ವಿಶ್ವವನ್ನೇ ಬೆರಗುಗೊಳಿಸುವ ನೀವು ಎಂದು ನೋಡಿರದ ವಿಮಾನ ಇಳಿದಾಣಗಳು

By Nagaraja

ವಿಮಾನಯಾನದಲ್ಲಿ ಲ್ಯಾಂಡಿಂಗ್ ಎಂಬುದು ಅತಿ ಮುಖ್ಯ ಘಟಕವಾಗಿದೆ. ಪೈಲಟ್ ಗಳು ಅತಿ ಹೆಚ್ಚು ಜಾಗರೂಕರಾಗಿರಬೇಕಾದ ಸಮಯ ಇದಾಗಿದ್ದು, ಸಾಕಷ್ಟು ಬಾರಿ ಅಪಘಾತಗಳು ಘಟಿಸಿ ಹೋಗಿವೆ.

ಆಕಾಶದಿಂದ ನಿಧಾನವಾಗಿ ಭೂಮಿಯ ಮೇಲೆ ವಿಮಾನ ಭೂಸ್ಪರ್ಶ ಮಾಡುವಾಗ ಒದಗುವ ದೃಶ್ಯ ವಿಸ್ಮಯ ನಿಜಕ್ಕೂ ಪದಗಳಲ್ಲಿ ವರ್ಣಿಸಲು ಅಸಾಧ್ಯ. ಪ್ರೈವೇಟ್ ಲೀ ಎಂಬ ಜಾಗತಿಕ ಖಾಸಗಿ ಜೆಟ್ ಚಾರ್ಟರ್ ಸಂಸ್ಥೆಯು ಈ ಸಂಬಂಧ ಅಧ್ಯಯನ ನಡೆಸಿ ವಿಶ್ವವನ್ನೇ ಬೆರಗುಗೊಳಿಸುವ ಅಗ್ರ 10 ವಿಮಾನ ನಿಲ್ದಾಣ ಇಳಿದಾಣಗಳ ಪಟ್ಟಿ ತಯಾರಿಸಿದೆ. ಪ್ರಸ್ತುತ ಪಟ್ಟಿಯಲ್ಲಿ ಭಾರತದ ಯಾವುದಾದರೂ ವಿಮಾನ ನಿಲ್ದಾಣದ ಹೆಸರು ಇರಬಹುದೇ?

10. ಲಂಡನ್ ಸಿಟಿ ವಿಮಾನ ನಿಲ್ದಾಣ, ಬ್ರಿಟನ್

10. ಲಂಡನ್ ಸಿಟಿ ವಿಮಾನ ನಿಲ್ದಾಣ, ಬ್ರಿಟನ್

ಲಂಡನ್‌ನ ಸಿಟಿ ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ಸುಂದರ ಹಾಗೂ ನಿಬ್ಬೇರಗಾಗಿಸುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ವಿಮಾನ ಭೂಸ್ಪರ್ಶದ ವೇಳೆ ಇಲ್ಲಿ ಸಿಗುವ ಸುಂದರ ದೃಶ್ಯವು ಎಲ್ಲರನ್ನು ಮನ ಸೆಳೆಯುತ್ತದೆ. ಪ್ರಸಿದ್ದ ಥೇಮ್ಸ್ ನದಿ ತೀರದಲ್ಲಿರುವ ಈ ಲಂಬವಾದ ವಿಮಾನ ನಿಲ್ದಾಣದ ಸುತ್ತಲೂ ಕಡ್ಡಟಗಳು, ರಸ್ತೆ, ಟ್ರಾಫಿಕ್ ಗಳ ದರ್ಶನವಾಗುತ್ತದೆ.

 09. ಲಾಸ್ ಏಂಜಲೀಸ್ ವಿಮಾನ ನಿಲ್ದಾಣ, ಅಮೆರಿಕ

09. ಲಾಸ್ ಏಂಜಲೀಸ್ ವಿಮಾನ ನಿಲ್ದಾಣ, ಅಮೆರಿಕ

ದೇವತೆಗಳ ಹೆಸರನ್ನೇ ಹೊಂದಿರುವ ನಗರಕ್ಕೆ ಪ್ರವೇಶಿಸುವಾಗ ಅಲ್ಲಿನ ಸೌಂದರ್ಯ ಆಸ್ವಾದಿಸಲು ಸಾಧ್ಯವಾಗದೇ ಹೋದ್ದಲ್ಲಿ ಹೇಗೆ? ಇಲ್ಲಿನ ಲಾಸ್ ಏಂಜಲೀಸ್ ವಿಮಾನ ನಿಲ್ದಾಣವು ನಿಮ್ಮನ್ನು ಹಾಲಿವುಡ್ ಶೈಲಿಯನ್ನು ಬರಮಾಡಿಕೊಳ್ಳಲಿದೆ.

