಾಗಿದ್ದಾರೆ.

ಹೆಲ್ಮೆಟ್ ಇಲ್ಲದೆ ಬೈಕ್ ರೈಡ್- ಪ್ರಶ್ನಿಸಿದ ಪೊಲೀಸರ ಮೇಲೆ ಯುವತಿಯಿಂದ ಹಲ್ಲೆ..!!

ಈ ವೇಳೆ ಬೈಕ್ ಕೀ ತಗೆದುಕೊಳ್ಳಲು ಬಂದ ಪೊಲೀಸ್‌ಗೆ ಬಲವಾಗಿ ಒದೆ ಕೊಟ್ಟಿರುವ ಯುವತಿ, ತದನಂತರ ತನ್ನ ಬಾಯ್‌ಫ್ರೆಂಡ್ ಜೊತೆ ತಪ್ಪಿಸಿಕೊಂಡಿದ್ದಾಳೆ.

ಹೆಲ್ಮೆಟ್ ಇಲ್ಲದೆ ಬೈಕ್ ರೈಡ್- ಪ್ರಶ್ನಿಸಿದ ಪೊಲೀಸರ ಮೇಲೆ ಯುವತಿಯಿಂದ ಹಲ್ಲೆ..!!

ಯುವತಿ ಒದ್ದ ಪರಿಣಾಮ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ನಾಕಾಬಂಧಿ ಮೂಲಕ ಹಲ್ಲೆ ಮಾಡಿದ ಯುವತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೆಲ್ಮೆಟ್ ಇಲ್ಲದೆ ಬೈಕ್ ರೈಡ್- ಪ್ರಶ್ನಿಸಿದ ಪೊಲೀಸರ ಮೇಲೆ ಯುವತಿಯಿಂದ ಹಲ್ಲೆ..!!

ಎಸ್ಐ ಮೇಲೆ ಹಲ್ಲೆ ಮಾಡಿದ ಯುವತಿಯನ್ನು ಸೋನಮ್ ಎಂದು ಗುರುತಿಸಲಾಗಿದ್ದು, ಸದ್ಯ ತನ್ನ ಬಾಯ್‌ಫ್ರೆಂಡ್ ಜೊತೆ ಜೈಲು ಕಂಬಿ ಎಣಿಸುತ್ತಿದ್ದಾಳೆ.

ಹೆಲ್ಮೆಟ್ ಇಲ್ಲದೆ ಬೈಕ್ ರೈಡ್- ಪ್ರಶ್ನಿಸಿದ ಪೊಲೀಸರ ಮೇಲೆ ಯುವತಿಯಿಂದ ಹಲ್ಲೆ..!!

ಗೆಳತಿಗೆ ಸಹಕರಿಸಿದ ಆರೋಪ ಹಿನ್ನೆಲೆ ಸೋನಮ್ ಬಾಯ್‌ಫ್ರೆಂಡ್ ಪ್ರವೀಣ್ ಕೂಡಾ ಜೈಲು ಸೇರಿದ್ದು, ಪೊಲೀಸರ ಮೇಲಿನ ಹಲ್ಲೆ ಪ್ರಕರಣ ಹಿನ್ನೆಲೆ ಯುವತಿಯನ್ನು ಜೂನ್ 9ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹೆಲ್ಮೆಟ್ ಇಲ್ಲದೆ ಬೈಕ್ ರೈಡ್- ಪ್ರಶ್ನಿಸಿದ ಪೊಲೀಸರ ಮೇಲೆ ಯುವತಿಯಿಂದ ಹಲ್ಲೆ..!!

ಇನ್ನು ಘಟನೆಯ ಸಂದರ್ಭದಲ್ಲಿ ಯುವತಿಯನ್ನು ತಡೆಯಲು ಹೋಗಿದ್ದಾಗ ಪೊಲೀಸರ ಬಟ್ಟೆ ಹಿಡಿದು ಎಳೆದಾಡಿರುವ ಸೋನಮ್, ದಂಡದಿಂದ ತಪ್ಪಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾಳೆ.

ಹೆಲ್ಮೆಟ್ ಇಲ್ಲದೆ ಬೈಕ್ ರೈಡ್- ಪ್ರಶ್ನಿಸಿದ ಪೊಲೀಸರ ಮೇಲೆ ಯುವತಿಯಿಂದ ಹಲ್ಲೆ..!!

ಈ ವೇಳೆ ಬೈಕ್ ಕೀ ತೆಗದುಕೊಳ್ಳಲು ಹೋದ ಸಬ್‌ಇನ್ಸ್‌ಪೆಕ್ಟಟರ್ ಮುಖಕ್ಕೆ ಪಂಚ್ ಮಾಡಿರುವ ಸೋನಮ್, ಹೊಟ್ಟೆಗೆ ಬಲವಾಗಿ ಒದ್ದು ತಪ್ಪಿಸಿಕೊಳ್ಳಲು ಯತ್ನಸಿದ್ದಳು.

ಹೆಲ್ಮೆಟ್ ಇಲ್ಲದೆ ಬೈಕ್ ರೈಡ್- ಪ್ರಶ್ನಿಸಿದ ಪೊಲೀಸರ ಮೇಲೆ ಯುವತಿಯಿಂದ ಹಲ್ಲೆ..!!

ಬೈಕ್ ನಂಬರ್ ಆಧರಿಸಿ ಯುವತಿಯನ್ನು ಬೆನ್ನತ್ತಿದ ಮತ್ತೊಬ್ಬ ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್, ಖತರ್ನಾಕ್ ಯುವತಿಯನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಹೆಲ್ಮೆಟ್ ಇಲ್ಲದೆ ಬೈಕ್ ರೈಡ್- ಪ್ರಶ್ನಿಸಿದ ಪೊಲೀಸರ ಮೇಲೆ ಯುವತಿಯಿಂದ ಹಲ್ಲೆ..!!

ಬಂಧನ ನಂತರ ದೆಹಲಿ ಸ್ಥಳೀಯ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಗಿದ್ದು, ಜೂನ್ 9ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹೆಲ್ಮೆಟ್ ಇಲ್ಲದೆ ಬೈಕ್ ರೈಡ್- ಪ್ರಶ್ನಿಸಿದ ಪೊಲೀಸರ ಮೇಲೆ ಯುವತಿಯಿಂದ ಹಲ್ಲೆ..!!

ಸದ್ಯ ಜೂನ್ 9ರ ವರೆಗೆ ಜೈಲಿನಲ್ಲೇ ಕಂಬಿ ಎಣಿಸಬೇಕಿರುವ ಸೋನಮ್ ಮತ್ತು ಪ್ರವೀಣ್, ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಹೆಲ್ಮೆಟ್ ಇಲ್ಲದೆ ಬೈಕ್ ರೈಡ್- ಪ್ರಶ್ನಿಸಿದ ಪೊಲೀಸರ ಮೇಲೆ ಯುವತಿಯಿಂದ ಹಲ್ಲೆ..!!

ಇನ್ನು ಯುವತಿ ಪೊಲೀಸ್ ಹೊಟ್ಟೆಗೆ ಒದ್ದ ಪರಿಣಾಮ ಎಸ್‌ಐ ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಒಟ್ಟಿನಲ್ಲಿ ದಂಡದಿಂದ ತಪ್ಪಿಸಿಕೊಳ್ಳಲು ಹೋಗಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಸೋನಮ್ ಮತ್ತು ಪ್ರವೀಣ್‌ಗೆ ಸರಿಯಾದ ಶಿಕ್ಷೆಯಾಗಬೇಕಿದೆ.

Read more on ಕ್ರೈಂ crime
English summary
Read in Kannada about A woman assaulted a traffic police constable and kicked another sub-inspector after being stopped for not wearing a helmet.
Please Wait while comments are loading...

Latest Photos