ಹೋಂಡಾ ಸಿಟಿ ಕಾರಿಗೆ ಅಂಟಿಸಿದ್ದ 2000 ನೋಟಿನ ಹಿಂದಿರುವ ನಿಜ ಸಂಗತಿ ಏನು ಗೊತ್ತ...!?

Written By:

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರೇಮಿಗಳ ದಿನದಂದು ಪ್ರೇಮಿಯೊಬ್ಬ ತನ್ನ ಪ್ರೇಮ ನಿವೇದನೆ ಮಾಡುವ ಸಲುವಾಗಿ ತನ್ನ ಹೋಂಡಾ ಸಿಟಿ ಕಾರಿಗೆ ಹೊಸದಾಗಿ ಬಂದಿರುವ 2000 ನೋಟುಗಳನ್ನು ಅಂಟಿಸಲು ಉಪಯೋಗಿಸಿದ್ದಾನೆ ಎಂಬ ವಿಚಾರ ಎಲ್ಲೆಡೆ ಟ್ರೆಂಡಿಂಗ್ ಆಗಿತ್ತು.

ಪೊಲೀಸರು ಸಹ ಈ ಕಾರನ್ನು ಜಪ್ತಿ ಮಾಡಿ ಕಾರಿನ ಚಾಲಕನನ್ನು ಬಂಧಿಸಿದ್ದರು, ಇದೆಲ್ಲವೂ ಆಗಿ 2 ದಿನ ಮುಗಿಯುತ್ತ ಬಂದಿದೆ, ಆದ್ರೆ ಈ ವಿಚಾರವಾಗಿ ದಿಢೀರ್ ಆಗಿ ಬಂದ ಸುದ್ದಿಯೊಂದು ನಿಮ್ಮನ್ನು ಅಚ್ಚರಿ ಪಡಿಸುವುದಂತೂ ಖಂಡಿತ.

ಮುಂಬೈ ನಗರದಲ್ಲಿ ನೆಡೆದಿರುವಂತ ಘಟನೆ ಇದಾಗಿದ್ದು, ಮಾಧ್ಯಮಗಳಲ್ಲಿ, ಫೇಸ್ ಬುಕ್ ಮತ್ತು ವಾಟ್ಸ್ಆಪ್ ಗಳಲ್ಲಿ ಈ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿಬಿಟ್ಟಿತ್ತು.

ಕೆಲವರಂತೂ ಈತ ಹುಚ್ಚು ಪ್ರೇಮಿ, ಕೆಲಸಕ್ಕೆ ಬಾರದವ, ಮತ್ತು ಕೆಲವರು ಆತನನ್ನು ಹೊಗಳಿ ಅಟ್ಟಕೇರಿಸಿದರು.

ಇನ್ನು ಕೆಲವರು ಇನ್ನೂಒಂದು ಹೆಜ್ಜೆ ಮುಂದೆ ಹೋಗಿ ಕಾರಿನ ಮಾಲೀಕ ಮೋದಿಯ ಸಂಬಂಧಿಕನೇ ಇರಬೇಕು ಎಂಬೆಲ್ಲಾ ಮಾತುಗಳನ್ನು ಆಡಿದರು. ನಿಮಗೆ ಗೊತ್ತೇ ? ಈ ಘಟನೆಯ ಹಿಂದೆ ಯಾವುದೇ ರೋಮಿಯೋ ಜೂಲಿಯೆಟ್ ಕತೆ ಅಲ್ಲ, ಬದಲಾಗಿ ಈ ಕಾರು ಪುಣೆಯ ಜೂಮ್ ಕಾರಿಗೆ ಸೇರಿದ್ದಾಗಿದೆ.

ಈ ಬಗ್ಗೆ ಜೂಮ್ ಕಾರ್ ಪ್ರೈ. ಲಿಮಿಟೆಡ್‍ನ ಮಾಲೀಕರಲ್ಲಿ ವಿಚಾರಿಸಿದಾಗ, ಇದು ತಮ್ಮ ಸಂಸ್ಥೆಯ ಪ್ರಚಾರಕ್ಕಾಗಿ ಕಾರಿನ ಮೇಲೆ ನೋಟುಗಳನ್ನು ಅಂಟಿಸಲಾಗಿದೆ. ಆ ನೋಟುಗಳೆಲ್ಲವೂ ನಕಲಿ ಎಂಬ ವಿಚಾರ ಬಹಿರಂಗಪಡಿಸಿದೆ.

ಜನರ ಗಮನ ಸೆಳೆಯುವ ಸಿಟ್ಟಿನಲ್ಲಿ ಜೂಮ್ ಕಾರ್ ಈ ರೀತಿಯ ಪ್ರಚಾರ ತಂತ್ರವನ್ನು ಬಳಸಿದೆ ಎನ್ನಲಾಗಿದೆ.

ಕಂಪನಿಯ ಉದ್ಯೋಗಿಯೊಬ್ಬರು ಹೇಳಿರುವ ಪ್ರಕಾರ, ಈ ರೀತಿಯ ನಕಲಿ ನೋಟು ಅಂಟಿಸಿರುವ ನಾಲ್ಕು ಕಾರುಗಳನ್ನು ದೇಶದ ನಾಲ್ಕು ಪ್ರಮುಖ ನಗರಗಳಲ್ಲಿ ಓಡಿಸಲಾಗಿತ್ತಂತೆ, ಯಾರಾದರೂ ನೋಟುಗಳನ್ನು ನೋಡಿ 1 ನಿಮಿಷದಲ್ಲಿ 6 ವ್ಯತ್ಯಾಸಗಳನ್ನು ಪತ್ತೆ ಹಚ್ಚುವ ವ್ಯಕ್ತಿಗೆ ಲಗ್ಜುರಿ ಕಾರಿನಲ್ಲಿ 12 ಗಂಟೆಗಳ ಪ್ರಯಾಣ ಮತ್ತು ₹14,000 ನಗದು ಬಹುಮಾನ ನೀಡುವುದಾಗಿ ಕಾರು ಕಂಪನಿ ಘೋಷಣೆ ಮಾಡಿತ್ತು.

ಒಟ್ಟಿನಲ್ಲಿ, ಪ್ರೇಮಿಗಳ ದಿನದಂದು ಸಾಕಷ್ಟು ಸುದ್ದಿಯಾಗಿದ್ದ ಈ ಕಾರು, ಪ್ರೇಮಿ ತನ್ನ ಪ್ರೇಯಸಿಗೆ ಕೊಟ್ಟ ಉಡುಗೊರೆಯಲ್ಲ, ಜೂಮ್ ಕಾರ್ ಕಂಪನಿಯ ಜಾಹೀರಾತು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಮೊನ್ನೆಯಷ್ಟೇ ಬಿಡುಗಡೆಗೊಂಡಿರುವ ಹೋಂಡಾ ಸಿಟಿ 2017 ಕಾರಿನ ಚಿತ್ರಗಳನ್ನು ಇಂದೇ ನೋಡಿ.

English summary
A Honda City was impounded after being wrapped in Rs 2000 notes on Valentine’s Day. Here’s the actual truth behind the car.
Story first published: Thursday, February 16, 2017, 16:43 [IST]
Please Wait while comments are loading...

Latest Photos