08. ಪ್ರಿನ್ಸಸ್ ಜೂಲಿಯಾನಾ ಇಂಟರ್ ನ್ಯಾಷನಲ್ ಏರ್ ಪೋರ್ಟ್, ಸೈಂಟ್ ಮಾರ್ಟಿನ್

08. ಪ್ರಿನ್ಸಸ್ ಜೂಲಿಯಾನಾ ಇಂಟರ್ ನ್ಯಾಷನಲ್ ಏರ್ ಪೋರ್ಟ್, ಸೈಂಟ್ ಮಾರ್ಟಿನ್

ಕೆರೆಬಿಯನ್ ಈ ದ್ವೀಪ ರಾಷ್ಟ್ರಕ್ಕೆ ನೀವು ಪಯಣಿಸಿದ್ದಲ್ಲಿ ಬಹುಶ: ವಿಶ್ವದ ಅತ್ಯಂತ ಅಪಾಯಕಾರಿ ಲ್ಯಾಂಡಿಂಗ್ ಸನ್ನಿವೇಶದ ಅನುಭವವನ್ನು ನಿಮ್ಮದಾಗಿಸಬಹುದಾಗಿದೆ. ಕಡಲತಡಿಯಲ್ಲಿ ಅಚ್ಚೊತ್ತಿದಂತಿರುವ ಇಲ್ಲಿನ ವಿಮಾನ ನಿಲ್ದಾಣವು ಪ್ರವಾಸರಿಗೆ ರಸದೌತಣ ನೀಡುತ್ತದೆ.

07. ಡೊನೆಗಲ್ ವಿಮಾನ ನಿಲ್ದಾಣ, ಐರ್ಲೆಂಡ್

07. ಡೊನೆಗಲ್ ವಿಮಾನ ನಿಲ್ದಾಣ, ಐರ್ಲೆಂಡ್

ಬದಿಯಲ್ಲಿ ದೊಡ್ಡ ದೊಡ್ಡ ಪರ್ವತಗಳು, ಇನ್ನೊಂದೆಡೆ ಸಮುದ್ರ ಕಿನಾರೆಯಿಂದ ಆವೃತ್ತವಾಗಿರುವ ಇಲ್ಲಿನ ನಿಲ್ದಾಣವು ವಿಶ್ವದ ಅತ್ಯುತ್ತಮ ವಿಮಾನ ಇಳಿದಾಣಗಳಲ್ಲಿ ಒಂದಾಗಿದೆ.

06. ಬಿಲ್ಲಿ ಬಿಷಪ್ ಟೊರಂಟೊ ಸಿಟಿ, ಕೆನೆಡಾ

06. ಬಿಲ್ಲಿ ಬಿಷಪ್ ಟೊರಂಟೊ ಸಿಟಿ, ಕೆನೆಡಾ

ಟೊರಂಟೊ ನಗರದ ಓಟಂರಿಯೊ ನದಿಯಲ್ಲಿ ಸ್ಥಿತಗೊಂಡಿರುವ ಬಿಲ್ಲಿ ಬಿಷಪ್ ಏರಪೋರ್ಟ್, ವಿಶ್ವದ ಅತ್ಯಂತ ಆಕರ್ಷಕ ವಿಮಾನ ಇಳಿದಾಣಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ. ಟೊರಂಟೊ ಐಲ್ಯಾಂಡ್ ಏರ್ ಪೋರ್ಟ್ ಎಂದೇ ಅರಿಯಲ್ಪಡುವ ಈ ಚೊಕ್ಕದಾದ ವಿಮಾನ ನಿಲ್ದಾಣವು, ಕೆನೆಡಾದ ಅತ್ಯಂತ ಬಿಡುವಿಲ್ಲದ ಏರ್ ಪೋರ್ಟ್ ಗಳಲ್ಲಿ ಒಂದಾಗಿದೆ.

05. ಸಬ ವಿಮಾನ ನಿಲ್ದಾಣ

05. ಸಬ ವಿಮಾನ ನಿಲ್ದಾಣ

ಹಾಲೆಂಡ್ ನ ವಿಶೇಷ ಚಿಕ್ಕ ಪುರಸಭೆಯಾಗಿರುವ ಈ ಕೆರೆಬಿಯನ್ ದ್ವೀಪವು ವಿಶ್ವದ ಅತಿ ಚಿಕ್ಕ ಹಾಗೂ ಅಷ್ಟೇ ಅಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇದು ಕೇವಲ 396 ಮೀಟರ್ ಗಳ ರನ್ವೇಯನ್ನಷ್ಟೇ ಹೊಂದಿದೆ.

04. ಬಾರಾ ವಿಮಾನ ನಿಲ್ದಾಣ, ಸ್ಕಾಟ್ಲೆಂಡ್

04. ಬಾರಾ ವಿಮಾನ ನಿಲ್ದಾಣ, ಸ್ಕಾಟ್ಲೆಂಡ್

ನೀರಿನ ಮೇಲೆ ವಿಮಾನ ಲ್ಯಾಂಡಿಂಗ್ ಮಾಡಿದ್ದಲ್ಲಿ ಹೇಗಿರಬಹುದು? ಬಾರಾ ದ್ವೀಪದ ಕಿನಾರೆಯಲ್ಲಿ ಸ್ಥಿತಗೊಂಡಿರುವ ಇಲ್ಲಿನ ವಿಮಾನ ನಿಲ್ದಾಣಕ್ಕೆ ಅಲೆಗಳು ಅಪ್ಪಳಿಸಿದಾಗ ಅದ್ಭುತ ಅನುಭವ ನೀಡುತ್ತದೆ. ಕಡಲ ಕಿನಾರೆಯನ್ನೇ ರನ್ವೇಯಾಗಿ ಮಾರ್ಪಾಡುಗೊಳಿಸಿದ ವಿಶ್ವದ ಏಕಮಾತ್ರ ವಿಮಾನ ನಿಲ್ದಾಣವು ಇದಾಗಿದೆ.

03. ಕ್ವೀನ್ಸ್ ಟೌನ್ ಏರ್ ಪೋರ್ಟ್, ನ್ಯೂಜಿಲೆಂಡ್

03. ಕ್ವೀನ್ಸ್ ಟೌನ್ ಏರ್ ಪೋರ್ಟ್, ನ್ಯೂಜಿಲೆಂಡ್

ಓಟಗೊದಲ್ಲಿ ನೆಲೆನಿಂತಿರುವ ಕ್ವೀನ್ಸ್ ಟೌನ್ ಏರ್ ಪೋರ್ಟ್ ನ್ಯೂಜಿಲೆಂಡ್‌ನ ನಾಲ್ಕನೇ ಅತಿ ಬಿಡುವಿಲ್ಲದ ವಿಮಾನ ನಿಲ್ದಾಣವಾಗಿದೆ. ಪರ್ವತ, ನದಿಗಳ ಸೌಂದರ್ಯದಿಂದ ತುಂಬಿಕೊಂಡಿರುವ ಇಲ್ಲಿನ ವಿಮಾನ ನಿಲ್ದಾಣದ ರನ್ವೇ ಅತ್ಯಂತ ಆಕರ್ಷಕವೆನಿಸಿದೆ.

02. ನೈಟ್ ಕೋಟ್ ಡಿ ಅಜುರ್ ವಿಮಾನ ನಿಲ್ದಾಣ

02. ನೈಟ್ ಕೋಟ್ ಡಿ ಅಜುರ್ ವಿಮಾನ ನಿಲ್ದಾಣ

ಆಲ್ಪ್ಸ್ ಮೆರಿಟೈಮ್ ಭಾಗವಾಗಿರುವ ಫ್ರಾನ್ಸ್‌ನ ನೈಟ್ ಕೋಟ್ ಡಿ ಅಜುರ್ ವಿಮಾನ ನಿಲ್ದಾಣವು ಫ್ರಾನ್ಸ್ ನ ಮೂರನೇ ಅತ್ಯಂತ ಬಿಡುವಿಲ್ಲದ ವಿಮಾನ ನಿಲ್ದಾಣವಾಗಿದೆ. ಇಲ್ಲಿಗೆ ಬರುವ ವಿನೋದ ಸಂಚಾರಿಗಳ ಪ್ರಕಾರ ಫ್ರಾನ್ಸ್ ರಿವಾರಿಯಾ, ಪರ್ವತದಿಂದ ಕೂಡಿರುವ ಪ್ರಕೃತಿಯ ಸಹಜ ಸೌಂದರ್ಯವು ನಿಜಕ್ಕೂ ವಿಶಿಷ್ಟ ಅನುಭವವನ್ನು ನೀಡುತ್ತದೆ.

01. ಮಾಲ್ಟಾ ವಿಮಾನ ನಿಲ್ದಾಣ

01. ಮಾಲ್ಟಾ ವಿಮಾನ ನಿಲ್ದಾಣ

ಮಾಲ್ಟಾ ದ್ವೀಪದಲ್ಲಿರುವ ಏಕೈಕ ವಿಮಾನ ನಿಲ್ದಾಣ ಇದಾಗಿದ್ದು, ನೀಲಿ ಸಮುದ್ರದ ಮೇಲಿಂದ ವಿಮಾನ ಸಮೀಪಿಸುವಾಗ ಒಮ್ಮಲೇ ದ್ವೀಪ ರಾಷ್ಟ್ರದ ಸಮಾಗಮವಾಗುತ್ತದೆ. ಇಲ್ಲಿ ರನ್ವೇ ಹುಡುಕಾಡುವುದು ಸ್ವಲ್ಪ ಕ್ಲಿಷ್ಟಕರ ವಿಚಾರವಾಗಿದ್ದು ನುರಿತ ಪೈಲಟ್ ಗಳಿಂದ ಮಾತ್ರ ಲ್ಯಾಂಡ್ ಮಾಡಲು ಸಾಧ್ಯ ಎಂಬುದು ಅಷ್ಟೇ ಸತ್ಯ.

Most Read Articles

Kannada
Read more on ವಿಮಾನ plane
English summary
World's Stunning Airport Approaches You've Never Seen Before – Pics
Story first published: Friday, April 22, 2016, 10:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X