ಹಳಿ ದಾಟುತ್ತಿದ್ದ ಬೃಹತ್ ಟ್ರಕ್‌ಗೆ ಪ್ರಯಾಣಿಕ ರೈಲು ಢಿಕ್ಕಿ

Written By:

ರೈಲ್ವೇ ಹಳಿ ದಾಟುತ್ತಿದ್ದ ವೇಳೆ ಅಪಘಾತ ಪ್ರಸಂಗಗಳು ಪದೇ ಪದೇ ನಡೆಯುತ್ತಲೇ ಇದೆ. ಇಂತಹದೊಂದು ಘಟನೆಯೀಗ ವಿದೇಶದಿಂದ ವರದಿಯಾಗಿದ್ದು, ಈ ಸಂಬಂಧ ರೋಚಕ ವಿಡಿಯೋ ಬಿತ್ತರಿಸಿದೆ.

ಜೆಕ್ ಗಣರಾಜ್ಯದಿಂದ ಈ ಅಪಘಾತ ಪ್ರಕರಣ ನಡೆದಿದೆ. ಆದರೆ ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.

To Follow DriveSpark On Facebook, Click The Like Button
ಹಳಿ ದಾಟುತ್ತಿದ್ದ ಬೃಹತ್ ಟ್ರಕ್‌ಗೆ ಪ್ರಯಾಣಿಕ ರೈಲು ಢಿಕ್ಕಿ

ಅಧಿಕೃತ ಮಾಹಿತಿಗಳ ಪ್ರಕಾರ ವಾಣಿಜ್ಯ ಟ್ರಕ್ ಹಳಿ ದಾಟುತ್ತಿದ್ದ ವೇಳೆ 80 ಮಂದಿ ಪ್ರಯಾಣಿಕರನ್ನು ಹೊತ್ತುಕೊಂಡು ಬರುತ್ತಿರುವ ರೈಲು ಬಲವಾಗಿ ಢಿಕ್ಕಿ ಹೊಡೆದಿತ್ತು.

ಹಳಿ ದಾಟುತ್ತಿದ್ದ ಬೃಹತ್ ಟ್ರಕ್‌ಗೆ ಪ್ರಯಾಣಿಕ ರೈಲು ಢಿಕ್ಕಿ

ಸರಕು ಸಾಗಾಣಿಕಾ ಟ್ರಕ್ ಆಗಿರುವುದರಿಂದ ಇಲ್ಲಿ ಸಂಭವನೀಯ ಬೃಹತ್ ಅಪಘಾತವೊಂದು ತಪ್ಪಿ ಹೋಗಿದೆ.

ಹಳಿ ದಾಟುತ್ತಿದ್ದ ಬೃಹತ್ ಟ್ರಕ್‌ಗೆ ಪ್ರಯಾಣಿಕ ರೈಲು ಢಿಕ್ಕಿ

ಟ್ರಕ್ ಮಧ್ಯ ಭಾಗಕ್ಕೆ ರೈಲು ಢಿಕ್ಕಿ ಹೊಡೆದಿರುವ ರಭಸಕ್ಕೆ ಇಬ್ಭಾಗಗೊಂಡಿದೆ. ಘಟನೆಯಲ್ಲಿ ಟ್ರಕ್ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಹಳಿ ದಾಟುತ್ತಿದ್ದ ಬೃಹತ್ ಟ್ರಕ್‌ಗೆ ಪ್ರಯಾಣಿಕ ರೈಲು ಢಿಕ್ಕಿ

ಸಿಗ್ನಲ್ ನಲ್ಲಿ ಕೆಂಪು ದೀಪ ಉರಿಯುತ್ತಿರುವ ನಡುವೆಯೂ ಹಳಿಯಲ್ಲಿ ಬರುತ್ತಿರುವ ರೈಲನ್ನು ಲೆಕ್ಕಿಸದ ಚಾಲಕ ಟ್ರಕ್ ಜೊತೆ ಹಳಿ ದಾಟುವ ಪ್ರಯತ್ನಕ್ಕೆ ಮುಂದಾಗಿದ್ದರು.

ಹಳಿ ದಾಟುತ್ತಿದ್ದ ಬೃಹತ್ ಟ್ರಕ್‌ಗೆ ಪ್ರಯಾಣಿಕ ರೈಲು ಢಿಕ್ಕಿ

ಮಗದೊಂದು ಮೂಲದ ಪ್ರಕಾರ ಮುಂದಿನ ಸ್ಟೇಷನ್ ಹತ್ತಿರ ತಲುಪಿರುವುದರಿಂದ ರೈಲು ತನ್ನ ಆವೇಗವನ್ನು ಕಡಿತಗೊಳಿಸಿರುವುದರಿಂದ ಅಪಘಾತದ ತೀವ್ರತೆಯು ಕಡಿಮೆಯಾಗಿದೆ ಎಂದಿದೆ.

Read more on ಅಪಘಾತ accident
English summary
Truck Takes On Train. Gets Smashed Up Rather Badly
Story first published: Tuesday, December 15, 2015, 17:41 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark