ಟಾಪ್ 10 ಬಿಡುವಿಲ್ಲದ ವಿಮಾನ ನಿಲ್ದಾಣಗಳು; ಬೆಂಗಳೂರಿಗೆ ಎಷ್ಟನೇ ಸ್ಥಾನ?

Written By:

ಭಾರತದಲ್ಲಿ ವಿಮಾನಯಾನ ವಲಯ ಶಿಪ್ರ ಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದ್ದು, ಕೇವಲ ಉದ್ಯಮಿಗಳಷ್ಟೇ ಸೀಮಿತವಾಗಿದ್ದ ವಿಮಾನಯಾನವನ್ನು ಈಗ ಮಧ್ಯಮ ವರ್ಗದವರು ಆಶ್ರಯಿಸಿಕೊಂಡಿದ್ದಾರೆ. ಮುಂದಿನ ವರ್ಷಗಳಲ್ಲಿ ದೇಶದ ಆರ್ಥಿಕ ಏಳಿಗೆಯಲ್ಲಿ ವಿಮಾನಯಾನ ಕ್ಷೇತ್ರದ ಪಾತ್ರ ಮಹತ್ವದ್ದಾಗಿರಲಿದೆ.

Also Read: ವಿಶ್ವದ 10 ಅತ್ಯುತ್ತಮ ವಿಮಾನ ನಿಲ್ದಾಣಗಳು

ಭಾರತದಿಂದ ಅನೇಕ ಜಾಗತಿಕ ನಗರಗಳಿಗೆ ಅಂತರಾಷ್ಟ್ರೀಯ ವಿಮಾನ ಸೇವೆಯನ್ನು ಒದಗಿಸಲಾಗುತ್ತಿದೆ. ದೇಶದಲ್ಲಿ 100ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿದ್ದು, ಇವುಗಳನ್ನು ಭಾರತೀಯ ವಿಮಾನ ಪ್ರಾಧಿಕಾರ ನಿರ್ವಹಿಸುತ್ತಿದೆ. ಇವುಗಳ ಪೈಕಿ 17 ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಪ್ರಸ್ತುತ ಲೇಖನದಲ್ಲಿ ದೇಶದಲ್ಲಿ ಅತಿ ಹೆಚ್ಚು ಚಟುವಟಿಕೆ ನಿರತ ಟಾಪ್ 10 ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

 

To Follow DriveSpark On Facebook, Click The Like Button
10. ಪುಣೆ ವಿಮಾನ ನಿಲ್ದಾಣ

10. ಪುಣೆ ವಿಮಾನ ನಿಲ್ದಾಣ

ದೇಶದ ಅತ್ಯಂತ ಚಟುವಟಿಕೆ ನಿರತ ಅಂತರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣಗಳ ಪೈಕಿ ಪುಣೆ 10ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಕಳೆದ ವರ್ಷ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 41.9 ಲಕ್ಷ ಮಂದಿ ಯಾತ್ರಿಕರು ಪಯಣ ಕೈಗೊಂಡಿದ್ದರು.

09. ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

09. ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

1955ನೇ ಇಸವಿಯಲ್ಲಿ ನಿರ್ಮಾಣವಾಗಿರುವ ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೇಶದ ಅತ್ಯಂತ ಚಟುವಟಿಕೆ ನಿರತ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಸಾಲಿನಲ್ಲಿ ಒಂಬತ್ತನೇ ಸಾಲಿನಲ್ಲಿದೆ. ಕಳೆದ ಸಾಲಿನಲ್ಲಿ ಗೋವಾದಿಂದ 45.1 ಲಕ್ಷ ಯಾತ್ರಿಕರು ತಮ್ಮ ತಮ್ಮ ಗಮ್ಯಸ್ಥಾನಗಳಿಗೆ ಹೊರಟಿದ್ದರು.

08. ಸರ್ದಾರ್ ವಲ್ಲಭಾಯ್ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಅಹಮಾದಾಬಾದ್

08. ಸರ್ದಾರ್ ವಲ್ಲಭಾಯ್ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಅಹಮಾದಾಬಾದ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ತವರೂರಾದ ಗುಜರಾತ್‌ನ ಅಹಮದಾಬಾದ್ ದೇಶದ ಬಿಡುವಿಲ್ಲದ ವಿಮಾನ ನಿಲ್ದಾಣಗಳ ಸಾಲಿನಲ್ಲಿ ಎಂಟನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇಲ್ಲಿನ ಸರ್ದಾರ್ ವಲ್ಲಭಾಯ್ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಳೆದ ವರ್ಷ 50.5 ಲಕ್ಷ ಪ್ರಯಾಣಿಕರು ಸಂಚರಿಸಿದ್ದರು.

07. ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

07. ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಸೆಳೆಯುತ್ತಿರುವ ಕೊಚ್ಚಿಗೆ ವಿದೇಶದಿಂದ ಬರುವ ಯಾತ್ರಿಕರ ಸಂಖ್ಯೆಯಲ್ಲಿ ವರ್ಧನೆಯುಂಟಾಗಿದೆ. ಇದು ಅತ್ಯಂತ ಚಟುವಟಿಕೆ ನಿರತ ವಿಮಾನ ನಿಲ್ದಾಣಗಳ ಸಾಲಿನಲ್ಲಿ ಗುರುತಿಸಿಕೊಳ್ಳಲು ಕೊಚ್ಚಿಗೆ ನೆರವಾಗಿದೆ. ಕಳೆದ ಬಾರಿ ಇಲ್ಲಿಂದ 64.14 ಲಕ್ಷ ಪ್ರಯಾಣಿಕರು ಪಯಣ ಹಮ್ಮಿಕೊಂಡಿದ್ದರು.

06. ರಾಜೀವ್ ಗಾಂಧಿ ಅಂತರಾಷ್ಟ್ರೀಯ ಏರ್ ಪೋರ್ಟ್, ಹೈದರಾಬಾದ್

06. ರಾಜೀವ್ ಗಾಂಧಿ ಅಂತರಾಷ್ಟ್ರೀಯ ಏರ್ ಪೋರ್ಟ್, ಹೈದರಾಬಾದ್

ದೇಶದ ಮಗದೊಂದು ಐಟಿ ನಗರವಾಗಿರುವ ಹೈದರಬಾದ್ ಸಹ 1.04 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ ಹೈದರಾಬಾದ್ ನ ರಾಜೀವ್ ಗಾಂಧಿ ವಿಮಾನ ನಿಲ್ದಾಣ ಆರನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.

05. ನೇತಾಜಿ ಸುಭಾಶ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೋಲ್ಕತ್ತಾ

05. ನೇತಾಜಿ ಸುಭಾಶ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೋಲ್ಕತ್ತಾ

ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಗೌರವಾರ್ಥ ನಾಮಕರಣಗೊಂಡಿರುವ ಕೋಲ್ಕತ್ತಾ ವಿಮಾನ ನಿಲ್ದಾಣವು 1.09 ಕೋಟಿ ಯಾತ್ರಿಕರನ್ನು ನಿರ್ವಹಿಸುವ ಮೂಲಕ ದೇಶದ ಬಿಡುವಿಲ್ಲದ ಏರ್ ಪೋರ್ಟ್ ಗಳ ಪಟ್ಟಿಯಲ್ಲಿ ಟಾಪ್ ಐದರಲ್ಲಿ ಕಾಣಿಸಿಕೊಂಡಿದೆ.

04. ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

04. ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರಿಗೆ ನಿಕಟ ಪೈಪೋಟಿಯನ್ನು ಒಡ್ಡುತ್ತಿರುವ ಚೆನ್ನೈ ದೇಶದ ಅತ್ಯಂತ ಚಟುವಟಿಕೆ ನಿರತ ವಿಮಾನ ನಿಲ್ದಾಣಗಳಲ್ಲಿ ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಕಳೆದ ವರ್ಷ ಚೆನ್ನೈನಿಂದ 1.42 ಕೋಟಿ ಯಾತ್ರಿಕರು ತಮ್ಮ ಗಮ್ಯ ಸ್ಥಾನಕ್ಕೆ ಹಾರಾಟ ನಡೆಸಿದ್ದರು.

03. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು

03. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು

ಉದ್ಯಾನ ನಗರಿ ಬೆಂಗಳೂರಿನಲ್ಲಿ ಸ್ಥಿತಗೊಂಡಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೇಶದ ಮೂರನೇ ಅತಿ ದೊಡ್ಡ ಬಿಡುವಿಲ್ಲದ ವಿಮಾನ ನಿಲ್ದಾಣವಾಗಿದೆ. ಕಳೆದ ಸಾಲಿನಲ್ಲಿ 1.54 ಕೋಟಿ ಯಾತ್ರಿಕರನ್ನು ಗುರಿ ಮುಟ್ಟಿಸುವಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಏರ್ ಪೋರ್ಟ್ ಲಿಮಿಟೆಡ್ (ಬಿಐಎಎಲ್) ಯಶ ಕಂಡಿತ್ತು.

02. ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬೈ

02. ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬೈ

ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಸ್ಥಿತಗೊಂಡಿರುವ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು, ಭಾರತದ ಅತಿ ಚಟುವಟಿಕೆನಿರತ ವಿಮಾನ ನಿಲ್ದಾಣಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದು, ಕಳೆದ ವರ್ಷ 3.66 ಕೋಟಿ ಪ್ರಯಾಣಿಕರನ್ನು ನಿಭಾಯಿಸಿದೆ. ಅದೇ ಹೊತ್ತಿಗೆ 4.8 ಲಕ್ಷ ಟನ್ ಭಾರವನ್ನು ಹೊತ್ತೊಯ್ದಿರುವ ಮುಂಬೈನ ವಿಮಾನ ನಿಲ್ದಾಣವು ದೇಶದ ಅತಿ ದೊಡ್ಡ ಸರಕು ಸಂಚಾರ ವಿಮಾನ ನಿಲ್ದಾಣವಾಗಿ ಮಾರ್ಪಾಟ್ಟಿದೆ.

01. ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

01. ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಜಾಗತಿಕ ಮಟ್ಟದಲ್ಲೂ ಹೆಸರು ಮಾಡಿರುವ ದೆಹಲಿ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೇಶದ ಅತ್ಯಂತ ಚಟುವಟಿಕೆನಿರತ ವಿಮಾನ ನಿಲ್ದಾಣವೆಂಬ ಕೀರ್ತಿಗೆ ಪಾತ್ರವಾಗಿದೆ. ಸತತ ಎರಡನೇ ಬಾರಿಗೂ ಏರ್ ಪೋರ್ಟ್ಸ್ ಕೌನ್ಸಿಲ್ ಇಂಟರ್ ನ್ಯಾಷನಲ್ (ಎಸಿಐ) ಪ್ರಶಸ್ತಿಗೆ ಪಾತ್ರವಾಗಿರುವ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕಳೆದ ಸಾಲಿನಲ್ಲಿ 4.09 ಪ್ರಯಾಣಿಕರನ್ನು ನಿಭಾಯಿಸಿತ್ತು.

English summary
Top 10 Busiest International Airports in India
Story first published: Thursday, March 3, 2016, 11:03 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark