ಶತ್ರು ಪಾಳಯದಲ್ಲಿ ನಡುಕ ಸೃಷ್ಟಿಸಬಲ್ಲ 10 ಅಪಾಯಕಾರಿ ಯುದ್ಧ ಟ್ಯಾಂಕರ್

By Nagaraja

ಪ್ರತಿಯೊಂದು ದೇಶದ ಆಂತರಿಕ ಬಲದಲ್ಲಿ ಮಿಲಿಟರಿ ಶಕ್ತಿ ಅತ್ಯಂತ ನಿರ್ಣಾಯಕವೆನಿಸುತ್ತದೆ. ಭಾರತ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ತನ್ನ ಬಜೆಟ್ ನ ದೊಡ್ಡ ಭಾಗವನ್ನು ರಕ್ಷಣಾ ವಿಭಾಗಕ್ಕಾಗಿ ವ್ಯಯ ಮಾಡುತ್ತಿದೆ.

ಯಾವುದೇ ರೀತಿಯ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿರದ ಹೊರತಾಗಿಯೂ ಶತ್ರು ಪಾಳಯದಲ್ಲಿ ನಡುಕ ಸೃಷ್ಟಿಸಬಲ್ಲ ಶಕ್ತಿಯನ್ನು ಇಂತಹ ಸಮರ ಟ್ಯಾಂಕ್ ಗಳು ಹೊಂದಿರುತ್ತದೆ. ಹಾಗೆ ನೋಡಿದಾಗ ಭಾರತಕ್ಕೆ ಹೋಲಿಸಿದಾಗ ಮುಂದುವರಿದ ರಾಷ್ಟ್ರಗಳು ದುಬಾರಿ ಯುದ್ಧ ಟ್ಯಾಂಕರ್ ಗಳನ್ನು ತಮ್ಮದಾಗಿಸಿಕೊಂಡಿದೆ. ಇಲ್ಲಿ ವಿಶ್ವದ 10 ಅತಿ ದುಬಾರಿ ಯುದ್ಧ ಟ್ಯಾಂಕರ್ ಗಳ ಜೊತೆಗೆ ದೇಶದ ದುಬಾರಿ ಯುದ್ಧ ಟ್ಯಾಂಕರ್ ಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಪ್ರಯತ್ನ ಮಾಡಲಿದ್ದೇವೆ.

10. ಝಡ್ ಟಿ ಝಡ್-99 (ಚೀನಾ) – 16.35 ಕೋಟಿ ರು.

10. ಝಡ್ ಟಿ ಝಡ್-99 (ಚೀನಾ) – 16.35 ಕೋಟಿ ರು.

2001ರಲ್ಲಿ ಝಡ್ ಟಿ ಝಡ್-99 ಚೀನಾದ ಪೀಪಲ್ಸ್ ಲಿಬರೇಷನ್ ಸೇನೆಯನ್ನು (ಪಿಎಲ್ ಎ) ಸೇರ್ಪಡೆಗೊಂಡಿತ್ತು. ಸೋವಿಯತ್ ಯುಗದ ಟ್ಯಾಂಕರ್ ಗಳಿಗೆ ಸಮಾನತೆಯನ್ನು ಹೊಂದಿರುವ ಪ್ರಸ್ತುತ ಯುದ್ಧ ಟ್ಯಾಂಕ್ ನಲ್ಲಿ 125 ಎಂಎಂ ಮೈನ್ ಗನ್ ಬಳಕೆಯಾಗುತ್ತದೆ. ಇದರಲ್ಲಿ ಭರ್ಜರಿ 1500 ಅಶ್ವಶಕ್ತಿಯ ಡೀಸೆಲ್ ಎಂಜಿನ್ ಬಳಕೆ ಮಾಡಲಾಗಿದೆ. ಅಲ್ಲದೆ ಲೇಸರ್ ರಕ್ಷಣಾ ವ್ಯವಸ್ಥೆ, ಒಳನುಗ್ಗುವ ಕ್ಷಿಪಣಿಗಳನ್ನು ಎಚ್ಚರಿಸುವ ಉಪಕರಣ, ಗುರಿ ಭಂಗ, ಗುರಿ ಉಪಕರಣ, ಬ್ಲೈಂಡ್ ಹ್ಯುಮನ್ ಓಪರೇಟರ್ ಮುಂತಾದ ಆಧುನಿಕ ಸೌಲಭ್ಯಗಳಿದೆ. ಈ 58 ಟನ್ ವಾಹನದಲ್ಲಿ ಸಂಪೂರ್ಣ ಶಸ್ತ್ರಸಜ್ಜಿತ ಜೊತೆಗೆ ಸ್ಪೋಟಕ ರಕ್ಷಣಾ ಕವಚದೊಂದಿಗೆ ಮೂವರು ಸೈನಿಕರು ಕಾರ್ಯಾಚರಣೆ ನಡೆಸಲಿದ್ದಾರೆ.

9. ಟಿ-90ಎಎಂ (ರಷ್ಯಾ) – 26.72 ಕೋಟಿ ರು.

9. ಟಿ-90ಎಎಂ (ರಷ್ಯಾ) – 26.72 ಕೋಟಿ ರು.

1991ರಲ್ಲಿ ಸೋವಿಯತ್ ಯೂನಿಯನ್ ಕುಸಿತದೊಂದಿಗೆ ಶೀತಲ ಸಮರ ಕೊನೆಗೊಂಡಿರುವುದು ಈಗ ಇತಿಹಾಸ. ಈ ಕಾಲಘಟ್ಟದಲ್ಲಿ ಎರಡು ವಿಧದ ಟ್ಯಾಂಕ್ ಗಳನ್ನು ನಿರ್ಮಿಸುವುದರಲ್ಲಿ ಸೋವಿಯತ್ ಒಕ್ಕೂಟ ಕಾರ್ಯಮಗ್ನವಾಗಿತ್ತು. ಇದು ತುಂಬಾನೇ ದುಬಾರಿಯಾಗಿದ್ದರಿಂದ ಶೀತಲ ಸಮರದ ಬಳಿಕ ಇಂತಹ ಒಂದೇ ಒಂದು ಟ್ಯಾಂಕ್ ಗೆ ರಷ್ಯಾ ಮೊರೆ ಹೋಗಿತ್ತು. ಇದರ ಪ್ರತಿಫಲವೆಂಬಂತೆ ಟಿ-90 ಹುಟ್ಟಿಕೊಂಡಿದೆ. ವಿಶೇಷವೆಂದರೆ ಇದರ ಅಗ್ಗದ ಶ್ರೇಣಿಯ ಮಾದರಿಗಳು ಭಾರತಕ್ಕೂ ರಫ್ತಾಗಿದ್ದವು. ಅಂದ ಹಾಗೆ ಟಿ-90ಎಎಂ ಯುದ್ಧ ಟ್ಯಾಂಕರ್ ನಲ್ಲಿ 125 ಎಂಎಂ ಮೈನ್ ಗನ್, 1230 ಅಶ್ವಶಕ್ತಿ ಎಂಜಿನ್, ಹಾಗೂ ಸುಧಾರಿತ ರಕ್ಷಣಾ ಉಪಕರಣಗಳನ್ನು ಒಳಗೊಂಡಿವೆ. ತನ್ನ ವಿರುದ್ಧವಾಗಿ ಬರುವ ಅನೇಕ ಸ್ಪೋಟಕಗಳನ್ನು ಹೊಡೆದುರಳಿಸುವ ಸಾಮರ್ಥ್ಯ ಹೊಂದಿರುವ ಈ ಮೂರು ಸಿಬ್ಬಂದಿಗಳ ಯುದ್ಧ ಟ್ಯಾಂಕರ್ ಸ್ಪೋಟಕ ರಕ್ಷಣಾಕವಚಗಳನ್ನು ಹೊಂದಿದೆ.

08. ಮೆರ್ಕವಾ IV (ಇಸ್ರೇಲ್) – 37.73 ಕೋಟಿ ರು.

08. ಮೆರ್ಕವಾ IV (ಇಸ್ರೇಲ್) – 37.73 ಕೋಟಿ ರು.

1960 ಹಾಗೂ 1970ರ ದಶಕಗಳಲ್ಲಿ ಈಜಿಪ್ಟ್ ಹಾಗೂ ಸಿರಿಯಾ ವಿರುದ್ಧದ ನಿರಂತರ ಯುದ್ಧದಿಂದ ಪಾಠ ಕಲಿತ ಇಸ್ರೇಲಿನ ರಕ್ಷಣಾ ವಿಭಾಗವು ತನ್ನದೇ ಆದ ಯುದ್ಧ ಟ್ಯಾಂಕರ್ ನಿರ್ಮಿಸುವ ಯೋಜನೆಗೆ ಮುಂದಾಗಿತ್ತು. ಇದರ ಫಲಶ್ರುತಿಯೆಂಬಂತೆ ಮರ್ಕವಾ ಶ್ರೇಣಿಯ ಯುದ್ಧ ಟ್ಯಾಂಕರ್ ಗಳು ನಿರ್ಮಾಣವಾಗಿತ್ತು. ಸದ್ಯ ಇಸ್ರೇಲ್ ಬಳಿ 120 ಎಂಎಂ ಮೈನ್ ಗನ್ ಸಾಮರ್ಥ್ಯದ ಮೆರ್ಕವಾ IV ಯುದ್ಧ ಟ್ಯಾಂಕರ್ ಇದೆ. ಉಕ್ಕು ಹಾಗೂ ಸಿರಾಮಿಕ್ ಸಮ್ಮಿಶ್ರಣದಲ್ಲಿ ಸಿದ್ಧಗೊಂಡಿರುವ ಈ ಯುದ್ಧ ಟ್ಯಾಂಕರ್ ಹಾನಿಗೊಳಗಾದ ಭಾಗವನ್ನು ತಕ್ಷಣ ಬದಲಾಯಿಸಬಹುದಾಗಿದೆ. ಪ್ರಸ್ತುತ ಟ್ಯಾಂಕರ್ ಎಂಜಿನನ್ನು ಮುಂಭಾಗದಲ್ಲಿ ಲಗತ್ತಿಸಲಾಗಿದ್ದು, ಹಿಂಬದಿಯಲ್ಲಿರುವ ಸಿಬ್ಬಂದಿಗಳಿಗೆ ಹೆಚ್ಚುವರಿ ರಕ್ಷಣೆಯನ್ನು ನೀಡುತ್ತದೆ. ಇದು ಸಹ ತನ್ನತ್ತ ಬರುವ ಮಿಸೈಲ್ ಗಳನ್ನು ಹೊಡೆದುರುಳಿಸುವ ಶಕ್ತಿ ಹೊಂದಿದೆ.

07. ಅರ್ಜುನ್ ಎಂಕೆ II (ಭಾರತ) – 37.73 ಕೋಟಿ ರು.

07. ಅರ್ಜುನ್ ಎಂಕೆ II (ಭಾರತ) – 37.73 ಕೋಟಿ ರು.

ಅರ್ಜುನ್ ಮೊದಲ ಬಾರಿಗೆ ಭಾರತೀಯ ಸೇನೆಗೆ 2004ರಲ್ಲಿ ಸೇರ್ಪಡೆಯಾಗಿತ್ತು. ಇದರ ತಾಜಾ ಆವೃತ್ತಿಯಾದ ಅರ್ಜುನ್ ಎಂಕೆ II ಯುದ್ಧ ಟ್ಯಾಂಕರ್ ನಲ್ಲಿ ರಷ್ಯಾ ಹಾಗೂ ಪಶ್ಚಿಮ ರಾಷ್ಟ್ರಗಳ ವಿನ್ಯಾಸದಲ್ಲಿ ಕಾಣಬಹುದಾದ ಅತ್ಯಾಧುನಿಕ ವಿಶಿಷ್ಟತೆಗಳನ್ನು ಕಾಣಬಹುದಾಗಿದೆ. ಇದರಲ್ಲಿ 120 ಎಂಎಂ ರೈಫಲ್ಡ್ ಮೈನ್ ಜೊತೆಗೆ ಮದ್ದುಗುಂಡು ಹಾಗೂ ಮಿಸೈಲ್ ಮಾರ್ಗದರ್ಶಕ ಉಪಕರಣಗಳಿದೆ. ಇನ್ನು ಲೇಸರ್ ವಾರ್ನಿಂಗ್ ರಿಸೀವರ್, ಜ್ಯಾಮರ್, ಸ್ಪೋಕ್ ಗ್ರೇನೆಡ್, ಆ್ಯಂಟಿ ಟ್ಯಾಂಕ್ ಮಿಸೈಲ್ ಮುಂತಾದ ಸೌಲಭ್ಯಗಳಿರಲಿದೆ.

06. ಲಿಯೋಪಾರ್ಡ್ 2ಎ6 (ಜರ್ಮನಿ) - 42.69 ಕೋಟಿ ರು.

06. ಲಿಯೋಪಾರ್ಡ್ 2ಎ6 (ಜರ್ಮನಿ) - 42.69 ಕೋಟಿ ರು.

ನಾವಿಲ್ಲಿ ಅತಿ ಹಳೆಯ ಟ್ಯಾಂಕ್ ವೊಂದನ್ನು ಸೇರಿಸಲು ಇಚ್ಚಿಸುತ್ತೇವೆ. 1979ನೇ ಇಸವಿಯಲ್ಲಿ ಲಿಯೋಪಾರ್ಡ್ ತನ್ನ ಸೇವೆಯನ್ನು ಆರಂಭಿಸಿತ್ತು. ತದಾ ಬಳಿಕ ಹಲವು ಮಾರ್ಪಾಡುಗಳನ್ನು ಕಂಡಿರುವ ಲಿಯೋಪಾರ್ಡ್ ಟ್ಯಾಂಕರ್ ನಲ್ಲಿ 120 ಎಂಎಂ ಸ್ಮೂತ್ ಬೋರ್ ಮೈನ್ ಗನ್ ಬಳಕೆಯಾಗುತ್ತಿದೆ. ಈ 63 ಟನ್ ತೂಕದ ಟ್ಯಾಂಕ್ ನಲ್ಲಿ ಅತ್ಯಾಧುನಿಕ ಆರ್ಮರ್ ಪ್ಯಾಕೇಜ್, ಸ್ಟೀಲ್, ಸಿರಾಮಿಕ್ ಪರಿಕರಗಳು ಬಳಕೆಯಾಗುತ್ತಿದೆ. 1500 ಅಶ್ವಶಕ್ತಿಯ ಡೀಸೆಲ್ ಎಂಜಿನ್ ಹೊಂದಿರುವ ಈ ಯುದ್ಧ ಟ್ಯಾಂಕರ್ ಯಾವುದೇ ವಾತಾವರಣದಲ್ಲೂ ಗಂಟೆಗೆ 45 ಮೈಲು ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಯಾವುದೇ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಯುದ್ಧ ಸಾಮಾಗ್ರಿಗಳನ್ನು ವಿಶೇಷವಾಗಿ ಸಿದ್ಧಗೊಳಿಸಲಾದ ಭಾಗದಲ್ಲಿ ರಕ್ಷಿಸಲಾಗುತ್ತದೆ.

05. ಎಂ1ಎ2 ಎಸ್ ಇಪಿ (ಅಮೆರಿಕ) - 53.45 ಕೋಟಿ ರು.

05. ಎಂ1ಎ2 ಎಸ್ ಇಪಿ (ಅಮೆರಿಕ) - 53.45 ಕೋಟಿ ರು.

ಮೇಲೆ ಸೂಚಿಸಿದ ಎಲ್ಲ ಟ್ಯಾಂಕರ್ ಗಳ ಪೈಕಿ ಎಂ1 ಅಬ್ರಾಹಾಂ ಶ್ರೇಣಿಯ ಟ್ಯಾಂಕರ್ ಗಳು ಯುದ್ಧ ಭೂಮಿಯಲ್ಲಿ ಅತಿ ಹೆಚ್ಚು ಪರಿಣಾಮಕಾರಿಯೆನಿಸಿಕೊಂಡಿದೆ. 69 ಟನ್ ತೂಕದ ಈ ಸಮರ ಟ್ಯಾಂಕ್ ನಲ್ಲಿ ಯುರೇನಿಯಂ ಮತ್ತು ಗ್ರಾಫೈಟ್ ಗಳ ಸಮ್ಮಿಶ್ರಗಳನ್ನು ಒಳಗೊಂಡಿದೆ. ಇದರಲ್ಲಿ 120 ಎಂಎಂ ಸ್ಮೂತ್ ಬೋರ್ ಗನ್ ಜೊತೆಗೆ ನಿಖರ ಗುರಿಯನ್ನು ಮುಟ್ಟಬಹುದಾಗಿದೆ. ರಿಮೋಟ್ ಕಂಟ್ರೋಲ್ ಮೆಷಿನ್ ಗನ್ ಇದರ ವಿಶಿಷ್ಟತೆಗಳಲ್ಲಿ ಒಂದಾಗಿದೆ.

04. ಚಾಲೆಂಜರ್ 2 (ಬ್ರಿಟನ್) - 54.08 ಕೋಟಿ ರು.

04. ಚಾಲೆಂಜರ್ 2 (ಬ್ರಿಟನ್) - 54.08 ಕೋಟಿ ರು.

ಜಗತ್ತಿನ ಅತ್ಯಂತ ವಿಶ್ವಾಸಾರ್ಹ ಹಾಗೂ ರಕ್ಷಣಾತ್ಮಕ ಟ್ಯಾಂಕರ್ ಗಳಲ್ಲಿ ಒಂದಾಗಿರುವ ಚಾಲೆಂಜರ್ 2, 1998ರಿಂದ ಬ್ರಿಟನ್ ಸೇನೆಯ ಸೇವೆಯಲ್ಲಿದೆ. ಸ್ಟೀಲ್ ಗಿಂತಲೂ ಇಮ್ಮಡಿ ಬಲಶಾಲಿಯಾಗಿರುವ ಚೊಬಂ ಆರ್ಮರ್ (Chobham armour) ಇದರಲ್ಲಿ ಬಳಕೆಯಾಗಿದೆ. ಈ 69 ಟನ್ ತೂಕದ ಟ್ಯಾಂಕರ್ ನಲ್ಲಿ 1200 ಅಶ್ವಶಕ್ತಿಯ ಎಂಜಿನ್ ಬಳಕೆಯಾಗಿದೆ.

03. ಕೆ2 ಬ್ಲ್ಯಾಕ್ ಪ್ಯಾಂಥರ್ - 55.33 ಕೋಟಿ ರು.

03. ಕೆ2 ಬ್ಲ್ಯಾಕ್ ಪ್ಯಾಂಥರ್ - 55.33 ಕೋಟಿ ರು.

ದಕ್ಷಿಣ ಕೊರಿಯಾ ಹಾಗೂ ಉತ್ತರ ಕೊರಿಯಾ ನಡುವೆ ಈಗಲೂ ಶೀತಲ ಸಮರ ನಡೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿರುವ ದ. ಕೊರಿಯಾವು ಅತ್ಯಂತ ಶಕ್ತಿಶಾಲಿ ಕೆ2 ಬ್ಲ್ಯಾಕ್ ಪ್ಯಾಂಥರ್ ತನ್ನದಾಗಿಸಿಕೊಂಡಿತ್ತು. ಪಶ್ಚಿಮ ಹಾಗೂ ರಷ್ಯಾ ಟ್ಯಾಂಕರ್ ಗಳಲ್ಲಿ ಕಂಡುಬಂದಿರುವುದಕ್ಕೆ ಸಮಾನವಾದ ವಿಶಿಷ್ಟತೆಗಳನ್ನು ಇದು ಪಡೆದುಕೊಂಡಿದೆ. ಇದರಲ್ಲಿ 120 ಎಂಎಂ 55 ಕ್ಯಾಲಿಬರ್ ಸ್ಮೂತ್ ಬೋರ್ ಗನ್ ಹಾಗೂ 1500 ಅಶ್ವಶಕ್ತಿ ಡೀಸೆಲ್ ಎಂಜಿನ್ ಇರಲಿದೆ. ಇನ್ನು ತನ್ನತ್ತ ದಾಳಿಯಿಡುವವ ಮಿಸೈಲ್ ಪತ್ತೆ ಹಚ್ಚುವ ಹಾಗೂ ಪ್ರತಿದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

02. ಟೈಪ್ 10 (ಜಪಾನ್) - 59.11 ಕೋಟಿ ರು.

02. ಟೈಪ್ 10 (ಜಪಾನ್) - 59.11 ಕೋಟಿ ರು.

ಟೈಪ್ 10 ಜಪಾನ್ ಗೆ ಹೊಸ ಸೇರ್ಪಡೆಯಾಗಿದ್ದು, 2012ರಲ್ಲಿ ಸೇವೆ ಆರಂಭಿಸಿತ್ತು. 48 ಟನ್ ಭಾರದ ಈ ಯುದ್ಧ ಟ್ಯಾಂಕ್ ಗಂಟೆಗೆ ಗರಿಷ್ಠ 70 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ 120 ಎಂಎಂ ಸ್ಮೂತ್ ಬೋರ್ ಗನ್ ಇದರಲ್ಲಿದ್ದು, ಸ್ಟೀಲ್ ಹಾಗೂ ಸಿರಾಮಿಕ್ ಸಮ್ಮಿಶ್ರಣವನ್ನು ಬಳಕೆ ಮಾಡಲಾಗಿದೆ. ಮಾತ್ರವಲ್ಲದೆ ರಾಕೆಟ್ ಪ್ರೊಪೆಲ್ಡ್ ಗ್ರೇನೆಡ್ (ಆರ್ ಪಿಜಿ) ಆ್ಯಂಟಿ ಟ್ಯಾಂಕ್ ಶಸ್ತ್ರಾಸ್ತ್ರ ಇದರಲ್ಲಿದೆ. ರಷ್ಯಾ ರೀತಿಯಲ್ಲಿ ಮೂರು ಸಿಬ್ಬಂದಿಗಳನ್ನು ಹೊಂದಿರುವ ಈ ಯುದ್ಧ ಟ್ಯಾಂಕರ್ ಸ್ವಯಂ ರಕ್ಷಣೆಯ ತಂತ್ರದ ಭಾಗವಾಗಿ ಹೊಗೆಯನ್ನು ಉಗುಳುತ್ತದೆ.

01. ಎಎಂಎಕ್ಸ್ - 56 ಲೆಕ್ಲೆರ್ಕ್ (ಫ್ರಾನ್ಸ್) - 79.23 ಕೋಟಿ ರು.

01. ಎಎಂಎಕ್ಸ್ - 56 ಲೆಕ್ಲೆರ್ಕ್ (ಫ್ರಾನ್ಸ್) - 79.23 ಕೋಟಿ ರು.

ಫ್ರಾನ್ಸ್ ನ ಅತಿ ಪ್ರಾಮುಖ್ಯ ಯುದ್ಧ ಟ್ಯಾಂಕ್ ಆಗಿರುವ ಎಎಂಎಕ್ಸ್ 56 ಲೆಕ್ಲೆರ್ಕ್ ಸದ್ಯ ವಿಶ್ವದ ಅತಿ ದುಬಾರಿ ಯುದ್ಧ ಟ್ಯಾಂಕರ್ ಎನಿಸಿಕೊಂಡಿದೆ. 15 ವರ್ಷಗಳ ನಿರಂತರ ಅಧ್ಯಯನ ಹಾಗೂ ಅಭಿವೃದ್ಧಿಯ ಬಳಿಕ 1992ನೇ ಇಸವಿಯಲ್ಲಿ ಲೆಕ್ಲೆರ್ಕ್ ಮೊದಲ ಬಾರಿಗೆ ಫ್ರಾನ್ಸ್ ಸೇನೆಯನ್ನು ಸೇರ್ಪಡೆಗೊಂಡಿತ್ತು. ಸುಲಭವಾಗಿ ಬದಲಾಯಿಸಬಲ್ಲ ಮೊಡ್ಯುಲರ್ ಆರ್ಮರ್ ಇದರಲ್ಲಿ ಬಳಕೆಯಾಗುತ್ತಿದೆ. ಇದು ಕೂಡಾ ಸ್ಟೀಲ್, ಸಿರಾಮಿಕ್ ಮಿಶ್ರಣವನ್ನು ಪಡೆದುಕೊಂಡಿದ್ದು, ಪಶ್ಚಿಮ ಯುದ್ಧ ಟ್ಯಾಂಕರ್ ಗಳಂತೆ 120 ಸ್ಮೂತ್ ಬೋರ್ ಗನ್ ಹಾಗೂ 1500 ಅಶ್ವಶಕ್ತಿಯ ಎಂಜಿನ್ ಜೋಡಣೆ ಮಾಡಲಾಗಿದೆ. ಸರ್ವಸಜ್ಜಿತ ಈ ಟ್ಯಾಂಕ್ ಜಗತ್ತಿನ ಅತಿ ಅಪಾಯಕಾರಿ ಟ್ಯಾಂಕರ್ ಗಳಲ್ಲಿ ಒಂದಾಗಿದೆ.

ಅರ್ಜುನ್ ಎಂಬಿಟಿ - 55.9 ಕೋಟಿ ರು.

ಅರ್ಜುನ್ ಎಂಬಿಟಿ - 55.9 ಕೋಟಿ ರು.

ಮೂರನೇ ತಲೆಮಾರಿನ ಅರ್ಜುನ್ ಯುದ್ಧ ಟ್ಯಾಂಕರ್ ಅನ್ನು ಭಾರತೀಯ ಸೇನೆಗಾಗಿ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ನಿರ್ಮಿಸಿದೆ. ಅಲ್ಲದೆ ಇದಕ್ಕೆ ಮಹಾಭಾರತದ ಪ್ರಧಾನ ಕಥಾಪಾತ್ರ ಅರ್ಜುನನ ಹೆಸರಿಡಲಾಗಿದೆ. ಇದರಲ್ಲೂ 120 ಎಂಎಂ ಮೈನ್ ರೈಫಲ್ಡ್ ಗೈನ್ ಕಂಡುಬಂದಿದ್ದು, ಗಂಟೆಗೆ 67 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅಂತೆಯೇ 1,400 ಅಶ್ವಶಕ್ತಿಯ ಎಂಜಿನ್ ಆಳವಡಿಸಲಾಗಿದ್ದು, ಕಮಾಂಡರ್, ಗನ್ನರ್, ಲೋಡರ್ ಹಾಗೂ ಚಾಲಕ ಸೇರಿದಂತೆ ನಾಲ್ಕು ಸಿಬ್ಬಂದಿಗಳು ಇರಲಿದ್ದಾರೆ.

ಟಿ-90 - 26.72 ಕೋಟಿ ರು.

ಟಿ-90 - 26.72 ಕೋಟಿ ರು.

ಟಿ-90 ರಷ್ಯಾದ ಮೂರನೇ ತಲೆಮಾರಿನ ಯುದ್ಧ ಟ್ಯಾಂಕರ್ ಆಗಿದ್ದು, ಎರಡು ಹಂತಗಳಾಗಿ ಭಾರತೀಯ ಸೇನೆಯನ್ನು ತಲುಪಿತ್ತು. 2000 ಹಾಗೂ 2006ನೇ ಸಾಲಿನಲ್ಲಿ ಅನುಕ್ರಮವಾಗಿ 310 ಹಾಗೂ 300ಗಳಷ್ಟು ಯುನಿಟ್ ಗಳ ಪ್ರವೇಶವಾಗಿತ್ತು. ಇನ್ನು ಹೆಚ್ಚಿನ 1000ಗಳಷ್ಟು ಯುನಿಟ್ ಗಳು 2020ರಲ್ಲಿ ಸ್ಥಳೀಯವಾಗಿ ನಿರ್ಮಾಣವಾಗಲಿದೆ.

ಟಿ-72 - 12.57 ಕೋಟಿ ರು.

ಟಿ-72 - 12.57 ಕೋಟಿ ರು.

ಸೋವಿಯತ್ ಯೂನಿಯನ್ ನ ಎರಡನೇ ತಲೆಮಾರಿನ ಅತಿ ಹಳೆಯ ಯುದ್ಧ ಟ್ಯಾಂಕರ್ ಗಳಲ್ಲಿ ಒಂದಾಗಿರುವ ಟಿ-72 ಮಾದರಿಯನ್ನು ಅಜೇಯ ಎಂಕೆ1, ಎಂಕೆ2 ಎಂಬುದಾಗಿ ಮಾರ್ಪಾಡುಗೊಳಿಸಲಾಗಿತ್ತು.

ಭಾರತದ ಕೆಲವು ಪ್ರಮುಖ ಯುದ್ಧ ಟ್ಯಾಂಕರ್ ಗಳು

ಈಗ ಭಾರತೀಯ ಯುದ್ಧ ಟ್ಯಾಂಕರ್ ಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Most Read Articles

Kannada
English summary
Top 10 costliest modern battle tanks in the world
Story first published: Tuesday, April 21, 2015, 18:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X