ಮುಂಬೈನಲ್ಲಿ ಲಿಮೊ ಹೋಲುವ 2 ಅಕ್ರಮ ಸ್ಕಾರ್ಪಿಯೊ ಕಾರುಗಳು ಜಫ್ತಿ

Written By:

ಕಾನೂನು ಮೀರಿ ಓಡಿಸುತ್ತಿದ್ದ ಎರಡು ಅಕ್ರಮ ಸ್ಕಾರ್ಪಿಯೊ ಲಿಮೊ ಕಾರುಗಳನ್ನು ಮುಂಬೈ ನಗರಿಯಲ್ಲಿ ಜಫ್ತಿ ಮಾಡಲಾಗಿದೆ. ಅಮೆರಿಕದಲ್ಲಿ ಹೆಚ್ಚು ಜನಪ್ರಿಯವಾಗಿರುವ ಲಿಮೊ ಕಾರುಗಳಿಗೆ ಹೋಲುವ ರೀತಿಯಲ್ಲಿ ಸ್ಕಾರ್ಪಿಯೊ ಕಾರನ್ನು ವಿಶೇಷವಾಗಿ ಮಾರ್ಪಾಡುಗೊಳಿಸಲಾಗಿತ್ತು.

Also Read: ರೈಲು ಹಳಿಯಲ್ಲಿ ಸಿಲುಕಿದ ಲಿಮೊ ಕಾರಿಗೆ ಗೂಡ್ಸ್ ಗಾಡಿ ಢಿಕ್ಕಿ

ಈ ಸಂಬಂಧ ಎಚ್ಚೆತ್ತುಕೊಂಡಿರುವ ನವಿ ಮುಂಬೈನ ಪ್ರಾದೇಶಿಕ ಸಾರಿಗೆ ಕಚೇರಿಯ ಹೈವೈ ಸ್ಕ್ವಾಡ್ ಅಧಿಕಾರಿಗಳು ಶಿಪ್ರ ಕಾರ್ಯಾಚರಣೆ ನಡೆಸುವ ಮೂಲಕ ಗಾಡಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

To Follow DriveSpark On Facebook, Click The Like Button
ಮುಂಬೈನಲ್ಲಿ ಲಿಮೊ ಹೋಲುವ 2 ಅಕ್ರಮ ಸ್ಕಾರ್ಪಿಯೊ ಕಾರುಗಳು ಜಫ್ತಿ

ಭಾರತೀಯ ವಾಹನ ಕಾಯ್ದೆ ಉಲ್ಲಂಘಿಸಿರುವ ಎರಡು ಸ್ಕಾರ್ಪಿಯೊ ಕಾರುಗಳನ್ನು ಕಾನೂನು ಬಾಹಿರವಾಗಿ ಲಿವೊ ಕಾರುಗಳಿಗೆ ಹೋಲುವಂತೆ ಮಾರ್ಪಾಡುಗೊಳಿಸಲಾಗಿತ್ತು.

ಮುಂಬೈನಲ್ಲಿ ಲಿಮೊ ಹೋಲುವ 2 ಅಕ್ರಮ ಸ್ಕಾರ್ಪಿಯೊ ಕಾರುಗಳು ಜಫ್ತಿ

ಬಳಿಕ ನಡೆಸಿರುವ ತನಿಖೆಯಲ್ಲಿ ವಂಶಿ ಹಾಗೂ ಅಂಧೇರಿಯಿಂದ ಜಫ್ತಿ ಮಾಡಲಾಗಿರುವ ಕಾರುಗಳು ಗುಜರಾತ್‌ಗೆ ಸೇರಿದ ಕಾರುಗಳು ಎಂಬುದು ತಿಳಿದು ಬಂದಿದೆ.

ಮುಂಬೈನಲ್ಲಿ ಲಿಮೊ ಹೋಲುವ 2 ಅಕ್ರಮ ಸ್ಕಾರ್ಪಿಯೊ ಕಾರುಗಳು ಜಫ್ತಿ

ಗುಜರಾತ್‌ನ ಎನ್‌ಡಬ್ಲ್ಯುಟಿ ಲಿಮೊ ಇಂಟರ್ ನ್ಯಾಷನಲ್ ಗೆ ಸೇರಿದ ಗಾಡಿ ಇದಾಗಿದ್ದು, ಮುಂಬೈ ಮೂಲದ ವ್ಯಕ್ತಿಯೋರ್ವರು ಪ್ರತಿ ತಾಸಿಗೆ 10,000 ರು. ಪಾವತಿಸಿ ಬಾಡಿಗೆಗೆ ಪಡೆದುಕೊಂಡಿದ್ದರು.

ಮುಂಬೈನಲ್ಲಿ ಲಿಮೊ ಹೋಲುವ 2 ಅಕ್ರಮ ಸ್ಕಾರ್ಪಿಯೊ ಕಾರುಗಳು ಜಫ್ತಿ

ಲಿಮೊಗೆ ತಕ್ಕಂತೆ ಸ್ಕಾರ್ಪಿಯೊ ವಿನ್ಯಾಸದಿಂದ ವಾಹನದ ಸುರಕ್ಷತೆ ಮತ್ತು ಸಮಗ್ರತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕಾರಿನೊಳಗೆ ವಿಶಿಷ್ಟ ಕ್ಯಾಬಿನ್, 31 ಇಂಚುಗಳ ಟಿವಿ, ಎಲ್ ಇಡಿ ಲೈಟಿಂಗ್ ಗಳಂತಹ ಸೇವೆ ಒದಗಿಸಲಾಗಿದೆ.

ಮುಂಬೈನಲ್ಲಿ ಲಿಮೊ ಹೋಲುವ 2 ಅಕ್ರಮ ಸ್ಕಾರ್ಪಿಯೊ ಕಾರುಗಳು ಜಫ್ತಿ

ಕಾರಿನ ಹೊರಗಡೆ ಹಮ್ಮರ್ ಕಾರಿಗೆ ಹೋಲಿಕೆಯಾಗುವಂತಹ ಕ್ರೋಮ್ ಗ್ರಿಲ್ ಲಗತ್ತಿಸಲಾಗಿದ್ದು, ಕ್ಯಾಡಿಲಿಕ್ ಕಾರಿನಿಂದ ಸ್ಪೂರ್ತಿ ಪಡೆದ ವ್ಯಾಗನಾರ್ ಹೆಡ್ ಲ್ಯಾಂಪ್ ಸಹ ಇದರಲ್ಲಿದೆ.

ಮುಂಬೈನಲ್ಲಿ ಲಿಮೊ ಹೋಲುವ 2 ಅಕ್ರಮ ಸ್ಕಾರ್ಪಿಯೊ ಕಾರುಗಳು ಜಫ್ತಿ

ಒಟ್ಟಾರೆಯಾಗಿ ಪ್ರಸ್ತುತ ಕಾರು 25ರಿಂದ 30 ಲಕ್ಷ ರು.ಗಳಷ್ಟು ಬೆಲೆ ಬಾಳುತ್ತದೆ ಎಂದು ವಂಶಿ ಆರ್‌ಟಿಒ ಇನ್ಸ್ಪೆಕ್ಟರ್ ತಿಳಿಸುತ್ತಾರೆ.

ಮುಂಬೈನಲ್ಲಿ ಲಿಮೊ ಹೋಲುವ 2 ಅಕ್ರಮ ಸ್ಕಾರ್ಪಿಯೊ ಕಾರುಗಳು ಜಫ್ತಿ

ಅಂದ ಹಾಗೆ ಪ್ರಸ್ತುತ ಸ್ಕಾರ್ಪಿಯೊ ಲಿಮೊ ಗಾಡಿ 6.40 ಮೀಟರ್ ಉದ್ದ, 5.05 ಮೀಟರ್ ಚಕ್ರಾಂತರ, 1.60 ಮೀಟರ್ ಅಗಲ ಹಾಗೂ 1.95 ಮೀಟರ್ ಎತ್ತರವನ್ನು ಪಡೆದುಕೊಂಡಿದೆ.

Image courtesy: Anandram Wagle

English summary
2 Modified Mahindra Scorpio Limousines seized in Mumbai
Story first published: Saturday, December 26, 2015, 10:13 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark