ಟಾಪ್ 10 ಫುಟ್ಬಾಲ್ ಆಟಗಾರರ ಕಾರು ಸಂಗ್ರಹಗಳು

By Nagaraja

ಕಾಲ್ಚೆಂಡಿನ ಆಟ ಫುಟ್ಬಾಲ್ ಕ್ರೀಡೆಯನ್ನು ಯಾರು ತಾನೇ ಇಷ್ಟಪಡುತ್ತಿಲ್ಲ ಹೇಳಿ? ನಮ್ಮ ದೇಶದಲ್ಲಿ ಇದರ ಕ್ರೇಜ್ ಸ್ವಲ್ಪ ಕಡಿಮೆಯಾಗಿರಬಹುದು. ಆದರೆ ಇಡೀ ಜಗತ್ತೇ ಇದೀಗ ಸಾಗುತ್ತಿರುವ ಫಿಫಾ ಫುಟ್ಬಾಲ್ ವಿಶ್ವಕಪ್‌ಗೆ ಮರುಳಾಗಿಬಿಟ್ಟಿದೆ. ಭಾರತದಲ್ಲಿ ಫುಟ್ಬಾಲ್ ಮೂಲಸೌಲಭ್ಯದ ಕೊರತೆ ಹಾಗೂ ಕ್ರಿಕೆಟ್ ಸಾಧಿಸಿರುವ ಮೇಲುಗೈಯಿಂದಾಗಿ ಫುಟ್ಬಾಲ್ ಮೇಲಿನ ಆಸಕ್ತಿ ಕೊಂಚ ಕಡಿಮೆಯಾಗಿದೆ.

ಇವನ್ನೂ ಓದಿ: ಕಾರಿಗೂ ಸಿಗರೇಟ್‌ಗೂ ಏನು ಸಂಬಂಧ?

ಆದರೆ ಫುಟ್ಬಾಲ್ ಕ್ರೀಡೆಯ ತವರೂರೇ ಎಂದೇ ಬಿಂಬಿಸಲ್ಪಟ್ಟಿರುವ ಯುರೋಪ್ ಹಾಗೂ ಅಮೆರಿಕ ಖಂಡಗಳಲ್ಲಿ ಇದನ್ನು ಪ್ರತಿಷ್ಠೆಯ ಆಟವನ್ನಾಗಿ ಪರಿಗಣಿಸುತ್ತಾರೆ. ವಿಶೇಷವೆಂದರೆ ಆಫ್ರಿಕಾದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಸಹ ಅದ್ಭುತ ಪ್ರದರ್ಶನ ನೀಡುತ್ತಿರುವುದು ನಿಜಕ್ಕೂ ದೇಶದ ಕ್ರೀಡಾಭಿಮಾನಿಗಳಲ್ಲಿ ನಾಚಿಕೆ ಹುಟ್ಟಿಸುವಂತಾಗಿದೆ. ನಾವು ನೂರು ಕೋಟಿಗಿಂತಲೂ ಅಧಿಕ ಭಾರತೀಯರಿದ್ದರೂ 11 ಶ್ರೇಷ್ಠ ಫುಟ್ಬಾಲ್ ಆಟಗಾರರನ್ನು ಹುಟ್ಟು ಹಾಕುವುದರಲ್ಲಿ ವಿಫಲವಾಗಿರುವುದು ನಿಜಕ್ಕೂ ದೇಶದ ಕ್ರೀಡೆಯ ಹಿನ್ನಡೆಯ ಸರಿ.

ಇವನ್ನೂ ಓದಿ: ಚಪ್ಪಟೆ ಸುಂದರಿ ಲಂಬೋರ್ಗಿನಿ ಫುಲ್ ಬಾಡಿ ಸ್ಕ್ಯಾನಿಂಗ್

ಸದ್ಯ 2014 ಫುಟ್ಬಾಲ್ ವಿಶ್ವಕಪ್ ಆತಿಥ್ಯ ತಾಣ ಬ್ರೆಜಿಲ್‌ನಲ್ಲಿ ಖ್ಯಾತ ಫುಟ್ಬಾಲ್ ಆಟಗಾರರು ಲಾ...ಲಾ...ಲಾ.. ಹಾಡಿಗೆ ತಾಳ ಹಾಕುತ್ತಿದ್ದಾರೆ. ಬ್ರೆಜಿಲ್‌ನವರೇ ಆಗಿರುವ ನೇಮಾರ್, ಅರ್ಜೇಂಟೀನಾದ ಲಯನಲ್ ಮೆಸ್ಸಿ, ಹಾಲೆಂಡ್‌ನ ರಾಬಿನ್ ವಾನ್ ಪರ್ಸಿ, ಇಂಗ್ಲೆಂಡ್‌ನ ವೇಯ್ನ್ ರೂನಿ ಮತ್ತು ಜರ್ಮನಿಯ ಮೆಸುಟ್ ಓಝಿಲ್ ಅವರಂತಹ ಆಟಗಾರರು ಈಗಾಗಲೇ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ಈ ನಡುವೆ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಜಗತ್ತಿನ ಟಾಪ್ 10 ಫುಟ್ಬಾಲಿಗರ ಕಾರು ಸಂಗ್ರಹಗಳನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಿದೆ. ಇದಕ್ಕಾಗಿ ಚಿತ್ರ ಸಂಪುಟದತ್ತ ಮುಂದುವರಿಯಿರಿ...

ಟಾಪ್ 10 ಫುಟ್ಬಾಲ್ ಆಟಗಾರರ ಕಾರು ಸಂಗ್ರಹಗಳು

ಇತರ ಕ್ರೀಡೆಗಳನ್ನು ಹೋಲಿಸಿದಾಗ ಜಾಗತಿಕ ಫುಟ್ಬಾಲ್ ಕ್ರೀಡಾಪಟುಗಳಿಗೆ ಗರಿಷ್ಠ ಸಂಭಾವನೆ ನೀಡಲಾಗುತ್ತದೆ. ಸಹಜವಾಗಿಯೇ ಇವರು ದುಬಾರಿ ಕಾರುಗಳತ್ತ ಆಕರ್ಷಿತರಾಗುತ್ತಾರೆ. ಕಾಲ ಬದಲಾಗಿದೆ 'ಮಣ್ಣು, ಹೆಣ್ಣು, ಹೊನ್ನು' ಎಂಬ ಹಳೆಯ ವಾಕ್ಯದ ಜತೆಗೆ ಕಾರನ್ನು ಸೇರಿಸುವ ಸಂದರ್ಭ ಬಂದಿದೆ. ಮುಂದಿನ ಪುಟಗಳತ್ತ ಮುಂದುವರಿಯುವ ಮೂಲಕ ಜಗತ್ತಿನ ಜನಪ್ರಿಯ ಆಟಗಾರರ ಕಾರು ಸಂಗ್ರಹಗಳ ಬಗ್ಗೆ ಮಾಹಿತಿ ಪಡೆಯಬಹುದು.

ಮೈಲ್ ಜೆದಿನಕ್ (ಆಸ್ಟ್ರೇಲಿಯಾ) - ಮರ್ಸಿಡಿಸ್ ಬೆಂಝ್ ಸಿ63 ಎಎಂಜಿ

ಮೈಲ್ ಜೆದಿನಕ್ (ಆಸ್ಟ್ರೇಲಿಯಾ) - ಮರ್ಸಿಡಿಸ್ ಬೆಂಝ್ ಸಿ63 ಎಎಂಜಿ

ಆಸ್ಟ್ರೇಲಿಯಾದ ನಾಯಕ ಹಾಗೂ ಮಧ್ಯ ಕ್ಷೇತ್ರರಕ್ಷಣೆಯ ರಕ್ಷಣಾತ್ಮಕ ಆಟಗಾರನಾಗಿರುವ ಮೈಲ್ ಜೆದಿನಿಕ್ ಅವರ ಬಳಿ ಮರ್ಸಿಡಿಸ್ ಬೆಂಝ್ ಸಿ63 ಎಎಂಜಿ ಕಾರಿದೆ. ಅತ್ಯಂತ ಶಕ್ತಿಶಾಲಿ 6.2 ಲೀಟರ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಬೆಂಝ್‌ನ ಈ ಆಧುನಿಕ ಕ್ಲಾಸಿಕ್ ಕಾರು ಭಾರತದಲ್ಲಿ 80 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

ಟಿಮ್ ಕಾಹಿಲ್ (ಆಸ್ಟ್ರೇಲಿಯಾ) - ಲಂಬೋರ್ಗಿನಿ ಗಲರ್ಡೊ

ಟಿಮ್ ಕಾಹಿಲ್ (ಆಸ್ಟ್ರೇಲಿಯಾ) - ಲಂಬೋರ್ಗಿನಿ ಗಲರ್ಡೊ

ಆಸ್ಟ್ರೇಲಿಯಾದ ಸರ್ವಕಾಲಿಕ ಶ್ರೇಷ್ಠ ಗೋಲ್ ಹೊಡೆತಗಾರನಾಗಿರುವ ಟಿಮ್ ಕಾಹಿಲ್ (34 ಗೋಲ್), ಆಕ್ರಮಣಕಾರಿ ಮಧ್ಯ ಕ್ಷೇತ್ರರಕ್ಷಣಾ ಆಟಗಾರನಾಗಿದ್ದಾರೆ. ಆದರೆ ಪ್ರಸ್ತುತ ವಿಶ್ವಕಪ್ ಸೇರಿದಂತೆ ಅನೇಕ ಸಂದರ್ಭದಲ್ಲಿ ಮುನ್ನಡೆಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ಗೋಲ್ (5) ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಅಂದ ಹಾಗೆ ಕಾಹಿಲ್ ಇಟಲಿಯ ಸೂಪರ್ ಕಾರು ಲಂಬೋರ್ಗಿನಿ ಗಲರ್ಡೊ ಹೊಂದಿದ್ದಾರೆ. ಜನಪ್ರಿಯ ಕಾದಾಟದ ಗೂಳಿ ಹೆಸರನ್ನು ಹೊಂದಿರುವ ಗಲರ್ಡೊ, ಲಂಬೋರ್ಗಿನಿಯ ಸರ್ವಶ್ರೇಷ್ಠ ಮಾದರಿಯಾಗಿದ್ದು, ವಿ10 ಎಂಜಿನ್ ಎಂಜಿನ್ ಹೊಂದಿದೆ. ಇದು ಬಾರತದಲ್ಲಿ 3ರಿಂದ 4 ಕೋಟಿ ರು.ಗಳಷ್ಟು ದುಬಾರಿಯಾಗಿದೆ.

ಲಯನಲ್ ಮೆಸ್ಸಿ (ಅರ್ಜೆಂಟೀನಾ) - ಮಸೆರಟಿ ಗ್ರ್ಯಾನ್ ಟರಿಸ್ಮೊ ಎಂಸಿ ಸ್ಟ್ರಾಡಲ್

ಲಯನಲ್ ಮೆಸ್ಸಿ (ಅರ್ಜೆಂಟೀನಾ) - ಮಸೆರಟಿ ಗ್ರ್ಯಾನ್ ಟರಿಸ್ಮೊ ಎಂಸಿ ಸ್ಟ್ರಾಡಲ್

ವಿಶ್ವ ಫುಟ್ಬಾಲ್‌ನ ಸರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಓರ್ವರಾಗಿರುವ 27ರ ಹರೆಯದ ಲಯನಲ್ ಮೆಸ್ಸಿ, ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕ ಹಾಗೂ ಮುನ್ನಡೆಯ ಆಟಗಾರರಾಗಿದ್ದಾರೆ. ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮಸೆರಟಿ ಗ್ರ್ಯಾನ್ ಟರಿಸ್ಮೊ ಎಂಸಿ ಸ್ಟ್ರಾಡಲ್ ಕಾರನ್ನು ಹೊಂದಿದ್ದಾರೆ. ಈ ಕೂಪೆ ಕಾರಲ್ಲಿ ಆಳವಡಿಸಲಾಗಿರುವ 4.7 ಲೀಟರ್ ವಿ8 ಎಂಜಿನ್ 460 ಅಶ್ವಶಕ್ತಿ (520 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಭಾರತದಲ್ಲಿ 1.5 ಕೋಟಿ ರು.ಗಳಷ್ಟು ದುಬಾರಿಯಾಗಿದೆ.

ಕ್ರಿಸ್ಟಿಯಾನೊ ರೊನಾಲ್ಡೊ (ಪೋರ್ಚುಗಲ್) - ಲಂಬೋರ್ಗಿನಿ ಅವೆಂಟಡೊರ್

ಕ್ರಿಸ್ಟಿಯಾನೊ ರೊನಾಲ್ಡೊ (ಪೋರ್ಚುಗಲ್) - ಲಂಬೋರ್ಗಿನಿ ಅವೆಂಟಡೊರ್

ಈ ಬಾರಿಯ ವಿಶ್ವಕಪ್‌ನಲ್ಲಿ ಭಾರಿ ನಿರಾಸೆ ಅನುಭವಿಸಿರುವ ಪೋರ್ಚುಗಲ್ ತಂಡದ ನಾಯಕ ಹಾಗೂ ಮುನ್ನಡೆಯ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ಲಂಬೋರ್ಗಿನಿ ಅವೆಂಟಡೊರ್ ಸೂಪರ್ ಕಾರು ಹೊಂದಿದ್ದಾರೆ. ಜಗತ್ತಿನ ಅತ್ಯಂತ ದುಬಾರಿ ಆಟಗಾರರಲ್ಲಿ ಕಾಣಿಸಿಕೊಂಡಿರುವ ರೊನೊಲ್ಡೊ ಐದು ಕೋಟಿ ಬೆಲೆ ಬಾಳುವ ಅವೆಂಟಡೊರ್ ತಮ್ಮದಾಗಿಸಿಕೊಂಡಿರುವುದು ಅಚ್ಚರಿ ಮೂಡಿಸುವುದಿಲ್ಲ. ಇದು ಗಂಟೆಗೆ 250 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ತಮ್ಮ ಕಾರು ಶೇಖರಣೆಯಲ್ಲಿ ಆಡಿ ಆರ್‌ಎಸ್6 ಅವಂತ್ ಕಾರನ್ನು ಹೊಂದಿರುವ ರೊನಾಲ್ಡೊ ಲಾ ಫೆರಾರಿ ಹೈಬ್ರಿಡ್ ಕಾರಿಗೂ ಆರ್ಡರ್ ಮಾಡಿರುವ ಬಗ್ಗೆಯೂ ಮಾಹಿತಿಯಿದೆ.

ನೇಮಾರ್ (ಬ್ರೆಜಿಲ್) - ಪೋರ್ಷೆ ಪನರಮಾ ಟರ್ಬೊ ಎಸ್

ನೇಮಾರ್ (ಬ್ರೆಜಿಲ್) - ಪೋರ್ಷೆ ಪನರಮಾ ಟರ್ಬೊ ಎಸ್

ನೇಮಾರ್ ಜೂನಿಯರ್ ಎಂದೇ ಅರಿಯಲ್ಪಟ್ಟಿರುವ ಬ್ರೆಜಿಲ್‌ನ ಈ ಉದಯೋನ್ಮುಖ ಮುನ್ನಡೆಯ ಆಟಗಾರ ಈಗಾಗಲೇ ಫುಟ್ಬಾಲ್ ಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿರುವ 22ರ ಹರೆಯದ ಬ್ರೆಜಿಲ್ ಆಟಗಾರನ ಬಳಿ ಪೋರ್ಷೆ ಪನರಮಾ ಟರ್ಬೊ ಎಸ್ ಕಾರಿದೆ. ಇದು ಕೇವಲ 3.8 ಸೆಕಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಇತರ ಸೂಪರ್ ಕಾರುಗಳಿಗಿಂತ ವಿಭಿನ್ನವಾಗಿರುವ ಪನರಮಾ ನಾಲ್ಕು ಡೋರ್, ಫೋರ್ ವೀಲ್ ಡ್ರೈವ್ ಮುಂತಾದ ವಿಶಿಷ್ಟತೆಗಳನ್ನು ಪಡೆದುಕೊಂಡಿದೆ. ಇದು ಭಾರತದಲ್ಲಿ ಎರಡು ಕೋಟಿ ರು.ಗಳಷ್ಟು ದುಬಾರಿಯಾಗಿದೆ.

ಡೇವಿಡ್ ವಿಲ್ಲ (ಸ್ಪೇನ್) - ಪೋರ್ಷೆ 911 ಟರ್ಬೊ

ಡೇವಿಡ್ ವಿಲ್ಲ (ಸ್ಪೇನ್) - ಪೋರ್ಷೆ 911 ಟರ್ಬೊ

ಹಾಲಿ ಚಾಂಪಿಯನ್ ಸ್ಪೇನ್, ಈ ಬಾರಿಯ ವಿಶ್ವಕಪ್ ಅಚ್ಚರಿಯ ಸೋಲನ್ನನುಭವಿಸುವ ಮೂಲಕ ಕೂಟದಿಂದಲೇ ನಿರ್ಗಮಿಸಿರಬಹುದು. ಆದರೆ ಸ್ಪೇನ್‌ನ ಸರ್ವಕಾಲಿಕ ಶ್ರೇಷ್ಠ ಗೋಲ್ ಹೊಡೆತಗಾರ (59 ಗೋಲ್) ಹಾಗೂ ಸ್ಪೇನ್ ಪರ ವಿಶ್ವಕಪ್‌ನಲ್ಲಿ (9 ಗೋಲ್) ಅತಿ ಹೆಚ್ಚು ಗೋಲ್ ದಾಖಲಿಸಿರುವ ಡೇವಿಡ್ ವಿಲ್ಲ ಬಳಿ ಪೋರ್ಷೆ 911 ಟರ್ಬೊ ಸೂಪರ್ ಕಾರಿದೆ. ಇದು ಮೂರು ಕೋಟಿ ರು.ಗಳಷ್ಟು ದುಬಾರಿಯೆನಿಸಿದೆ.

ವೇಯ್ನ್ ರೂನಿ (ಇಂಗ್ಲೆಂಡ್) - ರೇಂಜ್ ರೋವರ್ ಓವರ್‌ಫಿಂಚ್

ವೇಯ್ನ್ ರೂನಿ (ಇಂಗ್ಲೆಂಡ್) - ರೇಂಜ್ ರೋವರ್ ಓವರ್‌ಫಿಂಚ್

ಇತರ ಫುಟ್ಬಾಲ್ ಆಟಗಾರಗಿಂತಲೂ ವಿಭಿನ್ನವಾಗಿರುವ ಇಂಗ್ಲೆಂಡ್‌ನ ಮುನ್ನಡೆಯ ಆಟಗಾರ ವೇಯ್ನ್ ರೂನಿ, ರೇಂಜ್ ರೋವರ್ ಕ್ರೀಡಾ ಬಳಕೆಯ ವಾಹನವನ್ನು ಹೆಚ್ಚು ಇಷ್ಟಪಡುತ್ತಾರೆ. ಇದು ಅತ್ಯಂತ ಶಕ್ತಿಶಾಲಿ 5. ಲೀಟರ್ ಸೂಪರ್ಚಾರ್ಜ್ಡ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ.

ರಾಬಿನ್ ವಾನ್ ಪರ್ಸಿ (ಹಾಲೆಂಡ್) - ಪೋರ್ಷೆ ಕಯನ್ ಟರ್ಬೊ

ರಾಬಿನ್ ವಾನ್ ಪರ್ಸಿ (ಹಾಲೆಂಡ್) - ಪೋರ್ಷೆ ಕಯನ್ ಟರ್ಬೊ

ಹಾಲೆಂಡ್ ತಂಡದ ನಾಯಕ ಹಾಗೂ ಮುನ್ನಡೆಯ ಆಟಗಾರನಾಗಿರುವ ರಾಬಿನ್ ವಾನ್ ಪರ್ಸಿ, ರೂನಿ ಅವರಂತೆಯೇ ಎಸ್‌ಯುವಿ ಕಾರುಗಳಲ್ಲಿ ಹೆಚ್ಚು ಆರಾಮದಾಯಕತೆಯನ್ನು ಕಂಡುಕೊಳ್ಳುತ್ತಾರೆ. ಅವರ ಬಳಿ ಪೋರ್ಷೆ ಕಯನ್ನೆ ಟರ್ಬೊ ಕಾರಿದ್ದು, ವಿ6 2967 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಭಾರತದಲ್ಲಿದ್ದು 2 ಕೋಟಿ ರು.ಗಳಷ್ಟು ದುಬಾರಿಯೆನಿಸಿದೆ.

ಮಾರಿಯೊ ಬಲೊಟೆಲ್ಲಿ (ಇಟಲಿ) - ಫೆರಾರಿ ಎಫ್12

ಮಾರಿಯೊ ಬಲೊಟೆಲ್ಲಿ (ಇಟಲಿ) - ಫೆರಾರಿ ಎಫ್12

ಇಟಲಿಯ ಸೂಪರ್ ಸ್ಟಾರ್ ಕ್ರೀಡಾಪಟುವಾಗಿರುವ ಮರಿಯೊ ಬಲೊಟೆಲ್ಲಿ ತಮ್ಮ ವಿಶಿಷ್ಟ ಕೇಶವಿನ್ಯಾಸದಿಂದ ಸದಾ ನೋಡುಗರ ಗಮನ ಸೆಳೆಯುತ್ತಾರೆ. ಅಂದ ಹಾಗೆ ಸೂಪರ್ ಮರಿಯೊ ಬಳಿ ಫೆರಾರಿ ಎಫ್12 ಬರ್ಲಿನೆಟ್ಟಾ ಸೂಪರ್ ಕಾರಿದೆ. ಇದು ಭಾರತದಲ್ಲಿ ಮೂರು ಕೋಟಿ ರು.ಗಳಷ್ಟು ಬೆಲೆಬಾಳುತ್ತಿದೆ. ಇದಲ್ಲದೆ ಫೆರಾರಿ ಕ್ಯಾಲಿಫೋರ್ನಿಯಾ ಕನ್ವರ್ಟಿಬಲ್, ಕಪ್ಪು ಮಸರಟಿ ಗ್ರ್ಯಾನ್ ಟರಿಸ್ಮೊ ಹಾಗೆಯೇ ಬೆಂಟ್ಲಿ ಕಾಂಟಿನೆಂಟಲ್ ಸೂಪರ್ ಸೋರ್ಟ್ಸ್ ಕಾರನ್ನು ಅವರು ಹೊಂದಿದ್ದಾರೆ.

ಮೆಸುಟ್ ಓಝಿಲ್ (ಜರ್ಮನಿ) - ಫೆರಾರಿ 458

ಮೆಸುಟ್ ಓಝಿಲ್ (ಜರ್ಮನಿ) - ಫೆರಾರಿ 458

ತಮ್ಮ ಮೊನಚಾದ ಹೊಡೆತಗಳಿಂದ ಸದಾ ಎದುರಾಳಿ ತಂಡವನ್ನು ಕಾಡುತ್ತಿರುವ 25ರ ಹರೆಯದ ಜರ್ಮನ್ ಆಟಗಾರ ಮೆಸುಟ್ ಓಝಿಲ್, ಫೆರಾರಿ 458 ಇಟಲಿಯ ಸೂಪರ್ ಹೊಂದಿದ್ದಾರೆ. ಪ್ರಸ್ತುತ ಕೂಪೆ ಕಾರು ಬಾರತದಲ್ಲಿ ಮೂರು ಕೋಟಿ ರು.ಗಳಷ್ಟು ದುಬಾರಿಯಾಗಿದೆ.

ಟಾಪ್ 10 ಫುಟ್ಬಾಲ್ ಆಟಗಾರರ ಕಾರು ಸಂಗ್ರಹಗಳು

ಕ್ರಿಕೆಟ್ ಆಟಗಾರರನ್ನು ಹೋಲಿಸಿದಾಗ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಫುಟ್ಬಾಲ್ ಆಟಗಾರರು ತಮ್ಮ ವಿಲಾಸಿ ಜೀವನದಂತೆ ಐಷಾರಾಮಿ ಕಾರು ಪ್ರೇಮವನ್ನು ಹೊಂದಿದ್ದಾರೆ. ಸದ್ಯ ಮೇಲಿನ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ...

Most Read Articles

Kannada
English summary
Top 10 Football players and their cars
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X