ನಗರಗಳ ಸೌಂದರ್ಯಕ್ಕೆ ಮೆರಗು ತುಂಬಿದ 10 ಲಗ್ಷುರಿ ಸೇತುವೆಗಳು

By Nagaraja

ದೈನಂದಿನ ಸಂಚಾರ ಅಗತ್ಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸೇತುವೆಗಳನ್ನು ಕಟ್ಟಲಾಗುತ್ತದೆ. ಇದಕ್ಕೆ ಹೆಚ್ಚು ಮೊತ್ತ ತಗಲಲಿರುವುದರಿಂದ ಸಂಬಂಧಪಟ್ಟ ಆಡಳಿತ ಅಥವಾ ಸರಕಾರವು ಸೇತುವೆ ನಿರ್ಮಾಣ ಕಾರ್ಯದ ಹೊಣೆ ವಹಿಸುತ್ತದೆ. ಇದಕ್ಕೆ ಇಂತಷ್ಟು ಕೋಟಿ ರುಪಾಯಿಗಳನ್ನು ಬಜೆಟ್ ನಲ್ಲಿ ಮೀಸಲಿಡಲಾಗುತ್ತದೆ.

ಆದರೆ ಐದು ವರ್ಷಕ್ಕೊಮ್ಮೆ ಬದಲಿ ಬರುವ ಸರಕಾರದ ನಿರ್ಲಕ್ಷ್ಯದಿಂದಾಗಿ ಸೇತುವೆ ನಿರ್ಮಾಣ ಕಾರ್ಯವು ವಿಳಂಬವಾಗುತ್ತದೆ. ಇದರಿಂದಾಗಿ ವರುಷಗಳೇ ಉರುಳಿದರೂ ಸೇತುವೆಗಳ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿರುತ್ತದೆ. ಇನ್ನೊಂದೆಡೆ ಅವ್ಯವಹಾರದ ಕೂಪದಿಂದಾಗಿ ನಿರ್ಮಾಣಕ್ಕಾಗಿ ಪದೇ ಪದೇ ಹೆಚ್ಚುವರಿ ಮೊತ್ತವನ್ನು ಮೀಸಲಿಡಬೇಕಾದ ದುಸ್ಥಿತಿ ಎದುರಾಗುತ್ತದೆ. ಅಂತೂ ಹೇಗೋ ಅರ್ಧ ನಿರ್ಮಾಣ ಕೆಲಸಗಳನ್ನು ಪೂರ್ಣಗೊಳಿಸಿದ ಬಳಿಕ ಓರ್ವ ಜನಪ್ರತಿನಿಧಿಯನ್ನು ಆಹ್ವಾನಿಸಿ ಔಪಚಾರಿಕವಾಗಿ ಉದ್ಘಾಟನೆ ಮಾಡಲಾಗುತ್ತದೆ. ಇದು ನಮ್ಮ ನಾಡಿನಲ್ಲಿ ಕಂಡುಬರುವ ಸಹಜ ಸೇತುವೆ ನಿರ್ಮಾಣ ಪ್ರಕ್ರಿಯೆ. ಅದು ಏನೇ ಇರಲಿ. ಈಗ ಪ್ರಪಂಚದ 10 ದುಬಾರಿ ಸೇತುವೆಗಳ ಬಗ್ಗೆ ಚರ್ಚಿಸೋಣವೇ...

10. ಚೆಸಾಪೀಕ್ ಬೇ ಬ್ರಿಡ್ಜ್, ಮೇರಿಲ್ಯಾಂಡ್

10. ಚೆಸಾಪೀಕ್ ಬೇ ಬ್ರಿಡ್ಜ್, ಮೇರಿಲ್ಯಾಂಡ್

ಮೇರಿ ಲ್ಯಾಂಡ್ ನ ಪೂರ್ವ ಹಾಗೂ ಪಶ್ಚಿಮ ಪ್ರದೇಶಗಳನ್ನು ಬಂಧಿಸುವ ಚೆಸಾಪೀಕ್ ಬೇ ಸೇತುವೆಯು 1952ನೇ ಇಸವಿಯಲ್ಲೇ ತೆರೆದುಕೊಂಡಿತ್ತು. ಮೇರಿಲ್ಯಾಂಡ್ ಟ್ರಾಫಿಕ್ ಗೆ ನಿರಾಳತೆಯನ್ನು ತಂದಿರುವ ಈ ಸೇತುವೆ ನಿರ್ಮಾಣಕ್ಕೆ ಬರೋಬ್ಬರಿ 778.3 ಮಿಲಿಯನ್ ಅಮೆರಿಕನ್ ಡಾಲರ್ ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ.

09. ಟಕೋಮಾ ನ್ಯಾರೋ ಬ್ರಿಡ್ಜ್, ವಾಷಿಂಗ್ಟನ್

09. ಟಕೋಮಾ ನ್ಯಾರೋ ಬ್ರಿಡ್ಜ್, ವಾಷಿಂಗ್ಟನ್

ಟಕೋಮಾ ಸೇತುವೆಯು ಅಲ್ಲಿನ ದೈನಂದಿನ ಸಂಚಾರವನ್ನು ಸುಗಮಗೊಳಿಸಿದೆ. ಇದು ಸಹ ಅತಿ ಪುರಾತರ ಸೇತುವೆಗಳಲ್ಲಿ ಒಂದಾಗಿದ್ದು, 1950ನೇ ಇಸವಿಯಲ್ಲಿ ನಿರ್ಮಾಣವಾಗಿತ್ತು. ವಾಷಿಂಗ್ಟನ್ ನ ಈ ಸೇತುವೆಯ ಅಂದಾಜು ವೆಚ್ಚ 827.7 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

08. ಕೂಪರ್ ರಿವರ್ ಬ್ರಿಡ್ಜ್ , ಸೌತ್ ಕರೋಲಿನಾ

08. ಕೂಪರ್ ರಿವರ್ ಬ್ರಿಡ್ಜ್ , ಸೌತ್ ಕರೋಲಿನಾ

ಅರ್ಥುರ್ ರೆವೆನೆಲ್ ಜೂ. ಬ್ರಿಡ್ಜ್ ಎಂಬ ಹೆಸರಿನಿಂದಲೂ ಅರಿಯಲ್ಪಡುವ ಕೂಪರ್ ರಿವರ್ ಬ್ರಿಡ್ಜ್, ಸೌತ್ ಕೆರೊಲಿನಾದ ಕೂಪರ್ ನದಿಯ ಮೇಲ್ಪಾಗದಲ್ಲಿ ಹಾದು ಹೋಗುತ್ತಿದ್ದು ಚಾರ್ಲ್ಸ್ ಟನ್ ಹಾಗೂ ಮೌಂಟ್ ಪ್ಲೆಸೆಂಟ್ ನಡುವೆ ಸಂಪರ್ಕ ಕಲ್ಪಿಸುತ್ತದೆ. ಬಹು ರಾಷ್ಟ್ರೀಯ ಎಂಜಿನಿಯರ್ ಪಾರ್ಸನ್ ಬ್ರಿಂಕರ್ ಹಾಫ್ ಇದರ ವಿನ್ಯಾಸ ರಚಿಸಿದ್ದಾರೆ. 2005ನೇ ಇಸವಿಯಲ್ಲಿ ಲೋಕಾರ್ಪಣೆಯಾದ ಈ ಸೇತುವೆ 836.9 ಮಿಲಿಯನ್ ಅಮೆರಿಕಯನ್ ಡಾಲರ್ ಗಳಷ್ಟು ದುಬಾರಿಯೆನಿಸಿದೆ.

07. ಜಾರ್ಜ್ ವಾಷಿಂಗ್ಟನ್ ಬ್ರಿಡ್ಜ್ - ನ್ಯೂಯಾರ್ಕ್ ಸಿಟಿ

07. ಜಾರ್ಜ್ ವಾಷಿಂಗ್ಟನ್ ಬ್ರಿಡ್ಜ್ - ನ್ಯೂಯಾರ್ಕ್ ಸಿಟಿ

ಆಧುನಿಕ ಕಾಲದಲ್ಲಿ ಸೇತುವೆಗಳು ಕೇವಲ ಸಂಚಾರ ಅಗತ್ಯವನ್ನಷ್ಟೇ ಪೂರೈಸುವುದಿಲ್ಲ. ಇದು ನಗರ ಸೌಂದರ್ಯವನ್ನು ಆಸ್ವಾದಿಸುತ್ತದೆ. ಇಂತಹದೊಂದು ಸೇತುವೆಯನ್ನು ನೀವು ನ್ಯೂಯಾರ್ಕ್ ಸಿಟಿಯಲ್ಲಿ ಕಾಣಬಹುದು. ಪ್ರಮುಖ ಪ್ರವಾಸಿ ಆಕರ್ಷಣೆಯ ತಾಣಗಳಲ್ಲಿ ಒಂದಾಗಿರುವ ಜಾರ್ಜ್ ವಾಷಿಂಗ್ಟನ್ ಸೇತುವೆಯನ್ನು ರಾತ್ರಿ ವೇಳೆಯಲ್ಲಿ ನಕ್ಷತ್ರದಂತೆ ಬೆಳಕಿನಿಂದ ಕಂಗೊಳಿಸುವುದನ್ನು ನೋಡುವುದೇ ಆನಂದ. ಹಡ್ಸನ್ ನದಿಯ ಮೇಲೆ ಹಾದು ಹೋಗುವ ಈ ಸೇತುವೆ ನಿರ್ಮಾಣಕ್ಕೆ ಒಟ್ಟು ತಗುಲಿರುವ ಖರ್ಚು 1.1 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

06. ಸ್ಯಾನ್ ಫ್ರಾನ್ಸಿಸ್ಕೋ ಬೇ, ಓಕ್ ಲ್ಯಾಂಡ್ ಬೇ ಬ್ರಿಡ್ಜ್

06. ಸ್ಯಾನ್ ಫ್ರಾನ್ಸಿಸ್ಕೋ ಬೇ, ಓಕ್ ಲ್ಯಾಂಡ್ ಬೇ ಬ್ರಿಡ್ಜ್

ಉತ್ತರ ಕ್ಯಾಲಿಫೋರ್ನಿಯಾದ ಹೆಸರಾಂತ ನಗರವಾಗಿರುವ ಸ್ಯಾನ್ ಫ್ರಾನ್ಸಿಸ್ಕೋದ ಹಳೆಯ ಓಕ್ ಲ್ಯಾಂಡ್ ಬ್ರೇ ಬ್ರಿಡ್ಜ್, ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಓಕ್ ಲ್ಯಾಂಡ್ ನಗರಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ. 1936ನೇ ಇಸವಿಯಲ್ಲಿ ನಿರ್ಮಾಣವಾಗಿರುವ ಈ ಸೇತುವೆಯು ಜಗತ್ತಿನ ಅತ್ಯಂತ ಉದ್ದದ ಸೇತುವೆಗಳಲ್ಲಿ ಒಂದಾಗಿದ್ದು, ಈಗಲೂ ನಿರ್ವಹಣೆಗಾಗಿ ಕೋಟಿಗಟಲೆ ರುಪಾಯಿಗಳನ್ನು ವ್ಯಯ ಮಾಡಲಾಗುತ್ತಿದೆ. . ಇದರ ನಿರ್ಮಾಣ ವೆಚ್ಚ 1.3 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

05. ಕ್ಸಿಂಗ್ ಮಾ ಬ್ರಿಡ್ಜ್, ಚೀನಾ

05. ಕ್ಸಿಂಗ್ ಮಾ ಬ್ರಿಡ್ಜ್, ಚೀನಾ

ಹಾಂಕಾಂಗ್ ನ ಕ್ಸಿಂಗ್ ಸೇತುವೆಯು 1997ನೇ ಇಸವಿಯಲ್ಲಿ ಲೋಕಾರ್ಪಣೆಯಾಗಿತ್ತು. ಇದು ಹಾಂಕಾಂಗ್ ನ ಕ್ಸಿಂಗ್ ಯಿ ಹಾಗೂ ಮ ವ್ಯಾನ್ ದ್ವೀಪಗಳ ನಡುವಣ ಸಂಪರ್ಕ ಕಲ್ಪಿಸುತ್ತದೆ. ಇದರ ನಿರ್ಮಾಣಕ್ಕೆ 1.35 ಬಿಲಿಯನ್ ಅಮೆರಿಕನ್ ಡಾಲರ್ ಖರ್ಚು ತಗುಲಿತ್ತು.

04. ಯೋನ್ ಜಂಗ್ ಗ್ರಾಂಡ್ ಬ್ರಿಡ್ಜ್, ದಕ್ಷಿಣ ಕೊರಿಯಾ

04. ಯೋನ್ ಜಂಗ್ ಗ್ರಾಂಡ್ ಬ್ರಿಡ್ಜ್, ದಕ್ಷಿಣ ಕೊರಿಯಾ

ದಕ್ಷಿಣ ಕೊರಿಯಾದ ಯೋನ್ ಜಂಗ್ ಗ್ರಾಂಡ್ ಬ್ರಿಡ್ಜ್ ಜಗತ್ತಿನ ಅತಿ ಉದ್ದದ ಸೇತುವೆಗಳಲ್ಲಿ ಒಂದಾಗಿದ್ದು, ಏಷ್ಯಾದಲ್ಲೇ ಅತ್ಯಂತ ದುಬಾರಿ ಎನಿಸಿಕೊಂಡಿದೆ. ಐದು ವರ್ಷಗಳ ನಿರ್ಮಾಣ ಕಾಮಗಾರಿಯ ಬಳಿಕ 2000ನೇ ಇಸವಿಯಲ್ಲಿ ತೆರೆದುಕೊಂಡಿರುವ ಗ್ರಾಂಡ್ ಬ್ರಿಡ್ಜ್ ನಿರ್ಮಾಣಕ್ಕಾಗಿ ಕೊರಿಯಾ ಸರಕಾರವು ಬರೋಬ್ಬರಿ 1.9 ಮಿಲಿಯನ್ ಅಮೆರಿಕನ್ ಡಾಲರ್ ಖರ್ಚು ಮಾಡಿತ್ತು.

03. ವೆರಾಝಾನೋ-ನ್ಯಾರೋ ಬ್ರಿಡ್ಜ್ , ನ್ಯೂಯಾರ್ಕ್ ಸಿಟಿ

03. ವೆರಾಝಾನೋ-ನ್ಯಾರೋ ಬ್ರಿಡ್ಜ್ , ನ್ಯೂಯಾರ್ಕ್ ಸಿಟಿ

ನ್ಯೂಯಾರ್ಕ್ ಸಿಟಿಯಲ್ಲಿ ತಲೆದೋರಿರುವ ಮಗದೊಂದು ಆಕರ್ಷಕ ಬ್ರಿಡ್ಜ್ ಇದಾಗಿದೆ. ಇತಿಹಾಸದೊಂದಿಗೆ ತನ್ನ ಸಂಪರ್ಕವನ್ನು ಹೊಂದಿರುವ ವೆರಾಝಾನೋ-ನ್ಯಾರೋ ಬ್ರಿಡ್ಜ್ 1964ರಲ್ಲಿ ತೆರೆದುಕೊಂಡಿತ್ತು. ಐದು ವರ್ಷಗಿಂತಲೂ ಹೆಚ್ಚು ಅವಧಿ ತಗುಲಿರುವ ಇದರ ನಿರ್ಮಾಣಕ್ಕೆ 2.4 ಬಿಲಿಯನ್ ಅಮೆರಿಕನ್ ಡಾಲರ್ ಖರ್ಚು ಮಾಡಲಾಗಿತ್ತು.

02. ಗ್ರೇಟ್ ಬೆಲ್ಟ್ ಫಿಕ್ಸಡ್ ಲಿಂಕ್, ಡೆನ್ಮಾರ್ಕ್

02. ಗ್ರೇಟ್ ಬೆಲ್ಟ್ ಫಿಕ್ಸಡ್ ಲಿಂಕ್, ಡೆನ್ಮಾರ್ಕ್

ಪ್ರಪಂಪದಲ್ಲೇ ಅತ್ಯಂತ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡಿರುವ ಬ್ರಿಡ್ಜ್ ಇಂದಾಗಿದ್ದು, ಡ್ಯಾನಿಷ್ ದ್ಪೀಪ ಝೀಲ್ಯಾಂಡ್ ಹಾಗೂ ಫ್ಯೂನೆನ್ ನಡುವೆ ಸಂಪರ್ಕ ಕಲ್ಪಿಸುತ್ತದೆ. 10 ವರ್ಷಗಳ ನಿರಂತರ ಕಾಮಗಾರಿಯ ಬಳಿಕ ಇದನ್ನು 1997ರಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಅಲ್ಲದೆ ಈ ಸೇತುವೆ ಸಂಪರ್ಕದಿಂದ ಒಂದು ತಾಸಿನ ಪಯಣವು ಕೇವಲ 10 ನಿಮಿಷಗಳಿಗೆ ಇಳಿಕೆಯಾಗಿದೆ.

01. ಸ್ಯಾನ್ ಫ್ರಾನ್ಸಿಸ್ಕೋ – ಓಕ್ ಲ್ಯಾಂಡ್ ಬೇ ಬ್ರಿಡ್ಜ್

01. ಸ್ಯಾನ್ ಫ್ರಾನ್ಸಿಸ್ಕೋ – ಓಕ್ ಲ್ಯಾಂಡ್ ಬೇ ಬ್ರಿಡ್ಜ್

ಜಗತ್ತಿನ ಅತಿ ದುಬಾರಿ ಸೇತುವೆ ಎಲ್ಲಿದೆ? ನಿಜವಾಗ್ಲೂ ಇದು ಭಾರತದಲ್ಲಿಲ್ಲ. ಈ ಗೌರವ ಮಗದೊಮ್ಮೆ ಸ್ಯಾನ್ ಪ್ರಾಸ್ಕಿಸ್ಕೋಗೆ ಸೇರುತ್ತದೆ. ಇದನ್ನೀಗಲೇ ಆರನೇ ಸ್ಥಾನದಲ್ಲಿ ಓದಿರುತ್ತಿರಾ? ಹೌದು, ಪ್ರಸ್ತುತ ಬ್ರಿಡ್ಜ್ ಹಾನಿಗೊಳಗಾದ ಹಿನ್ನೆಲೆಯಲ್ಲಿ ಇದಕ್ಕೆ ಸಮಾನಂತರವಾಗಿ ಸಂಪೂರ್ಣ ಹೊಸ ಸೇತುವೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. 2013ನೇ ಇಸವಿಯಲ್ಲಿ ತೆರೆದುಕೊಂಡಿರುವ ಈ ಸೇತುವೆಯ ಸಂಪೂರ್ಣ ನಿರ್ಮಾಣ ಕಾಮಗಾರಿಯು 2016ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಪ್ರಸ್ತುತ ವಿಶ್ವದ ಅತಿ ದುಬಾರಿ ಸೇತುವೆ ಎನಿಸಿಕೊಂಡಿರುವ ಸ್ಯಾನ್ ಪ್ರಾನ್ಸಿಸ್ಕೋ ನಿರ್ಮಾಣಕ್ಕೆ ಬರೋಬ್ಬರಿ 6.4 ಬಿಲಿಯನ್ ಅಮೆರಿಕನ್ ಡಾಲರ್ ತಗುಲಿದೆ.

Most Read Articles

Kannada
English summary
Top 10 Most Expensive Bridges ever built
Story first published: Thursday, May 14, 2015, 10:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X